ಆಟೋ ರಾಜ – ಸಮಾಜ ಸೇವಕ

  Posted on   by   3 comments

Auto-Raja-

“ಶಾಲೆಯಲ್ಲಿಯೇ ನಾನು ದಾದಾನಾಗಿ ಪ್ರಾರಂಭಿಸಿ ಬದ್ರತೆಗಾಗಿ ಹಣ ಸಂಗ್ರಹಿಸುತ್ತಿದೆ, ಮನೆಯಲ್ಲಿರುವ ಪ್ರತಿಯೊಂದನ್ನು ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ. ” 

ಆದರೆ ಸಿನಿಮಾ ನೋಡೊದಕ್ಕೂ ಮದ್ಯಪಾನ ಮಾಡೋದಕ್ಕೂ ಹಣವನ್ನು ಹೇಗೆ ಕದಿಯಬೇಕೆಂದು ಕಲಿಸಿದ ನನ್ನ ಸ್ನೇಹಿತರ ಕೆಟ್ಟ ಸಹವಾಸದಲ್ಲಿದ್ದೆ. ಶಾಲೆಯಲ್ಲಿ ನಾನು ದಾದಾ ಆಗಿ ಭದ್ರತಾ ಹಣ ಎಂದು ಒಬ್ಬೊಬ್ಬ ವಿದ್ಯಾರ್ಥಿಯ ಕಡೆಯಿಂದ 10 ಪೈಸೆ ಕೂಡಿಸುತ್ತಿದ್ದೆ. ಯಾರು ಕೊಡಲಿಲ್ಲವೋ ಅವರನ್ನು ಹೊಡೆಯುತ್ತಿದೆ. ಮನೆಯಲ್ಲಿರುವ ಪ್ರತಿಯೊಂದನ್ನೂ, ನನ್ನ ತಾಯಿಯ ಮಂಗಳಸೂತ್ರವನ್ನೂ ಒಳಗೊಂಡು ಕಳ್ಳತನ ಮಾಡುತ್ತಿದ್ದೆ.ತಾಯಿಯ ಮದುವೆ ಸೀರೆಯನ್ನು ಸಹ ಕದ್ದು ಒತ್ತೆಯಿಡುತ್ತಿದ್ದೆ. ನಾನು ಕುಟುಂಬಕ್ಕೆ ಅವಮಾನವೆಂದು ಹೇಳಿ ನನ್ನ ತಂದೆ ತಾಯಿಗಳೂ ಸಂಬಂಧಿಕರೂ ನನ್ನನ್ನು ಮನೆಯಿಂದ ಹೊರಗೆ ಹಾಕಿಬಿಟ್ಟರು.

