ಅಮೂಲ್ಯವಾದ ತ್ಯಾಗ – ಆತ್ಮೀಕ ಕಥೆ 29

  Posted on   by   2 comments

the-sacrifice-of-jesus-for-you

ಫೆಡರಿಕ್ ಅರ್ನಾಡ ಆಫ್ರೀಕ ದೇಶದ ಜನರ ಬಳಿ ಸುವಾರ್ತಿಕನಾಗಿ ಹೋದರು. ಸರ್ಕಾರದಲ್ಲಿ ಮತ್ತು ಆಫ್ರೀಕ ಜನರ ಮಧ್ಯದಲ್ಲಿ ಆತನಿಗೆ ಬಹಳ ಗೌರವವಿದ್ದಿತು.
ಒಮ್ಮೆ ದಟ್ಟವಾದ ಕಾಡಿನಲ್ಲಿ ಈತನು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ ಒಂದು ಸಿಂಹ ಎದುರಾಗಿ ಪಲ್ಲಕ್ಕಿಯನ್ನು ಹೊತ್ತಿದ್ದ ಒಬ್ಬ ಯೌವನಸ್ಥನನ್ನು ಹೊಡೆದು ಬೀಳಿಸಿತು.
ಕೂಡಲೇ ಆ ಮಿಷನೆರಿ ಅರ್ನಾಡ ಪಲ್ಲಕ್ಕಿಯಿಂದ ಕೆಳಗೆ ಧುಮುಕಿ ಆ ಸಿಂಹಕ್ಕೂ ಮತ್ತು ಆಫ್ರೀಕ ಯೌವನಸ್ಥನಿಗೆ ಮಧ್ಯನಿಂತು ಆ ಸಿಂಹವನ್ನು ದುರುಗುಟ್ಟಿ ನೋಡಿದರು. ಕೊಂಚ ಹೊತ್ತಿನಲ್ಲಿ ಸಿಂಹವು ಯಾವ ಕೇಡನ್ನೂ ಮಾಡದೆ ಕಾಡಿನಲ್ಲಿ ಮರೆಯಾಯಿತು.

ಮಂತ್ರ ಶಕ್ತಿಯಲ್ಲಿ ಬಂಧಿಸಲ್ಪಟ್ಟಂತೆ ಸಿಂಹ ಹೋಗಿ ಬಿಟ್ಟಿತಲ್ಲಾ ಎಂಬುದಾಗಿ ಆ ಜನರ ಮುಖಂಡನು ಆಶ್ಚರ್ಯಪಟ್ಟನು, ಮತ್ತು ಮಿಷನೆರಿ ದೊರೆ ಸಾರಿದ ಯೇಸುಕ್ರಿಸ್ತನನ್ನು ತನ್ನ ಸ್ವಂತ ರಕ್ಷಕನನ್ನಾಗಿ ಅಂಗೀಕರಿಸಿದ್ದು ಮಾತ್ರವಲ್ಲ, ಆ ಮಿಷನೆರಿಯನ್ನು ಬಹಳ ಗೌರವಿಸಿದನು. ತನ್ನ ಶರೀರವನ್ನು ಸಿಂಹಕ್ಕೂ ಒಬ್ಬ ಕಪ್ಪು ಸ್ನೇಹಿತನಿಗೂ ಮಧ್ಯೆ ಪಣವಾಗಿಟ್ಟ ತ್ಯಾಗಿಯಾದ ಆ ಆಂಗ್ಲೇಯನೊಂದಿಗೆ ಎಲ್ಲಿ ಬೇಕಾದರೂ ಹೋಗಲು ಸಿದ್ಧವಾಗಿದ್ದೇನೆ ಎಂದನು.

ದೇವಮಗುವೇ, ನಮ್ಮ ಪ್ರಿಯ ರಕ್ಷಕನಾದ ಯೇಸುಕ್ರಿಸ್ತನು ಈ ರೀತಿ ಗರ್ಜಿಸುವ ಸಿಂಹವಾದ ಸೈತಾನನಿಗೂ ನಮಗೂ ಮಧ್ಯೆ ನಿಂತು ಸೈತಾನನ ತಲೆಯನ್ನು ಜಜ್ಜಿ ನಮಗೆ ಜಯವನ್ನೂ ಬಿಡುಗಡೆಯನ್ನು ಕೊಟ್ಟನು. ಕಲ್ವಾರಿ ನಾಯಕನಾದ ನಮ್ಮ ಕರ್ತನಿಗಾಗಿ ನಾವು ಜೀವಿತಕಾಲವೆಲ್ಲಾ ಸೇವೆ ಮಾಡುವುದು ಎಷ್ಟು ಅಗತ್ಯವಲ್ಲವೇ!

ಅವನು ನನ್ನಲ್ಲಿ ಆಸಕ್ತನಾಗಿರುವುದರಿಂದ ಅವನನ್ನು ಉದ್ಧರಿಸುವೆನು (ಕೀರ್ತ. 91:14).

Categories: Spiritual Stories

2 comments

  1. PAMPAPATHI V says:

    Hallelujah… Ohhh. Great!!! …

Comments

Your email address will not be published. Required fields are marked *

WhatsApp us