ಜಾನಿ ಲಿವರ್  – ಬಾಲಿವುಡ್ ಹಾಸ್ಯಗಾರ ಮತ್ತು ನಟ

  Posted on   by   14 comments

“ಪ್ರತಿ ದಿನ ನಾನು ಸಂಭ್ರಮ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದೆನು. ಚಲನ ಚಿತ್ರದಲ್ಲಿ ನಾನು ಅಭಿನಯಿಸದೆ ಇರುವಾಗ ಕುಡಿತ ಚಟದಲ್ಲಿರುತ್ತಿದ್ದೆನು. ನನ್ನ ಮಗನ ಕತ್ತಿನಲ್ಲಿ ಗೆಡ್ಡೆಯಿಂದ ಚಿಕಿತ್ಸೆಗೊಳಗಾಗುವವರೆಗೂ ನನ್ನ ಜೀವಿತ ಬಹಳ ಒಳ್ಳೆಯದಾಗಿ ಕಾಣಿಸುತ್ತಿತ್ತು. “

ನಾನು ಜನರನ್ನು ನಗಿಸಲು ಬಲ್ಲೆನು ಸಾಧಾರಣ ಜನರು,ಸಿರಿವಂತರು,ಪ್ರಖ್ಯಾತ ಜನರನ್ನು ಮತ್ತು ಸ್ಥಿತಿಗತಿಗಳನ್ನು ಸರಿಯಾಗಿ ಅಣಕಿಸಲೂ ಬಲ್ಲೆನು. ನನ್ನ ಕಣ್ಣುಗುಡ್ಡೆಗಳನ್ನು ಉರುಳಿಸುವಾಗ, ನನ್ನ ಶರೀರವನ್ನು ಅತಿಶಯವಾಗಿ ವಿವಿಧ ರೀತಿಯಲ್ಲಿ ತಿರುಗಿಸುವಾಗ ಮತ್ತು ನನ್ನ ವಾಕ್ಚಾತುರ್ಯವನ್ನು ಬೇರೆ ವಿಧವಾಗಿ ಮಾಡುವಾಗ, ಜನರು ನನ್ನನ್ನೂ ನೋಡಿ ವಿಪರೀತವಾಗಿ ನಗುವರು.

ನನಗೆ ಯಾವಾಗಲೂ ಒಂದು ಸಾಧಾರಣ ಮನೋಭಾವನೆ ಇತ್ತು ಹೇಗಾದರೂ, ಜೀವಿತವನ್ನು ಸೂಕ್ತವಾಗಿ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ ? ನಾನು ಬೆಳೆಯುತ್ತಾ ಬಂದ ಹಾಗೆ, ಯಾವಾಗಲೂ ಸ್ನೇಹತ್ವದಿಂದಲೂ ಜನಸಂಘಪ್ರಿಯವಾಗಿಯೇ ಬೆಳೆದೆನು. ಒರಟಾದ ಪಾರ್ಟಿಗಳಿಗೆ ಹೋಗುವುದಕ್ಕೂ, ನನ್ನ ಸ್ನೇಹಿತರ ಜತೆ ಹೆಚ್ಚು ಸಾಹಸ ಕಾರ್ಯಗಳನ್ನು ಮಾಡುವುದಕ್ಕೂ ಇಷ್ಟಪಡುತ್ತಿದ್ದೆನು. ಯಾವ ಮತದವರಾದರೂ ಸರಿ ಅವರ ಹಬ್ಬಗಳಲ್ಲೂ ಪಾಲುಗೊಳ್ಳುತ್ತಿದ್ದೆನು. ಪ್ರತಿಯೊಂದು ಪಾರ್ಟಿಗಳಲ್ಲಿಯೂ ನೀವು ನನ್ನನ್ನು ನೋಡಬಹುದಿತ್ತು. ನನ್ನಿಂದ ಸಸಾಧ್ಯವಾದಷ್ಟು ಮಟ್ಟಿಗೆ ನನ್ನ ಜೀವಿತದಲ್ಲಿ ಆನಂದವಾಗಿರಲು ಪ್ರಯತ್ನಿಸುತ್ತಿದ್ದೆನು.

