ಕರ್ತನು ನಿಮ್ಮ ಎಲ್ಲಾ ಗೋಳಾಟಗಳನ್ನು ಕೇಳಿಸಿಕೊಂಡಿದ್ದಾನೆ!

  Posted on   by   No comments

csm

“ಆತನು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾನೆ. ಸೆರೆಯವರ ಗೋಳಾಟವನ್ನು ಲಕ್ಷಿಸಿದ್ದಾನೆ” (ಕೀರ್ತ. 102:19-20).

ಈ ದುಷ್ಟ ಪ್ರಪಂಚದಲ್ಲಿ ನಾವು ಅನೇಕ ದಾಸತ್ವದ ಮೂಲಕ ಹಾದು ಹೋಗುತ್ತೇವೆ. ನಾವು ಕೆಲವು ವೇಳೆ ದೇವರ ಸಾನಿಧ್ಯದಿಂದ ದೂರ ಹೋಗುವ ಒತ್ತಡಗಳಿರುತ್ತೇವೆ. ಯಾಕಂದರೆ ಪಾಪದ ಬಂಧನದಿಂದ ಅವರ ಪರಿಣಾಮವಾಗಿ ನಮಗೆ ಸಮಾಧಾನ, ಸಂತೋಷ, ಪರಿಶುದ್ಧತೆ, ದೇವರ ಕೃಪೆಯಿಂದ ಕೊಡುವ ಇವೆಲ್ಲವನ್ನು ಪಡೆಯಲು ವಿಫಲರಾಗುತ್ತೇವೆ. ನಂತರ ನಾವು ಈ ಗುಲಾಮತನದಿಂದ ಯಾವಾಗ ಸ್ವಾತಂತ್ರ್ಯ ಪಡೆಯುತ್ತೇವೆ ಎಂದು ಆಶ್ಚರ್ಯಪಡುತ್ತೇವೆ. ಇದೇ ರೀತಿ ರೋಗದ ಬಂಧನಗಳು ಕೂಡ ಇಂದಿನ ಆಧುನಿಕ ಪ್ರಪಂಚದಲ್ಲಿ ಹೆಚ್ಚಾಗಿ ಜನರು ಅನೇಕ ಕಾಯಿಲೆ ಮತ್ತು ರೋಗಗಳಿಂದ ಸಂಕಟ ಮತ್ತು ಹಿಂಸೆ ಅನುಭವಿಸುತ್ತಿದ್ದಾರೆ.

ಅದೇ ರೀತಿ ನಾವೂ ಕೂಡ, ಕುಗ್ಗುವಿಕೆ, ಒತ್ತಡ, ಬಡತನ ಮತ್ತು ಇತರೇ ಕೌಟುಂಬಿಕ ತೊಂದರೆಗಳಿಂದ ನಾವು ಬಾಧಿಸಲ್ಪಡುತ್ತೇವೆ. ಆದರೆ ನಮಗೆ ಗೊತ್ತಿರಬೇಕು. ದೇವರ ವಾಕ್ಯ ಎಂದಿಗೂ ಬದಲಾಗುವುದಿಲ್ಲ. ಮೇಲಿನ ವಾಗ್ದಾನ ವಚನದಂತೆ ನಾವು ಗೋಳಾಟದಿಂದ ದೇವರಿಗೆ ಪ್ರಾರ್ಥಿಸಿದಾಗ, ಆತನು ಪರಲೋಕದಿಂದ ನಮ್ಮ ಪ್ರಾರ್ಥನೆಯನ್ನು ಕೇಳಿ ನಮ್ಮ ಎಲ್ಲಾ ಬಂಧನಗಳನ್ನು ಮುರಿದು ನಮಗೆ ಬೇಕಾಗಿರುವ ಸ್ವಾತಂತ್ರ್ಯವನ್ನು ಕೊಡುತ್ತಾನೆ (ಕೀರ್ತ. 116:16).

