ಕರ್ತನು ನಿನ್ನನ್ನು ಎಲ್ಲಾ ರೋಗಗಳಿಂದ ವಾಸಿಮಾಡುವನು!

  Posted on   by   No comments

have-pity-jesus_610x300

“ನಿಮ್ಮಲ್ಲಿ ಯಾವ ವ್ಯಾಧಿಯೂ ಉಂಟಾಗದಂತೆ ಯೆಹೋವನು ಮಾಡುವನು ಯಾವ ಕ್ರೂರವ್ಯಾಧಿಗಳು ನಿಮಗೆ ಬರುವದಿಲ್ಲ” (ಧರ್ಮೋ. 7:15).

ಇಂದಿನ ಆಧುನಿಕ ಪ್ರಪಂಚದಲ್ಲಿ ಅನೇಕ ಹೊಸ ರೋಗಗಳು ಪ್ರತಿದಿನ ಉದ್ಭವವಾಗುತ್ತಿರುತ್ತವೆ. ಇಂಥಹ ಪರಿಸ್ಥಿತಿಯಲ್ಲಿ ಮೇಲಿನ ವಾಗ್ದಾನ ವಚನವು ದೊಡ್ಡ ಸಮಾಧಾನ ಮತ್ತು ನಮಗೆ ಸಾಂತ್ವನ ನೀಡುತ್ತದೆ. ದೇವರ ವಾಗ್ದಾನ ಎಂದೂ ಬದಲಾಗದು. ದೇವರ ಎಲ್ಲಾ ವಾಗ್ಧಾನಗಳು ಆತನಲ್ಲಿ ಹೌದು ಮತ್ತು ಆತನಲ್ಲಿ ಹಾಗೆ ಆಗಲಿ ಎಂದು ಹೇಳುತ್ತೇವೆ (2 ಕೊರಿ. 1:20). ಮನುಷ್ಯನು ನಶ್ವರ ಆದ್ದರಿಂದ ಬದಲಾಗುತ್ತಾನೆ. ಆದರೆ ಸರ್ವಶಕ್ತನಾದ ದೇವರು ಆತನ ವಾಗ್ಧಾನಗಳಲ್ಲಿ ಎಂದಿಗೂ ಬದಲಾಗನು. ನೀವು ಈ ವಾಕ್ಯವನ್ನು ಬಾಯಿಪಾಠ ಮಾಡಿ ಸ್ವಂತವಾಗಿ ಪಡೆದರೆ ಮಾತ್ರ ಈ ವಾಗ್ಧಾನ ವಚನದಂತೆ ನೀವೂ ಸಹ ಸಂತೋಷದ ಜೀವನವನ್ನು ಮತ್ತು ಆರೋಗ್ಯದ ಜೀವನವನ್ನು ಜೀವಿಸಬಹುದು. ನೀವು ಹಾಸಿಗೆಯಲ್ಲಿ ಕಾಯಿಲೆಯಲ್ಲಿದ್ದಾಗ ಆತನಿಗೆ ಹೇಳಿರಿ “ಪ್ರಿಯ ಕರ್ತನೇ! ಈ ಮಹತ್ತಾದ, ಅಮೂಲ್ಯ ವಾಗ್ಧಾನಕ್ಕೆ ನಿನಗೆ ಸ್ತೋತ್ರ” ಹೌದು! ಕರ್ತನೇ! ನನಗೆ ನೀನೇ ನನ್ನನ್ನು ಸ್ವಸ್ಥಪಡಿಸುತ್ತೀ ಎಂದು (ವಿಮೋ. 15:26). ಈ ಪ್ರಪಂಚದಲ್ಲಿ ನನಗೆ ಸಹಾಯಮಾಡುವವರು ಇನ್ನಾರು ಇದ್ದಾರೆ? ದಯಮಾಡಿ ನನ್ನ ಕಾಯಿಲೆಯ ಕೊಂಡಿಯನ್ನು ಮುರಿದು, ಪೂರ್ಣವಾಗಿ ಸ್ವಸ್ಥಮಾಡು ಮತ್ತು ನನ್ನ ಆರೋಗ್ಯವನ್ನು ಹಿಂದಕ್ಕೆ ಕೊಡು. ಆತನು ನಿನ್ನ ಎಲ್ಲಾ ಕಾಯಿಲೆಯನ್ನು ತೊಡೆದು ಹಾಕಿ ಪೂರ್ಣವಾಗಿ ಗುಣಪಡಿಸುತ್ತಾನೆ. ನಿನ್ನ ಎಲ್ಲಾ ಕಾಯಿಲೆಯನ್ನು ಆತನು ಶಿಲುಬೆಯ ಮೇಲೆ ಹೊತ್ತನು. ಆತನ ಬಾಸುಂಡೆಗಳಿಂದ ನಿನಗೆ ಗುಣವಾಯಿತು (ಯೆಶಾ. 53:5).