ದಕ್ಷಿಣ ಭಾರತದಲ್ಲಿ ನಾನು ಬೆಳೆದು ಬಂದೆನು.ಭಾರತದ ಒಂದು ದೊಡ್ಡ ಸಂಸ್ಥೆಯಲ್ಲಿ ನನ್ನ ತಂದೆಗೆ ಕೆಲಸ ಸಿಕ್ಕಾಗ, ನಾವು ಮುಂಬೈಗೆ ಬಂದು ಅಲ್ಲಿ ವಾಸಮಾಡಿದೆವು. ನಾನು ಅಷ್ಟೊಂದು ಉತ್ತಮ ವಿದ್ಯಾರ್ಥಿಯಾಗದಿದ್ದರೂ, ಹೇಗೂ ಮುಂದೆ ಹೋಗುತ್ತಿದ್ದೆನು. ನಿಜಕ್ಕೂ ಹೇಳುವುದಾದರೆ, ನನ್ನ ಜೀವಿತ ಸಾಮಾನ್ಯ ಅಂದಾಜು ಆಗಿತ್ತು. ನನ್ನ ಜೀವಿತ ಸರಿಯಾಗಿರಬೇಕೆಂಬ ಉದ್ದೇಶದಿಂದ, ನನ್ನ ತಂದೆಯವರು ತಮ್ಮ ಸಂಸ್ಥೆಯಲ್ಲಿ ನನಗೊಂದು ಕೆಲಸ ಕೊಟ್ಟರು. ನನ್ನ ಜೊತೆಗೆಲಸದವರ ಜೊತೆ ಸಮಯ ಕಳೆಯುತ್ತಾ,ಮಧ್ಯೆ ಮಧ್ಯೆ ಕಿರುನಾಟಕ ಮತ್ತು ಹಾಸ್ಯ ನಟನೆಯಿಂದ ಅವರನ್ನು ಮನರಂಜಿಸುತ್ತಿದ್ದೆನು . ಹೀಗೆ, ನನ್ನ ಜೊತೆ ಕೆಲಸದವರು, ನಾನು ಚಲನಚಿತ್ರದಲ್ಲಿ ಪಾತ್ರ ತೆಗೆದುಕೊಳ್ಳಬೇಕೆಂದು ಪ್ರೋತ್ಸಾಹಿಸಿದರು. ಅವರ ಸಲಹೆಯಿಂದ 1975 ರಲ್ಲಿ ನನ್ನ ಮೊದಲನೆಯ ಚಲನಚಿತ್ರ ಕರಾರಿಗೆ ಸಹಿ ಮಾಡಿದೆನು. 1981 ರಲ್ಲಿ ನನ್ನ ತಂದೆಯ ಸಂಸ್ಥೆಯನ್ನು ಬಿಟ್ಟು, ನನ್ನ ಹೆಸರನ್ನು ಸಹ ‘ ಜಾನಿ ರಾವ್ ‘ ನಿಂದ ‘ಜಾನಿ ಲಿವರ್ ‘ ಎಂಬುದಾಗಿ ಬದಲಾಯಿಸಿಕೊಂಡೆನು. ಮತ್ತೆ ಹಿಂತಿರುಗಿ ನೋಡಲಿಲ್ಲ.

ನಂತರ, ಯಶಸ್ವಿಯ ಮೇಲೆ ಯಶಸ್ವಿಯಾಗಿ ಬಹಳ ಹಣ. ಸ್ನೇಹಿತರು ಮತ್ತು ಸ್ಥಾನಮಾನ ಎಲ್ಲವೂ ದೊರಕಿತು. ಹಣ ಸ್ನೇಹಿತರು ಮತ್ತು ಸ್ಥಾನಮಾನ ಇವುಗಳೇ ಜೀವನದ ಬಹು ಪ್ರಾಮುಖ್ಯ ಸಂಗತಿಗಳೆಂಬ ಭಾವನೆ ನನಗುಂಟಾಯಿತು. ಯಾವುದಾದರೂ ಸಂಕಷ್ಟ ಬಂದಾಗ, ನನ್ನ ಹೆಸರು, ಖ್ಯಾತಿ ನನ್ನನ್ನು ಬಿಡುಗಡೆ ಮಾಡುತ್ತಿತ್ತು. ಪ್ರತಿನಿತ್ಯ ಪಾರ್ಟಿಗಳಲ್ಲಿದ್ದೆನು. ಚಲನಚಿತ್ರದ ಕೆಲಸ ಇರದೇ ಇದ್ದರೆ, ಕುಡಿಯುತ್ತಿದ್ದೆನು. ನನ್ನ ಅಭಿಪ್ರಾಯದಂತೆ, ಜೀವಿತ ಬಹಳ ಒಳ್ಳೆಯದೇ ಆಗಿತ್ತು.

