ಕರ್ತನು ಶತ್ರುಗಳ ಕೈಯಿಂದ ಬಿಡಿಸುತ್ತಾನೆ!

  Posted on   by   No comments

6a0fb9a996eb4576a261a68c049d3a73

“ಹಿಂದಟ್ಟುವ ಶತ್ರುಗಳಿಗೆ ನನ್ನನ್ನು ತಪ್ಪಿಸಿ ಕಾಪಾಡು” (ಕೀರ್ತ. 31:15).

ಈ ಪ್ರಪಂಚದಲ್ಲಿ ಜನರು, ಅನೇಕ ಅಪಾಯಗಳ ಮತ್ತು ಶತ್ರುಗಳ ಮಧ್ಯೆ ಇದ್ದು ಸಹಾಯ ಇಲ್ಲದವರಾಗಿಯೂ, ನಿರೀಕ್ಷೆ ಇಲ್ಲದವರಾಗಿಯೂ ಜೀವಿಸುತ್ತಾರೆ! ಅವರು ನಿರಾಶೆಯಿಂದ ಕುಗ್ಗಿದವರಾಗಿರುತ್ತಾರೆ. ಆದರೆ ದೇವರ ಮಕ್ಕಳಾದ ನಾವು ನಿರಾಶರಾಗಬೇಕಿಲ್ಲ. ಬದಲಾಗಿ ನಾವು ಕಣ್ಣುಗಳ ಗುಡ್ಡೆಯಂತೆ ನೋಡಿಕೊಳ್ಳುವ ರಕ್ಷಕನಿದ್ದಾನೆ ಎಂದು ಸಂತೋಷದಿಂದಲೂ, ಹೆಮ್ಮೆಯಿಂದಲೂ ಇರಬೇಕು. ನಾವು ಯಾತನೆಯಿಂದಲೂ, ತೊಂದರೆಯಿಂದಲೂ, ಸೋಲಿನಿಂದಲೂ, ಅವಮಾನದಿಂದಲೂ ಇದ್ದಾಗ, ಸರ್ವಶಕ್ತ ದೇವರು ನಮ್ಮ ಕೈ ಬಿಟ್ಟು ಬಿಟ್ಟಿದ್ದಾನೆ ಎಂದು ಜನರು ಯೋಚಿಸಿ ಮಾತನಾಡುತ್ತಾರೆ. ಇಲ್ಲ! ಆತನನ್ನು ನಂಬುವವರನ್ನು ಆತನು ಎಂದಿಗೂ ಕೈ ಬಿಡುವದಿಲ್ಲ. ಆತನು ಅವರನ್ನು ಎರಡರಷ್ಟು ಹೆಚ್ಚಾಗಿ ಆಶೀರ್ವದಿಸುತ್ತಾನೆ (ಕೀರ್ತ. 9:9).
ಒಬ್ಬ ಅಧಿಕಾರಿ ಒಂದು ಕಂಪನಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದನು. ಆತನು ಯಥಾರ್ಥವಂತನೂ, ನಂಬಿಗಸ್ಥನಾದ ಕೆಲಸಗಾರನಾಗಿದ್ದನು. ಆದ್ದರಿಂದ, ಆತನ ಅಧಿಕಾರಿಗಳು ಅವನ ಮೇಲೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿದ್ದರು. ಅವನು ಎಷ್ಟೊಂದು ಗೌರವವನ್ನು ಪಡೆದಿದ್ದನೆಂದರೆ ಬೇರೆ ಯಾವ ಕೆಲಸಗಾರನು ಅವನ ಮೇಲೆ ಏನೂ ಹೇಳಲು ಧೈರ್ಯವಿರಲಿಲ್ಲ. ಒಬ್ಬ ಹೊಸ ಹಿರಿಯ ಅಧಿಕಾರಿ ವರ್ಗಾವಣೆ ಮೇಲೆ ಅಲ್ಲಿಗೆ ಬಂದನು. ಅವನಿಗೆ ಈ ಮನುಷ್ಯನ ಮೇಲೆ ಹೊಟ್ಟೆಕಿಚ್ಚಾಯಿತು. ಕಾರಣ, ಅವನ ತಾಳ್ಮೆ ಮತ್ತು ದೇವರಲ್ಲಿ ಅವನ ಭಕ್ತಿ. ಅವನು ಬೇಕಂತಲೇ ಅವನು ಅಸಾಮಥ್ರ್ಯನೆಂದು ದೂರುತ್ತಾ ಯಾವ ಕಾರಣವಿಲ್ಲದೆ ತಪ್ಪು ಹುಡುಕಿದನು. ಅವನ ಎಲ್ಲಾ ಸಹೋದ್ಯೋಗಿಗಳಿಗೆ ಅವನು ನಿರಪರಾಧಿ ಎಂದು ಗೊತ್ತಿತ್ತು. ಆದರೆ ಆ ದೊಡ್ಡ ಅಧಿಕಾರಿಯ ಭಯದಿಂದ ಅವರೆಲ್ಲಾ ಸುಮ್ಮನೆ ಇದ್ದರು. ಆದರೆ ಈ ಕನಿಕರದ ಮನುಷ್ಯ ಈ ಎಲ್ಲಾ ಭಾರಗಳನ್ನು ತಾಳ್ಮೆಯಿಂದ ಹೊತ್ತುಕೊಂಡು, ಆ ಹಿರಿಯ ಅಧಿಕಾರಿಯ ಮನ ಪರಿವರ್ತನೆಯಾಗಲು ಅವನು ಉಪವಾಸ ಪ್ರಾರ್ಥನೆ ಮಾಡುತ್ತಿದ್ದನು. ಈ ಮಧ್ಯದಲ್ಲಿ ಆ ಹಿರಿಯ ಅಧಿಕಾರಿಯ ಕುಟುಂಬದಲ್ಲಿ ಒಂದು ದೊಡ್ಡ ಭಯಂಕರವಾದ ಸಮಸ್ಯೆ ಉಂಟಾಯಿತು ಆಗ ಆ ಕಛೇರಿಯ ಉದ್ಯೋಗಿಗಳು ಸಲಹೆಯಿತ್ತರು. ಏನಂದರೆ ಆತನ ಕುಟುಂಬದ ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕಿದ್ದರೆ ಈ ದೈವ ಮನುಷ್ಯ ಅವರಿಗಾಗಿ ಪ್ರಾರ್ಥಿಸಬೇಕು ಎಂದರು. ಆ ಹಿರಿಯ ಅಧಿಕಾರಿಯ ಸಮ್ಮತಿಯಿಂದ ಎಲ್ಲಾ ನೌಕರರು ಆ ದೇವ ಮನುಷ್ಯನ ಜೊತೆ ಅವನ ಮನೆಗೆ ಹೋದರು. ಅಲ್ಲಿ ಬಹಳ ದೀನತೆಯಿಂದಲೂ ಮತ್ತು ಪ್ರೀತಿಯ ಕರುಣೆಯಿಂದಲೂ ಆ ಕುಟುಂಬಕ್ಕಾಗಿ ಪ್ರಾರ್ಥಿಸಿದರು. ದೇವರು ಈ ಸೇವಕನ ಪ್ರಾರ್ಥನೆಯನ್ನು ಕೇಳಿ, ಆ ಭಯಾನಕ ಸಮಸ್ಯೆಯಿಂದ ಆ ಕುಟುಂಬವನ್ನು ಬಿಡಿಸಿದನು. ಆಗಲೇ ಆ ದೊಡ್ಡ ಅಧಿಕಾರಿ ಈ ದೈವೀಕ ಮನುಷ್ಯನ ದೊಡ್ಡತನವನ್ನು ಅರ್ಥಮಾಡಿಕೊಂಡನು.

