ಒಳ್ಳೆಯದನ್ನು ಅನುಸರಿಸಿರಿ ಆಗ ನೀವು ಬಾಳುವಿರಿ!

  Posted on   by   No comments

“ಕೆಟ್ಟದ್ದನ್ನಲ್ಲ, ಒಳ್ಳೆಯದನ್ನು ಅನುಸರಿಸಿರಿ, ಬಾಳುವಿರಿ, ನೀವು ಅಂದುಕೊಂಡಂತೆ ಸೇನಾಧೀಶ್ವರನಾದ ಯೆಹೋವನು ನಿಮ್ಮ ಸಂಗಡ ಇರುವನು” (ಆಮೋ. 5:14).

ನಾವು ದೇವಾದಿ ದೇವರನ್ನು ನಮ್ಮ ಕುರುಬನೂ ಜೀವನದ ಮಾರ್ಗದರ್ಶಿಯೂ ಎಂದು ಸ್ವೀಕರಿಸಿಕೊಳ್ಳುವಾಗ, ಶುಭವೂ ಕೃಪೆಯೂ ನಿಶ್ಚಯವಾಗಿ ನಮ್ಮನ್ನು ಹಿಂಬಾಲಿಸುವದು (ಕೀರ್ತ. 23:1-6). ನಮ್ಮ ಜೀವನದ ಅಂತ್ಯದವರೆವಿಗೂ ಆತನು ನಮ್ಮನ್ನು ತನ್ನ ಶುಭದಿಂದ ತುಂಬಿಸಿ ತೃಪ್ತಿಪಡಿಸುವನು. ನಾವು ದೇವರಿಗೆ ಭಯಭಕ್ತಿಯಿಂದ ನಡೆದುಕೊಳ್ಳಲು ಎಚ್ಚರವಹಿಸಿ, ಆತನ ದಾರಿಯಲ್ಲಿ ನಡೆಯುವದಾದರೆ, ಆ ಮೇಲಿನ ವಾಗ್ದಾನ ಖಂಡಿತವಾಗಿಯೂ ನಮ್ಮ ಜೀವಿತದಲ್ಲಿ ಪೂರೈಸಲ್ಪಡುವದು (ಯೆಶಾ. 49:2, 51:16).

ನಾವು ಈ ಲೋಕದಲ್ಲಿ ಅನೇಕ ದುಷ್ಟ ಸಂಗತಿಗಳನ್ನು ನೋಡುತ್ತೇವೆ. ಆದರೆ, ನಾವು ಈ ಎಲ್ಲಾ ದುಷ್ಟ ಸಂಗತಿಗಳನ್ನು ನಮ್ಮ ಜೀವನದಿಂದ ತೆಗೆದುಹಾಕಬೇಕು. ವೇದ ವಾಕ್ಯಗಳ ಬೋಧನೆಗೆ ಸಮ್ಮತವಾದ ಸಂಗತಿಗಳಲ್ಲೇ ನಾವು ಆಸಕ್ತಿ ತೋರಿಸಬೇಕು. ಅದಲ್ಲದೆ, ನಾವು ಪ್ರತಿದಿನ ಪ್ರಾರ್ಥನೆಗಳ ಮೂಲಕ ದೇವರೊಟ್ಟಿಗೆ ಮಾತನಾಡುವಾಗ ನಾವು ಆಶೀರ್ವದಿಸಲ್ಪಟ್ಟ ಜೀವಿತ ಜೀವಿಸಬಹುದು. ಹೀಗೆಯೇ, ಯೋಸೇಫನು, ದಾನಿಯೇಲ ಮತ್ತು ಇನ್ನಿತರ ತಮ್ಮ ಯೌವನ ಕಾಲದಲ್ಲಿ ದೇವರ ಆಶೀರ್ವಾದವನ್ನು ಹೊಂದಿಕೊಂಡರೆಂದು ಸತ್ಯವೇದ ತಿಳಿಸುತ್ತದೆ (ಪ್ರಸ. 12:1).

