ಆನಂದ್ ಪಿಳ್ಳೈ – ಫಾರ್ಚುನ್ 500 ಕಂಪನಿ, ಉನ್ನತ ಕಾರ್ಯ ನಿರ್ವಾಹಕ

  Posted on   by   10 comments

“ನಾನು ಜೀವನದ ಅಂತ್ಯಕ್ಕೆ ಬಹಳ ನಿಕಟವಾಗಿದ್ದೆ, ಪ್ರಾಣ ತೆಗೆದುಕೊಳ್ಳಲು ಸಿದ್ಧವಾಗಿ ನೇಣಿನ ಹಗ್ಗದ ಮುಂದೆ ನನ್ನ ಕೋಣೆಯಲ್ಲಿ ನಾನು ನಿಂತಿದ್ದೆ. ಆದರೆ ನನ್ನನ್ನು ಆಕರ್ಷಿಸಿ ಸೆಳೆದ ಪದಗಳು ನನ್ನ ಕಣ್ಣುಗಳ ಮುಂದೆ ನನ್ನನ್ನು ಹೋಗಲಾರದಂತೆ ತಡೆಯಿತು “

ನನಗೆ ಆನಂದ್ ಎಂದು ಹೆಸರಿಟ್ಟರು. ಆ ಹೆಸರಿನ ಅರ್ಥ ಅಂತಿಮ ಆಶೀರ್ವಾದ ಅಥವಾ ಶಾಶ್ವತ ಸಂತೋಷ. ಆದರೆ ನಾನು ಹುಟ್ಟಿದ ದಿನವೇ ನನ್ನ ತಂದೆಯ ವ್ಯಾಪಾರ ತೀವ್ರ ನಷ್ಟಕ್ಕೊಳಗಾಯಿತು. ನಿಶ್ಚಯವಾಗಿ ಆ ಶಾಶ್ವತವಾದ ಸಂತೋಷಕ್ಕೆ ಮೂಲವಾಗಿರಲಿಲ್ಲ. ನಾನೊಬ್ಬ ಕೆಟ್ಟ ಶಕುನನೆಂದು ಸಂಪೂರ್ಣ ಕುಟುಂಬವು ನನ್ನನ್ನು ಪರಿಗಣಿಸಿತು. ಎಂದಿಗೂ ನಾನು ದುರದೃಷ್ಟನೆಂದೇ ಪ್ರತಿಯೊಬ್ಬರು ನೆನೆಸಿದರು.

10 ವರ್ಷಗಳ ನಂತರ, ನನ್ನ ಪ್ರಪಂಚವೇ ಕುಸಿದು ಬೀಳಲಾರಂಭಿಸಿತು. ನನ್ನ ಕುಟುಂಬದಲ್ಲಿನ ಒಂದು ಸಣ್ಣ ಆಸ್ತಿಯ ವಿವಾದ ನನ್ನ ತಂದೆಯನ್ನು ತನ್ನ ಸಹೋದರರಿಂದ ದೂರಮಾಡಿತು. ಈ ಕೆಟ್ಟ ಘಟನೆ ನನ್ನ ತಂದೆಯನ್ನು ತೀವ್ರವಾಗಿ ನೋವುಂಟುಮಾಡಿ ವಿನಾಶಕ್ಕೀಡುಮಾಡಿತು. ಆ ಕುಗ್ಗುವಿಕೆ ಖಿನ್ನತೆಯಾಗಿ ,ನಂತರ ಪೀಡನೆಯಾಗಿ ಮಾರ್ಪಟ್ಟು ನನ್ನ ತಂದೆಯ ಆತ್ಮಹತ್ಯೆಗೆ ಶರಣಾದರು.

ನಾನು ಮರಣಕ್ಕೆ ಅಪರಿಚಿತನೇನಲ್ಲ, 6 ವರ್ಷಗಳ ನಡುವೆ ನನ್ನ ಅಕ್ಕ, ನನ್ನ ಚಿಕ್ಕಮ್ಮ ಮತ್ತು ನನ್ನ ತಂಗಿಯನ್ನು ಶವಸಂಸ್ಕಾರ ಮಾಡಬೇಕಾಯಿತು. ನಾನು ಹುಟ್ಟಿದ ದಿನದಿಂದ ದುರದೃಷ್ಟವೆನ್ನುವುದು ನನ್ನನ್ನು ಹಿಂಬಾಲಿಸಿ ಬರುವಂತೆ ಭಾಸವಾಯಿತು.

