ಕರ್ತನು ನಿನಗೆ ಎರಡರಷ್ಟು ಹಿಂತಿರುಗಿಸುತ್ತಾನೆ!

  Posted on   by   No comments

“ಸುನಿರೀಕ್ಷೆಯುಂಟಾದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ; ನಿಮಗೆ ಎರಡರಷ್ಟು (ಸುಖವನ್ನು) ದಯಪಾಲಿಸುವೆನು” (ಜೆಕ. 9:12).

“ಯಾವನು ಯೆಹೋವನಲ್ಲಿ ನಂಬಿಕೆಯಿಟ್ಟಿದ್ದಾನೋ ಯಾವನಿಗೆ ಯೆಹೋವನು ಭರವಸವಾಗಿದ್ದಾನೋ ಅವನು ಧನ್ಯನು” ಎಂದು ಸತ್ಯವೇದ ಯೆರೆ. 17:7ರಲ್ಲಿ ಹೇಳುತ್ತದೆ.

ಪ್ರಿಯರೇ, ಈ ಪ್ರಪಂಚದಲ್ಲಿ, ನಮಗೆ ಅವಶ್ಯಕತೆಯಿರುವಾಗ ನಾವು ಯಾವಾಗಲೂ ಜನರ ಸಹಾಯವನ್ನು ಅಪೇಕ್ಷೆಪಡುತ್ತೇವೆ. ಆದರೆ, ಅನೇಕ ವೇಳೆ ಅವರು ನಮ್ಮನ್ನು ಕೈಬಿಡುತ್ತಾರೆ. ನಾವು ಕಾಯಿಲೆಯಾಗಿರುವಾಗ ನಾವು ವೈದ್ಯರ ಮೇಲೆ ಆತುಕೊಳ್ಳುತ್ತೇವೆ. ಆದರೆ, ಪರಿಸ್ಥಿತಿ ಗಂಭೀರವಾದಾಗ, ಅವರು ತಮ್ಮ ಕೈಯಲ್ಲಿ ಏನೂ ಆಗುವುದಿಲ್ಲ ಎಂದು ಹೇಳಿಬಿಡುತ್ತಾರೆ. ಹಣ ಕೊಡುವವರು, ಅವರು ಮೊನಚಾಗಿ ಇನ್ನೊಂದು ಸಲ ಬಂದು ತೊಂದರೆ ಕೊಡಬೇಡ ಎನ್ನುವರು. ನಾವು ನೌಕರಿ ಹುಡುಕಿ ಹೊರಟಾಗ, ಅವರು ನಮ್ಮನ್ನು ಎಸೆದಂತೆ ಮಾಡಿ ಹೇಳುತ್ತಾರೆ. “ಕೆಲಸ ಖಾಲಿ ಇಲ್ಲ. ಕಾರಣವಿಲ್ಲದೆ ಬಂದು ತೊಂದರೆ ಕೊಡಬೇಡಿ” ಎಂದು ಈ ರೀತಿಯಾಗಿ ನಾವು ಯಾವ ನಿರೀಕ್ಷೆ ಇಲ್ಲದೆ ಬದುಕುತ್ತಿಲ್ಲವಾ? ದಾವೀದನು ಅಳುತ್ತಾ ಹೇಳಿದಂತೆ “ನನ್ನ ಕಣ್ಣೀರನ್ನು ನಿನ್ನ ಬುದ್ಧಲಿ ಹಿಡಿದಿದ್ದೀಯ, ಅದು ನಿನ್ನ ಪುಸ್ತಕದಲ್ಲಿ ಇಲ್ಲವಾ? (ಕೀರ್ತ. 56:8). ದೇವರು ನಿಮಗೆ ಸಹಾಯಮಾಡಲು ಕಾದಿದ್ದಾನೆ” ನನ್ನ ಮಗನೇ! ನನ್ನ ಮಗಳೇ! ಎಲೈ ಭಾರ ಹೊತ್ತವರೇ, ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು (ಮತ್ತಾ. 11:28). ಎಂದು ನಮ್ಮ ಕರ್ತನಾದ ಯೇಸುಕ್ರಿಸ್ತನು ಹೇಳುತ್ತಾನೆ. ನಮ್ಮ ಕಣ್ಣೀರನ್ನೆಲ್ಲಾ ಒರೆಸಿ ನಮಗೆ ಧೈರ್ಯವನ್ನು ಆಶೀರ್ವಾದವನ್ನು ಕೊಡುತ್ತಾನೆ (ಯೆಶಾ. 25:28).