ಒಂದು ಕುಟುಂಬದಲ್ಲಿ, ಇಬ್ಬರು ಸಹೋದರರಿದ್ದರು. ಅದರಲ್ಲಿ, ಒಬ್ಬನು ನೋಡಲು ಸುಂದರನಾಗಿದ್ದು, ಬುದ್ಧಿವಂತನೂ ಜ್ಞಾನವುಳ್ಳವನೂ ಆಗಿದ್ದನು. ಅವನು ವಿದ್ಯಾಭ್ಯಾಸದಲ್ಲಿ ಉತ್ಕøಷ್ಟವಾಗಿ ಮಾಡಿದಲ್ಲದೆ, ಎಲ್ಲಾದರಲ್ಲಿಯೂ ಉತ್ತಮವಾಗಿ ಹೆಸರುಗಳಿಸುತ್ತಿದ್ದನು. ಆದರೆ, ಆ ಇನ್ನೊಬ್ಬ ಸಹೋದರನು ಇದಕ್ಕೆ ತದ್ವಿರುದ್ಧವಾಗಿದ್ದನು. ಬುದ್ಧಿವಂತನಾದ ಸಹೋದರನು, ದೇವರನ್ನು ಸನ್ಮಾನಿಸದೆ ಕೇವಲ ತನ್ನ ಬಲ ಮತ್ತು ಜ್ಞಾನದ ಮೇಲೆ ಆತುಕೊಂಡಿದ್ದನು, ಆದರೆ ಮತ್ತೊಬ್ಬನು, ಕರ್ತನಾದ ಯೇಸುವನ್ನು ಪ್ರತಿದಿನ ತನ್ನ ಕುರುಬನೂ, ಮಾರ್ಗದರ್ಶಕನೂ ಸ್ನೇಹಿತನೂ ಎಂದು ನಂಬಿಕೊಂಡು ನಡೆಯುತ್ತಿದ್ದನು. ವರ್ಷಗಳು ಸಾಗಿದವು, ದೇವರನ್ನು ಅಲಕ್ಷ್ಯಮಾಡಿದ ಸಹೋದರನು ತನ್ನ ಜೀವಿತದಲ್ಲಿ ಎಲ್ಲವನ್ನು ಕಳೆದುಕೊಂಡು ಕಷ್ಟದಲ್ಲಿದ್ದನು. ಆದರೆ, ದೇವರಲ್ಲಿ ಭರವಸೆಯಿಟ್ಟ ಆತನ ಮಾರ್ಗದಲ್ಲಿ ನಡೆದವನು, ಜೀವನದಲ್ಲಿ ಆಶೀರ್ವದಿತನಾಗಿ ಅಭಿವೃದ್ಧಿ ಹೊಂದಿದನು. ಈಗ ಮಾತ್ರವೇ, ಆ ಇನ್ನೊಬ್ಬ, ಸಹೋದರನು ದೇವರ ಮಹತ್ವವನ್ನೂ ಶುಭವನ್ನೂ ಅರಿತುಕೊಂಡನು. ತನ್ನ ಸಹೋದರ ಸಹಾಯದಿಂದ ಅವನು ಸಹ ದೇವರನ್ನು ತನ್ನ ಜೀವಿತದಲ್ಲಿ ಸ್ವೀಕರಿಸಿಕೊಂಡನು. ಮತ್ತು ಆತನ ಅತ್ಯಧಿಕವಾದ ಆಶೀರ್ವಾದವನ್ನು ಹೊಂದಿಕೊಂಡನು.

ಹೌದು! ನನ್ನ ಪ್ರಿಯರೇ, ನೀವು ನಿಮ್ಮ ಜೀವಿತವನ್ನು ಸ್ವಲ್ಪ ಪರೀಕ್ಷಿಸಿಕೊಳ್ಳಿರಿ. ಆತನ ಅತ್ಯಧಿಕವಾದ ಆಶೀರ್ವಾದಗಳನ್ನು ಹೊಂದಿಕೊಳ್ಳಲು, ಆತನನ್ನು ನಿಮ್ಮ ಪೂರ್ಣ ಹೃದಯದಿಂದ ನಂಬಿರಿ. ಆಗ, ನೀವು ನಿಮ್ಮ ಜೀವಿತದಲ್ಲಿ ಅಭಿವೃದ್ಧಿ ಹೊಂದುವಿರಿ (ಜ್ಞಾನೋ. 3:5-6).

ಪ್ರಾರ್ಥನೆ : ಪ್ರಿಯ ಕರ್ತನೇ, ಇಂದಿನಿಂದ, ನಾನು ನನ್ನ ಪೂರ್ಣ ಭರವಸೆಯನ್ನು ನಿನ್ನಲ್ಲಿಡುವೆ ಯಾಕಂದರೆ, ನೀನೇ ನನ್ನ ಸರ್ವಶಕ್ತನಾದ ದೇವರು. ನೀನು ಮಹತ್ವವುಳ್ಳವನೆಂದು ಬಲ್ಲೆನು ಮತ್ತು ನೀನು ಖಂಡಿತವಾಗಿಯೂ ನನ್ನ ಎಲ್ಲಾ ನ್ಯೂನ್ಯತೆಗಳನ್ನು ತೆಗೆದುಬಿಡುವೆ. ನನ್ನ ಪ್ರಾರ್ಥನೆಯನ್ನು ಲಾಲಿಸಿ ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಸ್ತೋತ್ರ. ನಮ್ಮ ಕರ್ತನಾದ ಯೇಸುವಿನ ಬಲವುಳ್ಳ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.mannaministry.app

MANNA MINISTRIES
Mannaministries.in@gmail.com
For Daily Devotion Contact: +91 9964247889

Comments

Your email address will not be published. Required fields are marked *

× WhatsApp us