ಕೂಡಲೇ ಉತ್ತರ! – ಆತ್ಮೀಕ ಕಥೆ 46

  Posted on   by   1 comment

ಸುಪ್ರಸಿದ್ಧ ದೇವ ಸೇವಕರಾದ ಸಿ.ಹೆಚ್. ಸ್ಪರ್ಜನ್‍ರವರು ಸಂದೇಶವೊಂದನ್ನು ತಯಾರಿಸಲು ಒಂದು ದಿನ ಬಹಳ ಶ್ರಮಪಟ್ಟರು. ತೀವ್ರವಾಗಿ ಪ್ರಾರ್ಥಿಸಿದರು; ಮುಖ್ಯ ವಿಷಯಗಳನ್ನು ಸಂಗ್ರಹಿಸಿದರು; ಸತ್ಯವೇದದ ವಚನಗಳನ್ನು ಗುರುತಿಸಿ ಕೊಂಡರು. ಆದರೂ ಪೂರ್ಣವಾದ ಒಂದು ಸಂದೇಶ ಅವರ ಹೃದಯದಲ್ಲಿ ಮೂಡಿಬರಲಿಲ್ಲ; ರಾತ್ರೆ ಬಹುಹೊತ್ತಿನವರೆಗೆ ಆತನು ಪರಿತಪಿಸುವುದನ್ನು ನೋಡಿದ ಆತನ ಮಡದಿ, ಆತನನ್ನು ಕುರಿತು “ಯಾಕೆ ಹೀಗೆ ಪರಿತಪಿಸುತ್ತೀರುವಿರಿ, ಸೌಮ್ಯವಾಗಿ ನಿದ್ರಿಸಿರಿ. ಬೆಳಿಗ್ಗೆ ಪುನ ಸಿದ್ಧಪಡಿಸೋಣ’ ಎಂದು ಪ್ರೀತಿಯಿಂದ ಹೇಳಿದಳು.
ಆತನು ಹಾಗೆಯೇ ಮಲಗಿ ನಿದ್ರಿಸಿದರು; ಕೆಲವು ನಿಮಿಷಗಳು ಕಳೆಯುವುದರೊಳಗಾಗಿ ನಿದ್ರೆಯಲ್ಲಿ ಆತನು ಏನನ್ನೋ ಹೇಳುತ್ತಿರುವುದನ್ನು ಗಮನಿಸಿದ ಆತನ ಮಡದಿ, ತನ್ನ ಪತಿಯು ಹೇಳುತ್ತಿರುವುದನ್ನು ವೇಗವಾಗಿ ಗುರುತಿಸಿಕೊಂಡಳು; ಅದನ್ನು ಬೆಳಿಗ್ಗೆ ಆತನಿಗೆ ಕೊಟ್ಟಳು. ಅದು ಒಂದು ಉತ್ತಮವಾದ ಅದ್ಭುತವಾದ ಸಂದೇಶವಾಗಿದ್ದಿತು. ರಾತ್ರಿ ತಯಾರಿಸಲಾಗದ, ಮುಗಿಸಲಾಗದ ಪ್ರಸಂಗವನ್ನು ಕರ್ತನು ಸ್ವಪ್ನದಲ್ಲಿ ಪ್ರಕಟಿಸಿದನು. ಎಂಥಾ ಅದ್ಭುತ ಸ್ವರೂಪನಾದ ಕರ್ತನು!
ಪ್ರಾರ್ಥನೆಗೆ ಕರ್ತನು ಉತ್ತರ ಕೊಡುವುದನ್ನು ಕುರಿತ ಸಂಭವಗಳನ್ನು ಸತ್ಯವೇದದಲ್ಲಿ ಹೇರಳವಾಗಿ ಕಾಣಬಹುದು. ಅರಸನಾದ ನೆಬುಕದ್ನೆಚ್ಚರನು ತಾನು ಕಂಡ ಸ್ವಪ್ನವನ್ನು ಅದರ ಅರ್ಥವನ್ನು ಹೇಳಬೇಕೆಂಬ ರಾಜಾಜ್ಞೆ ಹೊರಡಿಸಿದಾಗ, ದಾನಿಯೇಲನು ಮತ್ತು ಅವನ ಸ್ನೇಹಿತರು ಕರ್ತನ ಸನ್ನಿಧಾನದಲ್ಲಿ ಪ್ರಾರ್ಥಿಸಿದರು. ಸತ್ಯವೇದ ಹೇಳುತ್ತದೆ, ರಾತ್ರಿಯಲ್ಲಿ ಸ್ವಪ್ನದಲ್ಲಿ ರಹಸ್ಯವು ದಾನಿಯೇಲಿಗೆ ವ್ಯಕ್ತವಾಯಿತು. ಕೂಡಲೇ ದಾನಿಯೇಲನು ಪರಲೋಕ ದೇವರನ್ನು ಸ್ತುತಿಸಿದನು. ದೇವರ ಮಗುವೇ, ಕರ್ತನಿಗೆ, ವ್ಯಕ್ತಪಡಿಸಲಾಗದ ರಹಸ್ಯಗಳು ಯಾವುದೂ ಇಲ್ಲ!
“ಅವರು ಬೇಡುವುದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು” (ಯೆಶಾ. 65:24).

Categories: Spiritual Stories

1 comment

  1. Gurujackob says:

    Good message. Thank you Jesus.

Comments

Your email address will not be published. Required fields are marked *

× WhatsApp us