ಆತನ ಎಲ್ಲಾ ಆಶೀರ್ವಾದಗಳನ್ನು ಎಣಿಸಿ ಕರ್ತನಲ್ಲಿ ಸಂತೋಷಿಸು!

  Posted on   by   No comments

joga-hatasai-egeszseg

“ನಿಮ್ಮ ದೇವರಾದ ಯೆಹೋವನು ನಿಮ್ಮ ಪ್ರಯತ್ನಗಳನ್ನು ಕೈಗೂಡುವಂತೆ ಮಾಡಿದ್ದಕ್ಕಾಗಿ ನೀವೂ ನಿಮ್ಮ ಮನೆಗಳವರೂ ಸಂತೋಷದಿಂದರಬೇಕು” (ಧರ್ಮೋ. 12:7).

ನಾವೆಲ್ಲರೂ ಸಾಧಾರಣವಾಗಿ ಮಾಡುವ ತಪ್ಪುಗಳೆಂದರೆ ದೇವರು ಮಾಡಿರುವ ಆತನ ಎಲ್ಲಾ ಅದ್ಭುತವಾದ ಆಶೀರ್ವಾದಗಳಿಗಾಗಿಯೂ ಮತ್ತು ಕರುಣೆಗಾಗಿಯೂ ಆತನನ್ನು ವಂದಿಸದೇ ಇರುವುದು. ದೇವರನ್ನು ವಂದಿಸುವ ಬದಲು ನಾವು ನಮಗೆ ಇದು ಇಲ್ಲ ಅಥವಾ ಅದು ಇಲ್ಲ ಎಂದು ಗುಣುಗುಟ್ಟುತ್ತಾ ಇರುವುದು. ಕೆಲವು ಸಲ ಕೆಲವು ಜನರು ಅವರ ಕೊರತೆಗಳಿಗಾಗಿ ದೇವರನ್ನು ದೂಷಿಸುತ್ತಾರೆ. ಆದರೆ ಮೇಲಿನ ವಾಗ್ಧಾನ ವಚನದ ಪ್ರಕಾರ ಬೇರೆ ನಾವು ದೇವರ ಆಶೀರ್ವಾದವನ್ನು ಎಣಿಕೆ ಮಾಡುವುದಾದರೆ ನಾವು ದೇವರ ಶಕ್ತಿ, ಪ್ರೀತಿ ಮತ್ತು ಮಹಿಮೆಯನ್ನು ನೋಡುವವರಾಗುತ್ತೇವೆ. ಹೋಗಿದೆಲ್ಲಾ ಹೋಗಲಿ! ಇಂದಿನಿಂದ ನಾವು ಎಣಿಕೆ ಮಾಡುವುದನ್ನು ಕಲಿತು ನಮ್ಮ ಹೃದಯದ ಅಂತರಾಳದಿಂದ ದೇವರನ್ನು ಆತನ ಎಲ್ಲಾ ಆಶೀರ್ವಾದಗಳಿಗಾಗಿಯೂ, ಚಿಕ್ಕದು ದೊಡ್ಡದು ಎಲ್ಲದಕ್ಕೂ ವಂದನೆ ಹೇಳೋಣ.

“ಯಾರು ಸ್ತುತಿ ಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು (ಕೀರ್ತ. 50:23). ಆದ್ದರಿಂದ ನಾವು ದೇವರನ್ನು ಆತನ ಎಲ್ಲಾ ಅದ್ಭುತವಾಗಿ ಮತ್ತು ಸಾಟಿಯಿಲ್ಲದ ಆಶೀರ್ವಾದಗಳಿಗೆ ವಂದಿಸುತ್ತಾ ಆತನ ಪವಿತ್ರನಾಮವನ್ನು ಮಹಿಮೆಪಡಿಸೋಣ.

