ಕೃತಜ್ಞತಾಸ್ತುತಿ ಮಾಡುವುದು ದೇವರ ಚಿತ್ತವಾಗಿದೆ!

  Posted on   by   1 comment

image

“ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿ ಮಾಡಿರಿ. ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ” (1 ಥೆಸ. 5:18).

ಕೃತಜ್ಞತೆಯ ಹೃದಯದಿಂದ ಹೊರ ಬರುವ ವಂದನೆಗಳನ್ನು ಮತ್ತು ಸ್ತೋತ್ರಗಳನ್ನು ದೇವರು ಪ್ರೀತಿಸುತ್ತಾನೆ. ಹತ್ತು ಮಂದಿ ಕುಷ್ಠರೋಗಿಗಳು ಸ್ವಸ್ಥರಾದಾಗ, ಒಬ್ಬನೇ ಹಿಂತಿರುಗಿ ಬಂದು ಅವನನ್ನು ವಂದಿಸಿದನು. ಉಳಿದ ಒಂಭತ್ತು ಮಂದಿ ಎಲ್ಲಿ ಎಂದು ಯೇಸು ಕೇಳಿದನು. ಸತ್ಯವೇದ ಕೀರ್ತ. 50:23ರಲ್ಲಿ ಹೇಳುತ್ತದೆ, ಯಾರಾರು ಸ್ತೋತ್ರವನ್ನರ್ಪಿಸುತ್ತಾರೋ ಅವರು ನನ್ನನ್ನು ಮಹಿಮೆ ಪಡಿಸುತ್ತಾರೆ”. ಆದ್ದರಿಂದ, ನಾವು ದೇವರನ್ನು ನಮ್ಮ ಜೀವನದ ಎಲ್ಲಾ ವಿಷಯಗಳಿಗಾಗಿ, ಒಳ್ಳೆಯದಕ್ಕಾಗಲೀ, ಕೆಟ್ಟದಕ್ಕಾಗಲೀ ಚಿಂತಿಸದೆ ಸ್ತೋತ್ರಿಸೋಣ. ಆದ್ದಿರಿಂದ, ನಾವು ನಿರಂತರವಾಗಿ ಸ್ತೋತ್ರದ ಯಜ್ಞವನ್ನು ದೇವರಿಗೆ ಅರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆ ಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ (ಇಬ್ರಿ. 13:15). ಆತನ ಚಿತ್ತಕ್ಕೆ ದೇವರು ಇದನ್ನೇ ಇಷ್ಟಪಡುತ್ತಾನೆ ಎಂದು ಮೇಲಿನ ವಚನ ಹೇಳುತ್ತದೆ.

