ಅದ್ಭುತವಾದ ಕೃಪೆಯನ್ನು ತೋರಿಸುವ ಕರ್ತನು!

  Posted on   by   No comments

240_F_116669310_xTReAFo4gbG82HH1gigOWH21NPFyUrlI

“ತನ್ನ ಕೃಪೆಯನ್ನು ಆಶ್ಚರ್ಯಕರವಾಗಿ ತೋರಿಸಿದ ಯೆಹೋವನಿಗೆ ಸ್ತೋತ್ರ” (ಕೀರ್ತ. 31:21).

ಈ ಪಾಪದ ಪ್ರಾಪಂಚಿಕ ಜೀವಿತದಲ್ಲಿ ದೇವರ ಕೃಪೆ ನಿರಪೇಕ್ಷವಾಗಿ ಅವಶ್ಯಕವಾಗಿದೆ. ರೋಮ. 5:20ರಲ್ಲಿ ಹೇಳಿರುವಂತೆ, ಪಾಪವು ಹೆಚ್ಚಿದಲ್ಲೇ ಕೃಪೆಯು ಎಷ್ಟೋ ಹೆಚ್ಚಾಗಿ ಪ್ರಬಲವಾಯಿತು. ಆದ್ದರಿಂದ, ಮನುಷ್ಯನ ಪಾಪದ ಜೀವಿತವನ್ನು ಹೊಸದಾಗಿ ಮಾಡಿ ಆಶೀರ್ವದಿಸುತ್ತಾನೆ. ದೈವೀಕ ಕೃಪೆಯಿಂದ, ದೇವರು ಪಾಪಿಗಳಲ್ಲಿ ಪಾಪಿಯಾದ ಸೌಲನನ್ನು ದೇವರು ಮಾನವ ಜನಾಂಗ ತಿಳಿದಿರುವ ದೊಡ್ಡ ಅಪೋಸ್ತಲನಾದ ಪೌಲನನ್ನಾಗಿ ಮಾರ್ಪಡಿಸಿದನು (1 ತಿಮೊ. 1:15). ಅವನು ದೇವರನ್ನು ನಂಬಿಕೆಯಿಂದ ಸೇವಿಸಿದ. ಆತನು ಸೇವೆಯ ಮೂಲಕ ದೊಡ್ಡ ಸಮೂಹವು ಆತನ ಸಾನಿಧ್ಯಕ್ಕೆ ಬರುವಂತೆ ಮಾಡಿದನು. ಅವರು ನೀತಿವಂತರೆಂದು ನಿರ್ಣಯ ಹೊಂದುವದು ದೇವರ ಉಚಿತಾರ್ಥವಾದ ಕೃಪೆಯಿಂದಲೇ. ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವದು (ರೋಮ. 3:24; ತೀತ. 3:6). ನಾವು ಉಳಿದಿರುವುದು ಯೆಹೋವನ ಕರುಣೆಯೇ (ಪ್ರಲಾ. 3:22). ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ಬಲವು ಪೂರ್ಣ ಸಾಧಕವಾಗುತ್ತದೆ (2 ಕೊರಿ. 12:9).

