ಜ್ಞಾನಿಯೂ ನಾಯಿಯೂ – – ಆತ್ಮೀಕ ಕಥೆ 28

  Posted on   by   1 comment

463918279

ನ್ಯೂಟನ್ ಇಂಗ್ಲೆಂಡಿನಲ್ಲಿ ಜೀವಿಸುತ್ತಿದ್ದ ಪ್ರಸಿದ್ಧ ವಿಜ್ಞಾನಿ. ಅವರು ಡೈಮಂಡ್, ಎಂಬ ಹೆಸರಿನ ನಾಯಿಯನ್ನು ಸಾಕುತ್ತಿದ್ದರು. ನ್ಯೂಟನ್ ಬೆಳಕಿಗೆ ಕುರಿತಾಗಿ ಇಪ್ಪತ್ತು ವರ್ಷ ಕಾಲ ಪರಿಶೋಧನೆ ಮಾಡಿದರು. ಪರಿಶೋಧನೆಯಲ್ಲಿ ಗಮನಿಸಿದ ವಿಷಯಗಳನ್ನು ಆಗಾಗ್ಗೆ ಕಾಗದದಲ್ಲಿ ಬರೆದಿಡುತ್ತಿದ್ದರು. ಒಂದು ದಿನ ರಾತ್ರಿ ಆ ಕಾಗದಗಳನ್ನು ಮೇಜಿನ ಮೇಲಿಟ್ಟು ಓದುತ್ತಿದ್ದರು. ಮೇಜಿನ ಮೇಲೆ ಒಂದು ಮೇಣದ ಬತ್ತಿ ಉರಿಯುತ್ತಿತ್ತು.

ನ್ಯೂಟನ್ ತನ್ನ ಪರಿಶೋದನಾ ಕಾಗದಗಳನ್ನು ಮೇಜಿನ ಮೇಲಿಟ್ಟು ಹೊರಗಡೆ ಹೋದರು.ಅವರ ನಾಯಿ ಮೇಜಿನ ಕೆಳಗೆ ಮಲಗಿತ್ತು. ನ್ಯೂಟನ್ ಹೊರಗೆ ಹೋದ ಕೂಡಲೇ ನಾಯಿ ಮೇಜಿನ ಮೇಲೆ ಜಿಗಿಯಿತು. ಆಗ ಮೇಣದ ಬತ್ತಿ ಕಾಗದದ ಮೇಲೆ ಬಿತ್ತು. ನ್ಯೂಟನಿನ ಕಾಗದಗಳೆಲ್ಲವೂ ಬೆಂಕಿಯಿಂದ ಸುಟ್ಟುಹೋಯಿತು. ಆ ಸಮಯದಲ್ಲಿ ನ್ಯೂಟನ್ ಕೋಣೆಯ ಒಳಗೆ ಬಂದರು. ತಮ್ಮ ಇಪ್ಪತ್ತು ವರ್ಷದ ಪರಿಶೋಧನೆಯು ಬೂದಿಯಾಗಿರುವದನ್ನು ಕಂಡು ದುಃಖಿಸಿದರು. ಆದರೆ ಅವರು ನಾಯಿಯ ಮೇಲೆ ಕೋಪಮಾಡಲಿಲ್ಲ. ಎಂದಿನಂತೆ ಅವರು ಆ ನಾಯಿಗೆ ಪ್ರೀತಿ ತೋರಿಸಿದರು. ತನ್ನ ಪರಿಶೋಧನೆಯಿಂದ ಲೋಕಕ್ಕೆ ನಷ್ಟ ಬಂದಂತೆ ಅವರು ಯೋಚಿಸಲಿಲ್ಲ. ಯಾಕೆಂದರೆ ತಮ್ಮ ಬುದ್ಧಿ ಅಲ್ಪವೇ ಎಂದು ಅವರು ಭಾವಿಸಿದ್ದರು. ಅದರ ತರುವಾಯ ಮೂವತ್ತೈದು ವರ್ಷಗಳು ಅನೇಕ ಪರಿಶೋಧನೆಯನ್ನು ಮಾಡಿ ಅವರು ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದರು.

ಅನ್ವಯ :- ನಿಮ್ಮನ್ನು ನೀವೇ ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿ. ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು. (ರೋಮಾ 12:16  ; ಇಬ್ರಿ 10:36 )

Categories: Spiritual Stories

1 comment

  1. AYYAPPA. H.S says:

    Thank you for such types of spiritual stories. He his faithful because JESUS called U.

Comments

Your email address will not be published. Required fields are marked *

WhatsApp us