ಕರ್ತನನ್ನು ನಿರೀಕ್ಷಿಸಿಕೊಂಡಿರು, ಆತನು ನಿಮ್ಮ ಹೃದಯವನ್ನು ಧೈರ್ಯಗೊಳಿಸುತ್ತಾನೆ!

  Posted on   by   1 comment

joga-hatasai-egeszseg

“ಯೆಹೋವನನ್ನು ನಿರೀಕ್ಷಿಸುವವರೇ ದೃಢವಾಗಿರ್ರಿ. ನಿನ್ನ ಹೃದಯವು ಧೈರ್ಯದಿಂದರಲಿ, ಯೆಹೋವನನ್ನು ನಿರೀಕ್ಷಿಸಿಕೊಂಡೇ ಇರು” (ಕೀರ್ತ. 31:24, 27:14).

ದಾವೀದನು ಗೊಲ್ಯಾತನ ಮೇಲೆ ಯುದ್ಧ ಮಾಡಲು ತಯಾರಾದಾಗ ಅವನು ಕುರಿಕಾಯುವ ಚಿಕ್ಕ ಹುಡುಗನಾಗಿದ್ದನು. ಫಿಲಿಷ್ಟಿಯ ಎದುರು ಯುದ್ಧ ಮಾಡಲು ಅದು ಕರ್ತನೇ ಅವನನ್ನು ಬಲಗೊಳಿಸಿದ್ದು. ದಾವೀದನನ್ನು ಅವನ ದೇವರುಗಳ ಮೂಲಕ ಶಪಿಸುವದರಲ್ಲಿ ಹೆಮ್ಮೆಪಟ್ಟನು. ಅವನು ಕವಣೆ ಮತ್ತು ಐದು ಸಣ್ಣ ನುಣುಪಾದ ಕಲ್ಲುಗಳ ಜೊತೆ ಅವನು ಪೂರ್ಣವಾಗಿ ಶಸ್ತ್ರಧಾರಿಯಾಗಿದ್ದು ದೊಡ್ಡ ಭರ್ಜಿ, ಕತ್ತಿ ಗುರಾಣಿಗಳನ್ನು ಹೊಂದಿದ್ದ ಗೋಲ್ಯಾತನ ವಿರುದ್ಧ ಯುದ್ಧ ಮಾಡಲು ಹೋದನು. ಕರ್ತನ ಬಲವಾದ ಹೆಸರಿನಲ್ಲಿ (ಜ್ಞಾನೋ. 18:10). ದಾವೀದನು ದೈತ್ಯ ಗೋಲ್ಯಾತನನ್ನು ಭೂಮಿಯ ಮೇಲೆ ಮುಖ ಕೆಳಗಾಗುವಂತೆ ಬೀಳಿಸಿ ಅವನನ್ನು ಕೊಂದನು (1 ಸಮು. 17:45-51). ಅದೇ ರೀತಿ, ಯಾರಾರು ಆತನನ್ನು ಯಥಾರ್ಥವಾಗಿ ನಂಬುತ್ತಾರೋ ಅಂಥವರನ್ನು ಆತನು ಆಶೀರ್ವದಿಸುತ್ತಾನೆ. ಅವರು ಕರ್ತನಲ್ಲಿ ಬಲಹೊಂದಿ, ಜಯದ ಜೀವಿತವನ್ನು ಜೀವಿಸುತ್ತಾರೆ (1 ಪೇತ್ರ. 5:10).