ನಾನು ಚೆನೈಗೆ ಓಡಿ ಹೋಗಿ ಹೋಟೆಲುಗಳಲ್ಲಿ ಪಾತ್ರೆ ತೊಳೆಯುವ ಕೆಲಸಮಾಡುತ್ತಿದ್ದೆ. ಅಲ್ಲಿಯೂ ಕಳ್ಳತನ ಮಾಡಿದ್ದರಿಂದ ಅಲ್ಲಿಂದ ಹೊರಗೆ ಹಾಕಿಬಿಟ್ಟರು. ಕಸ ಹಾಕುವ ಸ್ಥಳಗಳಲ್ಲಿ ಗಜ್ಜಿ ನಾಯಿಗಳೊಂದಿಗೆ ಮಲಗಿ ನನಗೂ ರೋಗ ಬಂದು ಬೇಸತ್ತ ಬಾಳನ್ನು ಮಾಡುತ್ತಿದ್ದೆ . ಬೇಗನೇ ನಾನು ಸೆರೆ ಹಿಡಿದು ಜೇಯಿಲಿನಲ್ಲಿ 10  ದಿನಗಳು ಇದ್ದೆ. ಅಲ್ಲಿ ಶೌಚಾಲಯ ಉಪಯೋಗ ಮಾಡಲು ಅನುಮತಿಸದೆ ಅಸ್ವಸ್ಥನಾಗಿ ಸಾಯುವ ಹಾಗಿದ್ದೆ. ಒಂದು ವೇಳೆ ದೇವರು ಕೊನೆಯ ಸಾರಿ ನನ್ನನ್ನು ಹೊಸ ವ್ಯಕ್ತಿಯಾಗಿರಲು ಸಹಾಯ ಮಾಡಿದರೆ ಹಾಗೆ ಬಾಳುವುದಾಗಿ ಒಂದು ಒಪ್ಪಂದದ ತೀರ್ಮಾನ ದೇವರೊಂದಿಗೆ ಮಾಡಿದೆ. ನನ್ನ ತಂದೆ ತಾಯಿಗಳು ಬಂದು ನನ್ನನ್ನು ಬಿಡುಗಡೆ ಮಾಡಿದರು. ಆಗ ಯೇಸು ಕ್ರಿಸ್ತನು ನನ್ನ ಬಾಳನ್ನು ಬದಲಾಯಿಸಿದನು. ನನ್ನ ಒಪ್ಪಂದ ಆತನಿಗೆ ಬಹು ಶ್ರದ್ಧೆಯಿಂದ ಪಾಲಿಸಿದೆ. ಆತನು ನನ್ನ ಪಾಪವನ್ನೆಲ್ಲಾ ಕ್ಷಮಿಸಿ ಹೊಸ ಬಾಳನ್ನು ನೀಡಿ ನನ್ನನ್ನು ಬದಲಾಯಿಸಿದನು. ನನಗೆ ಮದುವೆಯಾಯಿತು. ನನಗೆ ಬಂದ 1000  ರೂಪಾಯಿಂದ ಒಂದು ಆಟೋ ಕೊಂಡುಕೊಂಡೆ. ನಾನು ಆಟೋ ಚಾಲಕನಾಗಿದ್ದ ಬಡವರು ಹಸಿವೆಯಿಂದ ರಸ್ತೆಯಲ್ಲಿ ನಿಸ್ಸಹಾಯಕರಾಗಿ ಬಿದ್ದುಕೊಂಡಿರುವುದನ್ನು ಕಂಡೆ.
yourstory-auto-raja-2
ಬಿನ್ನಿಪೇಟೆಯ ಕಸಹಾಕುವ ಸ್ಥಳದಲ್ಲಿ ಎಲುಬು ಚರ್ಮವಾಗಿ ಬಿದ್ದುಕೊಂಡಿದ್ದ ವ್ಯಕ್ತಿಯೇ ನಾನು ಕಾಪಾಡಿದ ಮೊದಲನೆಯ ವ್ಯಕ್ತಿ. ನನ್ನ ಕುಟುಂಬ ನೋಡಿಕೊಳ್ಳಲು ನನಗೆ ಕಷ್ಟವಾಯಿತ್ತು. ಅದರಲ್ಲಿ ಈ ವ್ಯಕ್ತಿಯನ್ನು ಸಹಾಯಮಾಡಲು ದೇವರಲ್ಲಿ ಪೂರ್ಣ ವಿಶ್ವಾಸವಿಟ್ಟೆ.

ಯಾರೂ ನನ್ನ ಈ ಸೇವೆಗೆ ಆಗ ಸಹಕಾರ ಮಾಡಲಿಲ್ಲ. ನಿಸ್ಸಹಾಯಕ ಗತಿಯಿಲ್ಲದವರನ್ನು ನನ್ನ ಮನೆಗೆ ಕರಕೊಂಡು ಬರುವುದನ್ನು ನನ್ನ ಅಕ್ಕ ಪಕ್ಕದ ಮನೆಯವರು ನಿಂದಿಸಿದರು. ಆರಂಭದಲ್ಲಿ ನಾನು ಎಷ್ಟೋ ತಿಂಗಳು ನನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಗತಿಯಿಲ್ಲದವರ ಸೇವೆಯಲ್ಲಿದ್ದು ನೋಡಿಕೊಳ್ಳುವುದು ಕಷ್ಟಕರವಾಗಿತ್ತು.