ಒಂದು ಸಲ ಒಬ್ಬ ವಿವಾಹವಾದ ಹುಡುಗಿ ಗರ್ಭ ಧರಿಸುತ್ತಿದ್ದಳು. ಆದರೆ ಕೆಲವು ತಿಂಗಳಾದ ಮೇಲೆ ಅದು ಗರ್ಭಪಾತವಾಗುತ್ತಿತ್ತು. ಇದು ಅನೇಕ ಬಾರಿ ನಡೆಯಿತು. ಆ ಸಮಯದಲ್ಲಿ ಒಬ್ಬ ನಿಜವಾದ ದೇವರ ಸೇವಕರು ಅವಳ ಜಾಗಕ್ಕೆ ವರ್ಗಾವಣೆ ಮೇಲೆ ಬಂದರು. ಅವಳು ಅವರ ಹತ್ತಿರ ಹೋಗಿ ತನ್ನ ಕಷ್ಟದ ಕಥೆಯನ್ನು ಹೇಳಿಕೊಂಡಳು. ಅವರು ಅವಳಿಗಾಗಿ ಉಪವಾಸದಿಂದ ಪ್ರಾರ್ಥಿಸಿದರು. ನಂತರ ಅವರು ಅವಳಿಗೆ ಹೇಳಿದರು, “ಪ್ರಿಯ ಮಗಳೇ! ನೀನು ದೇವರನ್ನು ಹುಡುಕುವದು ನಿಜ. ಆದರೆ ಇನ್ನು ಮುಂದೆ ನೀನು ಗರ್ಭಧರಿಸಿದ ಒಡನೆಯೇ ನೀನು ಮತ್ತು ನಿನ್ನ ಪತಿ ಒಂದೇ ಮನಸ್ಸಿನಿಂದ ಆತನ ಸಾನಿಧ್ಯದಲ್ಲಿ ಆತನ ಕೃಪೆ ನಿಮ್ಮನ್ನು ಸುತ್ತುವರಿದು ನಿನ್ನನ್ನು ತುಂಬಲು ಪ್ರಾರ್ಥಿಸು. ಕೀರ್ತ. 32:10ರ ಪ್ರಕಾರ ನೀನು ಆತನನ್ನು ಯಾವಾಗ ನಂಬುವೆಯೋ ಆಗ ದೇವರ ಕೃಪೆ ನಿಮ್ಮನ್ನು ಸುತ್ತುವರಿಯುತ್ತದೆ. ಆತನು ನಿಜಕ್ಕೂ ಮುದ್ದಾದ ಮಗುವಿನಿಂದ ಆಶೀರ್ವದಿಸುತ್ತಾನೆ” ಎಂದರು. ಈ ದಂಪತಿಗಳು ಇಷ್ಟು ದಿನಗಳು ದೇವರ ಕೃಪೆಯನ್ನು ಹುಡುಕಲಿಲ್ಲ. ದೇವರ ಮನುಷ್ಯರು ಹೇಳಿದ ಪ್ರಕಾರವೇ, ಈಗ ಆತನ ಕೃಪೆಗಾಗಿ ನಂಬಿಕೆಯಿಂದ ಹುಡುಕಿದರು. ದೇವರ ಕೃಪೆ ಅವಳ ಮಗುವನ್ನು ಸುತ್ತುವರಿಯಿತು. ಕೊನೆಗೆ ಅವಳು ಸಹಜ ಪ್ರಸವದಿಂದ ಒಂದು ಆರೋಗ್ಯವಂತ ಮಗುವಿಗೆ ಜನ್ಮವಿತ್ತಳು. ಅವರು ಆತನ ದೊಡ್ಡ ಕರುಣೆಗಾಗಿ ದೇವರನ್ನು ಸ್ತುತಿಸಿ ಸ್ತೋತ್ರಿಸಿದರು!

ಪ್ರಿಯರೇ! ದೇವರ ಕೈಯಲ್ಲಿ ಅಸಾಧ್ಯವಾದದ್ದು ಒಂದು ಇಲ್ಲ. ಅದು ಕೇವಲ ನಾವೇ ಬಲಹೀನರು ಮತ್ತು ಅಪನಂಬಿಗಸ್ತರು. ನಾವು ಸುಲಭವಾಗಿ ಆಯಾಸ ಹೊಂದುತ್ತೇವೆ ಮತ್ತು ನಮ್ಮ ಎಲ್ಲಾ ನಿರೀಕ್ಷೆಯನ್ನು ಕಳೆದುಕೊಳ್ಳುತ್ತೇವೆ. ಮೇಲಿನ ಪ್ರಸಂಗದ ದಂಪತಿಗಳ ಹಾಗೆ ನೀವೂ ಸಹ ದೇವರ ಕೃಪೆಯನ್ನು ಹುಡುಕಿರಿ. ಆತನು ನಿಜಕ್ಕೂ ನಿಮ್ಮ ಜೀವನವನ್ನು ಹೇರಳವಾಗಿ ಆಶೀರ್ವದಿಸುತ್ತಾನೆ (ಇಬ್ರಿ. 12:3).

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ನಿನ್ನ ದೈವೀಕ ಕೃಪೆ ನನ್ನ ಜೀವನವನ್ನು ಪೂರ್ಣವಾಗಿ ತುಂಬಲಿ. ಅದು ನನ್ನ ಎಲ್ಲಾ ನ್ಯೂನ್ಯತೆಗಳನ್ನು ಮತ್ತು ಕೊರತೆಗಳನ್ನು ಬದಲಾಯಿಸಿ, ನನ್ನನ್ನು ಹೊಸ ಸೃಷ್ಟಿಯನ್ನಾಗಿ ಮಾಡಲಿ. ಇಂದಿನಿಂದ, ನನ್ನ ಜೀವನದಲ್ಲಿ ನಿನ್ನ ಅದ್ಭುತವಾದ ಉಕ್ಕಿ ಹರಿಯುವ ಕರುಣೆಯನ್ನು ನೋಡುವಂತೆ ನನಗೆ ಕೃಪೆ ಕೊಡು. ನಮ್ಮ ಕರ್ತನಾದ ಯೇಸುವಿನ ಕರುಣೆ ನೀಡುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

For Daily Devotion Contact: +91 9964247889

Comments

Your email address will not be published. Required fields are marked *

WhatsApp us