ಜ್ಞಾನದ ದಾರಿ ಸಮಾಧಾನ!

  Posted on   by   1 comment

“ಆಕೆಯ ದಾರಿಗಳು ಸುಖಕರವಾಗಿದೆ, ಆಕೆಯ ಮಾರ್ಗಗಳೆಲ್ಲಾ ಸಮಾಧಾನವೆ, ಜ್ಞಾನವು ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ; ಅದನ್ನು ಅವಲಂಬಿಸುವ ಪ್ರತಿಯೊಬ್ಬನೂ ಧನ್ಯನು” (ಜ್ಞಾನೋ. 3:17-18).

ಜ್ಞಾನವಿರುವವರೆಲ್ಲರೂ ಜೀವದ ಮರವಾಗಿದ್ದಾರೆ ಎಂದು ನಮಗೆ ಗೊತ್ತು. ದೇವರು ಜ್ಞಾನ, ನಾವು ಆತನ ಆತ್ಮನಿಂದ ತುಂಬಿದಾಗ ಜ್ಞಾನ ನಮ್ಮ ಜೀವನವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ. ನಾವು ಆತನ ವಾಕ್ಯವನ್ನು ಹೆಚ್ಚು ಹೆಚ್ಚಾಗಿ ಓದಿದಾಗ, ಆತನ ಪ್ರಸನ್ನತೆ ನಮ್ಮಲ್ಲಿ ನೆಲೆಸುತ್ತದೆ (ಯೋಹಾ. 14:23). ಜೊತೆಗೆ ಆತನ ವಾಕ್ಯ ಶುದ್ಧಿಮಾಡಿ, ಶುಭ್ರವಾದ ಜೀವನವನ್ನು ಯುವ ಜನರಿಗೆ ಕೊಡುತ್ತದೆ (ಕೀರ್ತ. 119:9). ಮುಂದಕ್ಕೆ ದೇವರ ವಾಕ್ಯ ಸಂತೋಷ ಮತ್ತು ಸಾಂತ್ವನವನ್ನು ಜೀವನದಲ್ಲಿ ಭಾದೆಪಡುತ್ತಿರುವವರಿಗೆ ಕೊಡುತ್ತದೆ (ಯೆರೆ. 15:16). ಮೊದಲನೇ ಮನುಷ್ಯ ಆದಾಮ ಮತ್ತು ಆತನ ಪತ್ನಿ ಹವ್ವಳು ಏದೆನ್ ತೋಟದಲ್ಲಿ ಪಾಪಮಾಡಿದಾಗ, ದೇವರು ಅವರನ್ನು ಹುಡುಕಿಕೊಂಡು ಬಂದಾಗ ಅವರು ಅಡಗಿಕೊಂಡರು. ಆದರೆ, ಈ ದಿನ, ನಾವು ನಮ್ಮ ಪಾಪಗಳನ್ನು ದೇವರ ಮುಂದೆ ಅರಿಕೆ ಮಾಡಿದಾಗ ಆತನು ನಮ್ಮ ಪಾಪಗಳನ್ನು ತನ್ನ ಮಗ ಕರ್ತನಾದ ಯೇಸುಕ್ರಿಸ್ತನ ರಕ್ತದಲ್ಲಿ ಶುದ್ಧಿಮಾಡುತ್ತಾನೆ (1 ಯೋಹಾ. 1:9). ನಂತರ ಆತನು ನಮ್ಮನ್ನು ಆತನ ಮಕ್ಕಳಾಗಿ ಸ್ವೀಕರಿಸಿ ನಮ್ಮಲ್ಲಿ ನೆಲೆಸುತ್ತಾನೆ ಅವನು ನಮ್ಮಲ್ಲಿ ನೆಲೆಯಾದಾಗ, ಆತನ ಪ್ರಸನ್ನತೆ ಜ್ಞಾನದಿಂದ ನಮ್ಮನ್ನು ತುಂಬಿಸಿ ನಾವು ನಮ್ಮ ಜೀವನದಲ್ಲಿ ಅಭಿವೃದ್ಧಿ ಹೊಂದುವಂತೆ ಸಹಾಯಮಾಡುತ್ತಾನೆ.

