ಕರ್ತನು ಪರೀಕ್ಷಿಸಿ ಹೃದಯವನ್ನು ತಿಳಿದುಕೊಳ್ಳುತ್ತಾನೆ!

  Posted on   by   1 comment

Woman praying with her bible on black background

“ದೇವರು ಅವನನ್ನು ಪರೀಕ್ಷಿಸುವದಕ್ಕೂ ಅವನ ಸರ್ವಾಂತರ್ಯವನ್ನು ತಿಳಿದುಕೊಳ್ಳುವದಕ್ಕೂ ಅವನನ್ನು ಕೈ ಬಿಟ್ಟನು” (2 ಪೂರ್ವ. 32:31).

ದೇವರು ಕೆಲವು ಸಲ ತನ್ನ ಸ್ವಂತ ವಿಶ್ವಾಸಿಗಳನ್ನು ಪರೀಕ್ಷಿಸುತ್ತಾನೆ. ನಿನ್ನ ಪ್ರೀತಿಯ ಸತ್ಯತೆಯನ್ನು ಬೇರೆಯವರ ದೃಢಪ್ರಯತ್ನದಿಂದ (2 ಕೊರಿ. 8:8) ದೇವರು ಅಬ್ರಹಾಮನನ್ನು ಇಸಾಕನ ಜೊತೆ ಅವನು ವೃದ್ಧಾನಾಗಿದ್ದಾಗ ಆಶೀರ್ವದಿಸಿದನು. ಆದರೆ, ಅಬ್ರಹಾಮನು ನಿಜವಾಗಿಯೂ ತನ್ನನ್ನು ಪ್ರೀತಿಸುತ್ತಾನೋ ಎಂದು ಪರೀಕ್ಷಿಸಲು ಇಷ್ಟಪಟ್ಟನು ಆದ್ದರಿಂದ, ಅವನನ್ನು ತನ್ನ ಒಬ್ಬನೇ ಮಗನಾದ ಇಸಾಕನನ್ನು ಪೀಠದ ಮೇಲೆ ಬಲಿ ಕೊಡುವಂತೆ ಕೇಳಿ ಕೊನೆಗೆ, ಅಬ್ರಹಾಮನ ಪ್ರೀತಿ ಸತ್ಯವಾದದ್ದು ಮತ್ತು ಶುದ್ಧವಾದದ್ದು ಎಂದು ತಿಳಿದುಕೊಂಡನು (ಆದಿ. 22:16-17). ಮತ್ತೊಬ್ಬ ದೇವರ ದೈವಭಕ್ತನಾದ ಸೇವಕನೂ ಆದ ಯೋಬನು ಅದೇ ರೀತಿ ಪರೀಕ್ಷಿಸಲ್ಪಟ್ಟನು. ಯೋಬನು ತೀರ ಮೋಸವಾದ ಪರಿಸ್ಥಿತಿಯಿಂದ ಪೀಡಿತನಾಗಿದ್ದರೂ ಅವನನ್ನು ಪೂರ್ಣವಾಗಿ ನಂಬಿದನು. ಯೋಬನು ಹೇಳಿದ, “ಆತನು ನನ್ನನ್ನು ಕೊಂದರೂ ಸರಿ, ನಾನು ಆತನನ್ನು ನಂಬುವೆನು” (ಯೋಬ. 13:15). ಮೇಲಿನ ವಾಗ್ಧಾನ ವಚನ ಹೇಳಿದಂತೆ, ದೇವರು ರಾಜನಾದ ಹಿಜ್ಕೀಯನನ್ನು ಅವನ ಹೃದಯ ತಿಳಿದುಕೊಳ್ಳುವದಕ್ಕಾಗಿ ಪರೀಕ್ಷಿಸಿದನು. ಹೌದು! ದೇವರಿಗೆ ನಮ್ಮ ಆಲೋಚನೆಗಳು ತಿಳಿದಿದೆ. ಆತನಿಂದ ಯಾವುದನ್ನು ಮುಚ್ಚಿಡಲಾಗುವದಿಲ್ಲ. ಆದ್ದರಿಂದ ನಮ್ಮ ಜೀವನದಲ್ಲಿ ನಾವು ಬಹಳ ಎಚ್ಚರವಾಗಿರಬೇಕು.

