ಕರ್ತನೇ ನಿನ್ನ ಮಾರ್ಗವನ್ನು ಮತ್ತು ದಾರಿಯನ್ನು ನನಗೆ ತೋರಿಸು!

  Posted on   by   No comments

0248_1 Sam_161112

“ಯೆಹೋವನೇ ನಿನ್ನ ಮಾರ್ಗವನ್ನು ನನಗೆ ತಿಳಿಸು ನೀನು ಒಪ್ಪುವ ದಾರಿಯನ್ನು ತೋರಿಸು” (ಕೀರ್ತ. 25:4).

ಈ ಒಂದು ವಚನವು ಒಬ್ಬ ಭಕ್ತನೂ, ದೈವೀಕ ವ್ಯಕ್ತಿಯೂ ಆದವನ ಅದ್ಭುತವಾದ ಪ್ರಾರ್ಥನೆ! ನಾವೆಲ್ಲರೂ ಈ ಪ್ರಾರ್ಥನೆಯನ್ನು ಪ್ರತಿ ದಿನದ ಮುಂಜಾನೆಯಲ್ಲಿ ಸಮರ್ಪಿಸಬೇಕಾಗಿರುತ್ತದೆ. ದೇವರು ಈ ಪ್ರಾರ್ಥನೆಯನ್ನು ನಾವು ಮುಂಜಾನೆಗಳಲ್ಲಿ ಶಾಂತವಾಗಿಯೂ, ನಿಶ್ಯಬ್ಧವಾಗಿರುವ ಸನ್ನಿವೇಶದಲ್ಲಿ ಮಾಡಿದಾಗ ಕೇಳುತ್ತಾನೆ (ಕೀರ್ತ. 65:2). ಆತನ ಮಾರ್ಗಗಳನ್ನು ದಾರಿಗಳನ್ನೂ ಹುಡುಕಿ, ದಿನವೆಲ್ಲಾ ಅದರಲ್ಲಿ ನಡೆಯುವಂತೆ ಆತನು ನಮಗೆ ಕೃಪೆ ಮಾಡುತ್ತಾನೆ. ನೀವು ಈ ಸತ್ಯವನ್ನು ನಿಮ್ಮ ಜೀವನದಲ್ಲಿ ಅನುಭವಿಸಿರಿ ದಿನದ ಅಂತ್ಯದಲ್ಲಿ ಸರ್ವಶಕ್ತ ದೇವರು ದಿನವೆಲ್ಲಾ ಹೇಗೆ ನಡೆಸಿದನೆಂದು ಆತ್ಮಪರೀಕ್ಷೆ ಮಾಡಿಕೊಂಡರೆ ನೀವು ಆತನನ್ನು ಸ್ತುತಿಸಬೇಕು. ನಿಜವಾದ ದೈವ ಭಕ್ತನು ಆತನ ಜೀವನದಲ್ಲಿ ನಡೆಯಬೇಕಾಗ ಮಾರ್ಗ ಇದೇ ಆಗಿರುತ್ತದೆ. ದುರದೃಷ್ಟವಶಾತ್, ಹೆಚ್ಚಾಗಿ ನಾವು ನಮ್ಮ ಜೀವನದಲ್ಲಿ ಇದನ್ನು ನಾವು ಹಿಂಬಾಲಿಸುವದಿಲ್ಲ ಆದರೆ ನಮಗೆ ಸರಿಹೊಂದುವ ಮತ್ತು ನಮಗೆ ಆಕರ್ಷಕವಾಗಿರುವ ದಾರಿಯಲ್ಲಿ ನಡೆಯುತ್ತೇವೆ. ಆದರೆ ಕೊನೆಗೆ ನಾವು ಹೆಚ್ಚು ಸಮಸ್ಯೆಗಳನ್ನು ಮತ್ತು ತೊಂದರೆಗಳಿಗೂ ಒಳಗಾಗುತ್ತೇವೆ (ಇಬ್ರಿ. 3:10-11).

