ಕರ್ತನು ಸಮಾಧಾನಪಡಿಸಿ ನಮ್ಮನ್ನು ಸಂತೋಷಪಡಿಸುತ್ತಾನೆ

  Posted on   by   2 comments

god-1

ನಾನು ಅವರ ದು:ಖವನ್ನು ನೀಗಿಸಿ ಸಂತೋಷವನ್ನುಂಟು ಮಾಡಿ ಅವರು ತಮ್ಮ ವ್ಯಸನವನ್ನು ಬಿಟ್ಟು ಆನಂದಿಸುವಂತೆ ಅವರನ್ನು ಸಂತೈಸುವೆನು” (ಯೆರೆ. 31:13).

ಈ ಪ್ರಾಪಂಚಿಕ ಜೀವನದಲ್ಲಿ, ನಾವು ಎಲ್ಲಾ ಸಮಯದಲ್ಲಿ ನಾವು ಸಂತೋಷವಾಗಿಯೂ ಆನಂದವಾಗಿಯೂ ಇರಲು ಸಾಧ್ಯವಿಲ್ಲ. ಅನಿರೀಕ್ಷಿತವಾದ ಅಘಾತಗಳು, ಪ್ರಸಂಗಗಳು ನಮ್ಮನ್ನು ಬಹಳವಾಗಿ ಬಾಧಿಸುತ್ತದೆ. ಯೋಬನಿಗೆ ಆದಂತೆ, ದಿಢೀರನೆ ಎರಗುವ ವಿಪತ್ತುಗಳು ನಮ್ಮ ಆನಂದವನ್ನು ದು:ಖವಾಗಿ ಪರಿವರ್ತಿಸುತ್ತದೆ (ಯೋಬ. 6:3). ಭಾದೆಗಳು ಮತ್ತು ದು:ಖ ಬರುತ್ತದೆ! ದೇವರಿಗೆ ಸ್ತೋತ್ರ. ನಮ್ಮ ದು:ಖವನ್ನು ಸಂತೋಷವಾಗಿ ಪರಿವರ್ತಿಸಲು ನಮಗೆ ದೊಡ್ಡ ದೇವರಿದ್ದಾನೆ. ಆತನು ಕೃಪೆಯಿಂದ ನಮ್ಮ ದು:ಖದ ಜೀವನವನ್ನು ಬದಲಿಸಿ ಅದ್ಭುತವಾದ ರೀತಿಯಲ್ಲಿ ನಮ್ಮ ಕುಟುಂಬವನ್ನು ಕಟ್ಟಿದನು. ಹೌದು! ಆತನು ಎಲ್ಲಾ ಸಮಾಧಾನದ ದೇವರಾಗಿದ್ದಾನೆ (2 ಕೊರಿ. 1:3-4).

