ಕರ್ತನು ನಿನ್ನನ್ನು ಚೂಪಾದ ಹಲ್ಲುಗಳುಳ್ಳ ಹೊಸ ಯಂತ್ರವನ್ನಾಗಿ ಮಾಡುತ್ತಾನೆ!

  Posted on   by   No comments

“ಇಗೋ ನಾನು ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ. ನೀನು ಬೆಟ್ಟಗಳನ್ನು ಒಕ್ಕುತ್ತ ಪುಡಿಪುಡಿಗೈದು ಗುಡ್ಡಗಳನ್ನು ಹೊಟ್ಟು ಮಾಡುವಿ” (ಯೆಶಾ. 41:15).

ಈ ಪ್ರಪಂಚದಲ್ಲಿ, ಸುಮರು ಎಲ್ಲರೂ ಕೊರತೆಗಳುಳ್ಳ ಜೀವನವನ್ನು ನಡೆಸುತ್ತೇವೆ. ನಾವಿರುವ ಮನೆಯಲ್ಲಿ ಸರಿಯಾದ ಟೇಬಲ್, ಕುರ್ಚಿ, ಹಾಸಿಗೆ ಮುಂತಾದವುಗಳು ನಮಗೆ ಬೇಕಾದಂತೆ ಇಲ್ಲ ಎಂದು ಗೊಣಗುತ್ತೇವೆ. ಅದೇ ರೀತಿ ನಮ್ಮ ಜೀವನದಲ್ಲಿ ನಮ್ಮ ಬೇಡಿಕೆಗಳು ನೆರವೇರದಿದ್ದಾಗಲೂ ನಾವು ಆ ಸಂತೋಷಪಡುತ್ತೇವೆ. ಆದರೆ ಮೇಲೆ ಕೊಟ್ಟಿರುವ ವಾಕ್ಯವನ್ನು ನೋಡಿರಿ. ಅದು ವಾಗ್ದಾನ ಮಾಡುವುದೇನೆಂದರೆ, ದೇವರು ನಮ್ಮನ್ನು ಮಸೆದ ಮೊನೆಹಲ್ಲಿನ ಹೊಸ ಹಂತಿಕುಂಟೆಯನ್ನಾಗಿ ಮಾಡಿದ್ದೇನೆ ಎಂದು. ದೇವರು ಅಂತಹ ಅಭಿವೃದ್ಧಿ ಜೀವನ ಕೊಡುವುದಾದರೆ ನಮ್ಮ ದಿನ ನಿತ್ಯದ ಪೂರ್ಣ ಅವಶ್ಯಕತೆಗಳನ್ನು ಧಾರಳವಾಗಿ ಸರಬರಾಜು ಮಾಡುವದಿಲ್ಲವಾ? (ಫಿಲಿ. 4:19). ನಿಮ್ಮಲ್ಲಿ ಕೆಲವರು ನೀವು ಚೆನ್ನಾಗಿ ಓದಲು ನೀವು ಬುದ್ಧಿವಂತರಲ್ಲ ಅನ್ನಿಸಬಹುದು, ಅಥವಾ ನಿಮ್ಮ ಕುಟುಂಬ ನಿರ್ವಹಣೆ ಮಾಡಲು ಜ್ಞಾನವಿಲ್ಲ ಅಂದುಕೊಳ್ಳಬಹುದು, ಇನ್ನು ಬೇರೆ ಕೆಲವರಿಗೆ ಬೇರೆ ಕೊರತೆಗಳಿರಬಹುದು. ಈ ಎಲ್ಲಾ ಅಕ್ಷೇಪಣೆಗಳನ್ನು ಮಾಡುವುದನ್ನು ನಿಲ್ಲಿಸುವದು ಒಳ್ಳೆಯದು ಮತ್ತು ಆತನು ಹೇಳಿರುವುದನ್ನು ಮಾಡುತ್ತಾನೆ ಎಂದು ದೇವರನ್ನು ನೋಡಬೇಕು. ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮಗೆ ಹೊಸ ಜೀವನ ಕೊಡುತ್ತಾನೆ ಎಂದು ನಂಬಬೇಕು (ಎಫೆ. 2:1).

