ಆರಾಧಿಸುವ ಕಾಲ – ಆತ್ಮೀಕ ಕಥೆ 32

  Posted on   by   No comments

national-day-of-prayer-500x325

“ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ” (ಯೋಹಾ. 4:23).

ಚೀನಾ ದೇಶದ ಯೌವನಸ್ಥನು ತನ್ನ ರಜಾದಿನಗಳನ್ನು ಕಳೆಯಲು ತನ್ನ ಸ್ವಂತ ಊರಿಗೆ ಬಂದನು; ಅವನ ಮನಸ್ಸು ಕರ್ತನ ಆಲಯವನ್ನು ಅಪೇಕ್ಷಿಸಿತು. ಅಲ್ಲಿ ಸತ್ಯವೇದವಿರುತ್ತದೆ; ತೃಪ್ತಿಯಾಗಿ ಓದಬಹುದು; ಅಲ್ಲಿ ಬೋಧಕರಿರುತ್ತಾರೆ; ಅವರೊಂದಿಗೆ ಸಂಭಾಷಿಸಿ ಸಂತೋಷಪಡಬಹುದು, ಅಲ್ಲಿ ಹೆಚ್ಚು ಸಮಯ ಪ್ರಾರ್ಥನೆ ಮಾಡಬಹುದು” ಎಂದು ಹೊರಟನು.
ದೇವಾಲಯದ ಬಳಿ ಬಂದಾಗ ಅದು ಮುಚ್ಚಲ್ಪಟ್ಟು, ಸೈನಿಕರು ಕಾವಲು ಕಾಯುತ್ತಿದ್ದರು. ಯಾಕೆ? ಬೋಧಕರೆಲ್ಲಿ? ಎಂದು ಕೇಳಿದನು. ಆತನು ಖೈದು ಮಾಡಲ್ಪಟ್ಟು ಸೆರೆಮನೆಯಲ್ಲಿ ಹಾಕಲ್ಪಟ್ಟಿದ್ದಾರೆಂದು ಉತ್ತರ ಬಂದಿತು. ನನ್ನ ಪ್ರಿಯವಾದ ಸತ್ಯವೇದವೆಲ್ಲಿ? ಎಂದು ಕೇಳಲು ಅದನ್ನು ಹರಿದು ಬೆಂಕಿಗೆ ಹಾಕಿ ಸುಟ್ಟು ಬಿಟ್ಟರೆಂದು ತಿಳಿಯಿತು.

ಆ ಯುವಕನು ಒಂದು ನಿರ್ಧಾರದೊಂದಿಗೆ ಹೇಳಿದನು, ಇನ್ನು ಮೇಲೆ ತಾನೇ ನಡೆದಾಡುವ ಸತ್ಯವೇದವಾಗಿಯೂ, ಕುರಬನಿಲ್ಲದ ಕುರಿಗಳಿಗೆ ಬೋಧಕನಾಗಿಯೂ, ಕರ್ತನಿಗೆ ಆಲಯವಾಗಿಯೂ ಇರುತ್ತೇನೆಂದು ಹೇಳಿದನು! ಒಂದು ಅಂತರಂಗ ಸಭೆಯನ್ನು ನಡೆಸುವ ಪೂರ್ಣ ಜವಾಬ್ದಾರಿಯನ್ನು ತಾನು ಹೊತ್ತುಕೊಂಡನು!

“ದೇವರಿಂದ ದೊರಕಿರುವ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆ ಎಂಬುದು ತಮಗೆ ತಿಳಿಯದೋ (1 ಕೊರಿ. 6:19). ಸತ್ಯಭಾವದಿಂದ ದೇವರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ” (ಯೋಹಾ. 4:23).

“ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದುದರಿಂದ ಸ್ವರ್ಗ, ಮತ್ರ್ಯ ಪಾತಾಳದಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆ ಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು” (ಫಿಲಿ. 2:10-11).

Categories: Spiritual Stories

Comments

Your email address will not be published. Required fields are marked *

WhatsApp us