ಚಾಲ್ರ್ಸ್ ಫಿನ್ನಿ – ಆತ್ಮೀಕ ಕಥೆ 26

  Posted on   by   2 comments

Image processed by CodeCarvings Piczard ### FREE Community Edition ### on 2016-02-04 05:30:50Z | http://piczard.com | http://codecarvings.comþÿÿÛ]_T=

ಚಾಲ್ರ್ಸ್ ಫಿನ್ನಿಯವರು ವಕೀಲರಾಗಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಿರುವಾಗ ದೇವರ ಸೇವೆಯನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಂಡರು. ಅವರು ಸೇವೆಯನ್ನು ಪ್ರಾರಂಭಿಸಿದ ವರ್ಷದಲ್ಲೇ ಅಮೆರಿಕಾ ದೇಶವನ್ನು ಕದಲಿಸಿದರು. ಫಿನ್ನಿ ಕೆಲವು ಮನೆಗಳಿಗೆ ಪ್ರವೇಶಿಸಿದಾಗ ಕೆಲವರು ಮೊಣಕಾಲೂರಿ ಇಲ್ಲವೆ ಅಡ್ಡಬಿದ್ದು ಪಾಪದ ಮನವರಿಕೆಯಿಂದ ದೇವರಿಗೆ ಪ್ರಾರ್ಥಿಸಿ ತಮ್ಮನ್ನು ಒಪ್ಪಿಸಿಕೊಡುತ್ತಿದ್ದರು. ಒಂದು ಸಾರಿ ಫಿನ್ನಿಯವರು ಯಟಿಕಾ ಎಂಬ ಸ್ಥಳದಲ್ಲಿದ್ದ ಪ್ಯಾಕ್ಟರಿಯೊಂದಕ್ಕೆ ಹೋಗಿದ್ದರು. ಅಲ್ಲಿ ಅವರು ಒಬ್ಬ ಸ್ತ್ರೀಯನ್ನು ಕೇವಲ ದೃಷ್ಟಿಸಿ ನೋಡಿದ್ದರಿಂದ ಆಕೆಯು ಬಲವಾಗಿ ಕಣ್ಣೀರು ಸುರಿಸುತ್ತಾ ಮಾನಸಾಂತರ ಹೊಂದಿದಳು. ಪ್ಯಾಕ್ಟರಿಯಲ್ಲಿದ್ದ ಜನರೆಲ್ಲರೂ ಅದೇ ರೀತಿಯಾಗಿ ಕಣ್ಣೀರು ಸುರಿಸಲಾರಂಭಿಸಿದರು. ಪ್ಯಾಕ್ಟರಿಯ ಮಾಲೀಕನು ಮೆನೇಜರಿಗೆ ಹೇಳಿದ್ದು, “ಪ್ಯಾಕ್ಟರಿಯನ್ನು ನಿಲ್ಲಿಸಿಬಿಡಿರಿ ಜನರು ದೈವೀಕ ಸಂಗತಿಗಳಿಗೆ ಲಕ್ಷ್ಯಕೊಡಲಿ. ಈ ಪ್ಯಾಕ್ಟರಿ ನಡೆಯುವುದಕ್ಕಿಂತಲೂ ನಮ್ಮ ಆತ್ಮಗಳು ರಕ್ಷಿಸಲ್ಪಡುವದು ಬಹಳ ಪ್ರಾಮುಖ್ಯ”

ಅನ್ವಯ :- ಕರ್ತನು ಮನಮುರಿದವರೊಂದಿಗಿರುವನು (ಯೆಶಾ. 57:15).

Categories: Spiritual Stories

2 comments

  1. Raju says:

    Debate manna ashirvadisi kapadu

  2. PAMPAPATHI V says:

    Hallelujah…. We need this kind of Servants Of GOD to Change and Spread the Gospel.
    Lord Says, Be Holy as i am.. Then only a man can do good ministry..

Comments

Your email address will not be published. Required fields are marked *

WhatsApp us