ಒಬ್ಬ ಸಾಧಾರಣ ಮನುಷ್ಯನು ತನ್ನ ಎಲ್ಲಾ ಕಷ್ಟಗಳ ಮಧ್ಯದಲ್ಲಿ ಸ್ತೋತ್ರಿಸುತ್ತಾ ದೇವರನ್ನು ಆತನ ಎಲ್ಲಾ ಆಶೀರ್ವಾದಗಳಿಗಾಗಿ ಮತ್ತು ಒಳ್ಳೇ ವಿಷಯಗಳಿಗಾಗಿ ಮೇಲಿನ ವಚನದಂತೆ ಅವನು ನಿರಂತರವಾಗಿ ದೇವರಿಗೆ ಸ್ತೋತ್ರದ ಯಜ್ಞವನ್ನು ಸಮರ್ಪಿಸಿದನು. ಅಂದರೆ ಸ್ತೋತ್ರದ ಯಜ್ಞವನ್ನು ಎಡಬಿಡದೆ ಸಮರ್ಪಿಸೋಣ (ಇಬ್ರಿ. 13:15). ಇದನ್ನು ಅನೇಕ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ದೇವರ ಬಗ್ಗೆ ಅರ್ಧಂಬರ್ಧ (ಇಬ್ರಿ. 13:15). ಇದನ್ನು ಅನೇಕ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ದೇವರ ಬಗ್ಗೆ ಅರ್ಧಂಬರ್ಧ ತಿಳುವಳಿಕೆಯಿರುವವರು ಆತನನ್ನು ಗೇಲಿ ಮಾಡಿದರು. ಆದರೆ, ಅವನು ಇದಕ್ಕೆ ತನ್ನ ಕಿವಿಯನ್ನು ಕೊಡಲಿಲ್ಲ. ಯಾಕಂದರೆ ಪ್ರತಿಸಲ ಪ್ರಾರ್ಥಿಸಿದಾಗ, ದೇವರ ಪ್ರಸನ್ನತೆ ಅವನನ್ನು ಸುತ್ತುವರಿದು ದೇವರ ಸಮಾಧಾನ ಮತ್ತು ಸಂತೋಷ ಅವನ ಹೃದಯವನ್ನು ತುಂಬುತ್ತಿತ್ತು. ಆದ್ದರಿಂದ ಅವನಿಗೆ ಅಭಿಪ್ರಾಯಗಳ ಬಗ್ಗೆ ಚಿಂತೆಮಾಡಲು ಸಮಯವಿರುತ್ತಿರಲಿಲ್ಲ. ಈ ದೈವೀಕ ಭಕ್ತನು ತನ್ನ ಜೀವನದಲ್ಲಿ ತೊಂದರೆಗಳನ್ನು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದ್ದನು. ಆದರೆ ಅವನ ವಂದನೆಗಳು, ಸ್ತೋತ್ರಗಳು ಈ ಎಲ್ಲಾ ಬಿರುಗಾಳಿಗಳನ್ನು ಶೋಧನೆಗಳನ್ನು ಎದುರಿಸಲು ಜಯಿಸಲು ಸಹಾಯ ಮಾಡುತ್ತಿತ್ತು. ಅವನ ಜಯದ ಮತ್ತು ಅಭಿವೃದ್ಧಿ ಜೀವನ ಇತರರನ್ನು ಆಶ್ಚರ್ಯಗೊಳಿಸಿ ಅವರೂ ದೇವರನ್ನು ಸ್ತೋತ್ರಿಸುವುದು. ಎಷ್ಟೊಂದು ಅದ್ಭುತವಾಗಿಯೂ ಮತ್ತು ಅವಶ್ಯಕವೂ ಆಗಿದ್ದು ಅದರ ಅನುಭವ ನೀವೂ ಪಡೆಯಬೇಕು. ಬದಲಾಗಿ ಗುಣಗುಟ್ಟುವುದು, ಗುಜುಗುಜು ಅನ್ನುವುದು ಸುಳ್ಳು ನೆಪ ಹುಡುಕುವುದು ನಿಮ್ಮ ಕಾಯಿಲೆಗೆ ಮತ್ತು ಕೊರತೆಗಳಿಗೆ ಆತನ ಎಲ್ಲಾ ಆಶೀರ್ವಾದಗಳಿಗಾಗಿ ಸ್ತೋತ್ರಿಸಿ ವಂದಿಸಲು ಆರಂಭಿಸಿ, ಆಗ ಆತನು ನಿಮ್ಮನ್ನು ಹೆಚ್ಚು ಹೆಚ್ಚಾಗಿ ಆಶೀರ್ವದಿಸುತ್ತಾನೆ (ಕೊಲೊ. 3:15).

ಪ್ರಾರ್ಥನೆ: ಪ್ರಿಯ ಕರ್ತನೇ! ಎಲ್ಲಾ ಸಮಯದಲ್ಲಿ ನಿನ್ನನ್ನು ಸ್ತೋತ್ರಿಸಿ ವಂದಿಸುವುದು ಎಷ್ಟೊಂದು ದೊಡ್ಡದ್ದು. ಇಂದಿನಿಂದ ಪ್ರತಿ ನಿಮಿಷದಲ್ಲೂ ನನ್ನ ಜೀವನ ಪ್ರತಿದಿನದಲ್ಲಿ ನಿನ್ನನ್ನು ಹಿಂಬಾಲಿಸಲು ಸಹಾಯಮಾಡು. ಮೇಲಿನ ಪ್ರಸಂಗದಲ್ಲಿ ಆ ಸಹೋದರನು ಪಡೆದ ಎಲ್ಲಾ ಆಶೀರ್ವಾದಗಳನ್ನು ನನಗೂ ದೈವೀಕ ಆಶೀರ್ವಾದಗಳನ್ನು ಕೊಡು ನನ್ನನ್ನು ಕೃತಜ್ಞತೆಯ ಹೃದಯದಿಂದಲೂ, ಸ್ತೋತ್ರಿಸುವ ತುಟಿಗಳಿಂದ ಆಶೀರ್ವದಿಸು. ನಮ್ಮ ಕರ್ತನಾದ ಯೇಸುವಿನ ಆಶೀರ್ವದಿತ ಹೆಸರಿನಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

MANNA MINISTRIES
Mannaministries.in@gmail.com
*For Daily Devotion Contact: +91 9964247889*

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

Comments

Your email address will not be published. Required fields are marked *

WhatsApp us