ಕರ್ತನೇ ! ಅಪಾಯಕಾಲದಲ್ಲಿ ನನ್ನನ್ನು ಬಂಡೆಯ ಮೇಲಿರಿಸು!

  Posted on   by   No comments

5452bc77cd9f666ae75a6d47cc8dc711

“ಅಪಾಯಕಾಲದಲ್ಲಿ ಆತನು ನನ್ನನ್ನು ಗುಪ್ತಸ್ಥಳದಲ್ಲಿ ಅಡಗಿಸುವನು ತನ್ನ ಗುಡಾರವೆಂಬ ಆಶ್ರಯ ಸ್ಥಾನದಲ್ಲಿ ನನ್ನನ್ನು ಭದ್ರಪಡಿಸು ಪರ್ವತಾಗ್ರದಲ್ಲಿ ನನ್ನನ್ನು ಸುರಕ್ಷಿತವಾಗಿ ಇರಿಸುವನು”.

ಇದು ಸುಂದರವಾದ ವಚನ. ಇದೇ ಸತ್ಯವನ್ನು ಇನ್ನೊಂದು ವಚನದಲ್ಲಿ ಹೇಳಿದೆ, “ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು (ಕೀರ್ತ. 91:1). ಯಾರಾರು ಆತನನ್ನು ನಂಬಿಕೆಯಿಂದ ಹುಡುಕಿ, ಹೃದಯ ಪೂರ್ವಕವಾಗಿ ಆತನಿಗೆ ಭಯಪಡುತ್ತಾರೋ ಅಂಥವರಿಗೆ ದೇವರು ಈ ಆಶೀರ್ವದಿತ ಅವಕಾಶವನ್ನು ಕೊಡುತ್ತಾನೆ. ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ (1 ಪೇತ್ರ. 5:8). ಸೈತಾನ ಮತ್ತು ಅವನ ದುಷ್ಟ ಮತ್ತು ಕೆಟ್ಟ ಜನರಿಂದ ನಾವು ನಿರೀಕ್ಷಿಸದೇ ಇರುವ ಅಪಾಯಗಳು ಮತ್ತು ಆಕ್ರಮಣಗಳನ್ನು ನಾವು ಎದುರಿಸುತ್ತೇವೆ. ಆದರೆ ಆತನನ್ನು ಯಥಾರ್ಥವಾಗಿ ಹುಡುಕುವವರಿಗೆ ದೇವರು ಆಶ್ರಯ. ನಾವು ಅಂತಹ ಅಪಾಯ ಮತ್ತು ಆಕ್ರಮಣಗಳನ್ನು ಎದುರಿಸಿದಾಗ ನಾವು ನಮ್ಮ ಬಂಡೆಯೂ, ಆಶ್ರಯದಾತನ ಬಳಿಗೆ ಹೋಗೋಣ ಆತನು ನಮ್ಮನ್ನು ಅಡಗಿಸಿ ನಮ್ಮನ್ನು ಬಂಡೆ ಮೇಲೆ ನಿಲ್ಲಿಸುತ್ತಾನೆ.

ಒಂದು ಹಳ್ಳಿಯಲ್ಲಿ ಎರಡು ವಿರುದ್ಧ ಗುಂಪುಗಳು ಇದ್ದವು. ಆಗ್ಗಿಂದಾಗ್ಗೆ ಅವರು ಒಬ್ಬರಿಗೊಬ್ಬರು ಹೊರಾಡುತ್ತಿದ್ದರು ಮತ್ತು ಅವರ ಮಧ್ಯದಲ್ಲಿ ಬಂದ ಎಲ್ಲವನ್ನು ನಾಶಮಾಡಲು ಪ್ರಯತ್ನ ಮಾಡುತ್ತಿದ್ದರು. ಅವರು ಮನೆಗಳನ್ನು ಪ್ರವೇಶಿಸಿ ಜನರನ್ನು ಎಳೆದು ಅವರನ್ನು ಹಿಂಸಿಸುತ್ತಿದ್ದರು. ಅವರಲ್ಲಿ ಒಂದು ದೈವ ಭಯದ ಕುಟುಂಬ ಇತ್ತು. ಒಂದು ಸಾರಿ ಈ ಗೂಂಡಾಗಳು ಅವರ ಮನೆ ಒಳಗೆ ಹೋದಾಗ, ದೇವರು ಅವರನ್ನು ಬಹಳ ಅದ್ಭುತವಾಗಿ ಅಡಗಿಸಿಟ್ಟನು. ಅವರು ಬರಿಗೈಯಿಂದ ಆ ಮನೆ ಬಿಟ್ಟು, ಇನ್ನೊಂದು ಮನೆಗೆ ನುಗ್ಗಿದರು. ಯಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥ ಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನೂ ತೋರ್ಪಡಿಸುತ್ತಾನೆ (2 ಪೂರ್ವ. 16:9). ದೇವರಿಗೆ ಗೊತ್ತು ಯಾರಾರು ತನ್ನನ್ನು ನಂಬುತ್ತಾರೋ ಎಂದು (ನಹೂ. 1:7). ಆತನು ತನ್ನ ಮಕ್ಕಳನ್ನು ದುಷ್ಟ ಜನರ ಕೈಗಳಿಗೆ ಎಂದೂ ಬಿಡುವುದಿಲ್ಲ ಮತ್ತು ಶಾಂತವಾಗಿ ಇರುವುದಿಲ್ಲ.

