ಒಬ್ಬರಿಗೊಬ್ಬರು ಸಹಾಯ ಮಾಡಿ ಆತನ ಬಲವನ್ನು ಪಡೆದರು!

  Posted on   by   No comments

online_bible_social_share

“ಒಬ್ಬರಿಗೊಬ್ಬರು ಸಹಾಯ ಮಾಡಿದರು, ಒಬ್ಬರಿಗೊಬ್ಬರು ಧೈರ್ಯವಾಗಿರು ಎಂದು ಹೇಳಿದರು” (ಯೆಶಾ. 41:6).

ಮೇಲಿನ ವಚನದ ಆಧಾರದ ಮೇಲೆ ನಾವು ಒಬ್ಬರನ್ನೊಬ್ಬರ ಭಾರವನ್ನು ಹಂಚಿಕೊಳ್ಳಬೇಕೆಂಬುದು ಮತ್ತು ಒಬ್ಬರಿಗೊಬ್ಬರು ಬಲದ ಮೂಲವಾಗಿರಿ ಎಂದು ದೇವರು ಇಷ್ಟಪಡುತ್ತಾನೆ. ನಮ್ಮ ಕರ್ತನಾದ ಯೇಸು ಈ ಭೂಮಿಯ ಮೇಲೆ ಇದ್ದಾಗ, ಇದೇ ತರಹದ ಜೀವನವನ್ನು ಜೀವಿಸಿದ್ದನು. ಆತನ ಶಿಷ್ಯರೂ ಪವಿತ್ರಾತ್ಮನಿಂದ ತುಂಬಿದವರಾದಾಗ ಅದೇ ತರಹದ ಜೀವನ ಜೀವಿಸಿದ್ದರು. ದುರದೃಷ್ಟವಶಾತ್ ಈ ಲೋಕದ ಜನರು, ಕಣ್ಣೀರಿನಲ್ಲಿ ಜೀವಿಸುತ್ತಾರೆ. ತಮ್ಮ ಕಣ್ಣೀರನ್ನು ಯಾರು ಒರೆಸುತ್ತಾರೆ ಎಂದು ಆಶ್ಚರ್ಯಪಡುತ್ತಾರೆ. ಅವರು ತಮ್ಮ ಹೃದಯವನ್ನು ಬಿಚ್ಚಿ ತಮ್ಮ ಭಾರಗಳನ್ನು ಹೊಯ್ದುಕೊಳ್ಳಲು ಯಾರಾದರೂ ತಮಗಾಗಿ ಇದ್ದಾರೋ ಎಂದು ಕಾತುರದಿಂದ ಕಾಯುತ್ತಾರೆ. ಅಯ್ಯೋ! ನೋವು ಮತ್ತು ಯಾತನೆಯಲ್ಲಿರುವ ಇಂಥಹ ಜನರಿಗಾಗಿ ನಾವು ಏನನ್ನು ಮಾಡುತ್ತಿದ್ದೇವೆ? ನೀವು ನಿಮ್ಮ ಜೀವನವನ್ನು ದೇವರಿಗೆ ಸಮರ್ಪಸಿ ನಿಮ್ಮ ಜೀವನದಲ್ಲಿ ಬೇರೆಯವರಿಗೆ ಸಹಾಯ ಮಾಡುವುದರ ಮೂಲಕ ದೇವರ ಚಿತ್ತವನ್ನು ನೆರವೇರಿಸುವಿರಾ? ಹೌದು! ಯೋಬನು ತನ್ನ ಸ್ನೇಹಿತರಿಗಾಗಿ ಪ್ರಾರ್ಥಿಸಿದಾಗ ದೇವರು ಅವನ ನಷ್ಟಗಳನ್ನು ಹಿಂತಿರುಗಿಸಿಕೊಟ್ಟನು (ಯೋಬ. 42:10). ಅದೇ ರೀತಿ ನೀವೂ ಸಹ ದೇವರಿಗೆ ಶ್ರದ್ಧೆಯಿಂದಲೂ, ಪರಿಣಾಮಕಾರಿಯಾದ ಪ್ರಾರ್ಥನೆ ಮಾಡಿರಿ. ಈ ಪ್ರಪಂಚದಲ್ಲಿ ಬಾಧೆಯಿಂದ ಕಣ್ಣೀರು ಸುರಿಸುತ್ತಿರುವವರಿಗಾಗಿ ಬೇಡಿರಿ (ಯಾಕೋ. 5:16).
ಒಂದು ಸಲ ಒಂದು ಹಳ್ಳಿಯಲ್ಲಿನ ದಂಪತಿಗಳು, ಬೇರೆಯವರ ಜೀವನದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಂತೋಷವಾಗಿ ಮುಂದೆ ಬರುತ್ತಿದ್ದರು. ಜೊತೆಗೆ ಬೇರೆಯವರ ಜೀವನದಲ್ಲಿ ಏನಾದರೂ ಒಳ್ಳೆಯದಾಗಲೀ ಸಂತೋಷದ ಸಂಗತಿ ನಡೆದರೂ ಅವರು ಮೊದಲಿಗರಾಗಿ ಅವರ ಸಹಾಯಕ್ಕೆ ಬರುತ್ತಿದ್ದರು. ಅವರು ಅಳುವವರೊಡನೆ ಅಳುತ್ತಲೂ ಸಂತೋಷಪಡುವವರೊಡನೆ ಸಂತೋಷಪಡುತ್ತಿದ್ದರು. ಅವರು ತಮ್ಮ ಜನಾಂಗದವರ ಅಥವಾ ಕುಟುಂಬದವರ ಅಥವಾ ಗುಂಪಿನವರ ಎಂದು ಕಾದು ನೋಡುತ್ತಿರಲಿಲ್ಲ. ಯಾಕಂದರೆ, ಅವರು ಹೇಗಾದರೂ ಸರಿ ಕರ್ತನ ದಾರಿಯಲ್ಲಿ ನಡೆಯಬೇಕು ಎಂದು ಅನಿಸಿ ತಮಗೆ ಸಾಧ್ಯವಾದಷ್ಟು ಮಟ್ಟಿಗೆ ಇತರರಿಗೆ ಸಹಾಯ ಮಾಡುತ್ತಿದ್ದರು. ಗಂಡ ಹೆಂಡತಿಯರ ಈ ವರ್ತನೆಯಿಂದಾಗಿ ಹಳ್ಳಿಯ ಎಲ್ಲಾ ಜನರು ಇವರನ್ನು ಪ್ರೀತಿಸಿ ಹೆಚ್ಚಾಗಿ ಗೌರವಿಸುವಂತೆ ಮಾಡಿತು. ಒಂದು ದಿನ ಗಂಡನು ಬಹಳವಾಗಿ ಕಾಯಿಲೆಯಾದನು ಮತ್ತು ದಿಢೀರನೆ ಸತ್ತು ಹೋದನು. ಅವನ ಹೆಂಡತಿ ಮುಂದೆ ತನಗೆ ಯಾರು ಸಹಾಯ ಮಾಡುತ್ತಾರೆ ಎಂದು ಚಿಂತಿಸಲಿಲ್ಲ. ಅವಳು ಬೇರೆಯವರ ಕಣ್ಣೀರನ್ನು ಒರೆಸಲು ಮೊದಲು ಸಹಾಯ ಮಾಡಿದಂತೆ ಅವಳು ಸಹಾಯ ಮಾಡುವುದನ್ನು ಮುಂದುವರಿಸಿದಳು. ತನ್ನ ಜೀವನದ ಕೊನೆಯವರೆವಿಗೂ ತನ್ನ ಹಳ್ಳಿಯ ಜನರಿಗೆ ಅವಳು ಆಶೀರ್ವಾದದಾಯಕಳಾಗಿದ್ದಳು. ಅವರ ಸಹಾಯದ ಗುಣ ಮತ್ತು ಪ್ರೀತಿಯ ಜೀವಿತಕ್ಕಾಗಿ ದೇವರು ಆಕೆಯಲ್ಲಿ ನೆಲೆಸಿ ಹಳ್ಳಿಯವರು ಅವಳಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು ಮತ್ತು ತನ್ನ ಒಚಿಟಿ ಜೀವಿತದ ಏಕಾಂಗಿತನವನ್ನು ಅರಿವಾಗದಂತೆ ಮಾಡಿದರು.

