ಎಲ್ಲಿ ಇಟ್ಟಾಗ್ಯೂ! – ಆತ್ಮೀಕ ಕಥೆ 45

  Posted on   by   2 comments

ನಾಸ್ತಿಕರ ಅಧಿವೇಶನ ನಡೆಯುತ್ತಿತ್ತು. ತಾವು ಬರೆದ ಅನೇಕ ಪುಸ್ತಕಗಳನ್ನು ಅನ್ವೇಷಣೆ ಗ್ರಂಥಗಳನ್ನೂ, ದೇವರೇ ಇಲ್ಲ ಎಂದು ಮೂದಲಿಸುವ ತತ್ವಗ್ರಂಥಗಳನ್ನು ತೆಗೆದುಕೊಂಡು ಹೋಗಿ ವೇದಿಕೆಯ ಮೇಲಿನ ಮೇಜೆಯಲ್ಲಿ ಸಮರ್ಪಿಸಿದರು. ಎಲ್ಲರೂ ಇಟ್ಟುಮುಗಿಸಿದ ನಂತರ, ಒಬ್ಬ ಭಕ್ತನು ಸತ್ಯವೇದಪುಸ್ತಕವೇ ಉತ್ತಮವಾದ ಉನ್ನತವಾದ ಗ್ರಂಥ, ಎಲ್ಲಕ್ಕಿಂತಲೂ ಮಿಗಿಲಾದದು ಎಂದು ಹೇಳಿದನು.
ನಾಸ್ತಿಕನೊಬ್ಬನಿಗೆ ಇದನ್ನು ಸಹಿಸಲಾಗಲಿಲ್ಲ. ಸತ್ಯವೇದವನ್ನು ತೆಗೆದು ಬೇರೆಲ್ಲಾ ಪುಸ್ತಕದ ತಳಭಾಗದಲ್ಲಿಟ್ಟು ಬಂದನು. ಭಕ್ತನು ಕೋಪಿಸಿಕೊಳ್ಳದೆ, “ನಾನು ಸತ್ಯವೇದವೇ ಆದ್ಯಗ್ರಂಥ ಎಂದು ಹೇಳಿದೆ, ಆದರೆ ಈ ಸಹೋದರನು ಸತ್ಯವೇದವು ಬೇರೆಲ್ಲಾ ಗ್ರಂಥಗಳಿಗೂ ಅಸ್ತಿಭಾರವಾದ ಗ್ರಂಥ ಎಂದು ತಿಳಿಸುವುದಕೋಸ್ಕರ ಎಲ್ಲಕ್ಕೂ ಆಧಾರವಾಗಿ ಕೆಳಗಡೆ ಇಟ್ಟಿದ್ದಾರೆ” ಎಂದರು.
ನಾಚಿಕೆಯಿಂದ ತಲೆತಗ್ಗಿಸಿಕೊಂಡ ಆ ನಾಸ್ತಿಕನು ಸತ್ಯವೇದವನ್ನು ತೆಗೆದು ಎಲ್ಲಾ ಪುಸ್ತಕಗಳ ಮಧ್ಯದಲ್ಲಿಟ್ಟು ಬಂದನು. ಭಕ್ತನು ನಗುತ್ತಾ “ಸತ್ಯವೇದವು ಪ್ರಧಾನ ಮುದ್ರಣಾಲಯದೋಪಾದಿಯಲ್ಲಿದೆ. ಸತ್ಯವೇದವು ಪ್ರಪಂಚವನ್ನೇ ನಿಯಂತ್ರಿಸುವಂತದ್ದಾಗಿದೆ. ಎಲ್ಲಾ ಜ್ಞಾನಕ್ಕೂ ಮೂಲಾಧಾರ ಸತ್ಯವೇದವೇ” ಎಂದರು.
ದೇವರ ಮಗುವೇ, ಸತ್ಯವೇದವು ಆದ್ಯ ಪುಸ್ತಕವಾಗಿಯೂ, ಮೂಲೋದ್ದೇಶವುಳ್ಳದ್ದಾಗಿಯೂ, ಅಸ್ತಿಭಾರವಾಗಿಯೂ ನಿನ್ನ ಜೀವಿತದಲ್ಲಿ ಪಾತ್ರವಹಿಸಿದೆಯಾ? “ಕರ್ತನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸುವಂಥದ್ದು” (ಕೀರ್ತ. 19:7).
“ನೀನು ಉಸುರಿದ ಧರ್ಮಶಾಸ್ತ್ರವು ಸಾವಿರಾರು ಚಿನ್ನ ಬೆಳ್ಳಿಯ ನಾಣ್ಯಗಳಿಗಿಂತಲೂ ನನಗೆ ಅತಿ ಪ್ರಿಯವಾಗಿದೆ” (ಕೀರ್ತ. 119:72).
ನನ್ನ ಕಣ್ಣು ತೆರೆ ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು (ಕೀರ್ತ. 119:18).

Categories: Spiritual Stories

2 comments

  1. clotty Olivera says:

    Beautiful Message for life

  2. Rita sequeira says:

    Very good meaning of bible

Comments

Your email address will not be published. Required fields are marked *

× WhatsApp us