ಆದರೆ ಈ ಮರಣಗಳು ಅನೇಕ ಪ್ರಶ್ನೆಗಳಿಗೆ ನನ್ನ ಕಣ್ತೆರೆಯುವಂತೆ ಮಾಡಿತು. ಸಾವಿನ ನಂತರ ಜೀವನವಿದೆಯೇ ? ಈ ಜೀವನದಲ್ಲಿ ನೋವನ್ನು ಬಾಧೆಯನ್ನು ಹೊರತುಪಡಿಸಿ ಮತ್ತೇನಾದರೂ ಉಂಟೋ ? ನಾನು ನನ್ನ ಬುದ್ಧಿಶಕ್ತಿಯಿಂದಲೂ ಮನಸ್ಸಿನಿಂದಲೂ ಈ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಗೊಂದಲಗೊಂಡೆ. ಅದೇ ಸಮಯದಲ್ಲಿ, ನನ್ನ ನಿಯಂತ್ರಣಕ್ಕೆ ಮೀರಿದ ಒಂದು ಖಿನ್ನತೆ ನನ್ನ ಜೀವನವನ್ನು ಸಂಪೂರ್ಣವಾಗಿ ಸುತ್ತಿಹಾಕಲಾಯಿತು. ನನಗೆ ಆದರಣೆ ಮತ್ತು ಸಮಾಧಾನ ಎಲ್ಲಿಯೂ ದೊರಕಲಿಲ್ಲ.

ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಯ್ಕೆ ಉಳಿದಿತ್ತು. ಅದು – ಆತ್ಮಹತ್ಯೆ ನನ್ನ ಮೇಲ್ಭಾವಣೆಗೆ ಹಗ್ಗ ಬಿಗಿದು, ನಾನು ಅನುಭವಿಸಿದ ಎಲ್ಲಾ ವೇದನೆಗಳನ್ನು ನೆನೆಸಿದ, ನಾನು ಹಗ್ಗವನ್ನು ಬಿಗಿದ ಮೇಲೆ ತತ್ ಕ್ಷಣದಲ್ಲಿ ಕಪಾಟಿನ ಬಳಿ ಒಂದು ಸಣ್ಣ ಪುಸ್ತಕವನ್ನು ನೋಡಿದೆ. ಅದನ್ನು ನಾನು ಗುರುತಿಸಿದೆ. ಅದು ನನಗೆ ನನ್ನ ಸ್ನೇಹಿತನಿಂದ ಕೊಡಲ್ಪಟ್ಟ ಹೊಸ ಒಡಂಬಡಿಕೆಯಾಗಿತ್ತು.

ನಾನು ಜೀವನದ ಅಂತ್ಯಕ್ಕೆ ಬಹಳ ಹತ್ತಿರದಲ್ಲಿದ್ದೆ. ಆದರೆ ಆ ಪುಸ್ತಕವನ್ನು ತೆಗೆದುಕೊಳ್ಳುವಂತೆ ಬಹಳ ಒತ್ತಾಯಿಸಲ್ಪಟ್ಟೆ.

