ಕರ್ತನು ನಿಮ್ಮನ್ನು ಇಂದಿನಿಂದ ಆಶೀರ್ವದಿಸುತ್ತಾನೆ !

  Posted on   by   No comments

c186cc9946dcd5daa26727fc123ee6d2--pomegranates-scripture-art

“ಇದೇ ದಿವಸ ಮೊದಲುಗೊಂಡು ನಿಮ್ಮನ್ನು ಆಶೀರ್ವದಿಸುವೆನು” (ಹಗ್ಗಾ. 2:19).

ಇಂದು ಈ ವರ್ಷದ ಕೊನೆ ತಿಂಗಳ ಮೊದಲನೆಯ ದಿನವನ್ನು ಆರಂಭಿಸುತಿದ್ದೇವೆ. ದೇವರು ನಿಜಕ್ಕೂ ಈ ತಿಂಗಳನ್ನು ಆಶೀರ್ವದಿತವಾಗಿಯೂ, ಸಂತೋಷವಾಗಿಯೂ ಇರುವಂತೆ ಆಶೀರ್ವದಿಸುತ್ತಾನೆ. ನಮ್ಮ ಜೀವನದಲ್ಲೂ ಸಹ ಆತನು ವಿಶೇಷವಾದ ಆಶೀರ್ವಾದಗಳನ್ನು ಈ ತಿಂಗಳಲ್ಲಿ ಸುರಿಸುತ್ತಾನೆ. ಇಂದಿಗಾಗಿ ಮೇಲಿನ ವಾಗ್ದಾನ ವಚನವು ಈ ಸತ್ಯವನ್ನೇ ನಿರೂಪಿಸುತ್ತದೆ. ಈ ವಾಗ್ಧಾನ ವಚನವು ವಿಶೇಷವಾಗಿ ಯಾರಾರು ಈ ತಿಂಗಳಲ್ಲಿ ತಮಗೆ ಏನಾಗುತ್ತದೋ ಎಂಬ ಅನುಮಾನ ಚಿಂತೆಯಿಂದಯಿರುವವರಿಗಾಗಿಯೇ ಇದೆ. ಈ ಹೊಸ ತಿಂಗಳಲ್ಲಿ ಕರ್ತನು ನಿಮಗೆ ಎಲ್ಲಾ ಒಳ್ಳೇ ವಿಷಯಗಳ ಭರವಸೆ ಕೊಡುತ್ತಿದ್ದಾನೆ. ಈ ವಾಗ್ದಾನವನ್ನು ನಿಮ್ಮ ಈ ಹೊಸ ತಿಂಗಳಲ್ಲಿ ಹೇರಳವಾಗಿ ಆಶೀರ್ವದಿಸಲ್ಪಡಿರಿ.

ಒಬ್ಬ ಬೋಧಕರು ಪವಿತ್ರಾತ್ಮನಿಂದ ನಡೆಸಲ್ಪಟ್ಟು ಅವಶ್ಯಕತೆಯಿದ್ದ ಒಂದು ಜಾಗದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಆದರೆ ಅವರ ಕೈಯಲ್ಲಿ ಹಣವಿರಲಿಲ್ಲ. ಅವರಿಗೆ ಕಟ್ಟಡ ಮತ್ತು ಇತರ ಸೌಕರ್ಯಗಳೂ ಇರಲಿಲ್ಲ. ಆದರೆ ದೇವರು ತನ್ನ ವರಗಳು ಮತ್ತು ಶಕ್ತಿಯಿಂದ ಅವರನ್ನು ಅಭಿಷೇಕಿಸಿದ್ದನು ಆದ್ದರಿಂದ ಒಂದು ದಿನ ಅವರು ಮೊಣಕಾಲೂರಿ ಆತನ ಸನ್ನಿಧಾನದಲ್ಲಿ ಮೇಲಿನ ವಾಗ್ಧಾನ ವಚನವನ್ನು ತನ್ನದೆಂದು ಹಕ್ಕಿನಿಂದ ಪ್ರಾರ್ಥಿಸಿದರು. ಅವರು ಉಪವಾಸ ಪ್ರಾರ್ಥನೆಯಿಂದ ಹೇಳಿದರು, “ಪ್ರಿಯ ಕರ್ತನೇ! ನಾನು ಈ ಜಾಗಕ್ಕೆ ನಿನಗೆ ಸೇವೆ ಮಾಡಲೆಂದೇ ಬಂದಿರುವೆ. ಆದ್ದರಿಂದ ನೀನು ನನ್ನಲ್ಲಿ ನೆಲೆಸಿ ಈ ಸೇವೆಗಾಗಿ ಎಲ್ಲಾ ಕಡೆಯಿಂದ ಸಹಾಯ ಬರುವಂತೆ ನೋಡಿಕೋ ನಿನ್ನ ನಾಮದ ಮಹಿಮೆಗಾಗಿ ಈ ಸೇವೆ ಬೆಳೆದು ಅಭಿವೃದ್ಧಿ ಹೊಂದಲಿ”. ಹೌದು! ದೇವರು ಅವರ ಪ್ರಾರ್ಥನೆಯನ್ನು ಕೇಳಿ ಅನೇಕ ಆತ್ಮಗಳನ್ನು ಪಕ್ಕದ ಸ್ಥಳದಿಂದ ಸೇವೆಗಾಗಿ ಕೊಟ್ಟನು ಅವರ ಮೂಲಕವಾಗಿ ಬೋಧಕರು ಸಾಕಷ್ಟು ಸಹಾಯ ಮತ್ತು ಬೆಂಬಲ ಪಡೆದರು. ಕರ್ತನು ಅವರನ್ನೆಲ್ಲಾ ಒಳ್ಳೇ ಪ್ರಾರ್ಥನಾ ವೀರರನ್ನಾಗಿ ಮಾಡಿ ಅವರೆಲ್ಲರೂ ಅವನಿಗಾಗಿಯೂ ಆತನ ಸೇವೆಗಾಗಿಯೂ ನಂಬಿಕೆಯಿಂದ ತಮ್ಮ ಸಮಯ ಕೊಟ್ಟು ಪ್ರಾರ್ಥಿಸಿದರು. ದೇವರು ತನ್ನ ಪ್ರಸನ್ನತೆಯನ್ನು ಆ ಬೋಧಕರಲ್ಲಿ ನೆಲೆಸುವಂತೆ ಮಾಡಿ, ಆತನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದನು. ಬೇಗನೆ ಸೇವೆ ಎಲ್ಲಾ ಕಡೆ ಬೆಳೆಯಿತು ಮತ್ತು ದೇವರ ವಾಗ್ಧಾನ ಆ ಬೋಧಕನ ಜೀವನದಲ್ಲಿ ನೆರವೇರಿತು.

