ಕರ್ತನು ತನಗೆ ಮೊರೆಯಿಡುವವರನ್ನು ಸ್ವಸ್ಥ ಮಾಡುತ್ತಾನೆ!

  Posted on   by   No comments

ef3a30f097ce23f20729b6fe8f1e97ef

“ಯೆಹೋವನೇ ನನ್ನ ದೇವರೇ, ನಿನಗೆ ಮೊರೆಯಿಡಲು ನನ್ನನ್ನು ಸ್ವಸ್ಥಮಾಡಿದಿ” (ಕೀರ್ತ. 30:2).

ನಮ್ಮ ಕರ್ತನಾದ ಯೇಸು ಈ ಲೋಕದಲ್ಲಿ ಸ್ವಲ್ಪ ಕಾಲವಿದ್ದಾಗ, ಆತನ ಬಳಿಗೆ ಬಂದ ಎಲ್ಲರನ್ನು ಮುಟ್ಟಿ ಸ್ವಸ್ಥ ಮಾಡಿದನು. ಒಂದು ಸಲ ಒಬ್ಬ ಮನುಷ್ಯ ಜೋರಾಗಿ ಅವನ ಕಡೆ ಕೂಗಿ ಹೇಳಿದನು, “ಯೇಸುವೇ, ದಾವೀದ ಕುಮಾರನೇ, ನನ್ನ ಮೇಲೆ ಕರುಣೆಯಿಡು” ಎಂದು. ಅವನು ಕುರುಡನಾಗಿದ್ದ ಬಾರ್ತಿಮಯ. ಯೇಸುವಿನ ಶಿಷ್ಯರು ಅವನನ್ನು ಗದರಿಸಿ ಸುಮ್ಮನಿರಲು ಹೇಳಿದರು. ಆದರೆ ಅವನು ಇನ್ನೂ ಜೋರಾಗಿ ಕೂಗಿದನು, ಯಾಕಂದರೆ ಇಂಥಹ ಅವಕಾಶ ಅವನಿಗೆ ಇನ್ನೊಂದು ಸಾರಿ ಸಿಗುವದಿಲ್ಲವೆಂದು ಯೇಸು ಅವನನ್ನು ಪ್ರೀತಿಯಿಂದ ಕರೆದು ಅವನ ಹೃದಯದ ಆಶೆಯನ್ನು ನೆರವೇರಿಸಿದನು (ಲೂಕ. 18:35-43; ಮಾರ್ಕ. 10:46-52). ನಾವು ಸಹ ಕಾತುರದಿಂದ ಕುರುಡನಂತೆ ಒಂದು ಅವಕಾಶಕ್ಕಾಗಿ ಕಾದಿರಬಹುದು. ಇಂದು, ನಾವು ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು, ಅವನನ್ನು ಕೂಗಿ ಹೇಳೋಣ, “ಕರ್ತನೇ, ಯೇಸು! ನೀನೊಬ್ಬನೇ ನನಗೆ ದಾರಿ. ನನ್ನ ಮೇಲೆ ಕರುಣೆಯಿಡು ಮತ್ತು ಸಹಾಯ ಮಾಡು” ಎಂದು ಆತನು ನಿಜಕ್ಕೂ ನಿಮ್ಮ ಕೂಗನ್ನು ಕೇಳಿ ಗುಣಪಡಿಸಿ ಆಶೀರ್ವದಿಸುವನು.

