ಕರ್ತನು ತನ್ನ ಶಾಶ್ವತ ರಕ್ಷಣೆಯಿಂದ ರಕ್ಷಿಸುತ್ತಾನೆ!

  Posted on   by   No comments

image

“ಇಸ್ರಾಯೇಲಿಗೂ ಯೆಹೋವನಿಂದ ಶಾಶ್ವತರಕ್ಷಣೆ ದೊರೆಯುವುದು” (ಯೆಶಾ. 45:17).

ಕರ್ತನು ನಮ್ಮ ಹೃದಯಗಳನ್ನು ಆತನ ಅಮೂಲ್ಯ ರಕ್ತದಿಂದ ತೊಳೆದು ಪರಿಶುದ್ಧಮಾಡುತ್ತಾನೆ. ಈ ರಕ್ಷಣೆ ತಾತ್ಕಾಲಿಕವಾದದ್ದಲ್ಲ. ಆದರೆ ಇದು ಶಾಶ್ವತವಾದ ಮತ್ತು ನಿತ್ಯವಾದದ್ದು. ನಮ್ಮ ಕೊನೆಯುಸಿರಿನ ತನಕ ಆತನು ನಮ್ಮ ಜೀವಗಳನ್ನು ಕಾಪಾಡಿ ಆಶೀರ್ವದಿಸುತ್ತಾನೆ. ಪ್ರಿಯ ಸ್ನೇಹಿತರೇ! ನಮ್ಮ ಯೇಸು ಕರ್ತನ ಪಾದಗಳನ್ನು ಗಟ್ಟಿಗೆ ಹಿಡಿದುಕೊಂಡು ಆತನ ನಿತ್ಯವಾದ ಮತ್ತು ದೈವ ರಕ್ಷಣೆಯನ್ನು ಪಡೆಯೋಣ. ನಾವು ಪ್ರತಿನಿತ್ಯ ಸತ್ಯವೇದವನ್ನು ಓದಿ ಅದರಂತೆ ನಡೆಯುವದು ನಿರಪೇಕ್ಷವಾಗಿ ಅವಶ್ಯಕವಾಗಿದೆ, ನೀವು ಪಡೆದಿರುವ ರಕ್ಷಣೆಯಲ್ಲಿ ಸ್ಥಿರವಾಗಿದ್ದೀರಾ? ಅಥವಾ ನಿಮ್ಮ ಜೀವನದಲ್ಲಿ ಯಾರನ್ನಾದರೂ ಸಂತೋಷಪಡಿಸಲು ದೇವರಿಂದ ದೂರವಾಗಿದ್ದೀರಾ? ಈ ನಿತ್ಯವಾದ, ಸಂತೋಷವಾದ ಜೀವನ ಪಡೆಯಬೇಕಾದರೆ, ದೇವರನ್ನು ನೋಡಿ, ಆತನ ದಾರಿಯನ್ನು ಅನುಸರಿಸು (ಎಫೆ. 2:4).

ಒಬ್ಬ ಯೌವನಸ್ಥ ಹುಡುಗಿ ತನ್ನ ಪೂರ್ಣ ಹೃದಯದಿಂದ ದೇವರನ್ನು ಪ್ರೀತಿ ಮಾಡುತ್ತಿದ್ದಳು. ಅವಳು ದೈವೀಕ ಮತ್ತು ಪರಿಶುದ್ಧ ಜೀವನ ನಡೆಸುತ್ತಿದ್ದಳು. ಅವಳನ್ನು ಬಲ್ಲವರೆಲ್ಲರೂ ಆಕೆಯ ದೈವಭಕ್ತಿಯ ಜೀವನ ನೋಡಿ ಆಶ್ಚರ್ಯಗೊಂಡಿದ್ದರು. ಯೌವನಸ್ಥರು ದೇವರ ಮಕ್ಕಳಾಗುವಂತೆ ಮಾಡಲು ತನ್ನ ಕೈಲಾದದ್ದನ್ನೆಲ್ಲಾ ಮಾಡುತ್ತಿದ್ದಳು. ನಂತರ ಅವಳು ಮದುವೆಯಾಗಿ ಜೀವನದಲ್ಲಿ ನೆಲೆಗೊಂಡಳು. ಅವಳು ತನ್ನ ಪತಿಯನ್ನು ಬಹುವಾಗಿ ಪ್ರೀತಿಸುತ್ತಿದ್ದಳು. ಆದರೆ ಅವಳ ಗಂಡ ಅವಳಿಗೆ ಹೇಳಿದ್ದೇನೆಂದರೆ, “ನಿನ್ನ ಪೂರ್ಣ ಹೃದಯದಿಂದ ದೇವರ ದಾರಿಯಲ್ಲಿ ನಡೆಯುವ ಅವಶ್ಯಕತೆ ಇಲ್ಲ. ನಾವು ದೇವರನ್ನು ಹುಡುಕಬೇಕು. ಅದೇ ಸಮಯದಲ್ಲಿ, ಈ ಪ್ರಪಂಚದಲ್ಲಿನ ಸಂತೋಷಗಳನ್ನೂ ಅನುಭವಿಸಬೇಕು” ಎಂದನು. ಅವನು ನಿಧಾನವಾಗಿ ಅವಳ ಮನಸ್ಸನ್ನು ಬೇರೆ ಕಡೆ ಬದಲಾಯಿಸಿ ಅವಳು ಸಹ ಚಿತ್ರಮಂದಿರಗಳಿಗೆ ಹೋಗಲು ಆರಂಭಿಸಿದಳು ಮತ್ತು ತನ್ನ ಗಂಡನನ್ನು ಸಂತೋಷಪಡಿಸಲು ಬೇರೆ ವಿನೋದ ಸ್ಥಳಗಳಿಗೂ ಹೋಗಲು ಆರಂಭಿಸಿದಳು. ನಿಧಾನವಾಗಿ ಅವಳು ದೇವರಿಂದ ದೂರ ಹೋದಳು. ಒಂದು ದಿನ ಕರ್ತನು ಅವಳ ಹತ್ತಿರ ನೇರವಾಗಿ ಮಾತನಾಡಿ ಹೇಳಿದನು, “ನನ್ನ ಪ್ರಿಯ ಮಗಳೇ, ಆರಂಭದಲ್ಲಿ ನನಗಾಗಿ ಇದ್ದ ಪವಿತ್ರ ಪ್ರೀತಿ ಎಲ್ಲಿ? ಈಗ ಅದಕ್ಕೆ ಏನಾಗಿದೆ?” ಎಂದನು. ಆ ರಾತ್ರಿ ಅವಳು ನಿದ್ದೆ ಮಾಡಲೇ ಇಲ್ಲ. ಅವಳು ಮುಂಜಾನೆ ಎದ್ದು ಮೊದಲಿನಂತೆ ದೇವರನ್ನು ಹುಡುಕಲು ಪ್ರಾರಂಭಿಸಿದಳು. ಅವಳು ತನ್ನ ಪತಿಯ ಹತ್ತಿರ ಕ್ಷಮೆ ಕೇಳಿ ತನ್ನನ್ನು ಕ್ಷಮಿಸಬೇಕಾಗಿಯೂ, ಯಾಕಂದರೆ, ಇನ್ನು ಮುಂದೆ ಅವರನ್ನು ಸಂತೋಷಪಡಿಸಲು ದೇವರ ನಂಬಿಕೆಯಲ್ಲಿ ಹೊಯ್ದಾಡುವದಿಲ್ಲವೆಂದು ಹೇಳಿದಳು. ಆದರೆ ಆತನ ಪ್ರೀತಿಯ ಹೆಂಡತಿಯಾಗಿ ತಾನು ಮಾಡಬೇಕಾಗಿರುವದೆಲ್ಲವನ್ನು ತಾನು ಮಾಡುವುದಾಗಿ ವಾಗ್ದಾನ ಮಾಡಿದಳು. ಅಂದಿನಿಂದ, ಅವಳು ಭಕ್ತಿಯ ಮತ್ತು ಪವಿತ್ರ ಜೀವನ ಜೀವಿಸಿದಳು.

