ಒಳ್ಳೆಯ ಜನರಿಗೆ ದೇವರು ಜ್ಞಾನವನ್ನು ತಿಳುವಳಿಕೆಯನ್ನು ಕೊಡುತ್ತಾನೆ!

  Posted on   by   5 comments

b476a8beedf0edcb207766d6de88138e

“ದೇವರು ತಾನು ಮೆಚ್ಚಿದವನಿಗೆ ಜ್ಞಾನವನ್ನು ತಿಳುವಳಿಕೆಯನ್ನು ಸಂತೋಷವನ್ನು ದಯಪಾಲಿಸುತ್ತಾನೆ” (ಪ್ರಸ. 2:26).

ಈ ಪ್ರಪಂಚದಲ್ಲಿ ನಾವು ಆಶೀರ್ವಾದದ ಮತ್ತು ಸಂತೋಷದ ಜೀವನ ನಡೆಸಬೇಕಾದರೆ ಜ್ಞಾನ ತಿಳುವಳಿಕೆ ಬೇಕಾಗಿರುತ್ತದೆ. ಆದರೆ ನಮ್ಮ ಜ್ಞಾನ ಮತ್ತು ತಿಳುವಳಿಕೆ ಸಾಕಾಗದೆ ನಾವು ಅಸಹಾಯಕರಾಗಿ ಕಾಣುತ್ತೇವೆ. ಕೆಲವು ಸಾರಿ, ನಾವು ನಮ್ಮ ಕೆಲಸದ ಜಾಗದಲ್ಲಿ ಜಯ ಹೊಂದುವಂತೆ ನಮಗೆ ಜ್ಞಾನವಿರುವದಿಲ್ಲ. ಸಂತೋಷದ, ಸಮಾಧಾನದ ಕುಟುಂಬ ಜೀವನ ನಡೆಸಲೂ ನಮಗೆ ಜ್ಞಾನವಿರುವದಿಲ್ಲ. ಶಾಲಾ, ಕಾಲೇಜ್ ಪರೀಕ್ಷೆಗಳಲ್ಲಿ ಜಯಹೊಂದಲು ಜ್ಞಾನ ತಿಳುವಳಿಕೆಯಿರುವದಿಲ್ಲ. ಆದ್ದರಿಂದ, ನಮ್ಮ ಜೀವನದಲ್ಲಿ ಮೇಲಿಂದ ಮೇಲೆ ಸೋಲು ಅನುಭವಿಸುತ್ತಿರುತ್ತೇವೆ. ಆದರೆ, ಕರ್ತನಲ್ಲಿ ಅಡಕವಾಗಿದೆ ಎಲ್ಲಾ ಜ್ಞಾನ ತಿಳುವಳಿಕೆಗಳು (ಕೊಲೊ. 2:3). ರೋಮ. 11:33 ರಲ್ಲಿ ಹೇಳಿರುವಂತೆ, ದೇವರ ಐಶ್ವರ್ಯವು, ಜ್ಞಾನವು, ವಿವೇಕವು ಎಷ್ಟು ಅಗಾದ! ನಮಗೆ ದೊರೆತು ನಾವು ಆಶೀರ್ವಾದ ಜೀವಿತ ಜೀವಿಸುವಂತೆ ಜ್ಞಾನ ತಿಳುವಳಿಕೆ ಕೊಡಲ್ಪಡುವದು. ನಾವು ನೀತಿಯ ಜೀವಿತ ಜೀವಿಸಿ ಆತನಲ್ಲಿ ನೆಲೆಯಾಗಿದ್ದರೆ ಆತನು ನಿಜಕ್ಕು ಈ ಬಹುಮಾನವನ್ನು ಧಾರಳವಾಗಿ ಕೊಡುತ್ತಾನೆ ( ಯಾಕೋ.1:5).

