ಆತನ ದಯೆ ಯುಗದಿಂದ ಯುಗಕ್ಕೆ ಇರುತ್ತದೆ!

  Posted on   by   No comments

favor2

 “ಆದರೆ ಯೆಹೋವನಲ್ಲಿ ಭಯಭಕ್ತಿಯುಳ್ಳವನ ಮೇಲೆ ಆತನ ದಯವು ಯುಗಯುಗಾಂತರಗಳವರೆವಿಗೂ ಇರುತ್ತದೆ” (ಕೀರ್ತ. 103:17).

ದೇವರು ಅಬ್ರಹಾಮನನ್ನು ಕರೆದನು (ಆದಿ. 12:1). ಮತ್ತು ಅಬ್ರಹಾಮನು ಆತನೊಡನೆ ಹತ್ತಿರವಾಗಿ ವಾಸಿಸಿದ್ದರಿಂದ ಆತನ ಸ್ನೇಹಿತನಾದನು. ಆದ್ದರಿಂದ, ದೇವರು ಅವನನ್ನು ಹೆಚ್ಚಾಗಿ ಆಶೀರ್ವದಿಸಿ ಅವನೊಡನೆಯೂ ಯುಗಯುಗಾಂತರಗಳಲ್ಲಿ ಅವನ ಕುಟುಂಬದವರೊಡನೆಯೂ ತನ್ನ ಕೃಪೆ ಉಳಿಯುವಂತೆ ಮಾಡಿದನು. ಈ ದಿನದಲ್ಲಿ, ನೀವು ಒಂಟಿಯಾದ ಮನುಷ್ಯನಾಗಿರಬಹುದು ಅಥವಾ ಸ್ತ್ರೀಯಾಗಿರಬಹುದು ಆದರೆ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಯುಗಯುಗಾಂತರಗಳವರೆವಿಗೂ ಆಶೀರ್ವದಿಸಲು ಕೃಪೆಯುಳ್ಳವನಾಗಿದ್ದಾನೆ? (ಯೆಶಾ. 61:9). ಆದ್ದರಿಂದ ಅಬ್ರಹಾಮನಂತೆ, ನೀವು ಸಹ ನಿಮ್ಮ ಜೀವನದಲ್ಲಿ ದೇವರಿಗೆ ಪರಿಪೂರ್ಣವಾಗಿ ಸಮರ್ಪಿಸಿರಿ (ಯೆಶಾ. 51:2).

ಒಬ್ಬ ಯೌವನಸ್ಥ ಮನುಷ್ಯನು ದೇವರ ಬಗ್ಗೆ ಕೇಳಿ ಅವನನ್ನು ಪ್ರೀತಿಸಲು ಆರಂಭಿಸಿದನು. ಆದರೆ ದೇವರ ಬಗ್ಗೆ ಆತನ ಪ್ರೀತಿ ಆಳವಾಗಿಯೂ ಅರ್ಥಪೂರ್ಣವಾಗಿಯೂ ಇರಲಿಲ್ಲ. ಆತನು ಧೂಮಪಾನ ಮಾಡುತ್ತಿದ್ದು ನಿಲ್ಲಿಸಲು ಇಷ್ಟಪಡಲಿಲ್ಲ. ಶೀಘ್ರದಲ್ಲಿ ಆತನು ಮದುವೆಯಾಗಿ ಒಬ್ಬ ಒಳ್ಳೇ ಹೆಂಡತಿಯನ್ನು ಪಡೆದನು. ಮನೆಯಲ್ಲಿ ಕಷ್ಟಗಳು ಆರಂಭವಾಯಿತು. ಆಗ್ಗಿಂದ್ದಾಗೆ, ಜಗಳಗಳು ಇದ್ದು ಮನೆಯಲ್ಲಿ ಸಮಾಧಾನವಿರಲಿಲ್ಲ. ಆ ಸಮಯದಲ್ಲಿ, ಒಬ್ಬ ದೇವರ ಮನುಷ್ಯ ಇವನನ್ನು ಸಂಧಿಸಿದನು. ಆತನು ಹೇಳಿದನು “ಅದು ನಿಜ ನೀನು ದೇವರನ್ನು ಪ್ರೀತಿ ಮಾಡುತ್ತೀ ಎಂದು ಆದರೆ, ಆತನನ್ನು ನಿನ್ನ ಸ್ವಂತ ಬಿಡುಗಡೆಗಾರನನ್ನಾಗಿ ಒಪ್ಪಿಕೊಂಡಿಲ್ಲ. ಈಗಲೇ ಮೊಣಕಾಲೂರಿ ದೇವರಿಗೆ ಪ್ರಾರ್ಥಿಸು ‘ಕರ್ತನೇ, ನನ್ನ ತಪ್ಪುಗಳನ್ನು ಮನ್ನಿಸು, ನನ್ನ ಕುತ್ತಿಗೆ ಹಿಡಿದಿರುವ ಎಲ್ಲಾ ಕೆಟ್ಟ ಚಟಗಳಿಂದ ಬಿಡುಗಡೆ ಹೊಂದಿ ನನಗೆ ಬೇಕಾಗಿರುವ ಸ್ವಾತಂತ್ರ್ಯವನ್ನು ಕೊಡು. ನಿನ್ನ ದೈವೀಕ ಸಮಾಧಾನದಿಂದ ನನ್ನನ್ನು ತುಂಬಿಸಿ ನಾನು ನಿನ್ನಲ್ಲಿ ನೆಲೆಸಿರುವಂತೆ ಸಹಾಯಮಾಡು. ಆಗ ಆತನು ನಿನ್ನನ್ನು ಆಶೀರ್ವದಿಸುತ್ತಾನೆ! ಈ ಮನುಷ್ಯನು ಅದನ್ನೇ ಮಾಡಿದನು. ಆಗ ದೈವೀಕ ಸಮಾಧಾನ ಆತನನ್ನು ತುಂಬಿತು. ಬೇಗನೇ, ಅವನ ಮನೆಯಲ್ಲೂ ಸಮಾಧಾನ ತುಂಬಿತು. ನಂತರ, ಆತನ ಮಗನು ಪ್ರಾಪಂಚಿಕ ದುರಾಶೆಗಳಿಗೆ ಗುಲಾಮನಾದನು. ಈಗ, ತಂದೆ ತನ್ನ ಮಗನನ್ನು ಪ್ರಾಪಂಚಿಕ ದುರಾಶೆಗಳಿಂದ ಬಿಡಿಸುವಂತೆ ದೇವರನ್ನು ಶ್ರದ್ದೆಯಿಂದ ಬೇಡಿದನು. ದೇವರು ಆತನ ಪ್ರಾರ್ಥನೆಯನ್ನು ಕೇಳಿ ಆತನ ಮಗನನ್ನು ಬಿಡಿಸಿದನು. ಮುಂದಿನ ದಿನಗಳಲ್ಲಿ, ಮುಂದಿನ ಪೀಳಿಗೆಯವರು ಆಶೀರ್ವದಿಸಲ್ಪಟ್ಟರು ಮತ್ತು ಅವರೆಲ್ಲರೂ ದೇವರಿಗೆ ಭಯಪಡುವಂತಹ ಕುಟುಂಬಗಳಾಗಿ ಮಾಡಲ್ಪಟ್ಟರು. ಕೇವಲ ಈ ಮನಷ್ಯನ ನೀತಿಯಿಂದ ಇಡೀ ಸಂತಾನವೇ ದೇವರಿಂದ ಆಶೀರ್ವದಿಸಲ್ಪಟ್ಟದ್ದಕ್ಕಾಗಿ ಪುಳಕಿತಗೊಂಡರು.