ಒಂದು ಸಲ, ಕರ್ತನನ್ನು ಹುಡುಕುವದರಲ್ಲಿ ನಂಬಿಗಸ್ತನಾಗಿದ್ದ ಒಬ್ಬ ಸಾಧರಣನಾದ ಮನುಷ್ಯನು ವಾಸವಾಗಿದ್ದನು. ದೇವರು ಅವನ ನಂಬಿಕೆಯನ್ನು ನೋಡಿ ಬಡ್ತಿಯಿಂದ ಆಶೀರ್ವದಿಸಿ ಅವನಿಗೆ ಅಭಿವೃದ್ಧಿಯ ಜೀವನ ಕೊಟ್ಟನು. ಈ ಸಮಯದಲ್ಲಿ ದೇವರು ಅವನನ್ನು ಪರೀಕ್ಷಿಸಲು ಇಷ್ಟಪಟ್ಟನು. ಅವನು ಐಶ್ವರ್ಯವಂತನಾಗಿ ಹೆಸರು ವಾಸಿಯಾದೊಡನೆ ಅನೇಕ ಸ್ನೇಹಿತರು ಅವನನ್ನು ಸುತ್ತುವರಿದರು. ನಿಮಗೆ ಹೆಸರು ಕೀರ್ತಿ ಇರುವಾಗ ಅನೇಕ ಸ್ನೇಹಿತರು ನಿಮ್ಮನ್ನು ಸುತ್ತುವರಿಯುವದು ಸಾಧಾರಣವೇ. ಈ ಸ್ನೇಹಿತರು ಅವನನ್ನು ಕೆಟ್ಟ ಮತ್ತು ದುಷ್ಟ ದಾರಿಗಳಲ್ಲಿ ಸೇರುವಂತೆ ಮಾಡಿದರು. ದೇವರು ಈ ಪರಿಸ್ಥಿತಿಯಲ್ಲೂ ಈ ಮನುಷ್ಯನು ಸತ್ಯವಂತನಾ ಎಂದು ಗಮನಿಸುತ್ತಿದ್ದರು. ಸ್ನೇಹಿತರು ಇವನನ್ನು ಕೆಟ್ಟ ದಾರಿಗಳಿಂದ ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಂತೆ, ಪ್ರಾರ್ಥನೆಯಲ್ಲಿ ಕಳೆಯುತ್ತಿದ್ದಂತಹ ಸಮಯ ಕಡಿಮೆಯಾಗುತ್ತಾ ಬಂತು. ಬೇಗನೆ, ಆತನ ಸ್ನೇಹಿತರು ಅವನ ಮೇಲೆ ಪೂರ್ಣ ಅಧಿಕಾರ ಪಡೆದರು. ಆತನು ತನ್ನ ಎಲ್ಲಾ ಹಣವನ್ನು ಕಳೆದುಕೊಂಡನು. ಮತ್ತು ಇತರರಿಂದ ಹಣ ಪಡೆಯುವಂಥಹ ನಿರಾಶೆಯ ಸ್ಥಿತಿಯಲ್ಲಿದ್ದನು. ಆಗ ಅವನು ತನ್ನ ತಪ್ಪನ್ನು ಅರ್ಥ ಮಾಡಿಕೊಂಡನು. ಆಗ ಅವನು ಕೂಗಿದನು, “ಅಯ್ಯೋ! ನಾನು ಕರ್ತನನ್ನು ಹುಡುಕುತ್ತಿದ್ದಾಗ ಎಷ್ಟೊಂದು ಆಶೀರ್ವಾದ ನನಗಿತ್ತು! ಆದರೆ ಈಗ, ದುಷ್ಟ ಜನರು ನನ್ನನ್ನು ಶೋಧನೆಗೆ ಒಳಪಡಿಸಿ ತಪ್ಪು ದಾರಿಗಳಲ್ಲಿ ಕರೆದೊಯ್ಯುತ್ತಿದ್ದಾರೆ. ಓ! ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ!” ಎಂದು ಪ್ರಲಾಪಿಸಿದನು.

ಪ್ರಿಯರೇ! ಈ ಲೋಕದಲ್ಲಿ ಅನೇಕ ಜನರು ನಮ್ಮನ್ನು ತಪ್ಪು ದಾರಿಗಳಲ್ಲಿ ಕೊಂಡೊಯ್ಯುತ್ತಾರೆ. ಆದರೆ ನಾವು ಯೇಸುವಿಗೆ ಹೊಂದಿಕೊಂಡಿದ್ದರೆ ಮತ್ತು ನೀತಿಯ ಜೀವನ ನಡೆಸಿದರೆ, ನಮ್ಮ ಹತ್ತಿರ ಯಾವ ಕೇಡೂ ಬರುವದಿಲ್ಲ. ದೇವರು ನಮ್ಮನ್ನು ಎಲ್ಲಾ ಪರಿಸ್ಥಿತಿಯಿಂದ ರಕ್ಷಿಸುತ್ತಾನೆ. ಆತನು ನಮ್ಮ ಪವಿತ್ರತೆಯ ಜೀವನದಲ್ಲಿ ಸಂತೋಷಪಡುತ್ತಾನೆ (1 ಕೊರಿ. 15:58).

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ಇಂದು ಈ ಪ್ರಪಂಚದ ಶೋಧನೆಗಳಿಗೆ ಒಳಗಾಗದಂತೆ ಕೃಪೆಯನ್ನು ಕೊಡು. ನಿನ್ನನ್ನೇ ಹೊಂದಿಕೊಂಡು, ನಿನ್ನ ಪ್ರಿಯ ಮಗುವಾಗಿರುವಂತೆ ಸಹಾಯ ಮಾಡು. ನೀನು ಪ್ರೀತಿಯಿಂದ ಕೊಡುವ ಪರೀಕ್ಷೆಗಳಲ್ಲಿ ಜಯಗಳಿಸುವಂತೆ ಮಾಡು. ಎಲ್ಲವನ್ನು ತಿಳಿದಿರುವ ನಮ್ಮ ಕರ್ತನಾದ ಯೇಸುಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ, ಆಮೆನ್.

 

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

 

1 comment

  1. RESHMA USHAINI says:

    I am blessed by this prayer

Comments

Your email address will not be published. Required fields are marked *

WhatsApp us