ಒಬ್ಬ ಯುವಕನು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು. ಅವನು ಶಾಲೆ ಓದನ್ನು ಮುಗಿಸಿದ್ದನು. ಅವನ ಸಹಪಾಠಿಯರು ಮುಂದೆ ಏನು ಓದಬೇಕೆಂದು ತೀರ್ಮಾನಿಸಿದ್ದರು. ಆದರೆ ಈ ಹುಡುಗ ತಾನು ನಿಸ್ಸಾಹಯವಾಗಿ ತನ್ನ ಭವಿಷ್ಯದ ಬಗ್ಗೆ ನಿರ್ಧರಿಸಲು ಅಸಮರ್ಥನಾಗಿದ್ದನು. ಮುಂದಿನ ಉನ್ನತ ವ್ಯಾಸಂಗಕ್ಕಾಗಿ ಇವನ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಒಳ್ಳೆಯದಾಗಿರಲಿಲ್ಲ. ಆದ್ದರಿಂದ ಒಂದು ದಿನ ಅವನು ಒಂದು ಉದ್ಯಾನವನದಲ್ಲಿ ಕೂತು ಆಳವಾಗಿ ಯೋಚಿಸುತ್ತಿದ್ದನು. ಆ ಕಡೆ ಬಂದ ಒಬ್ಬ ದೇವರ ಸೇವಕನು ಈ ಹುಡುಗನು ಆಳವಾಗಿ ಯೋಚನೆ ಮಾಡುತ್ತಿರುವದನ್ನು ನೋಡಿ ಕೇಳಿದನು “ನೀನು ಇಲ್ಲಿ ಒಂಟಿಯಾಗಿ ಕುಳಿತು ಆಳವಾದ ಯೋಚನೆ ಮಾಡುತ್ತಿರುವೆಯಾ?” ಆ ಹುಡುಗ ತನ್ನ ಹೃದಯವನ್ನು ತೆರೆದು ತನ್ನ ಜೀವನದ ಬಗ್ಗೆ ಹೇಳಿದನು. ದೇವರ ಮನುಷ್ಯನು ದೇವರ ಮಾರ್ಗಗಳೂ ಮತ್ತು ದಾರಿಗಳ ಬಗ್ಗೆ ಹೇಳಿ ದಿನವೂ ಪ್ರಾರ್ಥಿಸಲು ಹೇಳಿದನು. ಈಗ ಅನೇಕ ವರ್ಷಗಳು ಅಂದಿನಿಂದ ಇಲ್ಲಿಯವರೆವಿಗೆ ಕಳೆದಿವೆ! ಅವನು ಹಿಂತಿರುಗಿ ಹಿಂದಿನ ಜೀವನ ನೋಡುವುದಾದರೆ ತಾನು ತನ್ನ ಜೀವನವನ್ನು ಆತನಿಗೆ ಸಮರ್ಪಸಿದಾಗ ಹೇಗೆ ದೇವರು ತನ್ನನ್ನು ಆಶೀರ್ವದಿಸಿದ್ದಾನೆ ಎಂದು ನೋಡುತ್ತಾನೆ. ಅವನಿಗೆ ಕೊಟ್ಟ ವಿದ್ಯಾಭ್ಯಾಸಕ್ಕಾಗಿ, ಸ್ಥಾನ-ಮಾನಕ್ಕಾಗಿ, ಬಡ್ತಿ ಹೀಗೆ ಎಲ್ಲಾ ಪ್ರಾಪಂಚಿಕ ಮತ್ತು ಆತ್ಮೀಕ ಆಶೀರ್ವಾದಗಳನ್ನು ಪಡೆದಿದ್ದಕ್ಕಾಗಿ ಅವನು ದೇವರನ್ನು ವಂದಿಸುತ್ತಲೇ ಇರುತ್ತಾನೆ.

ನನ್ನ ಪ್ರಿಯರೇ! ವಿಶೇಷವಾಗಿ ನನ್ನ ಯುವ ಜನರೇ! ನೀವು ನಿಮ್ಮ ಭವಿಷ್ಯದ ಬಗ್ಗೆ ಚಿಂತನೆ, ಮುಂದೆ ಏನು ಮಾಡಬೇಕು ಎಂದು ಆಶ್ಚರ್ಯಪಡುತ್ತಿರುವಿರಾ? ಉತ್ಸಾಹಗೊಳ್ಳಿರಿ, ಸರ್ವಶಕ್ತನಾದ ದೇವರು ಅದೇ ಆಶೀರ್ವಾದಗಳನ್ನು ನಿಮಗೂ ಕೊಡಲು ತಯಾರಿದ್ದಾನೆ. ನೀವು ಶ್ರದ್ಧೆಯಿಂದ ಆತನನ್ನು ಪ್ರಾರ್ಥಿಸಿರಿ ಆತನು ತನ್ನ ಮಾರ್ಗಗಳನ್ನು, ದಾರಿಗಳನ್ನು ಅದ್ಭುತವಾಗಿ ತೋರಿಸುತ್ತಾನೆ ಮತ್ತು ಆತನು ತನ್ನ ಸಲಹೆಯನ್ನು ಅನಿರೀಕ್ಷಿತ ಸಮಯ ಮತ್ತು ಜಾಗದಲ್ಲಿ ಕೊಡುತ್ತಾನೆ. ಮೇಲಿನ ಪ್ರಸಂಗದಲ್ಲಿನ ಹುಡುಗನಂತೆ ನೀನೂ ಪ್ರಕಾಶಿಸುವಂತೆ ಆಶೀರ್ವದಿಸುತ್ತಾನೆ (ಕೀರ್ತ. 25:12, 86:11).

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ನನ್ನ ಜೀವನದಲ್ಲಿ ನಾನು ಹೋಗಬೇಕಾಗಿರುವ ಮಾರ್ಗಗಳನ್ನು, ದಾರಿಗಳನ್ನು ತೋರಿಸು. ಇಂದಿನಿಂದ, ಮೇಲಿನ ಪ್ರಸಂಗದ ಹುಡುಗನಿಗೆ ಕೊಟ್ಟ ಹಾಗೆ ನಿನ್ನ ದೈವೀಕ ಕೃಪೆಯನ್ನು ನನಗೆ ಕೊಡು. ನೀನು ಹಾಗೆ ಮಾಡುವದಕ್ಕಾಗಿ ನನ್ನ ಹೃದಯಾಂತರಾಳದಿಂದ ವಂದಿಸುವೆ. ನಮ್ಮ ಕರ್ತನಾದ ಯೇಸುವಿನ ಬಲವಾದ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

 

Comments

Your email address will not be published. Required fields are marked *