ಕುಟುಂಬದ ಅಶೀರ್ವಾದಕ್ಕಾಗಿ ಪತಿಯ (ಗಂಡನ) ನಂಬಿಕೆಯ ಅರಿಕೆಗಳು

  Posted on   by   No comments

faith-ban
 1. ಯಹೋವನು ನನ್ನನ್ನು ನಿತ್ಯವೂ ನಡಿಸುತ್ತಾ, ಮರುಭೂಮಿಯಲ್ಲಿಯೂ ನನ್ನ ಆತ್ಮವನ್ನು ತೃಪ್ತಿಗೊಳಿಸಿ ನನ್ನ ಎಲುಬುಗಳನ್ನು ಸಸಾರಮಾಡುವನು; ನಾನು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗೂ ಸಮಾನವಾಗಿರುವೆನು. (ಯೇಶಾ : 58/11)
 2.  ಯಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವ ನಾನು ಧನ್ಯನು, ನನ್ನ ಕಷ್ಠಾರ್ಜಿತವನ್ನು ನಾನೇ ಅನುಭವಿಸುವೆನು, ನಾನು ಧನ್ಯನು, ನನಗೆ ಶುಭವಿರುವದು. (ಕೀರ್ತ : 128/1-2)
 3. ಅಂತಃಪುರದಲ್ಲಿರುವ ನನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಲತೆಯಂತೆ ಇರುವಳು; ನನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನನ್ನ ಮಕ್ಕಳು ಎಣ್ಣೇ ಮರದ ಸಸಿಗಳಂತಿರುವರು. ನಾನು ಮಕ್ಕಳ ಮಕ್ಕಳನ್ನೂ, ಇಸ್ರಾಯೇಲಿನ ಶುಭವನ್ನೂ ಕಾಣುವೆನು (ಕೀರ್ತ: 128/3-6)
 4. ನನ್ನ ಪತ್ನಿಯನ್ನು (ಹೆಂಡತಿ) ನನ್ನ ಸ್ವಂತ ಶರೀರವಾಗಿ ಭಾವಿಸಿ, ಅವಳನ್ನು ಪ್ರೀತಿಸುವೆನು, ಅವಳನ್ನು ಪೋಷಿಸಿ ಸಂರಕ್ಷಿಸುವೆನು. (ಎಫೆ:5/28-29)
 5. ನನ್ನ ಹೆಂಡತಿಯನ್ನು (ಪತ್ನಿ) ಪ್ರೀತಿಸುವೆನು, ಅವಳಿಗೆ ನಿಷ್ಠುರ (ಕಠಿಣ)ನಾಗಿ ಇರುವುದಿಲ್ಲ. (ಕೊಲೊ: 3/19)
 6. ನಾನು ಬಹು ಸಂತತಿಯುಳ್ಳವನಾಗಿ ಹೆಚ್ಚಿ, ಭೂಮಿಯನ್ನು ತುಂಬಿಕೊಂಡು ಅವುಗಳ ಮೇಲೆ ದೊರೆತನ ಮಾಡುವೆನು (ಆದಿ:1/28)
 7. ಯಹೋವನು ನಾನು ಒಂಟಿಗನಾಗಿರುವದು ಒಳ್ಳೇದಲ್ಲವೆಂದು ನನಗೆ ಸರಿ ಬೀಳುವ ಸಹಕಾರಿಯಾಗಿ ನನ್ನ ಹೆಂಡತಿಯನ್ನು ಉಂಟುಮಾಡಿದನು (ಆದಿ:2/18)
 8. ನಾನು ನೋಹನಂತೆ ನೀತಿವಂತನೂ, ತಪ್ಪಿಲ್ಲದವನೂ ಆಗಿ ನಡೆದು ದೇವರೊಂದಿಗೆ ಅನ್ಯೋನ್ಯವಾಗಿರುವೆನು (ಆದಿ: 6/9)
 9. ಯಹೋವನು ನನ್ನನ್ನು ದೊಡ್ಡ ಜನಾಂಗವಾಗಿ ಮಾಡಿ, ನನ್ನನ್ನು ಆರ್ಶೀವದಿಸಿ, ನನ್ನ ಹೆಸರನ್ನು ಪ್ರಖ್ಯಾತಿಗೆ ತರುವನು; ನಾನು ಆಶೀರ್ವಾದದ ನಿಧಿಯಾಗಿರುವೆನು (ಆದಿ: 12/2)
 10. ಯಹೋವನು ನನ್ನನ್ನು ಆಶೀರ್ವದಿಸಿದ್ದರಿಂದ ನೂರರಷ್ಟು ಬೆಳೆಯನ್ನು ಹೊಂದುವೆನು; ನಾನು ಶ್ರೀಮಂತನಾಗಿ ದಿನೇ ದಿನೇ ಅಭಿವೃದ್ದಿಹೊಂದಿ ಮಹಾ ಧನವಂತನಾಗುವೆನು. (ಆದಿ 26/12-13)
 11. ನಾನು ಯೋಸೇಫನಂತೆ ಪರಿಶುದ್ದನಾಗಿರುವೆನು, ನಾನು ಮಾಡುವದೆಲ್ಲವನ್ನೂ ಯಹೋವನು ಕೈಗೂಡಿಸುವನು (ಆದಿ: 39/3)
 12. ನಾನು ಕೆಲಸಗಳನ್ನು ಜಾಣತನದಿಂದ ಮಾಡಲು ಬೇಕಾದ ಜ್ಞಾನ ವಿದ್ಯಾ ವಿವೇಕವನ್ನೂ ಅನುಗ್ರಹಿಸಿ, ನನ್ನನ್ನು ದೇವರಾತ್ಮನಿಂದ ತುಂಬಿಸುವನು (ವಿಮೋ: 31/5)
 13. ಕರ್ತನು ನಿರ್ಮಿಸಿದ ಎಲ್ಲಾ ಜನಾಂಗಗಳಿಗಿಂತಲೂ, ನನಗೆ ಹೆಚ್ಚಾದ ಕೀರ್ತಿ ಘನಮಾನಗಳನ್ನುಂಟು ಮಾಡುವೆನು (ಧರ್ಮೋ: 26/19)
 14. ನನ್ನ ದೇವರಾದ ಯಹೋವನ ಆಜ್ಞೆಗಳನ್ನು ಅನುಸರಿಸಿ ನಡೆಯಲು ಜಾಗ್ರತೆಯುಳ್ಳವನಾಗಿ ಆತನ ಮಾತಿಗೆ ಕಿವಿಗೊಡುವದರಿಂದ, ನನ್ನ ದೇವರಾದ ಕರ್ತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನನ್ನನ್ನು ಉನ್ನತಿಗೆ ತರುವನು (ಧರ್ಮೋ: 28/1)
 15. ನನಗೆ ಊರಲ್ಲಿಯೂ ಶುಭವುಂಟಾಗುವದು. ಅಡವಿಯಲ್ಲಿಯೂ ಶುಭವುಂಟಾಗುವದು. ನಾನು ಕೆಲಸಕ್ಕೆ ಹೋಗುವಾಗಲೂ ಶುಭವುಂಟಾಗುವದು, ಬರುವಾಗಲೂ ಶುಭವುಂಟಾಗುವದು (ಧಮೋ: 28/3-6)
Categories: Daily confessions

Comments

Your email address will not be published. Required fields are marked *