ಕ್ರೂಜೆಗೆ ವಿರೋಧಿ ಆತ್ಮೀಕ ಕಥೆ 20

  Posted on   by   No comments

cross-1448946_960_720

“ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ; ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ” (ಫಿಲಿ. 3:18).

ಫ್ರಾನ್ಸ್ ದೇಶದಲ್ಲಿ ರಾಜಕೀಯ ಕ್ರಾಂತಿ ನಡೆಯುತ್ತಿದ್ದ ಕಾಲದಲ್ಲಿ, ದಂಗೆ ಎದ್ದಂಥಹ ಒಂದು ಗುಂಪು ಅರಮನೆಯೊಳಗೆ ನುಗ್ಗಿ ಸಿಕ್ಕಿದ್ದನ್ನೆಲ್ಲವನ್ನೂ ಒಡೆದು ಹಾಳುಮಾಡಿ ಕೊಳ್ಳೆ ಹೊಡೆಯುತಿದ್ದರು. ಎದುರಾದವರನ್ನು ಕಡಿದು ಉರುಳಿಸಿದರು, ಕನ್ನಡಿಗಳನ್ನೆಲ್ಲಾ ಒಡೆದು ಹಾಳು ಮಾಡಿ ಬೆಂಕಿ ಇಟ್ಟರು.

ಒಂದು ಬಾಗಿಲನ್ನು ಒಡೆದಾಗ ಅಲ್ಲಿ ಒಂದು ಸಣ್ಣ ದೇವಾಲಯವಿರುವುದು ಕಾಣಿಸಿತು; ಅಲ್ಲಿ ಗೋಡೆಯ ಮೇಲೆ ಬಹು ದೊಡ್ಡ ಆಕಾರದ, ಕ್ರೂಜೆಯಲ್ಲಿ ಹಾಕಲ್ಪಟ್ಟ ಕ್ರಿಸ್ತನ ಚಿತ್ರಪಟತೂಗ ಹಾಕಲ್ಪಟ್ಟಿತ್ತು. ಆ ದೃಶ್ಯವನ್ನು ಕಂಡಕೂಡಲೇ, ಆ ಕ್ರಾಂತಿಯ ಗುಂಪಿನ ಮುಖಂಡನು ತನ್ನ ಟೋಪಿ (ಹ್ಯಾಟ್) ತೆಗೆದನು; ಭಯಭಕ್ತಿಯಿಂದ ಮೊಣಕಾಲೂರಿದನು, ಉಳಿದ ವೀರರೆಲ್ಲಾ ಹಾಗೆಯೇ ಮಾಡಿದರು, ಮರುನಿಮಿಷ ಆ ಮುಖಂಡರು ನಿಧಾನವಾಗಿ ಆ ಚಿತ್ರ ಪಟವನ್ನು ಸಮೀಪಿಸಿ ಭಯಭಕ್ತಿಯಿಂದ ಅದನ್ನು ತಿರುವಿ ಹಾಕಿದನು. ನಂತರ ಅವರು ಕೊಳ್ಳೆ ಹೊಡೆಯಲು, ಬೆಂಕಿ ಇಡಲು, ಕಡಿದು ಬೀಳಿಸಲು ಹೊರಟರು!

ಅನೇಕರು ಭಕ್ತಿ ಈ ವಿಧವಾದುದಾಗಿದೆ. ಶುಭ ಶುಕ್ರವಾರದಂದು, ಕ್ರಿಸ್ತನಿಗಾಗಿ ಧಾರೆ ಧಾರೆಯಾಗಿ ಕಣ್ಣೀರು ಸುರಿಸುವರು, ಪುನರುತ್ಥಾನದ ಹಬ್ಬದಂದು, ಚೆನ್ನಾಗಿ ಕುಡಿದು ಬಿರಿಯಾನಿ ತಿನ್ನಲು ಎದುರು ನೋಡುತ್ತಿರುತ್ತಾರೆ. “ಯೆರುಸಲೇಮಿನ ಸ್ತ್ರೀಯರೇ ನನಗೋಸ್ಕರ ಅಳಬೇಡಿರಿ, ನಿಮಗೋಸ್ಕರವೂ ನಿಮ್ಮ ಮಕ್ಕಳಿಗೋಸ್ಕರವೂ ಅಳಿರಿ” ಎಂದನು ಯೇಸು!

“ಕ್ರಿಸ್ತನೊಂದಿಗೆ ಶಿಲುಬೆಗೆ ಹಾಕಿಸಿಕೊಂಡವನಾಗಿದ್ದೇನೆ; ಇನ್ನು ಜೀವಿಸುವವನು ನಾನಲ್ಲ, ಕ್ರಿಸ್ತನು ನನ್ನಲ್ಲಿ ಜೀವಿಸುತ್ತಾನೆ” (ಗಲಾ. 2:20).

“ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ, ಇಷ್ಟೇ ಅಲ್ಲದೇ ಯೇಸು ಕ್ರಿಸ್ತನನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳಕೊಂಡು ಅದನ್ನು ಕಸವೆಂದು ಎಣಿಸುತ್ತೇನೆ” (ಫಿಲಿ. 3:7-8).

Categories: Spiritual Stories

Comments

Your email address will not be published. Required fields are marked *

WhatsApp us