ಕರ್ತನು ದೀನತೆಯುಳ್ಳವರನ್ನು ಮೇಲೆತ್ತುತ್ತಾನೆ!

  Posted on   by   No comments

slide_41

“ಹೀಗೆ ಆತನು ಆಕಾಶದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ, ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ, ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ, ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದ್ದರಿಂದ, ಸ್ವರ್ಗ, ಮತ್ರ್ಯ, ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸುಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು” (ಫಿಲಿ. 2:8-11).

ಯೇಸುಕ್ರಿಸ್ತನು ತ್ರೈಯೇಕರಲ್ಲಿ ಒಬ್ಬನು. ಆತನು ಸರ್ವಶಕ್ತ ದೇವರ ಪ್ರತಿರೂಪ ಅಂತಹ ದೈವೀಕ ದೇವರು ತನ್ನನ್ನು ಬರಿದುಮಾಡಿ ಕೊಂಡು, ಮನುಷ್ಯ ರೂಪ ತಾಳಿ, ನನ್ನನ್ನು ನಿನ್ನನ್ನು ರಕ್ಷಿಸಲು ಶಿಲುಬೆಯ ಮೇಲೆ ಸತ್ತನು. ಆದ್ದರಿಂದ, ದೇವರು ಎಲ್ಲಾ ಸೃಷ್ಠಿಗಿಂತ ಆತನನ್ನು ಮೇಲೆತ್ತಿ ಎಲ್ಲಾ ನಾಮಕ್ಕಿಂತಲೂ ಉನ್ನತವಾದ ನಾಮವನ್ನು ಕೊಟ್ಟನು. ಮತ್ತು ಈ ದಿನ, ದೇವರು ನಮ್ಮನ್ನು ಸಹ ಮೇಲೆತ್ತಲು ಇಷ್ಟಪಡುತ್ತಾನೆ. ಆದ್ದರಿಂದ ನಿನ್ನನ್ನು ಕರ್ತನ ದೃಷ್ಟಿಯಲ್ಲಿ ತಗ್ಗಿಸಿಕೋ (ಯೋಬ. 4:10). ನಿನ್ನ ಜೀವನದಲ್ಲಿ, ನಿಜಕ್ಕೂ ಆತನು ನಿನ್ನನ್ನು ಮೇಲೆತ್ತುತ್ತಾನೆ (ಯಾಕೋ. 4:6, 1 ಪೇತ್ರ. 5:5, ಜ್ಞಾನೋ. 3:34).

