ಅನಾಥರಾಗಿ ಬಿಡೆನು! – ಆತ್ಮೀಕ ಕಥೆ 34

  Posted on   by   3 comments

54742040c556e301791417d8fcde813d

 “ನಾನು ನಿಮ್ಮನ್ನು ಅನಾಥರಾಗಿ ಬಿಡುವುದಿಲ್ಲ; ನಿಮ್ಮ ಬಳಿಗೆ ಬರುತ್ತೇನೆ” (ಯೋಹಾ. 14:18).

ಫಿಲಿಪೈನ್ಸ್ ಎಂಬ ದೇಶಕ್ಕೆ ಸಹಾಯ ಮಾಡುವುದಕ್ಕಾಗಿ ಅಮೇರಿಕಾ ಸೈನ್ಯಗಳು ಬಂದು ತಂಗಿದ್ದವು. ಆದರೆ ಆಕಸ್ಮಾತಾಗಿ ಯುದ್ಧ ಸಂಬವಿಸಿದುದರಿಂದ ಅಮೇರಿಕಾ ಸೈನ್ಯಗಳು ಹಿಂದಿರುಗಲು ಸಜ್ಜಾಗುತ್ತಿದ್ದವು. ಫಿಲಿಪೈನ್ಸ್ ಜನರಿಗೂ, ಸರ್ಕಾರಕ್ಕೂ ಹೇಳ ತೀರದ ದು:ಖ, ಅಯ್ಯಾ ಶತ್ರುಗಳು ಹೀಗೆ ಮುತ್ತಿಕೊಂಡಿರುವಾಗ ನಮ್ಮನ್ನು ಬಿಟ್ಟು ಹೋಗುತ್ತೀರಲ್ಲಾ ಎಂದು ಎಲ್ಲರೂ ಕಣ್ಣೀರು ಸುರಿಸಿದರು. ಅವರ ಕಣ್ಣೀರಿನಿಂದ ಕೂಡಿದ ಆ ಮಾತುಗಳನ್ನೂ ಕೇಳಿದ ಅಮೇರಿಕಾ ಸೇನಾಪತಿಯ ಹೃದಯ ಮರುಗಿತು. ಅವನು ಕಳಕಳಿಯಿಂದ “ನಾನು ಮತ್ತೆ ನಿಮ್ಮ ಬಳಿಗೆ ಬರುತ್ತೇನೆ” ಅಂದನು ಆ ಮಾತುಗಳು ಆ ಜನರನ್ನು ಸಂತೈಸಿತು.

ಕೆಲವು ತಿಂಗಳೊಳಗಾಗಿ ಫಿಲಿಪೈನ್ಸಿಗೂ, ಜಪಾನಿಗೂ ಯುದ್ಧ ಸಂಭವಿಸಿತ್ತು, ಘೋರವಾದ ಯುದ್ಧ ಶತ್ರುಗಳ ಆಕ್ರಮಣದಿಂದ ಪರಿತಪಿಸುತ್ತಿದ್ದಾಗ, ಅಮೇರಿಕಾ ಸೈನ್ಯವು ಹೊರಟು ಬಂದ ಫಿಲಿಫೈನ್ಸ್ ಜನರನ್ನು ಕಾಪಾಡಿತು; ಆ ದೇಶದ ಜನರು ಪಟ್ಟ ಸಂತೋಷಕ್ಕೆ ಪಾರವೇ ಇಲ್ಲ!
“ಬರುವಾತನು ಇನ್ನು ಸ್ವಲ್ಪಕಾಲದಲ್ಲಿ ಬರುವನು, ತಡಮಾಡುವುದಿಲ್ಲ” ಎಂದು, ಸತ್ಯವೇದವು ನಮ್ಮನ್ನು ಆದರಣೆ ಪಡಿಸುತ್ತದೆ. ಆತನು ನಮ್ಮನ್ನು ಅನಾಥರನ್ನಾಗಿ ಬಿಡುವುದೇ ಇಲ್ಲ ನೆನಸದ ಗಳಿಗೆಯಲ್ಲಿ ಆತನು ಬರುವನು!

ಅನಾಥರಾಗಿ ಬಿಡುವುದಿಲ್ಲ ಎಂದಾತನು, ನಮ್ಮನ್ನು ನಡೆಸಲು ಪರಿಶುದ್ಧಾತ್ಮನನ್ನು ಅನುಗ್ರಹ ಮಾಡಿದ್ದಾನೆ. ಆತನು ಸಕಲ ವಿಧದಲ್ಲಿಯೂ ನಮ್ಮನ್ನು ಸತ್ಯದಲ್ಲಿ ನಡೆಸಿ, ಆತನ ಬರೋಣಕ್ಕೆ ನಮ್ಮನ್ನು ಸಿದ್ಧಪಡಿಸುತ್ತಾನೆ.

“ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು; ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸಿಬಿಡುವನು” (ಯೆಶಾ. 25:8).

Categories: Spiritual Stories

3 comments

  1. Annesh says:

    Ameging stories in tis app I love it…

  2. MADHU hadimani@124g. Com

Comments

Your email address will not be published. Required fields are marked *

WhatsApp us