ಒಂದು ಸಲ, ಒಬ್ಬ ತಾಯಿ ತನ್ನ ಮಗನನ್ನು ಸರಿಯಾಗಿ ಬೆಳೆಸಿದಳು. ಅವಳ ಸತ್ಯವೇದವನ್ನು ಉಪದೇಶಿಸಿ ದೇವ ಭಯದಲ್ಲಿ ನಡೆಯುವಂತೆ ಬೆಳೆಸಿದಳು. ಅಯ್ಯೋ! ಅವನು ಯೌವನಸ್ಥನಾದಾಗ ತನ್ನ ಕೆಟ್ಟ ಸ್ನೇಹಿತರ ಸಹವಾಸ ಮಾಡಿ ಕೆಟ್ಟದಾರಿ ಹಿಡಿದನು. ತಂದೆ ತಾಯಿಗಳಿಗೆ ಅವಿಧೇಯನಾದನು. ಆದ್ದರಿಂದ, ಅವರು ಹೃದಯ ಮುರಿದವರಾದರು. ಕಣ್ಣೀರಿನಿಂದ ಅವರು ದೇವರ ಬಳಿಯಲ್ಲಿ ತಮ್ಮ ಹೃದಯ ತೋಡಿಕೊಂಡು ತಮ್ಮ ಮಗನನ್ನು ದೇವರ ಆಶೀರ್ವಾದಕ್ಕಾಗಿ ಸಮರ್ಪಿಸಿದರು. ಕೆಲ ಸಮಯದ ನಂತರ, ದೇವರು ಅವನ ದೇಹ ಮುಟ್ಟಿದರು ಅವನು ಚರ್ಮರೋಗದಿಂದ ಭಾದಿತನಾಗಿ ಎಲ್ಲರೂ ನೋಡುವಂತಾಯಿತು. ಇದನ್ನು ಅವನು ನೋಡಿದಾಗ ಅವನು ಅವಮಾನದಿಂದ ಕೂಗಿದನು. “ಓಹೋ! ಎಂಥಹ ನಾಚಿಕೆ! ನಾನು ನನ್ನ ತಂದೆ ತಾಯಿಗಳಿಗೆ ಎಷ್ಟು ಒಳ್ಳೆಯವನಾಗಿದ್ದೆನು, ನಾನು ಅವರನ್ನು ಎಷ್ಟೊಂದು ಪ್ರೀತಿಸಿದೆ! ಈಗ ಕೆಟ್ಟ ಸಹವಾಸದಿಂದ ನನ್ನ ಜೀವನದ ಎಲ್ಲಾ ಒಳ್ಳೆಯದನ್ನು ಕಳೆದುಕೊಂಡು ಈ ಭಯಂಕರ ಚರ್ಮರೋಗ ಪಡೆದಿರುವೆ” ಅವನು ಮೊಣಕಾಲೂರಿ ದೇವರಿಗೆ ಪ್ರಾರ್ಥಿಸಿದನು. ಅವನು ತನ್ನನ್ನು ಕ್ಷಮಿಸಬೇಕೆಂದು, ದೇವರನ್ನು ಅಂಗಲಾಚಿ ಆಶೀರ್ವದಿಸಬೇಕಾಗಿ ಬೇಡಿಕೊಂಡನು. ದೇವರು ಕರುಣೆಯಿಂದ ಚಲಿಸಿ ಕೃಪೆಯಿಂದ ಕರುಣಿಸಿ ಆಶೀರ್ವದಿಸಿದನು. ಅವನು ಎಲ್ಲಾ ಪರೀಕ್ಷೆಯಲ್ಲೂ ತೇರ್ಗಡೆ ಹೊಂದುವಂತೆ ಮಾಡಿ ಒಳ್ಳೇ ನೌಕರಿ ಪಡೆಯುವಂತೆ ಮಾಡಿದನು. ಕೊನೆಗೆ ಮಗನು ತಂದೆ ತಾಯಿಗಳನ್ನು ಅತೀವವಾಗಿ ಸಂತೋಷಪಡಿಸಿದನು.

ಪ್ರಿಯರೇ, ಈ ರೀತಿಯಾಗಿ ನೀವೂ ಸಹ ನಿಮ್ಮ ಜೀವನವನ್ನು ಸಮರ್ಪಿಸಿ ಆತನಲ್ಲಿ ನೆಲೆಸಿ ಆತನು ನಿಮ್ಮನ್ನು ತನ್ನ ಪ್ರೀತಿಯ ಮಗನನ್ನಾಗಿ ಸ್ವೀಕರಿಸಿ, ಜೀವನದಲ್ಲಿ ಒಳ್ಳೇ ಸಂಗತಿಗಳಾದ ಜ್ಞಾನ, ತಿಳುವಳಿಕೆ ಬುದ್ಧಿಯನ್ನು ಕೊಡುತ್ತಾನೆ (ಜ್ಞಾನೋ. 2:6-7).

ಪ್ರಾರ್ಥನೆ : ಪ್ರಿಯ ತಂದೆಯೇ, ನಾನು ನಿನ್ನಿಂದ ದೂರವಾಗಿ ಬಂದಿರುವುದಕ್ಕಾಗಿ ನನ್ನನ್ನು ಕ್ಷಮಿಸು. ನೀನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ನನ್ನನ್ನು ತೊಳೆದು ಸಂಪೂರ್ಣವಾಗಿ ಮಾಡು. ಇಂದಿನಿಂದ ನನ್ನನ್ನು ಜ್ಞಾನ ಬುದ್ಧಿ ತಿಳುವಳಿಕೆಯಿಂದ ತುಂಬಿ ಎಲ್ಲಾ ಒಳ್ಳೆಯದನ್ನು ಕೊಟ್ಟು ಆಶೀರ್ವದಿಸು ಯೇಸುವಿನ ಸಾಟಿಯಿಲ್ಲದ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

5 comments

 1. kavya shree says:

  nimmma anudhinadha aharakkagi danyavadhagalu

 2. Stephen joy says:

  Thank you for the good message

 3. kiran says:

  Thank you for a prayer

 4. kiran says:

  Thank you for a prayer

 5. Alwin raj v says:

  Thank u for preyar nd awesome message .

Leave a Reply to kiran Cancel reply

Your email address will not be published. Required fields are marked *

WhatsApp us