ಪ್ರಿಯ ದೇವರ ಸೇವಕರೇ! ನೀವು ಆತನ ಸೇವೆಯನ್ನು ಆರಂಭಿಸಿ. ನಿಮಗೆ ಹಣದ ಕೊರತೆ ವಸ್ತುಗಳು ಮತ್ತು ಕೆಲಸ ಮುಂದುವರಿಸಲು ಬೆಂಬಲ ಇಲ್ಲವೆಂದು ಚಿಂತಿಸಬೇಡಿ. ಆತನ ಸೇವೆಯನ್ನು ಕುಟುಂಬ ಜೀವನವನ್ನು ಆತನ ನಾಮದ ಮಹಿಮೆಗಾಗಿ ಆರಂಭ ಮಾಡಿದವರನ್ನು ಕರ್ತನು ಆಶೀರ್ವದಿಸಲು ಕಾತೂರದಿಂದ ಈ ವಾಗ್ಧಾನ ವಚನದಿಂದ ಕಾಯುತ್ತಿದ್ದಾನೆ. ಮೇಲಿನ ಪ್ರಸಂಗದಲ್ಲಿನ ಬೋಧಕರಂತೆ ನೀವು ಸಹ ಬಹಳ ದಿನಗಳು ಮತ್ತು ಗಂಟೆಗಳವರೆವಿಗೆ ಪ್ರಾರ್ಥನೆಯಲ್ಲಿ ಮತ್ತು ನಂಬಿಕೆಯಲ್ಲಿ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಆತನು ನಿಜವಾಗಿ ನಿಮ್ಮನ್ನು ಒಳ್ಳೇ ವಿಷಯಗಳಿಂದ ಆಶೀರ್ವದಿಸಿ ಗೌರವಿಸುತ್ತಾನೆ (ಕೀರ್ತ. 31:19).

ಪ್ರಾರ್ಥನೆ: – ಅಮೂಲ್ಯ ರಕ್ಷಕನೇ! ನಿನ್ನ ಪರಿಶುದ್ಧ ಪ್ರಸನ್ನತೆ ನನ್ನಲ್ಲಿ ನೆಲೆಸಲಿ ಮತ್ತು ನಾನು ಈ ತಿಂಗಳಲ್ಲಿ ಮಾಡುವ ಎಲ್ಲವನ್ನು ಆಶೀರ್ವದಿಸು. ಇಂದಿನಿಂದ ಮೇಲಿನ ವಾಗ್ಧಾನ ವಚನದಂತೆ ನನ್ನನ್ನು ಆಶೀರ್ವದಿಸಿ ನನ್ನ ಮೇಲೆ ಹೇರಳವಾದ ಆಶೀರ್ವಾದವನ್ನು ಸುರಿಸು. ನನ್ನ ಜೀವನವನ್ನು ನಿನ್ನ ಅದ್ಭುತವಾದ ಪ್ರಸನ್ನತೆಯಿಂದ ತುಂಬಿಸಿ, ನಡಿಸಿ ನನ್ನನ್ನು ಆಶೀರ್ವದಿಸು! ನಮ್ಮ ಕರ್ತನಾದ ಆಶೀರ್ವದಿತ ಹೆಸರಾದ ಯೇಸುವಿನ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)
For Daily Devotion Contact: +91 9964247889

Comments

Your email address will not be published. Required fields are marked *

WhatsApp us