ಒಂದು ಸಲ, ಒಬ್ಬ ಶಿಕ್ಷಕ ತನ್ನ ಕೆಲಸದಲ್ಲಿ ಪ್ರಾಮಾಣಿಕನಾಗಿಯೂ, ನಂಬಿಕೆಯಿಂದಲೂ ಇದ್ದನು. ಆ ಶಾಲೆಯಲ್ಲಿ ಬೇರೆಯವರು ಹರಟುತ್ತಾ ತಮ್ಮ ತಮ್ಮಲ್ಲಿ ಜಗಳವಾಡುತ್ತಾ ಇರುವಾಗ, ಈ ಮನುಷ್ಯ ಅವರಿಂದ ದೂರವಿರುತ್ತಿದ್ದನು. ಅವನು ಸ್ವಚ್ಛ ಜೀವನ ನಡಿಸುತ್ತಿದ್ದನು. ಆದ್ದರಿಂದ, ಎಲ್ಲರೂ ಒಂದುಗೂಡಿ ಇವನನ್ನು ಬಹಿಷ್ಕರಿಸುತ್ತಿದ್ದರು. ಅವನು ವಿಪರೀತ ನೀತಿವಂತನೆಂದು ಠೀಕಿಸಿ ಅವನಲ್ಲಿ ತಪ್ಪು ಕಂಡು ಹಿಡಿಯುತ್ತಿದ್ದರು. ಆದರೆ, ಇವನು ಅವರೆಲ್ಲರಿಗಾಗಿ ತನ್ನ ಹೃದಯದ ಅಂತರಾಳದಿಂದ ಪ್ರಾರ್ಥಿಸುತ್ತಿದ್ದನು. ಅವರ ಜೀವನವನ್ನು ವೈಯಕ್ತಿಕವಾಗಿ ಮುಟ್ಟಿ ದೇವರ ಪ್ರೀತಿಯನ್ನು ತಿಳಿಯುವಷ್ಟು ಬುದ್ಧಿ ಪಡೆಯುವಂತೆ ಪ್ರಾರ್ಥಿಸುತ್ತಿದ್ದನು. ಹೌದು! ದೇವರು ಅವನ ಪ್ರಾರ್ಥನೆಯನ್ನು ಕೇಳಿದನು. ಬೇಗನೆ, ಒಬ್ಬರಾದ ಮೇಲೊಬ್ಬರು ಭಯಂಕರ ಸಮಸ್ಯೆಗಳನ್ನು ಎದುರಿಸುವಂತಾಗಿ ಅವರು ಸಲಹೆ ಮತ್ತು ಪ್ರಾರ್ಥನೆಗಾಗಿ ಇವನ ಬಳಿ ಬರುತ್ತಿದ್ದರು. ಅವನು ತನ್ನ ಜ್ಞಾನದ ಮಾತುಗಳಿಂದ ಸಮಾಧಾನಪಡಿಸಿ ನಂಬಿಕೆಯಿಂದ ಅವರಿಗಾಗಿ ಪ್ರಾರ್ಥಿಸಿದನು. ಅವರಲ್ಲಿ ಒಳ್ಳೆಯದಕ್ಕಾಗಿ ಒಂದು ಒಳ್ಳೆ ಬದಲಾವಣೆಯಿದ್ದು ದೇವರು ಆ ಶಾಲೆಯಲ್ಲಿ ಸಮಾಧಾನ ಮತ್ತು ಶಾಂತಿಯನ್ನು ತಂದನು. ನೀವೂ ಸಹ ದೇವರನ್ನು ನೋಡಿ ಜೀವದ ಮರವಾಗಿರುವ ಜ್ಞಾನವನ್ನು ಪಡೆಯಿರಿ ಕೇಳಿದವರಿಗೆಲ್ಲಾ ಕೊಡುವ ಭಯ ನಿಜಕ್ಕೂ ಆತನ ದಾರಿಯಲ್ಲಿ ನಡೆಸುತ್ತದೆ (ಜ್ಞಾನೋ. 15:33).

ಪ್ರಾರ್ಥನೆ : ಪ್ರಿಯ ಕರ್ತನೇ, ನಿನ್ನ ಜ್ಞಾನವನ್ನು ಹೇರಳವಾಗಿ ಕೊಡು ಮತ್ತು ಅದರ ಹಿಂದೆ ಸಮಾಧಾನ ನನ್ನ ಎಲ್ಲಾ ಕೊರತೆಯನ್ನು ತೆಗೆದುಬಿಡು. ಇಂದಿನಿಂದ, ನನ್ನ ಜೀವನ ತೃಪ್ತಿಯಾಗಿರುವಂತೆಯೂ ಪೂರ್ಣವಾಗಿರುವಂತೆಯೂ ಮಾಡು. ನನ್ನನ್ನು ಆಶೀರ್ವದಿಸಿದ್ದಕ್ಕಾಗಿ ವಂದನೆ, ಆಮೆನ್.

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

1 comment

  1. Smitha says:

    Pls. Prayer for me

Comments

Your email address will not be published. Required fields are marked *

× WhatsApp us