ನನ್ನ ಪ್ರಿಯರೇ! ಅನೇಕ ಹೆಂಡತಿಯರು ತಮ್ಮ ಗಂಡಂದಿರನ್ನು ಸಂತೋಷಪಡಿಸಿ ಪ್ರಾಪಂಚಿಕ ಜೀವನ ನಡೆಸುವುದಕ್ಕಾಗಿ ಸುಲಭವಾಗಿ ದೇವರಿಂದಲೂ ದೈವೀಕ ಜೀವನದಿಂದಲೂ ದೂರ ಹೋಗುತ್ತಾರೆ. ಇದು ದೇವರ ರಕ್ಷಣಾನಂದವನ್ನು ದೇವರಲ್ಲ ಕಳೆದುಕೊಳ್ಳುವಂತೆ ಮಾಡುತ್ತದೆ. ನೀವೂ ಸಹ ಈ ದಿನದಲ್ಲಿ ಅದೇ ದೋಣಿಯಲ್ಲಿದ್ದಾರೋ? ದಯ ಮಾಡಿ, ಇದನ್ನು ಯೋಚನೆ ಮಾಡಿ! ದೇವರ ಕಡೆ ತಿರುಗಿಕೊಳ್ಳಿರಿ ಮತ್ತು ನಿತ್ಯ ರಕ್ಷಣೆಯನ್ನು ಪಡೆಯಿರಿ (ಕೀರ್ತ. 116:12).

ಪ್ರಾರ್ಥನೆ : ಪ್ರಿಯ ಕರ್ತನೇ! ನೀನು ನನ್ನ ನಿತ್ಯ ರಕ್ಷಕನಾಗಿದ್ದು ಯಾವಾಗಲೂ ನನ್ನಲ್ಲಿ ನೆಲೆಸು. ನಿನ್ನ ಮುಂದೆ ನನ್ನನ್ನು ತಗ್ಗಿಸಿಕೊಳ್ಳುವಂತೆಯೂ, ನಿನ್ನ ದೃಷ್ಟಿಯಲ್ಲಿ ಸರಿಯಾಗುವ ದಾರಿಯಲ್ಲಿ ನಡೆಯುವಂತೆಯೂ ಸಹಾಯ ಮಾಡು. ಇಂದಿನಿಂದ, ನಾನು ಮನುಷ್ಯನನ್ನು ಸಂತೋಷಪಡಿಸದೆ, ನನ್ನ ಜೀವಿತದಲ್ಲಿ ನಿನ್ನನ್ನು ಮಾತ್ರ ಸಂತೋಷಪಡಿಸುವಂತೆ ನನಗೆ ಬಲವನ್ನು ಕೊಡು. ನಿನ್ನ ದಾರಿಯಲ್ಲಿ ನಡೆಸಿ ನನ್ನನ್ನು ಆಶೀರ್ವದಿಸು. ಕರ್ತನಾದ ಯೇಸುವಿನ ನಿರಂತರವಾದ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.
Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

For Daily Devotion Contact: +91 9964247889

Comments

Your email address will not be published. Required fields are marked *

WhatsApp us