ಪ್ರಿಯ ಸ್ನೇಹಿತನೇ! ಈ ರೀತಿಯ ಸಂತೋಷಕ್ಕಾಗಿ ನೀವು ಆಶೆಪಡುವಿರಾ? ಅಥವಾ ಈ ಪ್ರಾಪಂಚಿಕ ದುರಾಶೆಗಳಿಗೆ ದೇವರನ್ನು ತೊರೆಯಲು ಇಷ್ಟಪಡುವಿರಾ? ದಯಮಾಡಿ ದೇವರನ್ನು ಹುಡುಕಿ, ಆತನನ್ನು ನಿಮ್ಮ ರಕ್ಷಕನನ್ನಾಗಿ ಸ್ವೀಕರಿಸಿರಿ. ದೇವರು ನಿಜವಾಗಲೂ ನಿಮ್ಮ ನಂಬಿಕೆಯನ್ನು ಗೌರವಿಸಿ, ನಿಮ್ಮ ಕುಟುಂಬವನ್ನು ಯುಗ ಯುಗಾಂತರಗಳವರೆವಿಗೂ ಆಶೀರ್ವಾದಿಸತ್ತಾನೆ.

ಪ್ರಾರ್ಥನೆ :-

ಪ್ರಿಯ ಪರಲೋಕದ ತಂದೆಯೇ, ನಿನಗೆ ನನ್ನ ಪ್ರೀತಿ ಪೂರ್ಣವಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಅದೇ ಸಮಯದಲ್ಲಿ  ಈ ಪ್ರಾಪಂಚಿಕ ಆನಂದಗಳೂ ನನಗೆ ಬೇಕು. ನಾನು ನನ್ನ ಎರಡು ಮನಸ್ಸಿಗಾಗಿ ನಾಚಿಕೆಪಡುತ್ತೇನೆ. ತಂದೆಯೇ, ಈ ದಿನ ನೀನು ನನ್ನ ಹೃದಯವನ್ನು ಬಲದಾಯಿಸಿ ನಿನ್ನನ್ನು ಪೂರ್ಣ ಹೃದಯದಿಂದ ಪ್ರೀತಿ ಮಾಡುವಂತೆ ಸಹಾಯಮಾಡು. ಅಬ್ರಹಾಮನು ನಡೆದಂತೆ ನಾನು ನಿನ್ನ ಸಂಗಡ ನಡೆಯುವಂತೆ ಅವಕಾಶಕೊಡು. ನನ್ನನ್ನು ನನ್ನ ಕುಟುಂಬವನ್ನು ಯುಗಯುಗಾಂತರಗಳಲ್ಲಿ ಆಶೀರ್ವಸಿದಿಸು ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

 

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *

WhatsApp us