ಕರ್ತನು ನಿಮಗೆ ಸಹಾಯ ಮಾಡಿ ರಕ್ಷಿಸುವನು!

  Posted on   by   No comments

“ಯೆಹೊವನು ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡುವನು; ಅವರು ಆತನ ಆಶ್ರಿತರಾದ್ದರಿಂದ ದುಷ್ಟರ ಕೈಯಿಂದ ತಪ್ಪಿಸಿ ರಕ್ಷಿಸುವನು” (ಕೀರ್ತ. 37:40).

ಈ ಲೋಕದಲ್ಲಿ ಸಜ್ಜನರು ದುಷ್ಟರ ಹಿಡಿತದಲ್ಲಿ ಕಷ್ಟಪಡುತ್ತಿರುವದನ್ನು ಕಾಣುತ್ತೇವೆ. ಕಛೇರಿಯಲ್ಲಿ ಉನ್ನತ ಅಧಿಕಾರಿಗಳು ದುಷ್ಟರಾದಾಗ, ಅವರ ಕೈಯಾಳುಗಳು ಅನೇಕ ಕಷ್ಟಗಳಿಂದಲೂ ನೋವಿನಿಂದಲೂ ನರಳುವದನ್ನು ಕಂಡಿರುವೆನು. ಕುಟುಂಬಗಳಲ್ಲಿಯೂ ಸಹ ನಾವು ಇದನ್ನೇ ಕಾಣುತ್ತೇವೆ. ಕುಟುಂಬಗಳಲ್ಲಿ ಜನರು ತಿರಸ್ಕರಿಸಲ್ಪಟ್ಟು ದ್ವೇಷಿಸಲ್ಪಟ್ಟು ಆ ದೈವ ಜನರಿಂದ ತಪ್ಪಾಗಿ ದೂಷಿಸಲ್ಪಡುತ್ತಾರ (2 ತಿಮೊ. 3:1-5). ಆದರೆ ಈ ದುಷ್ಟ ಜನರಿಗೆ ನಾವು ಭಯಪಡಬೇಕಿಲ್ಲ! ಯಾಕಂದರೆ ಇವರಿಂದ ನಮ್ಮನ್ನು ರಕ್ಷಿಸಲು ಪ್ರೀತಿಯ ಸಜೀವಂತನಾದ ದೇವರಿದ್ದಾನೆ, ಒಂದು ಬಾರಿ ಕರ್ತನನ್ನು ನಮ್ಮ ಆಶ್ರಯಗಿರಿಯಾಗಿಯೂ ನಿವಾಸ ಸ್ನಾನವಾಗಿಯೂ ಮಾಡಿಕೊಂಡಿರುವಾಗ, ಆತನು ನಮ್ಮನ್ನು ಎಲ್ಲಾ ಕೇಡಿನಿಂದ ತಪ್ಪಿಸಿ ನಮಗೆ ಸಂತೋಷಭರಿತವಾದ ಜೀವಿತ ನೀಡುವನು (ಕೀರ್ತ. 91:10).