ಹೌದು! ನನ್ನ ಪ್ರಿಯ ಸ್ನೇಹಿತರೇ ನೀವು ಈ ಬಂಡೆಯ ಕೆಳಗೆ ಆಶ್ರಯಪಡೆದರೆ ಮತ್ತು ಆತನ ದಾರಿಯಲ್ಲಿ ನಡೆದರೆ, ಆತನು ನಿಮ್ಮನ್ನು ಗಮನಿಸಿಕೊಂಡು ದುಷ್ಟ ಮತ್ತು ಅಪಾಯಗಳಿಂದ ರಕ್ಷಿಸುತ್ತಾನೆ. ಕೇಳಿ ತನ್ನ ಮರಿಗಳನ್ನು ರೆಕ್ಕೆಯಡಿಯಲ್ಲಿ ಇಟ್ಟುಕೊಳ್ಳುವ ಹಾಗೆ ಕರ್ತನು ನಿಮ್ಮನ್ನು ಕಾಪಾಡುತ್ತಾನೆ. ನಿಮಗೆ ಯಾವುದೂ ತೊಂದರೆ ಮಾಡುವುದಿಲ್ಲ (ಲೂಕ. 10:19). ದುಷ್ಟ ಜನರು ನಿಮ್ಮನ್ನು ನಾಶಮಾಡಲು ಪ್ರಯತ್ನಿಸಿದರೆ, ಆತನು ನಿಮ್ಮನ್ನು ಅವರ ಆಯುಧಗಳಿಂದ ರಕ್ಷಿಸಿ ಹೇರಳವಾಗಿ ಆಶೀರ್ವದಿಸುತ್ತಾನೆ (ಯೆಶಾ. 54:17). ಆದ್ದರಿಂದ ಕೆರಳಬೇಡಿರಿ, ಮುನಿಸಿಕೊಳ್ಳಬೇಡಿರಿ. ಆತನ ಪವಿತ್ರ ಪಾದಗಳನ್ನು ಗಟ್ಟಿಯಾಗಿ ಮಾರ್ಥಳ ಸಹೋದರಿಯಾದ ಮೇರಿಯಂತೆ ಹಿಡಿದುಕೊಳ್ಳಿರಿ (ಲೂಕ. 10:42). ನೀನು ನಡೆಯಬೇಕಾದ ದಾರಿಯಲ್ಲಿ ನಡೆಸಿ ನಿನ್ನನ್ನು ಆಶೀರ್ವದಿಸುತ್ತಾನೆ.

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ ಈ ಪ್ರಪಂಚದಲ್ಲಿ ಜೀವನ ಎಷ್ಟೊಂದು ಭಯಂಕರ ನನ್ನನ್ನು ನನ್ನ ಕುಟುಂಬವನ್ನು ಈ ದುಷ್ಟ ಹೊಟ್ಟೆಕಿಚ್ಚಿನ ಜನರಿಂದ ರಕ್ಷಿಸಿ ನಮ್ಮನ್ನು ನಿನ್ನ ರೆಕ್ಕೆಯ ಮರೆಯಲ್ಲಿ ಅಡಗಿಸಿಡು. ಇಂದಿನಿಂದ, ನೀನೇ ನನ್ನ ನಿರೀಕ್ಷೆ. ನಿನ್ನಲ್ಲಿ ರೆಕ್ಕೆಯ ಮರೆಯಲ್ಲಿ ಅಡಗಿಸಿಡು. ಇಂದಿನಿಂದ ನೀನೇ ನನ್ನ ನಿರೀಕ್ಷೆ. ನಿನ್ನಲ್ಲಿ ನಾನು ಭರವಸವಿಟ್ಟಿದ್ದೇನೆ. ಆದ್ದರಿಂದ ನಾನು ಭಯಪಡುವುದೂ ಇಲ್ಲ. ಚಿಂತಿಸುವುದು ಇಲ್ಲ. ನನ್ನನ್ನು ಬಂಡೆ ಮೇಲೆ ನಿಲ್ಲಿಸಿ ಆಶೀರ್ವದಿಸು. ನಮ್ಮ ಕರ್ತನಾದ ಯೇಸುವಿನ ಕಾಪಾಡು ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us