ಕರ್ತನು ತನ್ನ ಸಮಾಧಾನವನ್ನು ನೆಲೆಗೊಳಿಸುತ್ತಾನೆ !

  Posted on   by   1 comment

kids-walk-school.jpg.653x0_q80_crop-smart

“ಯೆಹೋವನೇ, ನೀನು ನಮಗೆ ಸಮಾಧಾನವನ್ನು ವಿಧಿಸುವ ನಾವು ನಡಿಸಿದ್ದೆಲ್ಲವೂ ನೀನು ನಮಗೋಸ್ಕರ ನಡಿಸಿದ್ದೆ ಸರಿ” (ಯೆಶಾ. 26:12).

ನಮ್ಮ ಪ್ರಿಯ ಕರ್ತನಿಗೆ ಇನ್ನೊಂದು ಹೆಸರಿದೆ. ಅದು “ಸಮಾಧಾನದ ಪ್ರಭು” ಆತನು “ಸಮಾಧಾನದ ದೇವರು” (ಯೆಶಾ. 9:6, 1 ಥೆಸ. 5:23, ರೋಮ. 16:20). ದೇವರು ಕೊಡುವ ಸಮಾಧಾನ ಸಂಪೂರ್ಣವಾದದ್ದು. ದೈವೀಕವಾದದ್ದು ಮತ್ತು ಪ್ರಪಂಚ ಕೊಡುವಂಥದಲ್ಲ (ಯೋಹಾ. 14:27). ಹನ್ನಳು ಮಕ್ಕಳಿಲ್ಲದೆ ಹೃದಯ ಮುರಿದವಳಾಗಿದ್ದಳು. ಅವಳು ದು:ಖದ ಆತ್ಮವನ್ನು ಹೊಂದಿದ್ದ ಸ್ತ್ರೀ. ಆದ್ದರಿಂದ ಅವನು ದೇವರ ಸಾನಿಧ್ಯಕ್ಕೆ ಮನಸ್ಸಿನ ಕಹಿಯಿಂದ ಹೋಗಿ ದು:ಖದಿಂದ ಸಂಕಟಪಟ್ಟಳು (1 ಸಮು. 1:15). ದೇವರು ಅವಳ ಪ್ರಾರ್ಥನೆಯನ್ನು ಕೇಳಿ ಅವಳ ಎಲ್ಲಾ ದು:ಖ, ಕಹಿ ಮತ್ತು ವೇದನೆಯನ್ನು ಅಳಿಸಿಬಿಟ್ಟನು. ಅವಳು ಕರ್ತನ ದೃಷ್ಟಿಯಲ್ಲಿ ದಯೆಹೊಂದಿದಾಗ ಅವಳ ಮುಖ ಇನ್ನೆಂದಿಗೂ ವ್ಯಸನವಾಗಿರಲಿಲ್ಲ (1 ಸಮು. 1:18). ಮುಂದೆ ಅವಳಿಗೆ ಕಹಿ ಉಂಟುಮಾಡಿದ ವಿಷಯವು ಬದಲಾಗಿ ಅವಳಿಗೆ ಹೆಚ್ಚು ಸಂತೋಷ, ತೃಪ್ತಿ ಕೊಟ್ಟಿತು. ಅದೇ ಕರ್ತನು ನಿನಗೆ ಸಹಾಯ ಮಾಡಲು ಆಶೀರ್ವದಿಸಲು ತಯಾರಾಗಿದ್ದಾನೆ ಎನ್ನುವದನ್ನು ಜ್ಞಾಪಕದಲ್ಲಿಡಿ.

