ಕರ್ತನು ನಿಮ್ಮನ್ನು ಕಡೆವರೆಗೂ ದೃಢಪಡಿಸುವನು!

  Posted on   by   1 comment

1Corinthians.1.8_lg

“ನಮ್ಮ ಕರ್ತನಾದ ಯೇಸುಕ್ರಿಸ್ತನ ದಿನದಲ್ಲಿ ಯಾರೂ ನಿಮ್ಮ ಮೇಲೆ ತಪ್ಪು ಹೊರಿಸದಂತೆ ಆತನು ನಿಮ್ಮನ್ನು ಕಡೇವರೆಗೂ ದೃಢಪಡಿಸುವನು” (1 ಕೊರಿ. 1:8).

ಸತ್ಯವೇದ ಹೀಗೆ ಹೇಳುತ್ತದೆ, “ಸ್ಥಿರ ಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ” (ಯೆಶಾ. 26:3). ಎಂದು. ಈ ವಾಕ್ಯದ ಪ್ರಕಾರ ನಾವು ನಿಜವಾಗಿಯೂ ಕರ್ತನನ್ನು ನಂಬುತ್ತೇವೋ? ಅನೇಕ ಬಾರಿ, ನಾವು ದು:ಖದಲ್ಲಿ, ಕಷ್ಟದಲ್ಲಿ ಮತ್ತು ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೇವೇ, ಯಾಕಂದರೆ, ನಾವು ಮನುಷ್ಯರಲ್ಲಿ ನಮ್ಮ ಭರವಸೆಯನ್ನು ಹಾಕಿರುತ್ತೇವೆ. ಆದರೆ, ಕರ್ತನನ್ನು ನಂಬುವವರು ಎಲ್ಲಾ ಸಮಯದಲ್ಲಿ ಮತ್ತು ಎಲ್ಲಾ ಪರಿಸ್ಥಿತಿಯಲ್ಲಿ ಆತನ ಸಂತೈಸುವಿಕೆ ಮತ್ತು ಬಲವನ್ನು ತಮ್ಮ ದು:ಖದ, ಕಷ್ಟದ, ಸಂತೋಷದ ಹಾಗೂ ಉಲ್ಲಾಸದ ಸಮಯದಲ್ಲಿ ಹೊಂದುತ್ತೇವೆ. ನಾವು ಆತನಿಗೆ ಮೊರೆಯಿಡುವಾಗ, ಆತನು ನಮಗೆ ಉತ್ತರಿಸಿ ನಿಮ್ಮ ಆತ್ಮದಲ್ಲಿ ಧೈರ್ಯದಿಂದ ಬಲ ಹೊಂದುವಂತೆ ಮಾಡುತ್ತಾನೆ (ಕೀರ್ತ. 138:3).

ಒಂದು ಕುಟುಂಬದಲ್ಲಿ, ಮಗನು ಬಹಳ ಬಲಹೀನವಾಗಿಯೂ ಸಣ್ಣಗೆ ಇದ್ದನು. ಅವನು ಕ್ರೀಡೆಯಲ್ಲಿ ಭಾಗವಹಿಸಲು ಇಷ್ಟಪಟ್ಟರೂ ಸಹ, ಅವನ ದೇಹ ಒಪ್ಪುತ್ತಿರಲಿಲ್ಲ. ಆದ್ದರಿಂದ, ಅವನ ತಂದೆ ತಾಯಂದಿರು, ಅವನನ್ನು ಯೇಸು ಕರೆಯುತ್ತಾನೆ ಯುವ ಪಾಲುಗಾರರ ಯೋಜನೆಯಲ್ಲಿ ಸೇರಿಸಿದರು. ಈಗ, ಅನೇಕ ಜನರು ಅವನಿಗೋಸ್ಕರ ಪ್ರಾರ್ಥನೆ ಮಾಡುತ್ತಿದ್ದರು. ಅವನು ಕ್ರಮೇಣವಾಗಿ ಕ್ರೀಡೆ ಹಾಗೂ ಆಟದಲ್ಲಿ ಭಾಗವಹಿಸಲಾರಂಭಿಸಿದನು. ಶಾಲೆ ಮತ್ತು ಕಾಲೇಜುಗಳಲ್ಲಿ ಅನೇಕ ಪ್ರಶಸ್ತಿಯನ್ನು ಗೆಲ್ಲುವಂತೆ ದೇವರು ಅವನಿಗೆ ಕೃಪೆ ನೀಡಿದನು. ಈ ಪ್ರಶಸ್ತಿಗಳಿಂದ, ಅವನು ದೇವರಲ್ಲಿಯೂ ಆತನ ಮಾರ್ಗದರ್ಶನದಲ್ಲಿಯೂ ಬಲ ಹೊಂದಿದನು. ಕೆಲವು ಬಾರಿ, ಕೆಲವು ಕ್ರೀಡೆಗಳ ಮುಂಚೆ ಅವನು ಅಸ್ವಸ್ಥನಾಗುತ್ತಿದ್ದನು. ಆದರೆ, ದೇವರ ಸಹಾಯದಿಂದ ಬಲಹೊಂದಿ ಅವನು ಪಾಲು ತೆಗೆದುಕೊಳ್ಳುತ್ತಿದ್ದನು. ದೇವರು ಅವನಿಗೆ ಅದ್ಭುತವಾದ ಸ್ವಸ್ಥತೆ ನೀಡಿ ಅನೇಕ ಪ್ರಶಸ್ತಿಗಳನ್ನು ಗೆಲ್ಲುವಂತೆ ಬಲಪಡಿಸಿದನು. ಆಗ, ಆ ಮಗನು ಜೀವಿತದಲ್ಲಿ ಎದ್ದು ತನ್ನ ಹೆತ್ತವರನ್ನು ಹೆಮ್ಮೆ ಪಡಿಸಿದನು. ಆತನ ನಾಮಕ್ಕೆ ಮಹಿಮೆ ತರುವಂತೆ ಅವನು ದೇವರಲ್ಲಿ ಬಲ ಹೊಂದಿದನು.