ಒಬ್ಬ ಯೌವನಸ್ಥನು, ಒಂದು ಕಛೇರಿಯಲ್ಲಿ ಹೊಸ ನೌಕರನಾಗಿ ಸೇರಿಕೊಂಡ. ಅವನು ಹಗಲು ರಾತ್ರಿ ಕಷ್ಟಪಟ್ಟು ದುಡಿದನು. ಕಾರಣ, ಸಕಾಲದಲ್ಲಿ ಬಡ್ತಿಯನ್ನು ಪಡೆದುಕೊಂಡು, ತನ್ನ ಹೆತ್ತವರನ್ನು ಸಂತೋಷಪಡಿಸ ಬೇಕೆಂದುಕೊಂಡನು. ಅವನು ಕೇವಲ ಕಷ್ಟಪಟ್ಟಿದ್ದು ಮಾತ್ರವಲ್ಲದೇ, ದೇವರನ್ನು ಶ್ರದ್ಧೆಯಿಂದ ಎಲ್ಲಾ ಸಮಯದಲ್ಲಿ ಅಪೇಕ್ಷಿಸಿದನು. ಇದರಿಂದಾಗಿ, ಅವನಿಗೆ ಅವನ ಕೆಲಸದಲ್ಲಿ ಬಡ್ತಿ ದೊರೆಯಿತು. ಅವನ ಮೇಲಾಧಿಕಾರಿ ಕಛೇರಿಯಲ್ಲಿ ಇವನ ಉನ್ನತಿಯನ್ನು ನೋಡಿ ಬಹಳ ಹೊಟ್ಟೆಕಿಚ್ಚು ಆಯಿತು. ಆದ್ದರಿಂದ ಒಂದು ದಿನ, ಅವನನ್ನು ಕರೆದು ಅವನಿಗೆ ಹೇಳಿದನು “ನೀನು ನಿನ್ನ ಜೀವನದಲ್ಲಿ ಮೆಲೇರಿ ಹೋಗಬಹುದು ತಿಳಿದುಕೊಂಡಿದ್ದೀಯಾ? ಇಲ್ಲ, ನಾನು ಅದು ಆಗಲು ಬಿಡುವುದಿಲ್ಲ”. ಅವನು ಹೀಗೆ ದಿನೇ ದಿನೇ ಹೇಳುತ್ತಲೇ ಇದ್ದನು. ಈ ಮಾತುಗಳು ಈ ಯೌವನಸ್ಥನನ್ನು ಬಹಳವಾಗಿ ಘಾಯಗೊಳಿಸಿತು. ಆದ್ದರಿಂದ, ಅವನು ಮತ್ತು ಅವನ ನವ ವಿವಾಹಿತ ಪತ್ನಿ ಜೊತೆಯಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಾರ್ಥಿಸಲು ಮುಂದುವರಿಸಿದರು. ನಿಮಗೆ ಗೊತ್ತಾ ಏನಾಯಿತೆಂದು? ಹಿರಿಯ ಅಧಿಕಾರಿಗಳಿಗೆ, ಕೆಲಸದಲ್ಲಿ ಕೆಲವು ಅವ್ಯವಸ್ಥಿತಗಳನ್ನು ಮೇಲ್ವಿಚಾರಕರಲ್ಲಿ ಕಂಡು ಬಂದು ಅವನ ಕೆಲಸದಿಂದ ವಜಾ ಮಾಡಿದರು. ಆದರೆ, ಈ ಯೌವನಸ್ಥನು ದೇವರ ಕೃಪೆಯಿಂದ ತನ್ನ ಕೆಲಸದ ಜಾಗದಲ್ಲಿ ಮೇಲಿಂದ ಮೇಲೆ ಏರುತ್ತಲೇ ಇದ್ದನು. ಇದರಿಂದ ಅವನ ಕುಟುಂಬದ ಸದಸ್ಯರು ಬಹಳ ಸಂತೋಷಪಟ್ಟರು. ಎಲ್ಲರೂ ವಂದನೆ ಮತ್ತು ಸ್ತೋತ್ರವನ್ನು ಸಲ್ಲಿಸಲು ಒಟ್ಟುಗೂಡಿದರು. ಪ್ರಿಯರೇ, ಕರ್ತನಲ್ಲಿ ದೀನತೆಯ ಮನಸ್ಸು ನಿಮ್ಮಲ್ಲೂ ಇರಲಿ (ಫಿಲಿ. 2:5). ಮೇಲಿನ ಪ್ರಸಂಗದಲ್ಲಿ ಆ ಯೌವನಸ್ಥನಿಗೆ ಸಹಾಯ ಮಾಡಿದಂತೆ ದೇವರು ನಿನ್ನ ಜೀವನದಲ್ಲಿ ಅಭಿವೃದ್ಧಿ ಹೊಂದುವಂತೆ ಸಹಾಯ ಮಾಡುತ್ತಾನೆ.

ಪ್ರಾರ್ಥನೆ : ಪ್ರಿಯ ಕರ್ತನೇ, ನಿನ್ನ ಮನಸ್ಸಿನ ದೀನತೆಯನ್ನು ನನ್ನ ಜೀವನದಲ್ಲೂ ಕೊಡು. ಆಗ ನನಗೂ ಸಹ ತಾಳ್ಮೆ ಮತ್ತು ಉತ್ಸಾಹ ಕರ್ತನಿಗಾಗಿ ಹೊಂದಿರುತ್ತೇನೆ, ಇಂದು, ನನಗೆ ಈ ಕೃಪೆಕೊಡು ನನ್ನ ಕೈ ಹಿಡಿದು ನಡೆಸು. ನನ್ನ ಜೀವನದಲ್ಲಿ ಹಾಗೆ ಮಾಡುವುದಕ್ಕಾಗಿ ವಂದನೆ. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us