ಒಂದು ಸಲ ಒಬ್ಬ ಮನುಷ್ಯನು ಮನಸ್ಸು ನೋಯಿಸುವಂಥಹ ಜೀವನ ನಡೆಸುತ್ತಿದ್ದನು. ಅನೇಕ ಜನರು ಅವನಿಗೆ ಸರಿಯಾದ ದಾರಿಯಲ್ಲಿ ನಡೆಯಬೇಕೆಂದು ಸಲಹೆಕೊಟ್ಟರೂ ಅವನು ಪಾಪದ ಜೀವಿತವನ್ನು ನಡೆಸಲು ಮುಂದುವರಿಸಿದನು. ಅವನ ಹೆಂಡತಿ ತಾಳ್ಮೆಯ ಪ್ರತಿರೂಪ. ಅವಳು ತಾಳ್ಮೆಯಿಂದ ಅವನ ಜೀವನ ಬದಲಾಗುವಂತೆ ಪ್ರಾರ್ಥಿಸಿದಳು. ಆದರೆ ಅವನು ಅವಳು ಪ್ರಾರ್ಥಿಸಲು ಬಿಡುತ್ತಿರಲಿಲ್ಲ. ಆತನು ದೇವರನ್ನು ಆತನನ್ನು ನಂಬಿದವರನ್ನು ಗಾಯ ಮಾಡುವದರಲ್ಲಿ ಸಂತೋಷಪಡುತ್ತಿದ್ದನು. ಒಂದು ದಿನ ತನ್ನ ಕಛೇರಿಯ ಕೆಲಸದಿಂದಾಗಿ ಬೇರೊಂದು ಜಾಗಕ್ಕೆ ಹೋದನು. ದಾರಿಯಲ್ಲಿ ಅವನು ಒಂದು ಕಾರು ಅಪಘಾತದಲ್ಲಿ ಈಡಾಗಿ ಕಾಲು ಮುರಿದುಕೊಂಡು ಒಂದು ಆಸ್ಪತ್ರೆಗೆ ದಾಖಲಾದರು. ಅವನನ್ನು ಪರೀಕ್ಷಿಸಿದ ವೈದ್ಯರು ಹೇಳಿದರು, ಅವರ ಜೀವನ ಉಳಿಸಬೇಕಾದರೆ ಅವನ ಕಾಲನ್ನು ಕತ್ತರಿಸಬೇಕಾಯಿತು. ಅದಕ್ಕಾಗಿ ತಯಾರಾಗಬೇಕೆಂದು ಸಲಹೆಯಿತ್ತರು. ಅವನಿಗೆ ಆಘಾತವಾಯಿತು. ಅವನ ಪಾಪದ ಜೀವನ ಅವನ ಕಣ್ಣಿನ ಮುಂದೆ ಬಂದಿತು. ಅವನು ನಿರಾಶೆಯಿಂದ ತನಗೆ ತಾನೇ ಹೇಳಿಕೊಂಡನು, “ನನಗೆ ಸಂಕಟ! ನಾನು ಎಂಥಹ ದೊಡ್ಡ ಪಾಪಿಷ್ಟ ನನಗೆ ಎಷ್ಟೊಂದು ಜನ ಸಲಹೆ ಕೊಟ್ಟರು! ಓಹ್! ನನಗಾಗಿ ನನ್ನ ಪ್ರಿಯ ಹೆಂಡತಿ ಎಷ್ಟು ಸಲ ಪ್ರಾರ್ಥಿಸಿದ್ದಾಳೆ. ಅಯ್ಯೋ! ನಾನು ಗರ್ವದಿಂದಲು ಮತ್ತು ಅಹಂಕಾರದಿಂದಲೂ ಅವಳನ್ನು ತಿರಸ್ಕರಿಸಿ ಘಾಸಿಗೊಳಿಸಿದೆನು. ನಾನು ಸರ್ವಶಕ್ತನನ್ನು ಗಾಯಗೊಳಿಸಿರುವೆ. ಇಂದು, ಈ ಭಯಂಕರ ಪಾಪಿಗೆ ಯಾರು ಸಹಾಯ ಮಾಡುತ್ತಾರೆ?” ಎಂದು ಪರಿತಪಿಸುತ್ತಿದ್ದನು. ಕೆಲವು ಕ್ರೈಸ್ತ ಸಹೋದರರು ಅವನ ಮೇಲೆ ಕರುಣೆಯಿಂದ, ಅವನ ಕೊಠಡಿಗೆ ಹೋಗಿ ಅವನಿಗಾಗಿ ಆಗಿಂದ್ದಾಗೆ ಪ್ರಾರ್ಥಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿ ಅವನನ್ನು ಕರುಣಿಸಿದರು. ಕೆಲವು ದಿನಗಳ ನಂತರ ಬಂದ ವೈದ್ಯರು ಪರೀಕ್ಷಿಸಿದಾಗ, ಕಾಲು ಕತ್ತರಿಸುವ ಅವಶ್ಯಕತೆ ಇಲ್ಲ ಎಂದರು. ಹೌದು! ಅವನಿಗೆ ಕಾಲು ಪುನ: ದೊರೆಯಿತು. ಅವನಿಗೆ ದೇವರ ಆಶೀರ್ವಾದವು ತನ್ನ ಜೀವನದಲ್ಲಿ ಸಿಕ್ಕಿತು.

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ನನ್ನ ಜೀವನದ ಎಲ್ಲಾ ಸಮಯದಲ್ಲಿ ನಿನ್ನನ್ನು ಕೂಗುವಂತೆ ಸಹಾಯ ಮಾಡು. ನನ್ನ ಪ್ರಾರ್ಥನೆ ಮತ್ತು ವಿಜ್ಞಾಪನೆಗಳನ್ನು ಕೇಳಿ ಉತ್ತರಿಸು. ಇಂದಿನಿಂದ, ನೀನೇ ನನಗೆಲ್ಲಾ ಮತ್ತು ನಾನು ಹೋಗಬೇಕಿರುವ ದಾರಿಯಲ್ಲಿ ನಡೆಸು. ನಿನ್ನನ್ನು ವಿಧೇಯತೆಯಿಂದ ಹಿಂಬಾಲಿಸಲು ಸಹಾಯ ಮಾಡು, ನಡೆಸು, ಗುಣಮಾಡು ಮತ್ತು ಆಶೀರ್ವದಿಸು. ನಮ್ಮ ಕರ್ತನಾದ ನಜರೇತಿನ ಯೇಸು ಕ್ರಿಸ್ತನ ಸ್ವಸ್ಥತೆಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us