ಕಪ್ಪು ಅಂಗಿ! – ಆತ್ಮೀಕ ಕಥೆ 48

  Posted on   by   No comments

ಒಮ್ಮೆ ಮಾರ್ಟಿನ್ ಲೂಥರ್ ಜೀವಿತದಲ್ಲಿ ಒಂದು ದೊಡ್ಡ ಹಿಂಜರಿಯುವಿಕೆಯೂ ಮನಸ್ಸಿನ ಚಂಚಲತೆಯೂ ಉಂಟಾಯಿತು. ಚಿಂತೆಮಾಡಿ, ಸೋತು ಕೊರಗಿ ಒಂದು ಮೂಲೆಯಲ್ಲಿ ಕುಳಿತುಬಿಟ್ಟನು. ಊಟ ನಿದ್ರೆ ಯಾವುದೂ ಬೇಡವಾಯಿತು. ಆ ಸಂದರ್ಭದಲ್ಲಿ ಆತನ ಮಡದಿ ಆತನಿಗೆ ಒಂದು ಪಾಠ ಕಲಿಸಬೇಕೆಂದೆಣಿಸಿ ಒಂದು ಕಪ್ಪು ಬಣ್ಣದ ಅಂಗಿಯನ್ನು ಹಾಕಿಕೊಂಡು ಆತನ ಮುಂದೆ ಬಂದು ನಿಂತಳು. ವಿದೇಶಗಳಲ್ಲಿ ಕಪ್ಪು ಅಂಗಿ ಧರಿಸಿದರೆ ಸಮೀಪ ಬಂಧುಗಳು ತೀರಿಕೊಂಡರೆಂದು ಅರ್ಥ. ಆದ್ದರಿಂದ ಈ ಕಪ್ಪು ಉಡುಪಿನಲ್ಲಿ ಮಡದಿಯನ್ನು ಕಂಡ ಲೂಥರ್  ಭಯ ಹಿಡಿದವರಾಗಿ ನಡುಗುತ್ತಾ “ಯಾರಮ್ಮಾ ಸತ್ತಿದ್ದಾರೆ?” ಎಂದು ವಿಸ್ಮಯರಾಗಿ ಕೇಳಿದರು.
ಆಗ ಅವರ ಮಡದಿಯು “ಅಯ್ಯಾ ಯೇಸು ಸ್ವಾಮಿ ಸತ್ತುಹೋದರು. ನೀವು ಇಷ್ಟು ಚಿಂತಾಕ್ರಾಂತರಾಗಿ ಶೋಕಿಸುವುದನ್ನು ಕಂಡು ನಿಮ್ಮ ರಕ್ಷಕನೇ ಸತ್ತಿರಬೇಕೆಂದೆಣಿಸಿ ಕೊಂಡೆನು” ಎಂದಳು. ತನ್ನ ರಕ್ಷಕನು ಜೀವಿಸಿದ್ದಾನೆಂದು ಚಾತುರ್ಯದಿಂದ ತನಗೆ ಬೋಧಿಸಿದ ಮಡದಿಯನ್ನು ಮಾರ್ಟಿನ್ ಕೃತಜ್ಞತೆಯಿಂದ ವಂದಿಸಿದರು.
ದೇವಮಗುವೇ, ನಿನ್ನ ಮನಸ್ಸು ಮುದುಡಿದ ವೇಳೆಗಳಲ್ಲಿ ನಿನ್ನ ದೇವರಾದ ಕರ್ತನು ನಿನ್ನೊಂದಿಗೆ ಜೀವವುಳ್ಳವನಾಗಿ ಇದ್ದಾನೆಂದು ನಂಬು! ನಿನ್ನ ಮನೋನೇತ್ರದಲ್ಲಿ ನೆನಸಿ ಉತ್ಸಾಹದಿಂದ ಸ್ತುತಿಸಿ ಸ್ತೋತ್ರಮಾಡು. ನಿನ್ನ ನಿರುತ್ಸಾಹಗಳು ದೇವ ಪ್ರಭಾವದಿಂದ ಮಾರ್ಪಡಲಿ!

Categories: Spiritual Stories

Comments

Your email address will not be published. Required fields are marked *

× WhatsApp us