ಕರ್ತನು ನಂಬಿಕೆಯನ್ನು ತಾಳ್ಮೆಯನ್ನು ಕೊಡುತ್ತಾನೆ!

  Posted on   by   1 comment

Heb12

“ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು; ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ” (ಇಬ್ರಿ. 12:1-2).

ಸತ್ಯವೇದ ವಚನ ಬಹಳ ಸುಂದರವಾಗಿದೆ. ಭಾರಗಳು ಮತ್ತು ತೊಂದರೆಗಳು ನಮ್ಮ ಜೀವನವನ್ನು ಸುತ್ತುವರಿದಾಗ ಏನು ಮಾಡಬೇಕೆಂದು ಗೊತ್ತಾಗದೆ ಒದ್ದಾಡುತ್ತೇವೆ. ಅದೇ ರೀತಿ, ನಾವು ಪಾಪದಿಂದ ಬೀಳುವಾಗ, ನಾವು ನೋವು ಮತ್ತು ಯಾತನೆಯನ್ನು ಅನುಭವಿಸುತ್ತೇವೆ. ಆದರೆ, ಈ ವಚನದ ಆಧಾರದ ಮೇಲೆ, ನಾವು ಪ್ರಪಂಚದ ಎಲ್ಲಾ ವಿಚಾರಗಳನ್ನು ಬಿಟ್ಟು ಕರ್ತನಾದ ಯೇಸುವನ್ನು ನೋಡಿದರೆ, ಆತನು ನಮಗೆ ನಂಬಿಕೆಯನ್ನು ಸಮಾಧಾನವನ್ನು ಕೊಟ್ಟು ನಮ್ಮನ್ನು ರಕ್ಷಿಸುತ್ತಾನೆ (ರೋಮ. 5:2). ದೇವರ ನಂಬಿಕೆಯಿಂದ, ನಾವು ಹೊಸ ನಿರೀಕ್ಷೆಯನ್ನು ಹೊಸ ಧೈರ್ಯವನ್ನು ಪಡೆಯಬಹುದು. ನಾವು ಮಾನಸಿಕವಾಗಿ ಬಲವಾಗಿಯೂ ಧೈರ್ಯವಾಗಿಯೂ ಆಗುತ್ತೇವೆ (2 ಪೇತ್ರ. 1:5).

