ಆತನ ಚಿತ್ತವನ್ನು ನೆರವೇರಿಸಿ ಆತನ ರಾಜ್ಯವನ್ನು ಸೇರಿರಿ!

  Posted on   by   4 comments

photo

“ನನ್ನನ್ನು ಸ್ವಾಮಿ, ಸ್ವಾಮಿ ಅನ್ನುವವರೆಲ್ಲರು ಪರಲೋಕ ರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ, ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೆ” (ಮತ್ತಾ. 7:21).

ಈ ಪ್ರಪಂಚದಲ್ಲಿ ಅನೇಕ ಜನರು ದೇವರ ಚಿತ್ತವನ್ನು ಹೇಗೆ ತಿಳಿದುಕೊಳ್ಳುವದು ಎಂದು ಆಶ್ಚರ್ಯಪಡುತ್ತಾರೆ. ಅವರು ದೇವರ ಚಿತ್ತದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಆದರೆ, ನಿಮ್ಮ ಕರ್ತನಾದ ಯೇಸು ದೇವರ ಪ್ರಿಯ ಮಗನಾಗಿದ್ದರೂ, ತನ್ನನ್ನು ತಾನೇ ಯಜ್ಞವಾಗಿ ಅರ್ಪಿಸಿಕೊಳ್ಳಬೇಕಾಗಿ ಬಂದಾಗ, ಆತನು ಸಹ ಕೂಗಿಕೊಂಡನು, “ತಂದೆಯೇ, ನನ್ನ ಚಿತ್ತವಲ್ಲ, ನಿನ್ನ ಚಿತ್ತ ನೆರವೇರಲಿ (ಲೂಕ. 22:42). ಹೀಗೆಯೇ, ನಾವು ಸಹ ದೇವರ ಚಿತ್ತವನ್ನು ತಿಳಿದುಕೊಳ್ಳಬೇಕಾದರೆ ನಾವು ದೇವರಿಗೆ ಸಮರ್ಪಿಸಿಕೊಳ್ಳಬೇಕು. ಆತನು ನಮ್ಮ ಕೈಗಳನ್ನು ಆತನ ಹಸ್ತಗಳಲ್ಲಿ ತೆಗೆದುಕೊಂಡು ಆತನ ಚಿತ್ತದಂತೆ ನಮ್ಮನ್ನು ನಡೆಸುತ್ತಾನೆ. ನಿಮ್ಮ ಆಲೋಚನೆಯಂತೆ ಎಂದಿಗೂ ಏನನ್ನು ಮಾಡಬೇಡ. ಎಂದಿಗೂ ಹೇಳಬೇಡ ಎಂದು. “ನನ್ನ ಇಷ್ಟದಂತೆ ದೇವರು ಮಾಡಲಿ” ಎಂದು. ಇದು ಕೇವಲ ತೊಂದರೆಗಳಿಗೂ ಮತ್ತು ಹೋರಾಟಗಳಿಗೂ ದಾರಿ ಮಾಡಿ ಕೊಡುತ್ತದೆ. ನಮ್ಮ ಕರ್ತನಾದ ಯೇಸು, ದೇವರ ಮಗನು ನಮ್ಮ ಮುಂದೆ ಒಂದು ದೃಷ್ಟಾಂತವಿಟ್ಟಿದ್ದಾನೆ. ಕರ್ತನು ಏನು ಮಾಡಬೇಕೆಂದು ಅಪೇಕ್ಷಿಸಿದನೂ ಅದನ್ನು ಮಾಡಿ ಶಿಲುಬೆಯ ಮೇಲೆ ಸತ್ತನು. ಆದ್ದರಿಂದ ಯಾರು ದೇವರ ಚಿತ್ತವನ್ನು ಮಾಡುತ್ತಾರೋ ಆತನಲ್ಲಿ ಎಂದೆಂದಿಗೂ ನೆಲೆಸುತ್ತಾನೆ (1 ಯೋಹಾ. 2:17).

