ಕರ್ತನು ದೊಡ್ಡ ಬಂಡೆಯ ನೆರಳಿನಂತೆ!

  Posted on   by   1 comment

15743104277_61cc196311_b

“ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ, ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು” (ಯೆಶಾ. 32:2).

ಮನುಷ್ಯನಿಗೆ ನೆರಳು ಅತಿ ಮುಖ್ಯ. ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಡೆದ ಮೇಲೆ, ಒಬ್ಬ ಮನುಷ್ಯನಿಗೆ ನೆರಳು ವಿಶ್ರಮಿಸಲು ಸಹಾಯಮಾಡುತ್ತದೆ. ಅದೇ ರೀತಿ ಜೀವನದಲ್ಲೂ ಸಹ, ಕಷ್ಟಗಳ ಮಧ್ಯ ಹಾದು ಹೋಗುವಾಗ ನಾವು ವಿಶ್ರಮಿಸಿಕೊಳ್ಳಬೇಕು. ಆದ್ದರಿಂದ, ಕರ್ತನು ಯಾವಾಗಲೂ ಆತನ ಕಣ್ಣುಗಳನ್ನು ನಮ್ಮ ಮೇಲೆ ಇಟ್ಟಿರುತ್ತಾನೆ (2 ಪೂರ್ವ. 16:9, ಕೀರ್ತ. 11:4, 34:15, 1 ಪೇತ್ರ. 3:12). ಯಾಕಂದರೆ, ನಿನಗಾಗಿ ಆತನು ದೊಡ್ಡ ಬಂಡೆಯ ನೆರಳಾಗಿದ್ದಾನೆ. ನೀನು ಆತನ ಆಶೀರ್ವಾದಗಳನ್ನು ಪಡೆದು ಜೀವನದಲ್ಲಿ ವಿಶ್ರಮಿಸುವೆ. ಮರಿಯಳ ಸಹೋದರಿ ಮಾರ್ಥ, ತನ್ನ ಕೆಲಸದ ಒತ್ತಡದ ಅನುಭವ ಪಡೆದಾಗ, ಕರ್ತನು ಅವಳಿಗೆ ಭರವಸೆ ಕೊಡುತ್ತಾ ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವು ಮಾತ್ರ ಬೇಕಾದದ್ದು ಅಥವಾ ಒಂದೇ, ಮರಿಯಳು ಆ ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಎಂದು ಉತ್ತರ ಕೊಟ್ಟನು (ಲೂಕ. 10:40-42). ಅದೇ ರೀತಿ ಈ ದಿನವೂ ಆತನು ನಿನ್ನೊಂದಿಗೆ ಮಾತನಾಡುತ್ತಾನೆ.