ಒಂದು ಕಛೇರಿಯಲ್ಲಿ ಅನೇಕ ನೌಕರರಿಗೆ ದೇವರ ಬಗ್ಗೆ ಭಯವಿರಲಿಲ್ಲ. ಅವರು ಗಲಿಬಿಲಿ ಮತ್ತು ಗೊಂದಲ ಸೃಷ್ಟಿ ಮಾಡುವುದರಲ್ಲಿ ಬೇಗನೆ ದೊರಕುವ ಅವಕಾಶದಲ್ಲಿ ಹೆಚ್ಚು ಆನಂದಪಡುತ್ತಿದ್ದರು. ಕಛೇರಿಯ ಕಾರ್ಯದರ್ಶಿ ಭಕ್ತನೂ ಮತ್ತು ದೈವೀಕ ಮನುಷ್ಯನಾಗಿದ್ದನು. ಈ ಕಛೇರಿಗೆ ವರ್ಗಾವಣೆಯಾಗಿ ಬರುವ ಮೊದಲೇ ಇಲ್ಲಿಯ ಪರಿಸ್ಥಿತಿಯ ಬಗ್ಗೆ ಆತನು ಕೇಳಿದ್ದನು. ಇಲ್ಲಿನ ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ತಿಳಿಯದೆ ಅವನು ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡು, ಈ ಕಛೇರಿಯ ಎಲ್ಲಾ ವಿಷಯಗಳನ್ನು ನಿರ್ವಹಿಸಲು ಜ್ಞಾನ ಮತ್ತು ನಡೆಸುವಿಕೆಯನ್ನು ಕೇಳಿಕೊಂಡನು. ಪ್ರತಿದಿನ ಅವನು ಕಛೇರಿಗೆ ಹೋಗುವ ಮೊದಲು ನಾಚಿಕೆಯಿಂದ ದೇವರಿಗೆ ಪ್ರಾರ್ಥಿಸುತ್ತಿದ್ದನು. ಅವನು ವಿಶೇಷವಾಗಿ ಈ ಕಛೇರಿಯಲ್ಲಿ ತೊಂದರೆ ಕೊಡಲು ಹೆಸರು ವಾಸಿಯಾದ ಕೆಲವು ವ್ಯಕ್ತಿಗಳಿಗಾಗಿ ಪ್ರಾರ್ಥಿಸಿದನು. ನಂತರ ಮೊಳೆ ಜಜ್ಜಿದ ದೇವರ ಕೈಗಳಿಗೆ ಎಲ್ಲಾವನ್ನು ಸಮರ್ಪಿಸುತ್ತಿದ್ದನು ಮತ್ತು ಕಛೇರಿಗೆ ತೆರಳುತ್ತಿದ್ದನು. ಒಂದು ಸಲ ಕಛೇರಿಯಲ್ಲಿದ್ದಾಗ, ಅವನು ಪ್ರತಿ ನೌಕರನ ಹತ್ತಿರ ಹೋಗಿ ಅವರ ಪಕ್ಕದಲ್ಲಿ ಕುಳಿತು, ಕರುಣೆಯ ಮಾತನಾಡಿ ಮತ್ತು ಅವರ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಅವನ ಕಛೇರಿಯ ನೌಕರರ ಮನೆಗಳಲ್ಲಿ ನಡೆಯುತ್ತಿದ್ದ ಎಲ್ಲಾ ವಿಶೇಷ ಆಚರಣೆಗಳಲ್ಲಿ ಭಾಗವಹಿಸುವ ಒಂದು ಅಭ್ಯಾಸ ಮಾಡಿಕೊಂಡಿದ್ದನು. ಕಛೇರಿಯಲ್ಲಿದ್ದ ಎಲ್ಲಾ ಕೀಟಲೆ ನಡತೆಯವರನ್ನು ಆಶ್ಚರ್ಯಗೊಳಿಸಿತು. ಯಾಕಂದರೆ ಹಿಂದೆ ಇದ್ದ ಯಾರಿಗೂ ಇಂಥಹ ಒಳ್ಳೇ ಅಭ್ಯಾಸಗಳು ಇರಲಿಲ್ಲ. ನಿಧಾನವಾಗಿ, ಅವರು ಅವನ ಸೂಚನೆಗಳಿಗೆ ವಿಧೇಯರಾಗುತ್ತಿದ್ದರು. ಕೆಲ ಸಮಯದ ನಂತರ ಇಡೀ ಕಛೇರಿ ಇವನ ಸೂಚನೆಗಳಿಗೆ ಒಳಗಾಗುತ್ತಿತ್ತು. ಬೇಗನೇ ಗೊಂದಲದ ಪರಿಸ್ಥಿತಿಗಳು ಸುಧಾರಣೆಗಾಗಿ ಬದಲಾಯಿತು. ಈ ಕಛೇರಿ ಪರಲೋಕದ ಸಮಾಧಾನವಾಯಿತು.

ಪ್ರಿಯ ಸ್ನೇಹಿತರೇ! ನೀವು ಯಾವುದಾದರೂ ಸಮಸ್ಯೆಗಳನ್ನಾಗಲೀ ಅಥವಾ ತೊಂದರೆಗಳನ್ನಾಗಲೀ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ಎದುರಿಸಬೇಕಾದರೆ, ಈ ಮೇಲಿನ ಘಟನೆಯಲ್ಲಿನ ಅಧಿಕಾರಿಯಂತೆ ನೀವೂ ಸಹ ಅದನ್ನು ಕರ್ತನ ಪಾದದ ಬಳಿ ಸಮರ್ಪಿಸಿರಿ. ಆತನು ನಿಮ್ಮನ್ನು ಉದ್ಧಾರಮಾಡಿ, ಎಲ್ಲದರಲ್ಲೂ ನಡೆಸುತ್ತಾನೆ (ಕೀರ್ತ. 55:22).

ಪ್ರಾರ್ಥನೆ :- ಪ್ರಿಯ ಕರ್ತನೇ! ಇಂದಿನಿಂದ, ನಿನ್ನ ಅಮೂಲ್ಯ ಪಾದಗಳ ಬಳಿ ಕಾಯುವಂತೆಯೂ ನಿನ್ನ ಮೂಲಕ ಬಲ ಹೊಂದುವಂತೆಯೂ ಕೃಪೆ ನೀಡು. ನನ್ನ ಎಲ್ಲಾ ಸಮಸ್ಯೆಗಳಿಂದ ಹೊರಬರುವಂತೆ ನಿನ್ನ ಜ್ಞಾನ ಮತ್ತು ನಡೆಸುವಿಕೆಯಿಂದ ಸಹಾಯ ಮಾಡು. ನಮ್ಮ ಕರ್ತನಾದ ಯೇಸುವಿನ ಬಲಪಡಿಸುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

1 comment

  1. Vikas says:

    Above Story is gud and meaningful. Like dat happned day today our life. And we are facing same through I think. For dat God is answer and he will make miracle through u people pray for other for their sign. God will change them and along with that he will bless u also. Thanku u jesus. Amen.

Comments

Your email address will not be published. Required fields are marked *