ಒಬ್ಬ ಯೌವನಸ್ಥನು ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಂಡು ಜೀವಿಸುತ್ತಿದ್ದನು. ಈ ಹಂತದಲ್ಲಿ, ಅವನಿಗೆ ಮದುವೆಯಾಗುವ ಸಮಯವು ಬಂದಾಗ, ಒಬ್ಬ ದೇವರ ಸೇವಕರಿಗೆ ಪತ್ರ ಬರೆದು ತನ್ನ ಇಂಗಿತವನ್ನು ತಿಳಿಸಿದನು. ಆ ದೇವರ ಸೇವಕರು ಬಹಳ ಶ್ರದ್ದೆಯಿಂದ ಪ್ರಾರ್ಥಿಸಿ ಅವನಿಗೆ ಉತ್ತರಿಸಿದರು, “ಈ ಹುಡುಗಿ ನಿನಗೆ ಸರಿಯಾದವಳಲ್ಲ. ಇದು ನಿನಗೆ ದೇವರ ಚಿತ್ತವಲ್ಲ” ಆದರೆ, ಈ ಯೌವನಸ್ಥನು ತಾನು ಆರಿಸಿಕೊಂಡ ಹುಡುಗಿಯನ್ನು ಮದುವೆಯಾಗಲು ತಿರ್ಮಾನಿಸಿದನು. ಜೊತೆಗೆ ಆ ದೇವರ ಸೇವಕರಿಗೆ ಹಿಂತುರಿಗಿ, ಬರೆದು ಹೇಳಿದನು, “ಈ ಹುಡುಗಿಯೇ ದೇವರು ಆರಿಸಿಕೊಂಡಿರುವ ಹುಡುಗಿ ಮತ್ತು ಅದನ್ನು ದೇವರು ಪ್ರಕಟಪಡಿಸಿದ್ದಾನೆ ಎಂದು. ಅವನು ಹುಡುಗಿಯನ್ನು ಮದುವೆಯಾದ. ದಿನಗಳು ಕಳೆದವು, ಒಡನೆಯೇ ಮದುವೆಯ ನಂತರ, ಆ ಹೆಣ್ಣು ಮಾಡಿದ ವಿಷಯವೆಂದರೆ, ಅವನು ದೇವರಿಂದ ದೂರ ಹೋಗುವಂತೆ. ಅವನು ಈ ಪ್ರಾಪಂಚಿಕ ಮನುಷ್ಯನಾಗಿ, ಅವನು ದೇವರಿಂದ ದೂರವಾದನು. ಸ್ವಲ್ಪ ದಿನದ ನಂತರ ಅವನ ಜೀವನ ಶೋಚನೀಯವಾಯಿತು. ಒಹ್! ಎಂಥಹ ಪಾಪದ ಸ್ಥಿತಿಯಾಯಿತು.

ಪ್ರಿಯರೇ! ದೇವರ ಚಿತ್ತಕ್ಕೆ ವಿರೋಧವಾಗಿ, ಅಪೋಸ್ತಲನಾದ ಪೌಲನಂತೆ ಹೋಗಬೇಡ. ದೇವರಲ್ಲಿ ಪ್ರಾರ್ಥಿಸಿರಿ. “ಕರ್ತನೇ! ನಾನು ಏನು ಮಾಡಬೇಕು? (ಅ.ಕೃ. 9:6). ನಾವು ಆತನ ಚಿತ್ತವನ್ನು ತಿಳಿಯುವುದಲ್ಲದೇ ಆತನ ಚಿತ್ತದಂತೆ ಪ್ರಾರ್ಥಿಸಬೇಕು ಮತ್ತು ಮಾಡಬೇಕು. ನಿಜಕ್ಕೂ ಆತನು ನಿನ್ನನ್ನು ಅದ್ಭುತವಾದ ದಾರಿಯಲ್ಲಿ ನಡೆಸಿ ನಿನಗೆ ಆಶೀರ್ವಾದಿತ ಜೀವನವನ್ನು ಕೊಡುತ್ತಾನೆ.

ಪ್ರಾರ್ಥನೆ : ಪ್ರಿಯ ರಕ್ಷಕನೇ! ನಿನ್ನ ಚಿತ್ತವನ್ನು ಅರಿತು ಅದರಂತೆ ನಡೆಯುವ ಕೃಪೆ ಕೊಟ್ಟಿದ್ದಕ್ಕಾಗಿ ನಿನಗೆ ವಂದನೆಗಳು. ಈ ಪ್ರಪಂಚದಲ್ಲಿ, ಇಂದಿನಿಂದ, ನಿನ್ನ ಚಿತ್ತವನ್ನು ಮಾತ್ರ ನನ್ನ ಜೀವನದಲ್ಲಿ ನಡೆಸಿ, ನಿನ್ನ ರಾಜ್ಯ ಸೇರುವಂತೆ ಸಹಾಯಮಾಡು. ಕರ್ತನಾದ ಯೇಸುವಿನ ಮಧುರ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

4 comments

  1. Francis pinto says:

    Praise the Lord.. Amen.

  2. Gopal R says:

    Glory to lord jesus

  3. Vikas says:

    Leave ur worries on God. He will bless you in his will. Amen.

Comments

Your email address will not be published. Required fields are marked *

WhatsApp us