ಒಂದು ಸಲ ಒಂದು ಕುಟುಂಬ ಹೆಚ್ಚಾದ ಸಂತೋಷ, ಅಸಂಪೂರ್ಣ ಆನಂದ ಮತ್ತು ದೈವೀಕ ಆಶೀರ್ವಾದಗಳಿಂದ ಇದ್ದನು. ಬೇರೆಯವರು ಹೊಟ್ಟೆಕಿಚ್ಚುಪಡುವಷ್ಟರ ಮಟ್ಟಿಗೆ ಅವರ ಒಗ್ಗಟ್ಟು ಅಭಿವೃದ್ಧಿ ಮತ್ತು ಸಂತೋಷವೂ ನೆಲೆಸಿತ್ತು. ಒಂದು ದಿನ ಯಥಾ ಪ್ರಕಾರ ಕುಟುಂಬದ ಯಜಮಾನ ಕಛೇರಿಗೆ ಹೋದನು. ಆದರೆ ಅಲ್ಲಿ ಅವನು ಮೂರ್ಛೆಹೋಗಿ ಆಸ್ಪತ್ರೆಗೆ ಸೇರಿಸಲ್ಪಟ್ಟನು. ಈ ವಿಷಯವನ್ನು ದೂರವಾಣಿಯ ಮೂಲಕ ಮನೆಯವರಿಗೆ ತಿಳಿಸಿದಾಗ ಅವರು ಘಾಸಿಯೆಂದು ಹೃದಯ ಮುರಿದಂತವರಾದರು. ಅದುವರೆವಿಗೂ ಆ ಕುಟುಂಬ ಸಂತೋಷ ಸಮಾಧಾನ ತೃಪ್ತಿಯಿಂದ ಜೀವಿಸುತ್ತಿದ್ದವರು ಈಗ ತೊಂದರೆಗಳಿಂದಲೂ ಸಮಸ್ಯೆಗಳಿಂದಲೂ ಅಲೆದಾಡುವಂತಾಯಿತು. ವೈದ್ಯಕೀಯ ಚಿಕಿತ್ಸೆಗಾಗಿ ಖರ್ಚುಗಳು ಮೇಲೆ ಮೇಲೆ ಏರುತ್ತಿತ್ತು. ಆದ್ದರಿಂದ ಅವರು ಹೆಚ್ಚು ಹೆಚ್ಚಾಗಿ ಈಸಿಕೊಳ್ಳಬೇಕಾಗಿ ಬಂತು. ಅದರ ಫಲವಾಗಿ ಅವರು ತಮ್ಮನ್ನು ಸಾಲದಿಂದಲೂ ನೋವು, ಯಾತನೆ ಮತ್ತು ಮಾನಸಿಕ ಹಿಂಸೆಯಿಂದ ಕಟ್ಟಿದಂತಾಗಿತ್ತು. ಆದರೂ ಅವರೆಲ್ಲಾ ಒಟ್ಟಾಗಿ ಉಪವಾಸದಿಂದ ದೇವರಿಗೆ ಪ್ರಾರ್ಥಿಸಿ ಅವರ ಬಂಧನವನ್ನು ಮುರಿದು ಅವರಿಗೆ ಬಿಡುಗಡೆ ಮತ್ತು ಮುರಿದ ಹೃದಯದ ಪ್ರಾರ್ಥನೆಯನ್ನು ಕೇಳಿದನು. ಅವರ ಪ್ರಾರ್ಥನೆಗಳಿಗೆ ಉತ್ತರಿಸಿದನು. ಆತನು ಕುಟುಂಬದ ಯಜಮಾನನಿಗೆ ಪೂರ್ಣ ಆರೋಗ್ಯ ಹಿಂತಿರುಗಿಸಿ ಅವರ ಬಂಧನಗಳೆಂಬ ಹಗ್ಗವನ್ನು ಮುರಿದು ಅವರಿಗೆ ಅವರ ಜೀವನದಲ್ಲಿ ದೊಡ್ಡ ಜಯ ಕೊಟ್ಟನು.

ಪ್ರಿಯರೇ! ನಿಮ್ಮ ಜೀವನದಲ್ಲಿ ದಿಢೀರನೆ ಬರುವ ವಿಧವಿಧವಾದ ಬಂಧನದ ಹಗ್ಗಗಳಿಂದ ಎಂದಿಗೂ ಎದೆಗುಂದಬೇಡಿ. ನೀವು ಆರಾಧಿಸುವ ದೇವರು ನಿಮ್ಮ ಬಂಧನದ ಹಗ್ಗಗಳನ್ನು ಮುರಿಯಲು ಶಕ್ತಿವಂತನಾಗಿದ್ದಾನೆ. ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು. ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು (ಕೀರ್ತ. 33:9). ಇದನ್ನು ನಂಬಿ ಜಯವನ್ನು ಪಡೆಯಿರಿ.

ಪ್ರಾರ್ಥನೆ :- ಪ್ರಿಯ ಕರ್ತನೇ! ಈ ಪ್ರಪಂಚದಲ್ಲಿ ನಾವು ಅನೇಕ ಬಂಧನಗಳೆಂಬ ಹಗ್ಗದಿಂದ ಕಟ್ಟಲ್ಪಟ್ಟಿದ್ದೇವೆ. ಇಂದಿನಿಂದ, ನನ್ನ ಜೀವನದ ಎಲ್ಲಾ ಬಂಧನವೆಂಬ ಹಗ್ಗಗಳನ್ನು ಮುರಿಯಲು ನಿನಗೆ ಎಲ್ಲಾ ಶಕ್ತಿ ಇದೆ ಎಂದು ತಿಳಿದುಕೊಳ್ಳಲು ಕೃಪೆ ಮಾಡು. ಈ ದೈವೀಕ ನಂಬಿಕೆಯಿಂದ ನಿನಗೆ ಉಪವಾಸ ಮತ್ತು ಪ್ರಾರ್ಥನೆ ಮಾಡಲು ಸಹಾಯ ಮಾಡಿ ಜಯವನ್ನು ಪಡೆಯುವಂತೆ ಮಾಡು. ನಮ್ಮ ಕರ್ತನಾದ ಯೇಸುವಿನ ಸ್ವಾತಂತ್ರ್ಯ ಕೊಡುವ ಹೆಸರಿನಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

 

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

For Daily Devotion Contact: +91 9964247889

 

Comments

Your email address will not be published. Required fields are marked *

WhatsApp us