S.R. ಮನೋಹರ್ ಎಂಬ ವ್ಯಕ್ತಿ ಅನಂತರ, ಇಂಡಿಯಾ ಕೆಂಪಸ್ ಕ್ರೂಸೆಡ್ ಫಾರ್ ಕ್ರೈಸ್ಟ್ ಸಂಸ್ಥೆಯವರು ನನಗೆ ಹಣ ಸಹಾಯ ಮಾಡಿದರು. H.D. ಕುಮಾರ ಸ್ವಾಮಿಯವರು, ನಾನು ಅವರ ಹಾಗೆ ಕಾಣುತ್ತಿದ್ದೇನೆಂದು ತಮಾಷೆಯಾಗಿ ನನಗೆ ಹೇಳುತ್ತಿದ್ದರು. ಅವರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿ ಇದ್ದಾಗ ನನ್ನ ಸೇವೆಗೆ ಜಮೀನು ಹಾಗೂ ಕಟ್ಟಡಗಳನ್ನು ಕಟ್ಟಿ ನನ್ನ ಸೇವೆಗೆ ಬಹಳವಾಗಿ ಸಹಾಯಮಾಡಿದರು. ಸ್ವಲ್ಪಕಾಲದ ನಂತರ ಮಾರವಾರಿ ಹಾಗೂ ಜೆನ್ ಸಮುದಾಯದವರು ಔಷಧ ಇತ್ಯಾದಿ ಅವಶ್ಯಕತೆಗಳನ್ನು ಕೊಟ್ಟು ಸಹಾಯಮಾಡಿದರು.

1997 ರಲ್ಲಿ ಕೆಲವು ಕ್ರಿಸ್ತ ಸೇವಕರ ಸಹಾಯದ ಮೂಲಕ ಭಾರತ ನವ ನಾವೆ ಸೇವೆಯನ್ನು ಸ್ಥಾಪಿಸಿದೆ. ಈಗ ಲಿಂಗರಾಜಪುರ ಹಾಗೂ ದೊಡ್ಡ ಗುಬ್ಬಿಯಲ್ಲಿರುವ ಮನೆಗಳಲ್ಲಿ ನಿರ್ಗತಿಕರಾಗಿರುವ 450 ಜನರಿದ್ದಾರೆ. ನಾವು ಕ್ಯಾನ್ ಸರ್, ಏಡ್ಸ್ ಮುಂತಾದ ಗಂಭೀರ ರೋಗಿಗಳೂ ಬುದ್ದಿ ಮಾಂದರಾಗಿರುವವರಿಗೂ ಆಶ್ರಯ ಕೊಡುತ್ತೇವೆ.
yourstory-auto-raja-3 ನಾನು ಬೀದಿಯಲ್ಲಿ ಬಿದ್ದಿರುವವರನ್ನು ನನ್ನ ಆಟೊದಲ್ಲಿ ನನ್ನ ಮನೆಗೆ ತರುತ್ತಾ ಇದ್ದುದರಿಂದ ನನಗೆ ಆಟೋ ರಾಜ ಎಂಬ ಹೆಸರು ಬಂತು. ಕಳೆದ  16 ವರ್ಷಗಳಿಂದ ನನ್ನ ಸೇವೆಯಲ್ಲಿ ಬೆಂಗಳೂರು ಬೀದಿಯಲ್ಲಿ ಬಿದ್ದಿದ್ದ 5000  ನಿರ್ಗತಿಕರನ್ನು ಸಂರಕ್ಷಿಸಿ ಸಹಾಯಮಾಡಲು ಸಾಧ್ಯವಾಯಿತು. ರಸ್ತೆಯಲ್ಲಿ ಬಿದ್ದಿದ್ದ 2500 ಶವಗಳಿಗೆ ಗೌರವವಾಗಿ ಸಂಸ್ಕಾರ ಮಾಡಲಾಯಿತು.