ಒಂದು ಕುಟುಂಬದಲ್ಲಿ ಮದುವೆಯಾಗದಂಥಹ ಒಬ್ಬ ಬೆಳೆದ ಹುಡುಗಿ ಇದ್ದಳು. ಬೇರೆಯವರು ಅವಳ ಬಗ್ಗೆ ಕೆಟ್ಟದ್ದು ಮಾತನಾಡಲು ಆರಂಭಿಸಿದ್ದರು. ಆದ್ದರಿಂದ, ಕುಟುಂಬದವರೆಲ್ಲಾ ತಲೆಕೆಲಗಾದವರಂತೆ ಮನಗುಂದಿದ್ದರು. ಆಗ ತಾಯಿ ಮತ್ತು ಮಗಳು ಒಟ್ಟಾಗಿ ಉಪವಾಸದಿಂದ ಬೇಗ ವಿವಾಹ ನಡೆಯುವಂತೆ ಪ್ರಾರ್ಥನೆ ಮಾಡಿದರು ಓಹೋ! ಎಂಥಹ ಅದ್ಭುತ! ಈ ಹುಡುಗಿಯರು ಒಳ್ಳೇ ಗುಣಗಳನ್ನು ಅದರಲ್ಲೂ ದೇವರಲ್ಲಿದ್ದ ಆಕೆಯ ನಂಬಿಕೆಯನ್ನು ಕಂಡು ಒಬ್ಬ ಏಳಿಗೆ ಹೊಂದುತ್ತಿದ ವರ ಇವಳನ್ನು ಮದುವೆಯಾಗಲು ಮುಂದೆ ಬಂದನು. ಆತನು ಸ್ಪುರದ್ರೂಪಿಯೂ, ಪ್ರೀತಿ ಇದ್ದು ಉತ್ತಮವಾದ ಸ್ಥಾನದಲ್ಲಿದ್ದವನಾಗಿದ್ದನು. ಈ ಹುಡುಗಿಯನ್ನು ನೋಡಿ ನಗುತ್ತಿದ್ದ, ಇತರರ ಮುಂದೆ ಇವನನ್ನು ವಿವಾಹವಾಗಿ ಜೀವನದಲ್ಲಿ ನೆಲೆಯಾದಳು ಹೌದು! ದೇವರು ಅವಳಿಗೆ ಜೀವನದ ಎಲ್ಲಾ ಒಳ್ಳೇ ವಿಷಯಗಳನ್ನು ಕೊಟ್ಟು ಹೇರಳವಾಗಿ ಆಶೀರ್ವದಿಸಿದನು.

ಪ್ರಿಯ ಸ್ನೇಹಿತರೇ,  ದೇವರಲ್ಲಿ, ನಿಮಗೂ ಇಂಥಹ ನಂಬಿಕೆ ಇಲ್ಲವಾ? ಇಂಥಹ ಆಶ್ಚಯಗಳನ್ನು, ಅದ್ಬುತಗಳನ್ನು ನಿಮ್ಮ ಜೀವನದಲ್ಲಿ ಪಡೆಯಲು, ನಿಮ್ಮ ಎಲ್ಲಾ ಭಾರಗಳನ್ನು ಪಕ್ಕಕ್ಕೆ ಇಟ್ಟು ಎಲ್ಲಾ ಸಮಯದಲ್ಲಿ ಸಹಾಯಮಾಡುವ ದೇವರನ್ನು ನೋಡು (2 ಸಮು. 22:23).

ಪ್ರಾರ್ಥನೆ :- ಪ್ರಿಯ ಕರ್ತನೇ, ನಾನು ಈ ಪ್ರಪಂಚದಲ್ಲಿ ಪರಿತಾಪಕರವಾದ ಸ್ಥಿತಿಯಲ್ಲಿದ್ದೇನೆ. ನನಗೆ ಗೊತ್ತು ನೀನು ಎಲ್ಲಕ್ಕಿಂತ ಸಾಕು, ನನ್ನ ಎಲ್ಲಾ ಭಾರವನ್ನು ನಿನ್ನ ಮುಂದೆ ಇಡುತ್ತೇನೆ. ಇಂದಿನಿಂದ ನೀನೇ ನನ್ನ ಬಂಡೆ, ಕೋಟೆಯಾಗಿದ್ದು ನನ್ನ ಜೀವನವನ್ನು ಆಶೀರ್ವಾದ ದಾಯಕವಾಗುವಂತೆ ಆಶೀರ್ವದಿಸು. ನೀನು ಹಾಗೆ ಮಾಡುವದಕ್ಕಾಗಿ ವಂದನೆ. ಯೇಸುವಿನ ನಾಮದಲ್ಲಿ ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

 

Comments

Your email address will not be published. Required fields are marked *

× WhatsApp us