ಬ್ಬ ಯೌವನಸ್ಥ ಮನುಷ್ಯನು ಆತನ ಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ ಮೇಲೆ ಉನ್ನತ ವ್ಯಾಸಂಗಕ್ಕಾಗಿ ವಸತಿ ಗೃಹದಲ್ಲಿ ಇರಬೇಕಾಯಿತು. ಇದೇ ಮೊದಲ ಬಾರಿಗೆ, ಅವನು ತನ್ನ ತಾಯಿಯನ್ನು ಬಿಟ್ಟು ವಸತಿ ಗೃಹದಲ್ಲಿ ಇರಬೇಕಾಯಿತು. ಆದ್ದರಿಂದ, ಅವನ ತಾಯಿ ಸ್ವಲ್ಪ ಚಿಂತಿತಳಾಗಿದ್ದಳು, ಆಕೆ ಅವನಿಗೆ ಹೇಳಿದಳು, “ನನ್ನ ಪ್ರಿಯ ಮಗನೇ! ನೀನು ದಿನವೂ ದೇವರ ಹತ್ತಿರ ಮಾತನಾಡು ಮತ್ತು ಪ್ರಾರ್ಥಿಸು, ಆತನು ನಿಜಕ್ಕೂ ನಿನಗೆ ಸಹಾಯ ಮಾಡುತ್ತಾನೆ” ಎಂದು. ಮನೆ ಬಿಟ್ಟ ಮಗನು ಈ ಸಲಹೆಯನ್ನು ಯಥಾರ್ಥವಾಗಿ ಕೆಲ ಸಮಯದವರೆಗೂ ಪಾಲಿಸಿದನು. ನಂತರ, ಅವನು ಕೆಲ ದುಷ್ಟ ಸ್ನೇಹಿತರನ್ನು ಸೇರಿ ಕಾಲೇಜು ಜೀವನದ ಸ್ವಾತಂತ್ರ್ಯವನ್ನು ಅನುಭವಿಸುತ್ತ, ಕೆಲವು ದುಷ್ಟ ಮತ್ತು ಬೇಡದೇ ಇದ್ದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದನು. ದೇವರನ್ನು ಹಿಂಬಾಲಿಸುವದರಿಂದ ಬೇಡದೆ ಇರುವ ಶಿಸ್ತನ್ನು ಪಾಲಿಸಬೇಕೆಂಬ ಅನಿಸುವಿಕೆ ಬಂದು, ಅವನು ದೇವರ ದಾರಿಯನ್ನು ಬಿಟ್ಟು ತನ್ನ ದುಷ್ಟ ಸ್ನೇಹಿತರನ್ನು ಅನುಸರಿಸಲು ಆರಂಭಿಸಿದನು. ಆರಂಭದಲ್ಲಿ, ಇದು ಅತೀವ ಸಂತೋಷವನ್ನು ಕೊಟ್ಟಿತು. ಆದರೆ, ದಿನಕಳೆದಂತೆ ನಿಧಾನವಾಗಿ ಅವನು ತನ್ನ ಸಮಾಧಾನವನ್ನು ಕಳೆದುಕೊಳ್ಳಲು ಆರಂಭಿಸಿದನು. ಅವನ ಓದು ಕೂಡಾ ಬಾಧಿಸಲ್ಪಟ್ಟು, ಖಾಯಿಲೆಯು ಅವನ ದೇಹದಲ್ಲಿ ಆಶ್ರಯಪಡೆಯಲು ಆರಂಭಿಸಿತು. ಇಂಥಹ ಕಷ್ಟದ ಹಂತದಲ್ಲಿ, ಅವನಿಗೆ ತನ್ನ ತಾಯಿಯ ಮುಖ ಕಣ್ಣ ಮುಂದೆ ಬಂತು. ಎಲ್ಲಾ ಸಮಯದಲ್ಲಿ ದೇವರನ್ನು ನೋಡು ಎನ್ನುವ ತಾಯಿಯ ಸಲಹೆ ಈಗ, ಅವನಿಗೆ ಜ್ಞಾಪಕಕ್ಕೆ ಬಂದಿತು. ಅಂದಿನಿಂದ, ಅವನ ಜೀವನ ಬದಲಾಗುತ್ತದೋ ಏನೋ ಎಂಬ ಆಶ್ಚರ್ಯ ಕಾಡಿತು. ಅದೇ ದಿನ, ಅವನು ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿಕೊಂಡು ಅವನು ಕೂಗಿದನು, “ಕರ್ತನೇ! ನನ್ನ ಎಲ್ಲಾ ಪಾಪಗಳನ್ನು ಅತಿಕ್ರಮಣಗಳನ್ನು ದಯಮಾಡಿ ಕ್ಷಮಿಸು. ನಿನ್ನ ಅತಿಶಯವಾದ ಕೃಪೆಯಿಂದಲೂ ಕರುಣೆಯಿಂದಲೂ ನನಗೆ ಹೊಸ ಜೀವನವನ್ನು ಕೊಡು! ದೇವರಿಗೆ ಅವನ ಮೇಲೆ ಕರುಣೆ ಬಂದಿತು. ಅದೇ ರೀತಿ, ಆತನ ಎಲ್ಲಾ ತಪ್ಪುಗಳನ್ನು ಕ್ಷಮಿಸಿ ಅವನನ್ನು ಹೊಸ ಮನುಷ್ಯನನ್ನಾಗಿ ಮಾಡಿದನು. ಎಲ್ಲಾ ಕಡೆಯಿಂದಲೂ ಅವನು ಆಶೀರ್ವಾದ ಪಡೆದನು. ಅವನ ತಾಯಿಯೂ ಕೂಡ ಬಹಳ ಸಂತೋಷಪಟ್ಟಳು.

ಪ್ರಿಯರೇ, ನಾವು ಕಣ್ಣೆತ್ತಿ ಪವರ್ತಗಳ ಕಡೆಗೆ ನೋಡೋಣ, ನನ್ನ ಸಹಾಯ ಎಲ್ಲಿಂದ ಬರುತ್ತದೆ”. ನಾವು ದೇವರಿಗೆ ಭಯಪಟ್ಟು ಜೀವನ ನಡೆಸಿದರೆ, ಆತನು ನಮಗೆ ನಂಬಿಕೆ ಮತ್ತು ತಾಳ್ಮೆಯನ್ನು ಆತನನ್ನು ನೋಡಲು ಕೊಡುತ್ತಾನೆ. ಆತನು ನಿಜಕ್ಕೂ ಆಶೀರ್ವದಿಸಿ ನಮ್ಮನ್ನು ನಡೆಸುತ್ತಾನೆ (ಕೀರ್ತ. 121:1-2).
ಪ್ರಾರ್ಥನೆ: ಪ್ರಿಯ ಕರ್ತನೇ, ಇಂದಿನಿಂದ, ನಿನ್ನನ್ನು ಎಲ್ಲಾ ಸಮಯದಲ್ಲಿ ನೋಡುವ ಕೃಪೆಕೊಡು. ಇದರ ಮೂಲಕವಾಗಿ ನನಗೆ ನಂಬಿಕೆಯನ್ನು ತಾಳ್ಮೆಯನ್ನು ಕೊಟ್ಟು, ಈ ಲೋಕದ ಜೀವನದ ಓಟವನ್ನು ಓಡುವಂತೆ ಮಾಡು. ನನ್ನನ್ನು ಹೇರಳವಾಗಿ ಆಶೀರ್ವದಿಸು. ಕರ್ತನಾದ ಯೇಸುವಿನ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.mannaministry.app

MANNA MINISTRIES
Mannaministries.in@gmail.com
For Daily Devotion Contact: +91 9964247889

1 comment

  1. Francis pinto says:

    Praise the Lord… Amen

Comments

Your email address will not be published. Required fields are marked *

WhatsApp us