ಸಾಯುವವರ ಕೊನೆ ಆಶೆಯನ್ನು ಪೂರೈಸಲು ನಾನು ಯತ್ನಿಸುವೆ. ಸಾಮಾನ್ಯವಾಗಿ ಅದು ಅವರಿಗೆ ಇಷ್ಟವಾದ ಊಟ ತಿನ್ನಬೇಕೆಂಬ ಆಶೆಯಾಗಿರುತ್ತೆ. ನಾನು ಕೊತ್ತನೂರಲ್ಲಿದ್ದುಕೊಂಡು ನನ್ನ ಕುಟುಂಬ ಹಾಗೂ ನಿರ್ಗತಿಯರೊಂದಿಗೆ ಸಮಯ ಕಳೆಯುತ್ತಿದ್ದೇನೆ. ನಾವು ಒಂದು ದೊಡ್ಡ ಸಂತೋಷ ಕುಟುಂಬ.

NDTV ಯಲ್ಲಿ ನನ್ನನ್ನು ಸಂದರ್ಶನ ಮಾಡಿದ್ದರು CNN  IBN ನಲ್ಲಿ ನಿಜ ಹೀರೋ ಪ್ರಶಸ್ತಿ ನೀಡಿದ್ದಾರೆ. ದಿನಪತ್ರಿಕೆಯಲ್ಲಿ ಸಹ ನನ್ನ ಕೆಲಸದ ಬಗ್ಗೆ ಬಂದಿವೆ.

ಸದ್ಯಕ್ಕೆ ಸರಕಾರದಿಂದ ಯಾವ ಸಹಾಯವಿಲ್ಲದೆ ನಾನು ನನ್ನ ಸೇವೆ ಮಾಡುತ್ತಿದ್ದೇನೆ. ನಾನು ದೇವರೊಂದಿಗೆ ಅಂದು ಮಾಡಿಕೊಂಡ ನನ್ನ ಕೊನೆ ಒಪ್ಪಂದವನ್ನು ಇದುವರೆಗೆ ಪಾಲಿಸುತ್ತಾ ಬಂದಿದ್ದೇನೆ. ಆತನೂ ತನ್ನ ಭಾಗವನ್ನು ಮಾಡುತ್ತಿದ್ದಾನೆ.

        ನನ್ನ ಬಾಳೊಂದು ವಿಮಾನವಿದ್ದ ಹಾಗಿದೆ. ಹೇಗೆ ವಿಮಾನ ಪ್ರಾರಂಭದಲ್ಲಿ ವೇಗ ನಿಯಂತ್ರಿಸಲು ಹೋರಾಡಿ ಓಡಾಡುತ್ತದೋ ಹಾಗೆ ಪ್ರಾರಂಭದಲ್ಲಿ ಹೋರಾಡಿ ಓಡಾಡಬೇಕಿತ್ತು. ಇಂದು ಸಾಕಷ್ಟು ವೇಗ ಪಡಕೊಂಡು ಸರಿಯಾದ ರೀತಿಯಲ್ಲಿ ನಾನು ಹಾರಾಡುತ್ತಿರುವುದಾಗಿ ನನಗನಿಸುತ್ತೆ. ಯಾವಾಗ ಇಳಿಯಬೇಕೋ ಅದು ದೇವರ ಕೈಯಲ್ಲಿದೆ !
yourstory-auto-raja-4

3 comments

  1. Super GOD BLESS YOU JESUS

  2. Padma says:

    Karthanu thippeyalli biddidhavarannu yethi bandeya mele nillisuthane idakke brother auto Raja avare Sakshi, Athanu olleyavanu. Amen

Comments

Your email address will not be published. Required fields are marked *

WhatsApp us