ಕಪ್ಪು ಅಂಗಿ ! ಆತ್ಮೀಕ ಕಥೆ 19

  Posted on   by   7 comments

block

ಒಮ್ಮೆ ಮಾರ್ಟಿನ್ ಲೂಥರ್ ಜೀವಿತದಲ್ಲಿ ಒಂದು ದೊಡ್ಡ ಹಿಂಜರಿಯುವಿಕೆಯೂ ಮನಸ್ಸಿನ ಚಂಚಲತೆಯೂ ಉಂಟಾಯಿತು. ಚಿಂತೆಮಾಡಿ, ಸೋತು ಕೊರಗಿ ಒಂದು ಮೂಲೆಯಲ್ಲಿ ಕುಳಿತು ಬಿಟ್ಟನು. ಊಟ ನಿದ್ರೆ ಯಾವುದೂ ಬೇಡವಾಯಿತು. ಆ ಸಂದರ್ಭದಲ್ಲಿ ಆತನ ಮಡದಿ ಆತನಿಗೆ ಒಂದು ಪಾಠ ಕಲಿಸಬೇಕೆಂದೆಣಿಸಿ ಒಂದು ಕಪ್ಪು ಬಣ್ಣದ ಅಂಗಿಯನ್ನು ಹಾಕಿಕೊಂಡು ಆತನ ಮುಂದೆ ಬಂದು ನಿಂತಳು.

ವಿದೇಶಗಳಲ್ಲಿ ಕಪ್ಪು ಅಂಗಿ ಧರಿಸಿದರೆ ಸಮೀಪ ಬಂಧುಗಳು ತೀರಿಕೊಂಡರೆಂದು ಅರ್ಥ. ಆದ್ದರಿಂದ ಈ ಕಪ್ಪು ಉಡುಪಿನಲ್ಲಿ ಮಡದಿಯನ್ನು ಕಂಡ ಲೂಥರ್ ಭಯ ಹಿಡಿದವರಾಗಿ ನಡುಗುತ್ತಾ “ಯಾರಮ್ಮಾ ಸತ್ತಿದ್ದಾರೆ?” ಎಂದು ವಿಸ್ಮಯರಾಗಿ ಕೇಳಿದರು.

ಆಗ ಅವರ ಮಡದಿಯು “ಅಯ್ಯಾ ಯೇಸು ಸ್ವಾಮಿ ಸತ್ತಹೋದರು ನೀವು ಇಷ್ಟು ಚಿಂತಾಕ್ರಾಂತರಾಗಿ ಶೋಕಿಸುವುದನ್ನು ಕಂಡು ನಿಮ್ಮ ರಕ್ಷಕನೆ ಸತ್ತಿರಬೇಕೆಂದೆಣಿಸಿ ಕೊಂಡೆನು” ಎಂದಳು. ತನ್ನ ರಕ್ಷಕನು ಜೀವಿಸಿದ್ದಾನೆಂದು ಚಾತುರ್ಯದಿಂದ ತನಗೇ ಬೋಧಿಸಿದ ಮಡದಿಯನ್ನು ಮಾರ್ಟಿನಂ ಕೃತಜ್ಞತೆಯಿಂದ ವಂದಿಸಿದರು.

ದೇವಮಗುವೇ, ನಿನ್ನ ಮನಸ್ಸು ಮುದುಡಿದ ವೇಳೆಗಳಲ್ಲಿ ನಿನ್ನ ದೇವರಾದ ಕರ್ತನು ನಿನ್ನೊಂದಿಗೆ ಜೀವವುಳ್ಳವನಾಗಿ ಇದ್ದಾನೆಂದು ನಂಬು! ನಿನ್ನ ಮನೋನೇತ್ರದಲ್ಲಿ ನೆನಸಿ ಉತ್ಸಾಹದಿಂದ ಸ್ತುತಿಸಿ ಸ್ತೋತ್ರಮಾಡು. ನಿನ್ನ ನಿರುತ್ಸಾಹಗಳು ದೇವ ಪ್ರಭಾವದಿಂದ ಮಾರ್ಪಡಲಿ! ಆಗಲೇ ಅಲ್ಲಿ ಜಯಿಸಿದ್ದ ಎಂದು ತಿಳಿದುಕೋ!

“ಯಾವ ಸಂಬಂಧವಾಗಿಯೂ ಚಿಂತೆ ಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತ್ತಾ ಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಯನ್ನೂ ಮಾಡುತ್ತಾ ನಿಮಗೆ ಬೇಕಾದ್ದನ್ನು ತಿಳಿಯಪಡಿಸಿರಿ” (ಫಿಲಿ. 4:6).

Categories: Spiritual Stories

7 comments

 1. WOW very nice story praise the lord

 2. LOHITHKUMAR says:

  HALLELUYA PRAISE THE LORD

 3. mamtha says:

  Thank you god

 4. guru says:

  Hallelujah

 5. Johnson says:

  Berry nice story praise the Lord

 6. Preethi says:

  Praise God..good story

 7. Lidiya says:

  Good story God is there

Comments

Your email address will not be published. Required fields are marked *

WhatsApp us