ಈ ಲೌಕೀಕ ಜೀವಿತದಲ್ಲಿ, ನಾವು ಅನೇಕ ಶೋಧನೆಗಳನ್ನೂ ಸಂಕಷ್ಟಗಳನ್ನೂ ಎದುರಿಸಬೇಕಾಗಿದೆ. ಆದರೆ, ಕೃಪೆಯ ದೇವರು, ನಮ್ಮನ್ನು ಕ್ರಿಸ್ತಯೇಸುವಿನಲ್ಲಿ ನಿತ್ಯ ಮಹಿಮೆಗೆ ಕರೆದಾತನು, ನಾವು ಸ್ವಲ್ಪ ಕಾಲ ಬಾಧಿಸಲ್ಪಟ್ಟ ನಂತರ, ನಮ್ಮನ್ನು ಯೋಗ್ಯ ಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು (1 ಪೇತ್ರ. 5:10). ನಮಗೆ ಈ ನಂಬಿಕೆಯಿದ್ದರೆ, ದೇವರ ಸಹಾಯದಿಂದ, ನಮಗೆ ಕೊನೆಯವರೆವಿಗೂ ಬೇಕಾದ ಯಶಸ್ಸು ಸಿಗುತ್ತದೆ.

ಪ್ರಾರ್ಥನೆ : ಪ್ರಿಯ ಕರ್ತನೇ! ನಾನು ಬಲಹೀನನು ದಣಿದವನೂ ಆಗಿದ್ದೇನೆ. ಈ ಮೇಲಿನ ಘಟನೆಯಲ್ಲಿ ಬಲಪಡಿಸಿದ ಯೌವನಸ್ಥನ ಹಾಗೆ ನನ್ನನ್ನೂ ಸಹ ನೀನು ದಯವಿಟ್ಟು ಬಲಪಡಿಸು. ಇಂದು, ನೀನು ನಿನ್ನ ಮೊಳೆಯಿಂದ ಗಾಯಗೊಂಡ ಹಸ್ತಗಳಿಂದ ನನ್ನನ್ನು ಬಲಪಡಿಸಿ, ಸ್ವಸ್ಥಗೊಳಿಸಿ, ಸಂತೋಷಪಡಿಸು. ನನ್ನನ್ನು ಆಶೀರ್ವದಿಸಿ ನಡೆಸು. ಅದಲ್ಲದೆ, ನನ್ನ ಆತ್ಮದಲ್ಲಿ ನನ್ನನ್ನು ಬಲಪಡಿಸು. ಹರ್ಷವುಳ್ಳವನಾಗಿಯೂ ಧೈರ್ಯವುಳ್ಳವನಾಗಿಯೂ ಇರಲು ನನಗೆ ಕೃಪೆ ನೀಡು. ನಿನ್ನ ದಿವ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

*ಈ ದಿನ ಸ್ತೋತ್ರ ಹೇಳಿ ದೇವರನ್ನು ಸ್ತುತಿಸುವುದಕ್ಕೆ ಇಲ್ಲಿ ಈ ಲಿಂಕ್ ಕ್ಲಿಕ್ ಮಾಡಿ.* 👇

https://goo.gl/mj4qyF

*ಈ ದಿನದ ವಿಶ್ವಾಸದ ಅರಿಕೆಗಳನ್ನು ಅರಿಕೆಮಾಡಿ ಬಲಹೊಂದಲ್ಲೂ ಕೆಳಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ.* 👇

https://goo.gl/JSdXhz

*ಈ ದಿನದ ವಾಕ್ಯದ ಪ್ರಾರ್ಥನೆ ಮಾಡಲು ಕೆಳಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ.* 👇

https://goo.gl/f2Ybx6

*ಈ ದಿನದ ಬೈಬಲ್ ಕ್ವಿಜ ಆಡಲು ಕೆಳಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ.* 👇

https://goo.gl/66afyA

*ದಿನಕ್ಕೊಂದು ಆತ್ಮೀಕ ಕಥೆ ಓದಲ್ಲೂ ಕೆಳಗಿರುವ ಲಿಂಕ್ ನ್ನು ಕ್ಲಿಕ್ ಮಾಡಿ.* 👇

https://goo.gl/W4VrQ1

*ಸುಂದರವಾದ ಆರಾಧನೆ ಗೀತೆ ಕೇಳಲ್ಲೂ ಕ್ಲಿಕ್ ಮಾಡಿ.* 👇

https://goo.gl/SLKwqs

*ದೈವೀಕ ಆತ್ಮೀಕ ಸಂದೇಶ ಕೇಳಲ್ಲೂ ಕ್ಲಿಕ್ ಮಾಡಿ.* 👇

https://goo.gl/G2hSsA

*ಆತ್ಮೀಕ ಜೀವಿತಕ್ಕೆ ಸಹಾಯ ಮಾಡುವ ನಮ್ಮ ಆಪ್ಯಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.* 👇

https://play.google.com/store/apps/details?id=org.mannaministry.app&hl=en
https://play.google.com/store/apps/details?id=org.mannaministry1000praises.app&hl=en

MANNA MINISTRIES
Mannaministries.in@gmail.com
For Daily Devotion Contact: +91 9964247889

1 comment

  1. Sathyavedha Kiran says:

    Praise the Lord
    Hallelujah
    AMEN

Comments

Your email address will not be published. Required fields are marked *

WhatsApp us