ಪ್ರಿಯರೇ! ಈ ದಿನದಲ್ಲಿ ನಿಮ್ಮ ಜೀವಿತದಲ್ಲಿ ಇಂಥಹ ಸಂತೋಷವಿದೆಯಾ? ನಿಮಗೆ ಬೇರೊಬ್ಬರ ಭಾರವನ್ನು ಹೊತ್ತು ನಮ್ಮ ಕರ್ತನು ಆಶೆಪಡುವಂತೆ ಕಣ್ಣೀರು ಒರೆಸಲು ನಿಮಗೆ ಮನಸ್ಸಿದೆಯಾ? ನೀವು ಹೀಗೆ ಮಾಡಿದರೆ ನಿನ್ನ ಕರುಣೆಯ ಧಾರಳವಾದ ಜೀವನ ಬಗ್ಗೆ ಕರ್ತನು ಆನಂದಿಸುತ್ತಾನೆ. ಕರ್ತನಿಗೆ ನಿಮ್ಮ ನ್ಯೂನ್ಯತೆ ಮತ್ತು ಪಾಪಗಳ ಬಗ್ಗೆ ಅರಿಕೆ ಮಾಡಿರಿ ಮತ್ತು ಇತರರ ಕಣ್ಣೀರನ್ನು ಒರೆಸುವುದರ ಮೂಲಕ ದೇವರ ಚಿತ್ತವನ್ನು ನಿಮ್ಮ ಜೀವನದಲ್ಲಿ ನೆರವೇರಿಸಿರಿ (ಗಲಾ. 6:2).

ಪ್ರಾರ್ಥನೆ :- ಪ್ರಿಯ ಕರ್ತನೇ! ಬೇರೆಯವರ ಭಾರವನ್ನು ಹಂಚಿಕೊಳ್ಳುವಂತೆ ನನಗೆ ದೈವೀಕ ಆಶೆಯನ್ನು ಕೊಡು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತೆಯೂ, ನಿನ್ನ ಶಕ್ತಿಯಿಂದ ಬಲಪಡಿಸಿ ನಿನ್ನ ಕೃಪೆಯನ್ನು ಕೊಡು. ಇಂದಿನಿಂದ, ನನ್ನ ಕೈ ಹಿಡಿದು ನಾನು ನಡೆಯಬೇಕಾಗಿರುವ ದಾರಿಯಲ್ಲಿ ನಡೆಸು. ನನ್ನನ್ನು ಹೇರಳವಾಗಿ ಆಶೀರ್ವದಿಸು. ಕರ್ತನಾದ ಯೇಸುವಿನ ಬಲಪಡಿಸುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)
For Daily Devotion Contact: +91 9964247889

Comments

Your email address will not be published. Required fields are marked *

WhatsApp us