ಒಂದು ಸಲ ಒಂದು ಕುಟುಂಬದವರು ಕರ್ತನನ್ನು ಅವರು ಹುಡುಕಬೇಕಾದ ರೀತಿಯಲ್ಲಿ ಹುಡುಕದೆ ಕೇವಲ ಹೆಸರಿಗೆ ಮಾತ್ರ ಅಪೇಕ್ಷಿಸಿತ್ತು. ಎಲ್ಲಾ ಕಡೆ ವಿಷಯಗಳು ಮೃದುವಾಗಿ ನಡೆಯುತ್ತಿದ್ದಾಗ ಅವರಿಗೆ ಇಷ್ಟ ಬಂದಂತೆ ಅವರು ಜೀವಿಸಿದ್ದರು. ಆದರೆ ದಿಢೀರನೆ, ವಿಷಯಗಳು ತಲೆಕೆಳಗಾಗುವಂತೆ ಆಗಿ ಕುಟುಂಬವು ಎಲ್ಲಾ ಕಡೆಯಿಂದ ತೊಂದರೆ ಎದುರಿಸಬೇಕಾಯಿತು. ಭಯ ಮತ್ತು ಚಿಂತೆ ಅವರನ್ನು ಹಿಡಿಯಿತು. ಈಗ ಅವರು ಹೃದಯ ಪೂರ್ತಿಯಾಗಿ ದೇವರನ್ನು ಹುಡುಕಲು ಬಲವಂತವಾಯಿತು. ಅವರ ಹೃದಯದಲ್ಲಿ ಒಂದು ದೊಡ್ಡ ಭಯ ಬಂದಿತು. ಅವರ ಗಲಿಬಿಲಿ ಮತ್ತು ನಿರಾಶೆಯ ಹೃದಯ ಕರ್ತನಿಂದ ಪೂರ್ಣ ಸಮಾಧಾನಕ್ಕೆ ಹಾತೊರೆಯಿತು. ದೇವರ ಸೇವಕರು ಮನೆಗೆ ಭೇಟಿಗಾಗಿ ಬರುವುದನ್ನು ಮೊದಲು ದ್ವೇಷಿಸುತ್ತಿದ್ದ ಅವರು ಈಗ ಅವರನ್ನು ಹುಡುಕಿ ಹೊರಟರು. ಅವರು ದೇವಾಲಯ ಮತ್ತು ಇತರೆ ಪ್ರಾರ್ಥನಾ ಕೂಟಗಳಿಗೆ ಹೋಗುತ್ತಿದ್ದರು ಮತ್ತು ಅವರ ಪ್ರಾರ್ಥನೆಗಳನ್ನು ವಿಜ್ಞಾಪನೆಗಳನ್ನು ಕಣ್ಣೀರಿನಿಂದ ಆತನ ಪಾದದ ಬಳಿಯಿಡುತ್ತಿದ್ದರು. ಅವರ ಹೃದಯದಲ್ಲಿನ ಈ ರೂಪಾಂತರವನ್ನು ನೋಡಿದ ದೇವರು ಅವರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಾಗಿ ಅವರನ್ನು ಅನೇಕ ರೀತಿಯಲ್ಲಿ ಆಶೀರ್ವದಿಸಿ ಎಲ್ಲಾ ತುಂಬಿದನು. ಆಗಲೇ ಈ ಕುಟುಂಬ ಕರ್ತನನ್ನು ಪೂರ್ಣ ಹೃದಯದಿಂದ ಹುಡುಕುವ ಮಹತ್ತು ಮತ್ತು ವೈಭವವನ್ನು ನಿಜಕ್ಕೂ ಅರ್ಥಮಾಡಿಕೊಂಡಿದ್ದು.

ಪ್ರಿಯರೇ! ನಿಮ್ಮಜೀವನದ ಬಗ್ಗೆ ನೀವೇ ನಿಮ್ಮ ಆತ್ಮಾವಲೋಕನ ಮಾಡಿಕೊಳ್ಳಿ. ನಂಬಿಕೆಯಿಂದಲೂ, ತೊಂದರೆ ಮತ್ತು ಚಿಂತೆಗಳು ನಿಮ್ಮ ಬಾಗಿಲುಗಳನ್ನು ತಟ್ಟುವ ಮೊದಲೇ ಕರ್ತನನ್ನು ಶ್ರದ್ಧೆಯಿಂದಲೂ ನಂಬಿಕೆಯಿಂದಲೂ ಹುಡುಕಿರಿ ಆಗ ಕರ್ತನು ನಿಮನ್ನು ನಿಮ್ಮ ಕುಟುಂಬವನ್ನು ತನ್ನ ದೈವೀಕ ಪರಿಪೂರ್ಣ ಸಮಾಧಾನದಿಂದ ಆಶೀರ್ವದಿಸುತ್ತಾನೆ (ಫಿಲಿ. 4:6-7).

ಪ್ರಾರ್ಥನೆ :- ಪ್ರಿಯ ಕರ್ತನೇ, ಇಂದಿನಿಂದ, ನನ್ನ ಭಾರ ಮತ್ತು ಚಿಂತೆಗಳನ್ನು ಅಳಿಸುವಂತಹ ದಾರಿಯಲ್ಲಿ ನನ್ನನ್ನು ನಡೆಸಿ, ನಿನ್ನ ಸಂಪೂರ್ಣ ಸಮಾಧಾನದಿಂದ ನನ್ನನ್ನು ತುಂಬಿಸು. ನಾನು ಹುಡುಕಬೇಕಾದ ರೀತಿಯಲ್ಲಿ ಹುಡುಕದೇ ಇದ್ದದರಿಂದ ನನ್ನನ್ನು ಕ್ಷಮಿಸು, ಯಾವಾಗಲೂ ನಿನ್ನಲ್ಲಿ ನೆಲೆಗೊಳ್ಳುವಂತೆ ಕಲಿಸು. ನನ್ನನ್ನು ನಡೆಸಿ ಹೇರಳವಾಗಿ ಆಶೀರ್ವದಿಸು, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

1 comment

  1. Juliana dsouza says:

    Praise the Lord

Comments

Your email address will not be published. Required fields are marked *

WhatsApp us