ಒಬ್ಬ ಯೌವನಸ್ಥನು, ತನ್ನ ಪಾಠಗಳನ್ನು ಕಷ್ಟಪಟ್ಟು ಓದಿದರೂ ಅದನ್ನು ಜ್ಞಾಪಕದಲ್ಲಿಡಲು ಸಾಧ್ಯವಾಗದೆ ಕಲಿತಿದ್ದನ್ನು ಮರೆತು ಬಿಡುತ್ತಿದ್ದನು. ಅವನು ವಿಪರೀತವಾಗಿ ಚಿಂತೆಯಿಂದ ಚೆನ್ನಾಗಿ ಓದಲು ಆಗದೆ ಕಳವಳಗೊಂಡಿದ್ದನು. ಒಂದು ದಿನ, ಅವನು ಸತ್ಯವೇದ ಓದುತ್ತಿರುವಾಗ ಮೇಲೆ ಕೊಟ್ಟಿರುವ ವಚನÀ ಓದಿದನು. ಒಡನೆಯೇ, ಅವನು ಈ ವಚನದ ಮೇಲೆ ತನ್ನ ಕೈಯಿಟ್ಟು ನಂಬಿಕೆಯಿಂದ ಪ್ರಾರ್ಥಿಸಿದನು” ಯಂತ್ರವನ್ನು ಮೊನಚಾದ ಹಲ್ಲುಗಳಿಂದ ಹೊಸದಾಗಿ ಮಾಡುವಂತೆ ನನ್ನ ಜ್ಞಾನವೂ ಕೂಡ ಬಲವಾಗಿ ಚೂಪಾಗಿ ನವೀಕರಿಸು. ದಯಮಾಡಿ ನನ್ನ ಕೊರತೆಯನ್ನು ತೆಗೆದು ನನ್ನ ಪಾತ್ರೆಯನ್ನು ತುಂಬಿಸು” ಎಂದು. ಅವನು ದೇವರನ್ನು ಸ್ತುತಿಸುತ್ತಾ ಸ್ತೋತ್ರಿಸುತ್ತಿದ್ದನು. ನಿಮಗೆ ಗೊತ್ತಾ ಏನಾಯಿತೆಂದು? ಈಗ ಅವನು ಓದುವಾಗ ಎಲ್ಲವನ್ನು ಅವನು ಜ್ಞಾಪಕದಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು. ಬೇಗನೇ, ಅವನು ಅವನ ತರಗತಿಯಲ್ಲಿ ಮೊದಲಿಗನಾದ ಮತ್ತು ದೇವರು ಅವನಿಗೆ ಹೊಸ ಜೀವನ ಕೊಟ್ಟ.

ಪ್ರಿಯರೇ, ಇದೇ ವಾಗ್ದಾನ ನಿನ್ನ ಎಲ್ಲಾ ಕೊರತೆಯನ್ನು ತೆಗೆದು ಪೂರ್ಣ ಮತ್ತು ಹೊಸ ಜೀವನ ಕೊಡಲು ಸಾಧ್ಯ. ದೇವರ ಪ್ರಸನ್ನತೆ ಮತ್ತು ಶಕ್ತಿ ನಿಜಕ್ಕೂ ಇದನ್ನು ಮಾಡುತ್ತದೆ. ಈ ವಾಗ್ದಾನವನ್ನು ನಂಬು (1 ಕೊರಿ. 13:10). ದೇವರು ನಿನ್ನನ್ನು ಚೂಪಾದ ಹಲ್ಲುಗಳುಳ್ಳ ಹೊಸ ಯಂತ್ರವನ್ನಾಗಿ ಮಾಡಿ ಹೇರಳವಾಗಿ ಆಶೀರ್ವದಿಸುತ್ತಾನೆ.

ಪ್ರಾರ್ಥನೆ :- ಪರಲೋಕದ ತಂದೆಯೇ, ನನ್ನ ಜೀವನದಲ್ಲಿ ಏನೂ ಇಲ್ಲ, ಈ ದಿನದ ವಾಗ್ದಾನದ ವಚನದ ಪ್ರಕಾರ ನನ್ನನ್ನು ಚೂಪಾದ ಹಲ್ಲುಗಳು ಇರುವ ಹೊಸ ಯಂತ್ರವನ್ನಾಗಿ ಮಾಡು, ನಿನ್ನ ದೈವೀಕ ಶಕ್ತಿಯಿಂದ ಕೃಪೆಕೊಟ್ಟು ನೀತಿಮಾರ್ಗದಲ್ಲಿ ನಡಿಸು. ಯೇಸುವಿನ ಬಲವಾದ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

Comments

Your email address will not be published. Required fields are marked *

× WhatsApp us