ಒಂದು ಅನಾಥಾಲಯದಲ್ಲಿ, ಬೆಳಿಗನ ಉಪಹಾರದ ವೇಳೆ ಬಂದಿತು. ಎಲ್ಲಾ ಮಕ್ಕಳು ಊಟಕ್ಕಾಗಿ ಕುಳಿತ್ತಿದ್ದರು. ಆದರೆ, ಆ ಅನಾಥಾಲಯದ ಮೇಲ್ವಿಚಾರಕರಿಗೆ ಬೆಳಗಿನ ಉಪಹಾರಕ್ಕಾಗಿ ಕೊಡಲು ಏನೂ ಇರಲಿಲ್ಲ. ಅದೇ ಸಮಯದಲ್ಲಿ, ಏನು ಮಾಡಬೇಕೆಂಬ ಮಕ್ಕಳಿಗೆ ಏನು ಕೊಡಬೇಕೆಂಬ ಚಿಂತೆ ಇರಲಿಲ್ಲ. ಆತನು ಅವರನ್ನು ನೋಡಿ ಹೇಳಿದನು, “ಪ್ರಿಯ ಮಕ್ಕಳೇ! ದೇವರಿಗೆ ಸ್ತೋತ್ರಮಾಡಿ, ಆತನಿಗೆ ಹೊಸ ಹಾಡು ವಂದನೆಯೊಡನೆಯೂ ಸ್ತೋತ್ರದೊಡನೆಯೂ ಹಾಡಿರಿ” ಆದರೆ, ಮಕ್ಕಳಿಗೆ ಬಡಿಸಲು ಯಾವ ಊಟವೂ ಇರಲಿಲ್ಲ. ಆ ಸಮಯದಲ್ಲಿ, ಒಬ್ಬ ಮನುಷ್ಯನು ಅನಾಥಾಲಯಕ್ಕೆ ಬಂದು ಹೇಳಿದನು. “ಸಾರ್! ನನಗೆ ಲಾರಿ ತುಂಬ ಹಾಲು ಇದೆ. ಯಂತ್ರದಲ್ಲಿ ಸ್ವಲ್ಪ ತೊಂದರೆಯಿರುವುದರಿಂದ ಅದು ರೀಪೇರಿಯಾಗಬೇಕಾಗಿದೆ. ನಾನು ಲಾರಿಯನ್ನು ಸರಿಮಾಡಬೇಕಾದರೆ, ಟ್ಯಾಂಕಿನಲ್ಲಿರುವ ಎಲ್ಲಾ ಹಾಲನ್ನು ಹೊರತೆಗೆಯಬೇಕು. ಆಗ ಮಾತ್ರ ನಾನು ರಿಪೇರಿ ಮಾಡಲು ಸಾಧ್ಯ. ಆದ್ದರಿಂದ, ದಯಮಾಡಿ ಈ ಹಾಲಿನ ಬಾಟಲಿಯನ್ನೆಲ್ಲಾ ತೆಗೆದುಕೊಳ್ಳಿರಿ”. ಅದೇ ಸಮಯದಲ್ಲಿ, ಇನ್ನೊಬ್ಬ ಮನುಷ್ಯ ಆ ಜಾಗಕ್ಕೆ ಬಂದು ಮೇಲ್ವಿಚಾರಕನಿಗೆ ಹೇಳಿದ್ದೇನೆಂದರೆ, ಕರ್ತನು ಬೇಕರಿಯ ಮಾಲೀಕನಿಗೆ ಕನಸಿನಲ್ಲಿ ಹೇಳಿದ್ದೇನಂದರೆ, ಅನಾಥಾಲಯದ ಮಕ್ಕಳಿಗೆ ರೊಟ್ಟಿಯನ್ನು ದಾನ ಮಾಡಬೇಕೆಂದು. ಆದ್ದರಿಂದ, ಅವನು ಒಂದು ಲಾರಿ ತುಂಬಾ ರೊಟ್ಟಿಯನ್ನು ಅವರಿಗಾಗಿ ಕೊಡಲು ತಂದಿದ್ದನು. ಓಹ್ ಎಂಥಹ, ಅದ್ಭುತ ಅವರು ದೇವರನ್ನು ಕೀರ್ತ. 22:3ರಂತೆ ಸ್ತೋತ್ರಿಸಿದಾಗ ದೇವರ ಪ್ರಸನ್ನತೆ ಆ ಜಾಗವನ್ನು ಆವರಿಸಿತು. ಮತ್ತು ದೇವರು ಅನಾಥಾಶ್ರಮದಲ್ಲಿದ್ದ ಎಲ್ಲರಿಗೂ ಸಾಕಷ್ಟು ತಿನ್ನಲು ಆಹಾರಕೊಟ್ಟನು.

ಹೌದು! ನೀವು ಸಹ ದೇವರನ್ನು ನಂಬಿ ಹೃದಯ ತುಂಬಿದವರಾಗಿ ಸ್ತೋತ್ರಿಸಿರಿ ಮತ್ತು ಎಲ್ಲಾ ಸಮಯದಲ್ಲಿಯೂ ಮತ್ತು ಎಲ್ಲಾ ಅವಶ್ಯಕತೆಗಳಿಗಾಗಿಯೂ ಆತನನ್ನು ಆಶ್ರಯಿಸಿರಿ. ಆಗ ಆತನು ನಿಮ್ಮನ್ನು ಆಶೀರ್ವದಿಸಿ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತಾನೆ (ಯೆರೆ. 20:13).

ಪ್ರಾರ್ಥನೆ : ಪ್ರಿಯ ಪರಲೋಕದ ತಂದೆಯೇ! ನಿನ್ನ ಮೇಲೆ ಆತುಕೊಳ್ಳಲು ನನ್ನ ಜೀವನದ ಎಲ್ಲಾ ವಿಷಯಗಳಲ್ಲಿ ನಿನ್ನನ್ನು ನಂಬಲು ಕೃಪೆ ಮಾಡು. ನಾನು ಅಗಲೇ ಪಡೆದಿರುವ ಎಲ್ಲಾ ಆಶೀರ್ವಾದಗಳಿಗಾಗಿ ನಿನಗೆ ಕೃತಜ್ಞತೆ ತೋರಿಸುವಂತೆ ಹೃದಯವನ್ನು ಕೊಡು. ಕೃತಜ್ಞತಾ ಸುತ್ತಿಯೊಡನೆ ಪ್ರಾರ್ಥಿಸುವಂತೆ ನನಗೆ ಬೋಧಿಸು. ಇಂದಿನಿಂದ, ನಾನು ಭಕ್ತಿಯ ಹಾಗೂ ನಂಬಿಕೆಯ ಜೀವನ ನಡೆಸುವಂತೆ ಸಹಾಯ ಮಾಡು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುವೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.mannaministry.app

MANNA MINISTRIES
Mannaministries.in@gmail.com
For Daily Devotion Contact: +91 9964247889

1 comment

  1. Francis pinto says:

    Praise the Lord

Comments

Your email address will not be published. Required fields are marked *

WhatsApp us