ನಾನು ಅದನ್ನು ತೆಗೆದು ಓದುವಾಗ. ” ನನ್ನ ಶಾಂತಿಯನ್ನು ಬಿಟ್ಟು ಹೋಗುತ್ತೇನೆ : ನನ್ನ ಶಾಂತಿಯನ್ನು ನಿಮಗೆ ಕೊಡುತ್ತೇನೆ ” ಎಂಬ ವಾಕ್ಯವು ದೊರಕಿತು. ಶಾಂತಿ – ಅಂತಿಮ ಆಶೀರ್ವಾದ ಅಥವಾ ಶಾಶ್ವತವಾದ ಸುಖ. ಪ್ರಾಣ ತೆಗೆದುಕೊಳ್ಳಲು ಸಿದ್ಧವಾಗಿ ನೇಣಿನ ಹಗ್ಗದೊಂದಿಗೆ ನನ್ನ ಕೋಣೆಯಲ್ಲಿ ಇನ್ನೂ ನಿಂತಿದ್ದೆ. ಆದರೆ ನಾನು ಮುಂದೆ ಹೋಗದಂತೆ ಈ ಆಕರ್ಷಣೆಯ ಪದಗಳು ನನ್ನನ್ನು ಸೆರೆಹಿಡಿಯಿತು. ನಾನು ಪುಟಗಳನ್ನು ತಿರುಗಿಸಿದಾಗ – ” ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಹೆದರಬೇಡಿರಿ. ” ಹೆದರಬೇಡಿರಿ ! ಹೆದರಬೇಡಿರಿ ! ಎಂಬ ವಾಕ್ಯವು ಬಹಳ ಆಳವಾಗಿ ನನ್ನನ್ನು ಪ್ರಭಾವಿಸಿತು. ನಾನು ಹುಡುಕುತ್ತಿದ್ದೆಲ್ಲವನ್ನು ಅಲ್ಲಿಯೇ ಕಾಣತೊಡಗಿದೆ. ಆತ್ಮಹತ್ಯೆಯ ಯೋಜನೆ ಮರೆತೆ ಉಳಿದ ಪುಟಗಳನ್ನು ತಿರುಗಿಸಿದೆ. ಆಗ ರೋಮಾ 5:8 ” ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನನಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ. ” ಎಂಬ ವಾಕ್ಯದ ಬಳಿ ಧಾವಿಸಿದೆ.

ನಾನು ಕೋಣೆಯಿಂದ ಹೊರ ಬರುವಾಗ ಗೊಂದಲದಿಂದಲೂ – ಉತ್ಸಾಹದಿಂದಲೂ ತುಂಬಿದವನಾಗಿ ಹೊರಬಂದೆ. ಈ ದೇವರು ನನ್ನ ಪ್ರಶ್ನೆಗಳಿಗೆ ಉತ್ತರವೇ ! ಎಂದು ನನಗೆ ತಿಳಿಯಬೇಕಿತ್ತು ? ನಂತರದ ವರ್ಷಗಳಲ್ಲಿ ನಾನು ಈ ಪ್ರಶ್ನೆಯನ್ನು ಕಾಡತೊಡಗಿದೆ. ಅದಕ್ಕೆ ಉತ್ತರವು ದೊರಕಿತು ; ಹೌದು, ಆತನೇ ಉತ್ತರವು. ಆತನು ಇಂದಿಗೂ ಜೀವಿಸುತ್ತಿದ್ದಾನೆ. ಆತನು ಕಳೆದು ಹೋದ ಕುರಿಯನ್ನು ಹುಡುಕುವ ಕುರುಬವಂತೆ ನನ್ನನ್ನು ಹುಡುಕುತ್ತಿದ್ದಾನೆಂಬುದನ್ನು ಕಲಿತೆ. ಆತನು ನನಗಾಗಿ ಬಹಳ ಕಾತರದಿಂದ ಚಿಂತಿಸುತ್ತಾನೆಂಬುದನ್ನು ಅರಿತೆ. ಆತನು ನನ್ನ ಖಿನ್ನತೆಯನ್ನು ನೀಗಿಸಿ ಸಂತೋಷವನ್ನು ನೀಡಲು ಬಯಸಿದನು. ನಾನು ಯೇಸುವನ್ನು ಜೀವಿತದ ಕರ್ತನಾಗಿ ಸ್ವೀಕರಿಸಿದೆನು ಮತ್ತು ಆತನ ಪ್ರೀತಿಯನ್ನು ಅಪ್ಪಿಕೊಂಡೆನು.