ಒಬ್ಬ ಗೃಹಿಣಿ ಮೂರ್ಛೆರೋಗದಿಂದ ಬಹಳವಾಗಿ ಬಾಧಿತಳಾಗಿದ್ದಳು. ಅವಳಿಗೆ ಈ ಮೂರ್ಛೆ ಬಂದಾಗ ಅವಳು ತನ್ನ ನಾಲಿಗೆಯನ್ನು ಕಚ್ಚಿಕೊಳ್ಳುವಳು ಮತ್ತು ಅದು ಧಾರಳವಾಗಿ ರಕ್ತಸ್ರಾವವಾಗುತ್ತಿತ್ತು. ಆ ಮೇಲೆ ಅನೇಕ ದಿನಗಳವರೆವಿಗೆ ಅವಳು ಊಟಮಾಡಲು ಆಗುತ್ತಿರಲಿಲ್ಲ. ಕೆಲ ಸಮಯದ ನಂತರ ಈ ಆಕ್ರಮಣ ಪುನ: ಆಗಿ ಬಹಳವಾಗಿ ಬಾಧಿತಳಾಗುತ್ತಿದ್ದಳು. ಒಂದು ದಿನ ಈ ಆಕ್ರಮಣ ಬಂದಾಗ ಅವಳು ಯಥಾಪ್ರಕಾರ ನಾಲಿಗೆ ಕಚ್ಚಿದಳು. ಅವಳ ನಾಲಿಗೆ ರಕ್ತಸ್ರಾವಾಗುತ್ತಿತ್ತು. ಅವಳ ಪತಿ ಪ್ರಾರ್ಥಿಸಲು ತಲೆ ಎತ್ತಿದನು. ಅವನ ಕಣ್ಣುಗಳು ಆ ಕೊಠಡಿಯಲ್ಲಿ ತೂಗುಹಾಕಿದ್ದ ಶಿಲುಬೆಗೆ ಜಡಿದ ಚಿತ್ರದ ಮೇಲೆ ಬಿತ್ತು. ಅವನು ಅದನ್ನು ನೋಡಿ ಕಣ್ಣೀರಿನಿಂದಲೂ ಶ್ರದ್ಧೆಯಿಂದಲೂ ಪ್ರಾರ್ಥಿಸಿದ, “ಪ್ರಿಯ ಕರ್ತನೇ! ಸತ್ಯವೇದ ಹೇಳುತ್ತದೆ, ನಾವು ನಿನ್ನ ಬಾಸುಂಡೆಯಿಂದ ಗುಣವಾಗಿದ್ದೇವೆ ಎಂದು. ನೀನು ಸುರಿಸಿದ ರಕ್ತ ನಿನ್ನ ಮಗಳನ್ನು ರಕ್ಷಿಸಲು ಸಾಲವಾಯಿತಾ? ಅವಳೂ ರಕ್ತವನ್ನು ಸುರಿಸುವ ಅವಶ್ಯಕತೆ ಇದೆಯಾ? ನಿನ್ನ ವಾಗ್ದಾನದಂತೆ ಅವಳಿಂದ ಈ ಕಾಯಿಲೆ ತೆಗೆಯಲು ನಿನಗೆ ಸಾಧ್ಯವಿಲ್ಲವಾ?” ಎಂದು. ಓಹ್! ಎಂಥಹ ಅದ್ಭುತ ! ರಕ್ತ ಸ್ರಾವ ನಿಂತಿತು. ಅಂದಿನಿಂದ ಅವಳಿಂದ ಆ ಕಾಯಿಲೆ ತೆಗೆಯಲ್ಪಟ್ಟಿತು ಮತ್ತು ಅವಳು ಪೂರ್ಣಗುಣ ಹೊಂದಿದಳು.

ಹೌದು ಪ್ರಿಯರೇ! ನಮ್ಮ ದೇವರು ಇಂದು ಜೀವಿಸಿದ್ದಾನೆ. ಆತನು ತನ್ನ ವಾಗ್ಧಾನದಲ್ಲಿ ಎಂದಿಗೂ ಬದಲಾಗುವುದಿಲ್ಲ; ಕಾಯಿಲೆ ಯಾವದಿದ್ದರೂ, ಚಿಕ್ಕದಾಗಲೀ, ದೊಡ್ಡದಾಗಲಿ, ಅವೆಲ್ಲವನ್ನು ಕರ್ತನು ಶಿಲುಬೆಯ ಮೇಲೆ ಹೊತ್ತಿದ್ದಾನೆ (1 ಪೇತ್ರ. 2:24, ಮತ್ತಾ. 8:7). ಇಂದಿನಿಂದ ನೀನು ಅನುಭವಿಸಬೇಕಾಗಿಲ್ಲ. ಈ ದೈವೀಕ ಸತ್ಯವನ್ನು ನಂಬು ಮತ್ತು ಮೇಲಿನ ಪ್ರಸಂಗದಲ್ಲಿನ ದಂಪತಿಗಳಂತೆ ಆಶೀರ್ವಾದ ಹೊಂದು.

ಪ್ರಾರ್ಥನೆ :- ಪ್ರಿಯ ಕರ್ತನೇ ನನಗೆ ಈ ಆಶೀರ್ವದಿತ ಜೀವನ ಕೊಡು! ಇಂದಿನಿಂದ ನನ್ನ ಜೀವನ ಹೆಚ್ಚಾಗಿ ಅಭಿವೃದ್ಧಿ ಹೊಂದಲಿ. ನನ್ನ ಜೀವನದಲ್ಲಿ ನಾನು ಪ್ರಕಾಶಮಾನವಾಗಿ ಹೊಳೆಯುವಂತೆ ಮಾಡಿ ನಾನು ಇತರರನ್ನು ನಿನ್ನ ಬಳಿ ನಡೆಸುವಂತೆ ಮಾಡು. ನನ್ನಿಂದ ಎಲ್ಲಾ ರೋಗವನ್ನು ತೆಗೆದು. ನಿನ್ನ ಬಾಸುಂಡೆಗಯಿಂದ ನನ್ನನ್ನು ಗುಣಪಡಿಸು. ಸ್ವಸ್ಥಪಡಿಸುವ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us