ಹೀಗಿರುವಲ್ಲಿ, ಒಂದು ಸಂಗತಿ ನಡೆಯಿತು. ಅದು ನನ್ನ ಲೌಕಿಕ ಸಂತೋಷವನ್ನು ಅಲುಗಾಡಿಸಿತು. ಮಾತ್ರವಲ್ಲ ನನ್ನ ಜೀವಿತವನ್ನೇ ನಿರಂತರಕ್ಕೂ ಬದಲಾಯಿಸಿತು.
ಜೆಸ್ಸಿ, ನನ್ನ ಮಗನು -ಅವನ ಕತ್ತಿನಲ್ಲಿ ಗೆಡ್ಡೆಯಾಗಿದೆಯೆಂದು ರೋಗ ಪರೀಕ್ಷೆ ಮಾಡಿ ಹೇಳಿದರು. ನಗರದ ಪ್ರಖ್ಯಾತ ವೈದ್ಯರುಗಳು ಅವನ ಗೆಡ್ಡೆಯನ್ನು ಹಾಗೇ ಎತ್ತಲು ಸಾಧ್ಯವಿಲ್ಲ, ಅವನ ಶರೀರದ ಬಲಭಾಗವನ್ನು ಬಲಹೀನವಾಗುತ್ತದೆ ಎಂದರು. ನನ್ನ ಪತ್ನಿಯು ಪ್ರತಿಯೊಂದು ದೇವಸ್ಥಾನಗಳಿಗೆ ಹೋಗಿ ಬಂದಳು.ಆದರೆ ಪ್ರತಿ ಆರ್ಚಕರೂ ಅದನ್ನೇ ಹೇಳಿದರು. ಏನಂದರೆ – ” ವೈದ್ಯರು ಹೇಳಿದಂತೆ ಮಗನ ಶಸ್ತ್ರ ಚಿಕಿತ್ಸೆಗೆ ನೀವು ಅನುಮತಿಸಿದರೆ, ಅವನು ಸತ್ತೇ ಹೋಗುವನು ” ಎಂಬುದಾಗಿ ಹೇಳಿದರು. ಸಿಕ್ಕಿದ ಕಡೆಯೆಲ್ಲಾ ನಮಗೆ ತಿಳಿದ ಮಟ್ಟಿಗೆ ,ಎಲ್ಲಾ ಕಡೆಯೂ ,ಸಹಾಯವೇ ಸಿಗಲಿಲ್ಲ.

ಆ ಸಂದರ್ಭದಲ್ಲಿ, ನಾನು ಸಣ್ಣ ವಯಸ್ಸಿನಲ್ಲಿ ಕೇಳಿದ್ದ ದೇವರನ್ನೂ ನೆನಸಿಕೊಂಡೆನು. ನನ್ನ ಮಗನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ, ನನ್ನ ಸ್ನೇಹಿತರ ಜೊತೆ ಸೇರಿ, ಸಹಾಯಕ್ಕಾಗಿ ದೇವರಲ್ಲಿ ಮೊರೆಯಿಟ್ಟೆನು. ಚರ್ಚ್ ಗಳಲ್ಲಿಯೂ ಜೆಸ್ಸಿಗಾಗಿ ಪ್ರಾರ್ಥಿಸಲು ಕೇಳಿಕೊಂಡೆವು. ದೇವಸ್ಥಾನದ ಅರ್ಚಕರು ಎಚ್ಚರಿಕೆ ಕೊಟ್ಟಾಗ್ಯೂ. ಅದನ್ನು ಲೆಕ್ಕಿಸದೆ, ವೈದ್ಯರು ಮಾಡಿದ ಶಸ್ತ್ರ ಚಿಕಿತ್ಸೆಯು ಯಶಸ್ವಿಯಾಗಿ ಮುಗಿಯಿತು. ಶಸ್ತ್ರ ಚಿಕಿತ್ಸೆ ನಡೆಯುವಾಗಲೂ ಯಾವ ವಿಧವಾದ ಆಪತ್ತುಗಳು ಉಂಟಾಗಲಿಲ್ಲ. ಗೆಡ್ಡೆಯೂ ಹೋಯಿತು ಮತ್ತು ಜೆಸ್ಸಿಯೂ ಸಹ ದುರ್ಬಲನಾಗಲಿಲ್ಲ. ಸತ್ಯವೇದವನ್ನೂ ಓದಲು ಪ್ರಾರಂಭಿಸಿದೆ,ದೇವರ ವಿಷಯ ಹೆಚ್ಚಾಗಿ ತಿಳಿಯಲು ಆಶಿಸಿದೆ, ಓದಿದ ಒಂದೊಂದು ಮಾತೂ ನನಗೆ ಆಳವಾಗಿ ಸ್ಪರ್ಶಿಸಿದ ಅನುಭವವಾಯಿತು. ನನ್ನ ಜೀವಿತದಲ್ಲಿ ಬದಲಾವಣೆಯ ಅವಶ್ಯವಿದೆಯೆಂಬ ಅನಿಸಿಕೆಯಾಗಿ, ನನ್ನ ಜೀವಿತವನ್ನು ಪರಿವರ್ತನೆಮಾಡಲು ದೇವರನ್ನು ಕೇಳಲು ಪ್ರಾರಂಭಿಸಿದೆ. ಕುಡಿತ, ದುಂದುವೆಚ್ಚ. ಅತಿಯಾದ ಪಾರ್ಟಿಗಳು ಮತ್ತು ಹಣ ಸಂಪಾದನೆ – ಈ ಎಲ್ಲಾ ಅಭ್ಯಾಸಗಳನ್ನು ನಾನು ಎದುರಿಸಬೇಕಾಗಿತ್ತು. ನನ್ನ ಸ್ವಾರ್ಥಕ್ಕಾಗಿ ಈ ಎಲ್ಲಾ ಸಂಗತಿಗಳು ನನಗೆ ಅವಶ್ಯಕವಿತ್ತು ಎಂದು ಈಗ ಗ್ರಹಿಸಿಕೊಂಡೆನು. ನಾನು ನನ್ನ ಕುಟುಂಬದವರ ಮತ್ತು ಇತರರ ಕುರಿತಾಗಿ ಚಿಂತಿಸದೆ. ನನ್ನ ಸ್ವಂತಕ್ಕಾಗಿ ನಾನು ಜೀವಿಸುತ್ತಿದ್ದೆನು. ನನ್ನ ಈ ದುರಭ್ಯಾಸಗಳಿಂದ ನನ್ನನ್ನು ಬಿಡಿಸಿ, ಕ್ಷಮಿಸಿ ನನ್ನನ್ನು ಪರಿವರ್ತಿಸಬೇಕೆಂದು ದೇವರನ್ನು ಕೇಳಿಕೊಂಡೆನು. ಹಾಗೇ ಆತನು ನನ್ನನ್ನು ಕ್ಷಮಿಸಿದನು. ಈಗ ನನ್ನ ಜೀವಿತದ ಆನಂದ ಏನಂದರೆ, ನಾನು ಆತನಿಗಾಗಿ ಜೀವಿಸಬೇಕು.