ನನ್ನ ಪ್ರಿಯರೇ, ಈ ಪ್ರಪಂಚದಲ್ಲಿ ಅನೇಕ ಜನರು ನಮ್ಮನ್ನು ಬಾಧೆಗೊಳಪಡಿಸುತ್ತಾರೆ. ಈ ಜನರಿಂದ ಬಿಡುಗಡೆ ಹೊಂದುವ ಒಂದೇ ದಾರಿ ಎಂದರೆ ದೇವರ ಪ್ರಸನ್ನತೆ ಮತ್ತು ದೇವರ ಶಕ್ತಿ. ಮಾತ್ರವೇ ನಮಗೆ ಈ ಪ್ರಪಂಚದಲ್ಲಿ ಬೇರೆ ಯಾವ ದಾರಿಯೂ ಇಲ್ಲ. ಮೇಲಿನ ಪ್ರಸಂಗದಲ್ಲಿನ ಮನುಷ್ಯನಂತೆ ನೀವೂ ಸಹ ಎಲ್ಲಾ ಸಮಯದಲ್ಲಿ ಎಲ್ಲಾ ಜಾಗದಲ್ಲಿ ದೇವರನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಆತನು ನಿಜವಾಗಿಯೂ ಎಲ್ಲಾ ಕೇಡಿನಿಂದ ರಕ್ಷಿಸಿ ಆತನ ಹೆಜ್ಜೆಜಾಡಿನಲ್ಲಿ ಸುರಕ್ಷಿತವಾಗಿ ನಡೆಸುತ್ತಾನೆ (1 ಸಮು. 2:6).
ಪ್ರಾರ್ಥನೆ :- ಪ್ರಿಯ ಕರ್ತನೇ! ಈ ದಿನ, ನನ್ನನ್ನು ಎಲ್ಲಾ ವೈರಿಗಳಿಂದಲೂ ಮತ್ತು ಒತ್ತಡಗಳಿಂದಲೂ ರಕ್ಷಿಸಲು ನೀನೊಬ್ಬನೇ ನನಗೆ ಸಾಕು ಎಂದು ನಾನು ತಿಳಿದಿದ್ದೇನೆ. ನನ್ನೊಡನೆ ಇದ್ದು, ನನ್ನ ಜೀವನದ ಮೂಲಕ ನನ್ನನ್ನು ಆಶೀರ್ವದಿಸು. ನಮ್ಮ ಕರ್ತನಾದ ಯೇಸುವಿನ ರಕ್ಷಿಸುವ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us