ಆತನ ಶುಭವೂ ಕೃಪೆಯೂ ನಿಮ್ಮನ್ನು ಸದಾ ಹಿಂಬಾಲಿಸುವವು!

  Posted on   by   4 comments

5bacef6563846da66a909479603b1b87

“ನಿಶ್ಚಯವಾಗಿ ನನ್ನ ಜೀವಮಾನವೆಲ್ಲಾ ಶುಭವೂ, ಕೃಪೆಯೂ ನನ್ನನ್ನು ಹಿಂಬಾಲಿಸುವವು”. ದೇವರ ಸನ್ನಿಧಿಯಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ” (ಕೀರ್ತ. 23:6, 34:10).

ನಾವು ದೇವರನ್ನು ಎಲ್ಲಾ ಸಮಯದಲ್ಲಿ ಆತುಕೊಂಡಾಗಲೇ ಮಾತ್ರ ನಾವು ಈ ಆಶೀರ್ವಾದವನ್ನು ಹೊಂದಿಕೊಳ್ಳಬಹುದು. ಯೋವೇಲನ ಹಾಗೆ, ನಾವು ನಮ್ಮ ಜೀವಿತವನ್ನು ದೇವರೊಟ್ಟಿಗೆ ಐಕ್ಯಗೊಳಿಸಿ “ಕರ್ತನೇ! ನೀನೇ ನನ್ನ ಬಂಡೆಯೂ, ಆಶ್ರಯವೂ ಆಗಿದ್ದೀ. ನಾನು ನಿನ್ನನ್ನೇ ಆತುಕೊಂಡು ನಿನ್ನೊಬ್ಬನನ್ನೇ ಆಶ್ರಯಿಸುವೆ (ಯೋವೇ. 3:16). ಎಂದು ಹೇಳೋಣ. ಆದ್ದರಿಂದ, ಕರ್ತನಲ್ಲಿ ಉಲ್ಲಾಸಿಸಿರಿ. ಆತನು ನಿಮಗೆ ತನ್ನ ಕೃಪೆಯನ್ನು ಅತ್ಯಧಿಕವಾದ ರೀತಿಯಲ್ಲಿ ನೀಡಿ ನೀವು ಆಶಿಸುವುದಕ್ಕಿಂತ ಹೆಚ್ಚಿನದಾಗಿ ಕೊಡುವನು.

ಒಂದು ಕಛೇರಿಯಲ್ಲಿ ಒಬ್ಬ ವ್ಯಕ್ತಿಯು ಯಥಾರ್ಥವಾಗಿಯೂ, ನಂಬಿಗಸ್ಥಿಕೆಯಿಂದಲೂ ಕೆಲಸ ಮಾಡುತ್ತಿದ್ದನು. ಅವರು ತಮ್ಮ ಕೆಲಸವನ್ನು ಮುಗಿಸದೆ ಎಂದಿಗೂ ಮನೆಗೆ ಹೋಗುತ್ತಿರಲಿಲ್ಲ. ಅವರ ಸಹೋದ್ಯೋಗಿಗಳು ಅವರ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಿದ್ದರು. ಅವರ ಈ ಶ್ರಮೆಯಿಂದ ಅವರಿಗೆ ತಕ್ಕ ಸಮಯದಲ್ಲಿ ಉನ್ನತಿಯನ್ನು ಪಡೆಯುವವರಾಗಿದ್ದರು. ಅವರ ವೈರಿಗಳು, ಹೊಟ್ಟೆಕಿಚ್ಚಿನಿಂದ ಬಹಳ ಅಡೆತಡೆಗಳನ್ನು ಹಾಕುತ್ತಿದ್ದರು. ಆದರೆ, ಅವರು ತಾಳ್ಮೆಯಿಂದ ಇದ್ದರೇ ಹೊರತು ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ತಮ್ಮ ವಿರುದ್ಧ ಮಾಡಿದ ಯಾವ ತಪ್ಪು ದೂಷಣೆಯನ್ನು ಪರಿಗಣಿಸಲಿಲ್ಲ. ಪ್ರತಿದಿನ, ಅವರು ತಮ್ಮ ಮನಭಾರವನ್ನು ದೇವರ ಬಳಿ ಇರಿಸಿ, ತಕ್ಕ ಕಾಲದಲ್ಲಿ ಅವರಿಗೆ ಪರಿಹಾರ ದೊರಕುವದೆಂದು ಅವರು ನಂಬಿದರು (ಮತ್ತಾ. 11:28). ಕೆಲವರು, ಆ ಬಡ್ತಿ ಹೊಂದುವವರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಲು ಸಹ ಪ್ರಯತ್ನಪಟ್ಟರು. ಆದರೆ, ದೇವರ ಕೃಪೆಯಿಂದ ಉನ್ನತ ಅಧಿಕಾರಿ ಆ ಸ್ಥಳಕ್ಕೆ ಬಂದಾಗ, ಆ ಬಡ್ತಿ ಪಟ್ಟಿಯನ್ನು ಗಮನಿಸಿದರು. ಈ ವ್ಯಕ್ತಿಯ ನಿಷ್ಠಾವಂತೆಯ, ಬಗ್ಗೆ ಹಾಗೂ ದೈವೀಕ ಭಯಭಕ್ತಿಯ ಬಗ್ಗೆ ಆ ಅಧಿಕಾರಿಗೆ ಮೊದಲೇ ತಿಳಿದಿತ್ತು. ಆದ್ದರಿಂದ, ಈ ವ್ಯಕ್ತಿಯ ವಿರುದ್ಧ ಇತರರು ಪಿತೂರಿ ನಡೆಸಿ, ಅವರ ಬಡ್ತಿಯನ್ನು ನಿಲ್ಲಿಸಲು ಪ್ರಯತ್ನಿಸಿರುವರೆಂದು ತಿಳಿದು ಅರಿವಾಯಿತು. ಈ ಬಡ್ತಿಯ ಪಟ್ಟಿಯನ್ನು ಬದಲಾಯಿಸಲು ಅವರಿಗೆ ಅಧಿಕಾರವಿದ್ದರಿಂದ ಅವರು ಆ ಇಡೀ ಪಟ್ಟಿಯನ್ನು ಬದಲಾಯಿಸಿ, ಈ ಅಧಿಕಾರಿಯ ಹೆಸರನ್ನು ಮುಂದಕ್ಕೆ ತಂದು ಈ ಪಟ್ಟಿಯು ತಕ್ಷಣವೇ ಜಾರಿಗೆ ತರಬೇಕೆಂದು ಆದೇಶ ನೀಡಿದರು. ಅವರ ವಿರುದ್ಧ ಪಿತೂರಿ ನಡೆಸಿದ ಎಲ್ಲರೂ ಈ ಅದ್ಭುತವನ್ನು ನೋಡಿ ಆಶ್ಚರ್ಯಗೊಂಡರು.