ಹಾಸ್ಯನಟನಾಗಿ, ಎಲ್ಲಾ ಜನರು ಅತಿಯಾಗಿ ನಗುವಂತೆ ಮಾಡುವುದು ನನ್ನ ಕೆಲಸವಾಗಿತ್ತು. ಆದರೆ ಅದು ಸಂತೋಷವಲ್ಲ. ದೇವರೊಬ್ಬನೇ ಜೀವನವನ್ನು ಕೊಡುವ ಆತನೇ, ಜೀವಾಂತ್ಯದವರೆಗೆ ಆನಂದವನ್ನು ಕೊಡುವವನಾಗಿದ್ದಾನೆ. ಈ ಆನಂದವನ್ನು ಯೇಸುವಿನಲ್ಲಿಯೇ ಕಂಡುಕೊಂಡೆನು. ಈ ಲೋಕದಲ್ಲಿ, ಇದಕ್ಕೆ ಸರಿಸಮಾನವಾದದ್ದು ಯಾವುದೂ ಇಲ್ಲ.

14 comments

 1. Praised be the name of the Lord Jesus Christ! Really glad to know more about your vision and mission for the service of God’s kingdom’s extension.

 2. I.W.R Soans says:

  Miracle in Jessy’s life through our lord Jesus Christ..All glory to God.. Amen.. This is true Testimony to all about living God Jesus Christ

 3. sathish says:

  Amen ???? glory to God……..

 4. Chandra Babu says:

  God bless you and your family and your ministry,

 5. Ashwini Pawaar says:

  Great is the Lord Greatly to be Praised

 6. Priya says:

  Praise the LORD

 7. Sabareddy Belgundi says:

  Glory to the Lord my God….. Thanks for your ministry….. May the Lord bless you all…. And strengthen you to do great things for Him.

 8. roopa says:

  praise god he s awesome god amen

 9. Ashwini. B says:

  Amen halleluya praise the lord

 10. BASAVARAJ says:

  what a miracle praise the Lord hallelujah….
  amen

 11. Philip panduranga says:

  Praise the Lord Jesus never give us

 12. Shiva says:

  Amen praise the Lord
  Please add pastor robin almeida sir testimony
  God bless you more

Comments

Your email address will not be published. Required fields are marked *

× WhatsApp us