ಒಂದು ಸಾರಿ, ಒಬ್ಬ ಬೋಧಕರು ತಮ್ಮ ಪತ್ನಿ ಮತ್ತು ಮೂರು ಮಕ್ಕಳೊಡನೆ ವಾಸವಾಗಿದ್ದರು. ಅವರು ಸುಖದ ಜೀವನ ನಡೆಸುತ್ತಿದ್ದರು. ಅಯ್ಯೋ! ಒಂದು ಮಗು ಕಾಯಿಲೆಯಿಂದ ತೀರಿಕೊಂಡಿತು. ಆ ಮೇಲೆ ಒಂದಾದ ಮೇಲೆ ಒಂದರಂತೆ ಮೂರು ಮಕ್ಕಳು ಸತ್ತರು. ಅವರು ಎಂಥ ಯಾತನೆಯಲ್ಲಿ ಹಾದು ಹೋಗುತ್ತಿದ್ದರು. ಅವರು ತಮ್ಮ ಹೆಂಡತಿಯನ್ನು ಸಮಾಧಾನಪಡಿಸಲೆಂದು ಹೋದರು. ಅಯ್ಯೋ! ಆಕೆಯ ದೇಹ ತಣ್ಣಗಾಗಿತ್ತು. ಆಕೆಯೂ ಸತ್ತಿದ್ದಳು. ಇದು, ಅವರ ಹೃದಯವನ್ನು ಚೂರು ಚೂರಾಗಿಸಿತು. ಅವರು ವಿಪರೀತವಾಗಿ ಅತ್ತರು. ಈ ದು:ಖವನ್ನು ತಡೆಯಲಾರದೆ, ಅವರು ವಿಷ ಸೇವಿಸಿ ಜೀವ ಕೊನೆಗೊಳಿಸಬೇಕೆಂದಿದ್ದರು. ಅವರು ವಿಷದ ಸೀಸೆ ತೆಗೆದು ಅದನ್ನು ತಮ್ಮ ಬಾಯಲ್ಲಿ ಹಾಕಿಕೊಳ್ಳಬೇಕೆಂದಿದ್ದರು. ಇದ್ದಕ್ಕಿದ್ದಂತೆ, ಒಂದು ದೈವೀಕ ಸಂತೋಷ ಅವರನ್ನು ತುಂಬಲು ಆರಂಭಿಸಿತು. ಅವರು ಆ ಸೀಸೆಯನ್ನು ಎಸೆದು, ದೇವರನ್ನು ಸ್ತುತಿಸಲು ಆರಂಭಿಸಿದರು. ಅವರು ವಿಪರೀತವಾಗಿ ನಕ್ಕರು. ಇದನ್ನು ನೋಡಿದ ಜನರು ಇವರಿಗೆ ಬುದ್ಧಿ ಭ್ರಮಣೆಯಾಯಿತು ಅಂದುಕೊಂಡರು. ಅವರು ಹೇಳಿದರು, “ಓಹೋ! ಎಂಥಹ ವಿಷಾದ! ಇವರು ನೋವು ದು:ಖ ತಡೆಯಲಾರದೆ ಹುಚ್ಚರಾಗಿದ್ದಾರೆ. ಆದರೆ ಅವನು”, ಅವರ ಬಳಿ ಬಂದು ಹೇಳಿದರು ತಾನು ಪವಿತ್ರಾತ್ಮನು ಕೊಟ್ಟಿರುವ ದೈವೀಕ ಸಂತೋಷದಿಂದ ತುಂಬಿರುವುದಾಗಿ ಎಂದು.

ಹೌದು! ನನ್ನ ಪ್ರಿಯ ಸಹೋದರ ಸಹೋದರಿಯೇ, ದು:ಖ ಮತ್ತು ಭಾದೆಯ ಭಾರವನ್ನು ಹೊರುವುದು ಬಹಳ ಕಷ್ಟ ಈ ಕಾರಣಕ್ಕಾಗಿಯೇ ದೇವರು ನಮಗೆ ಸಮಾಧಾನಪಡಿಸುವ ಪವಿತ್ರಾತ್ಮನನ್ನು ಕೊಟ್ಟಿದ್ದಾನೆ (1 ಯೋಹಾ. 14:116).  ಹೌದು! ಆತನು ನಿಮ್ಮ ದು:ಖವನ್ನು ತೆಗೆದು ನಿಮ್ಮನ್ನು ಸಮಾಧಾನಪಡಿಸಿ ಅನುಭವಿಸಲಾರದಷ್ಟು ಸಂತೋಷವನ್ನು ಕೊಡುತ್ತಾನೆ (1 ಪೇತ್ರ. 1:8).

ಪ್ರಾರ್ಥನೆ :- ಪ್ರಿಯ ದೇವರೇ, ನನ್ನ ದು:ಖ ಮತ್ತು ಭಾದೆಯನ್ನು ವರ್ಣಿಸಲು ಸಾಧ್ಯವಿಲ್ಲ. ನೀನು ಒಬ್ಬನೇ ಸುಲಭವಾಗಿ ನನ್ನ ದು:ಖವನ್ನು ಸಂತೋಷವಾಗಿ ಮಾರ್ಪಡಿಸಲು ಸಾಧ್ಯ. ಇಂದಿನಿಂದ ನಿನ್ನ ಪವಿತ್ರಾತ್ಮನ ಸಂತೋಷದಿಂದ ನನ್ನನ್ನು ತುಂಬಿಸಿ ಸಂತೋಷದ ದಾರಿಯಲ್ಲಿ ನಡೆಸು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,
MANNA MINISTRIES
Mannaministries.in@gmail.com
For Daily Devotion Contact: +91 9964247889

2 comments

  1. Solomon says:

    Your daily messages inspires and it helps in growing spiritually. Kindly send daily bread book in Kannada .

  2. Freeda pinto says:

    Love you my god…

Comments

Your email address will not be published. Required fields are marked *