ಹೌದು! ಕರ್ತನು ಒಳ್ಳೆಯವನು ಮತ್ತು ತನ್ನನ್ನು ಕುರುಬನನ್ನಾಗಿ ಸ್ವೀಕರಿಸುವವರಿಗೆ ಒಳ್ಳೆಯದನ್ನು ಮಾಡುತ್ತಾನೆ (ಕೀರ್ತ. 119:68). ನಮ್ಮನ್ನು ಶುಭವೂ ಕೃಪೆಯೂ ಎಂದಿಗೂ ಹಿಂಬಾಲಿಸುವುದು ಎಂದೂ ಆತನು ಮಾಡುವನು. ನಿಮ್ಮ ಜೀವಿತದಲ್ಲೂ ಸಹ, ನಿಮ್ಮ ವಿರುದ್ಧ ಕೆಲಸ ಮಾಡಿ ಹೊಟ್ಟೆಕಿಚ್ಚುಪಟ್ಟವರ ಮುಂದೆ ಸಹ ಆತನು ಗೌರವಿಸುವನು, ಆದ್ದರಿಂದ, ನಿಮ್ಮ ಎಲ್ಲಾ ಅನಾವಶ್ಯಕವಾದ ಭಯ ಭೀತಿಯನ್ನು ಆತನ ಬಳಿ ಇರಿಸಿರಿ. ನಿಮ್ಮ ಪೂರ್ಣ ಹೃದಯದಿಂದಲೂ ಬಲದಿಂದಲೂ ಉಲ್ಲಾಸಿಸಿರಿ.

ಪ್ರಾರ್ಥನೆ : ಅಮೂಲ್ಯ ವಿಮೋಚಕನೇ! ದುಷ್ಟ ಜನರಿರುವ ಈ ಲೋಕದಲ್ಲಿ, ದಯವಿಟ್ಟು ನೀನು ನನ್ನ ಆಶ್ರಯವೂ ಕುರುಬನೂ ಆಗಿರು ತಂದೆಯೇ, ಇಂದಿನಿಂದ, ನನ್ನ ಕೈ ಹಿಡಿದು ಸರಿಯಾದ ಮಾರ್ಗದಲ್ಲಿ ನಡೆಸು. ನಿನ್ನ ಶುಭವೂ ಕೃಪೆಯೂ ನನ್ನ ಜೀವಮಾನವೆಲ್ಲಾ ಹಿಂಬಾಲಿಸಲಿ. ಹೀಗೆ, ನೀನು ಮಾಡುತ್ತಿರುವುದಕ್ಕೆ ನಿನಗೆ ಸ್ತೋತ್ರ. ಯೇಸುವಿನ ಅಮೂಲ್ಯವುಳ್ಳ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

 

4 comments

 1. Abhishek says:

  Amen

 2. Laxman hoaali says:

  Amen

 3. Pallavi says:

  Thank you Lord kartane nanu edhe hadiyalli edhene nanagu talmeyannu nidi
  A vektiya hage ashirvadhisi yesuvina namadalli amen.

 4. Vikas says:

  Yav ritiyallu aa manushyanu yettarake yettalpattono ade riti yali devaru nammanu kuda ashirvad madali. Amen.

Comments

Your email address will not be published. Required fields are marked *

WhatsApp us