ಅಲ್ಲಿ ಒಂದು ಹುಡುಗಿಯರ ಗುಂಪು ಇತ್ತು. ಅವರು ಕಾಲೇಜಿನಲ್ಲಿ ಓದುತ್ತಿದ್ದ ನಿಕಟವಾದ ಸ್ನೇಹಿತರಾಗಿದ್ದರು. ಅವರೆಲ್ಲಾ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಅವರಲ್ಲಿ ಒಬ್ಬಳನ್ನು ಮಾತ್ರ ಬಿಟ್ಟು, ಎಲ್ಲರಿಗೂ ನೌಕರಿ ದೊರೆಯಿತು. ಅವಳು ಚಿಂತಾಕ್ರಾಂತಳಾಗಿದ್ದಳು. ಆದರೆ, ಅವಳು ಚಿಂತೆಯಿಂದ ಚೇತರಿಸಿಕೊಂಡು ತನಗೆ ತಾನೇ ಹೇಳಿಕೊಂಡಳು, “ನನ್ನ ಕರ್ತನಾದ ಯೇಸು ನನ್ನ ಭಾರಗಳನ್ನು ಬಾಧೆಗಳನ್ನು ಹಂಚಿಕೊಳ್ಳಲು ಇರುವಾಗ ನಾನೇ ಯಾಕೆ ನನ್ನ ಎಲ್ಲಾ ಭಾರ ಹೊರಬೇಕು? ಅವಳು ಮೊಣಕಾಲೂರಿ ತನ್ನ ಪ್ರಾರ್ಥನೆಯ ಮೂಲಕ ತನ್ನ ಎಲ್ಲಾ ಭಾರಗಳನ್ನು ಹೇಳಿಕೆಗಳನ್ನು ಸ್ತೋತ್ರದೊಂದಿಗೆ ದೇವರ ಹತ್ತಿರ ಸುರಿದಳು (ಫಿಲಿ. 4:6-7). ಒಂದು ದೈವೀಕ ಸಮಾಧಾನ ಅವಳ ಹೃದಯವನ್ನು ತುಂಬಿತು. ಸ್ವಲ್ಪ ಸಮಯದ ನಂತರ, ಅವಳು ಒಂದು ಹೆಸರಾದ ಕಂಪನಿಯಲ್ಲಿ ಒಬ್ಬ ಅಧಿಕಾರಿಯಾಗಿ ನೇಮಕಗೊಂಡಳು. ಅವಳು ನಿರೀಕ್ಷೆ ಮಾಡಿದ್ದಕ್ಕಿಂತ ಈ ಹುದ್ದೆ ಉತ್ತಮವಾಗಿತ್ತು ಮತ್ತು ಅವಳ ಸಂಬಳ ಕೂಡ. ಅವಳ ಸ್ನೇಹಿತೆಯರು ಪಡೆಯುತ್ತಿದದ್ದಕ್ಕಿಂತ ಹೆಚ್ಚಾಗಿತ್ತು. ಹೌದು! ಭಾರದಿಂದಲೂ ಕಣ್ಣೀರಿನಿಂದಲೂ ತಾಳ್ಮೆಯಿಂದ ಕಾದಿರುವವರಿಗೆ ಕರ್ತನು ಬಂಡೆಯ ನೆರಳಾಗಿ ಹೇರಳವಾಗಿ ಆಶೀರ್ವದಿಸುತ್ತಾನೆ. ಕೆಲವು ಸಲ, ನಾವೂ ಸಹ ದೇವರ ಆಶೀರ್ವಾದ ಪಡೆಯಲು ಕಾಯಬೇಕು. ಭಾರ ಮತ್ತು ಬಾಧೆಗಳು ತಡೆಯನ್ನು ಉಂಟುಮಾಡಬಹುದು. ಆದರೆ, ನಾವು ದೇವರನ್ನೇ ಹಿಡಿದುಕೊಂಡಿದ್ದರೆ, ನಮ್ಮ ಹೃದಯದ ಆಶೆಗಳು ಜೀವವೃಕ್ಷಗಳಂತೆ ನೆರವೇರುತ್ತವೆ (ಜ್ಞಾನೋ. 13:12).

ಪ್ರಿಯ ಸ್ನೇಹಿತರೇ, ನೀವು ಅನೇಕ ತೊಂದರೆಗಳಿಂದ, ಭಾರಗಳಿಂದ ಯಾತನೆಯಿಂದಲೂ ಭಾದೆಯಿಂದಲೂ ಇದ್ದೀರಾ? ಇಂದೇ ನಿಮ್ಮ ಎಲ್ಲಾ ಭಾರಗಳನ್ನು ಕರ್ತನ ಬಳಿ ಇಡಿರಿ (ಕೀರ್ತ. 55:22).

ಪ್ರಾರ್ಥನೆ :- ಪ್ರಿಯ ಕರ್ತನೇ, ನೀನೊಬ್ಬನೇ ನನ್ನ ಬಿಡುಗಡೆ, ನನ್ನ ನೋವು ಭಾದೆಯಲ್ಲಿ ನೀನೇ ಬಂಡೆಯ ನೆರಳು ಮತ್ತು ನನ್ನ ಎಲ್ಲಾ ಬಾಧೆಯಿಂದ ಬಿಡಿಸಿ ನನ್ನನ್ನು ಸಮಾಧಾನಪಡಿಸು. ಈಗಲೇ, ನಾನು ಈ ಪ್ರಾರ್ಥನೆಯನ್ನು ನಂಬಿಕೆಯಿಂದಲೂ, ಮತ್ತು ನನ್ನ ಮೇಲೆ ನೀನು ಸುರಿಸುವ ಎಲ್ಲಾ ಒಳ್ಳೆಯದಕ್ಕಾಗಿ ಸ್ತೋತ್ರ ಸಲ್ಲಿಸುತ್ತೇನೆ. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

MANNA MINISTRIES

Mannaministries.in@gmail.com

*For Daily Devotion Contact: +91 9964247889*

1 comment

  1. says:

    Thank you Jesus
    Amen

Comments

Your email address will not be published. Required fields are marked *