ಒಮ್ಮೆ ಕರ್ತನನ್ನು ಯಥಾರ್ಥವಾಗಿಯೂ ಪ್ರೀತಿಯಿಂದಲೂ ಹಿಂಬಾಲಿಸುತ್ತಿದ್ದ ಭಯಭಕ್ತಿಯುಳ್ಳ ಕುಟುಂಬವಿತ್ತು. ಆ ಕುಟುಂಬದಲ್ಲಿ ಪರಿಪೂರ್ಣ ಸಮಾಧಾನ ಐಕ್ಯತೆ ಮತ್ತು ಸಂತೋಷ ಕೂಡಿತ್ತು. ಆದರೆ ಈ ಕುಟುಂಬಕ್ಕೆ ವಿರೋಧವಾಗಿ ನೆರೆಹೊರೆಯವನೊಬ್ಬ ಹೊಟ್ಟೆಕಿಚ್ಚುಪಟ್ಟನು. ಆದ್ದರಿಂದ, ಈ ಕುಟುಂಬವನ್ನು ನಾಶ ಮಾಡಲು ಅವನು ಅನೇಕ ದುಷ್ಟ ಯೋಜನೆಗಳನ್ನು ಹಾಕಿಕೊಂಡನು. ಈ ಕುಟುಂಬದ ಸದಸ್ಯರ ಮೇಲೆ ಅವನು ಸುಳ್ಳು ಅಪವಾದಗಳನ್ನು ಹರಡುತ್ತಿದ್ದನು. ಈ ಕಥೆಗಳ ಬಗ್ಗೆ ನಿಜಾಂಶವನ್ನು ತಿಳಿದುಕೊಳ್ಳಲು ಬಂದ ಜನರಿಗೆ ನಿಜ ತಿಳಿದು ಮನ ಮುರಿದವರಾಗಿದ್ದರು. ಆದರೂ ಸಹ, ಈ ದುಷ್ಟನು ಈ ದೈವಭಕ್ತಿಯುಳ್ಳ ಕುಟುಂಬಕ್ಕೆ ತೊಂದರೆಯನ್ನು ತರುತ್ತಲೇ ಇದ್ದನು. ಆದರೆ ಅವರು ಕರ್ತನ ಮೇಲೆ ಬಿಡುಗಡೆಗಾಗಿ ಕಾದಿರುತ್ತಿದ್ದರು. ಈ ದುಷ್ಟನು ಹೆಚ್ಚು ತೊಂದರೆ ಸೃಷ್ಟಿಸಿದಂತೆಯೇ, ಈ ಕುಟುಂಬವು ಮತ್ತಷ್ಟು ಪ್ರಾರ್ಥಿಸಿ ಕರ್ತನನ್ನು ನಿರೀಕ್ಷಿಸುತ್ತಿದ್ದರು. ಅವರು ಅಭಿವೃದ್ಧಿಯಾಗುತ್ತಾ ಆಶೀರ್ವಾದಿತರಾದರು. ಕೊನೆಯದಾಗಿ, ಈ ಮನುಷ್ಯನು ತನ್ನ ಯೋಜನೆ ಎಲ್ಲಾ ವಿಫಲವಾದಾಗ ನಿರಾಶ್ರಿತನಾದನು. ಅವನಿಗೆ ಬೇರೆ ದಾರಿಯಿಲ್ಲದೆ ಈ ಕುಟುಂಬದ ಮುಖ್ಯಸ್ಥನ ಬಳಿಗೆ ಹೋಗಿ ಅವರ ಜಯಭರಿತ ಜೀವಿತದ ಬಗ್ಗೆ ಕಾರಣ ಕೇಳಿದನು. ಅವನ ದುಷ್ಟ ಯೋಜನೆಗಳೆಲ್ಲಾ ವಿಫಲವಾದ ಕಾರಣ ಕೇಳಿಸಿಕೊಂಡನು. ಈ ಎಲ್ಲಾ ಆಪತ್ತಿನಿಂದಲೂ ವೈರಿಗಳಿಂದಲೂ ಯೇಸುವಿನ ಪ್ರೀತಿಯೇ ತಮ್ಮನ್ನು ರಕ್ಷಿಸಿತೆಂದು ಈ ಕುಟುಂಬದ ಮುಖ್ಯಸ್ಥ ಹೇಳಿದನು. ಅದಲ್ಲದೆ ಅವನಿಗೂ ಸಹ ನೀತಿಯ ಮಾರ್ಗದಲ್ಲಿ ನಡೆಯಬೇಕೆಂದು ಉಪದೇಶಿಸಿ, ಅವನ ರಕ್ಷಣೆ ಮತ್ತು ಬಿಡುಗಡೆಗಾಗಿ ಅವರು ಪ್ರಾರ್ಥಿಸಿದರು.

ಪ್ರಿಯರೇ, ಈ ಪಾಪದ ಜಗತ್ತಿನಲ್ಲಿ, ನೀವೂ ಸಹ ನಿಮ್ಮ ವೈರಿಗಳ ಎದುರಾಳಿಯನ್ನೂ ತೊಂದರೆಗಳನ್ನೂ ಎದುರಿಸಬಹುದು. ಮನಗುಂದದಿರಿ, ನೀವು ಆತನನ್ನು ನೋಡಿ ಮೊರೆಯಿಡುವಾಗ, ಆತನು ನಿಮ್ಮನ್ನು ಈ ದುಷ್ಟ ಹಾಗೂ ಭಯಂಕರವಾದ ಶತ್ರುಗಳಿಂದ ಬಿಡಿಸುವನು (ಕೀರ್ತ. 17:9).

ಪ್ರಾರ್ಥನೆ : ಪ್ರಿಯ ರಕ್ಷಕನೇ, ಇಂದಿನಿಂದ ನೀನು ನನ್ನ ಸಂಗಡವಿದ್ದು, ನನ್ನನ್ನು ಸುತ್ತಿಕೊಳ್ಳುವ ದುಷ್ಟರಿಂದಲೂ ಕೆಡುಕರಿಂದಲೂ ನನ್ನ ಸಂಗಡವಿದ್ದು ರಕ್ಷಿಸು. ನನ್ನ ಪ್ರಾರ್ಥನೆಯನ್ನು ಲಾಲಿಸಿ ನನ್ನನ್ನು ಎಲ್ಲಾ ಆಪತ್ತಿನಿಂದಲೂ ಒತ್ತಡಗಳಿಂದಲೂ ರಕ್ಷಿಸಿದಕ್ಕಾಗಿ ನಿನಗೆ ಸ್ತೋತ್ರ. ಕರ್ತನಾದ ಯೇಸುವಿನ ರಕ್ಷಿಸುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

MANNA MINISTRIES
Mannaministries.in@gmail.com

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

*For Daily Devotion Contact: +91 9964247889*

 

Comments

Your email address will not be published. Required fields are marked *

× WhatsApp us