ನಾನು ಆತನನ್ನು ಸ್ನೇಹಿತನಾಗಿ ತಿಳಿಯುತ್ತಿದ್ದಂತೆಯೇ. ನನ್ನ ಜೀವನವು ಸಂಪೂರ್ಣವಾಗಿ ಬದಲಾಗತೊಡಗಿತು. ನಂತರ ನಾನು ದೆಹಲಿಯ ಒಂದು ಪ್ರಸಿದ್ಧ ಕಂಪನಿಯಲ್ಲಿ ನಿರ್ವಹಣಾ ತರಬೇತಿಯನ್ನು ಆರಂಭಿಸಿದೆ. ಪ್ರಪಂಚದ ಹಲವು ಕಡೆಗಳಲ್ಲಿ ನಾನು ಒಬ್ಬ ನಾಯಕನಾಗಿ ಗುರುತಿಸಲ್ಪಟ್ಟೆ. ಈಗ ನಾನು ಒಂದು ಪ್ರಭಾವಿತ ಕಂಪೆನಿಯಲ್ಲಿ ನಾಯಕನಾಗಿದ್ದೇನೆ.

ಈಗ, ದುರದೃಷ್ಟ ನನ್ನನ್ನು ಹಿಂಬಾಲಿಸುತ್ತಿಲ್ಲ. ಶುಭವೂ ಕೃಪೆಯೂ ನನ್ನನ್ನು ಹಿಂಬಾಲಿಸುತ್ತಿದೆ. ಎಂದು ದಾವೀದ ರಾಜನು 23 ನೇ ಕೀರ್ತನೆಯಲ್ಲಿ ಹೇಳುವಂತೆ ಹಿಂಬಾಲಿಸುತ್ತಿದೆ. ಅಂತಿಮ ಆಶೀರ್ವಾದ ಅಥವಾ ಸಂತೋಷದ ನಿಜ ಮೂಲ ಯೇಸುವೇ ಎಂಬುದನ್ನು ನಾನು ಗುರುತಿಸಿದೆ. ಆತನು ನನ್ನ ಜೀವನದ ಎಲ್ಲಾ ಸವಾಲುಗಳಲ್ಲಿ ಸಹಾಯ ಮಾಡುತ್ತಿದ್ದಾನೆ. ನನಗೆ ಅಗತ್ಯವಿರುವ ಸಮಯಗಳಲ್ಲಿ ಬೇಕಾದ ಬಲವನ್ನು ಮಾರ್ಗದರ್ಶನವನ್ನು ನೀಡುತ್ತಿದ್ದಾನೆ. ನನ್ನ ಜೀವಿತದ ಶ್ರೇಷ್ಠತೆ ಆತನೇ ಆಗಿದ್ದಾನೆ.

10 comments

 1. Santhosh says:

  “Dhevarendha ashadhyahu ondhu Ella” amen . god is good all the time

 2. Rakesh gn says:

  ತುಂಬಾ ಅದ್ಭುತವಾಗಿದೆ sir ನಿಮ್ಮ ಜೀವನದ ಕಥೆ,
  ದೇವರು ನಿಮ್ಮಗೆ ಇನ್ನು ಹೆಚ್ಚಾಗಿ ಆಶಿರ್ವಾದ ಮಾಡಲಿ God bless you

 3. Anitha says:

  It’s heart touching testimony brother god reachly bless u and Ur family

 4. Pastor R V Matthew says:

  It’s a very nice testimony my God bless you

 5. Nireekshana theresa says:

  GOD IS GOOD ALL THE TIME
  MY LORD LIVING

 6. Praveen D souza mysore says:

  Nija devaru doddavanu
  Please pray 4me

 7. Jayashree kalgudi says:

  Nija devarudoddavaru devaru nimman hehcagi aashivaada madali amen

 8. JOHN says:

  ತುಂಬಾ ಅದ್ಬುತವಾದ ಸಾಕ್ಷಿ…. ಇನ್ನೂ ಅನೇಕ ಮಾದ್ಯಮ ಗಳ ಮೂಲಕ ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿ. ದೇವರು ನಿಮ್ಮನ್ನು ಆಶೀರ್ವದಿಸಲಿ

 9. BASAVARAJ LAMANI says:

  Praise the lord Jesus Amen
  Nimm hrudayad akankshegalannu truptee padisid devarige stotravagali. Ennu hechagi upayogisali & aashirvadisali yavagalu nimmannu.amen

Comments

Your email address will not be published. Required fields are marked *

× WhatsApp us