ತಾಯಿಯಂತೆ ನಮ್ಮನ್ನು ಸಮಾಧಾನಪಡಿಸುವ ದೇವರು!

  Posted on   by   No comments

maxresdefault

“ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿಮ್ಮನ್ನು ಸಂತೈಸುವೆನು” (ಯೆಶಾ. 66:13).

ತಾಯಿಯ ಪ್ರೀತಿ ಅದ್ವೀತಿಯವಾದದ್ದು. ತನ್ನ ಮಗುವನ್ನು 9 ತಿಂಗಳ ಕಾಲ ತನ್ನ ಗರ್ಭದಲ್ಲಿ ಹೊತ್ತ ತಾಯಿ ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಅದನ್ನು ಪ್ರೀತಿಸುತ್ತಾಳೆ. ಅವಳು ಯಾವ ವಿಧವಾದ ಆಪತ್ತು ಮಗುವಿನ ಹತ್ತಿರ ಬರ ಬಿಡುವುದಿಲ್ಲ ಮತ್ತು ಅದರ ಭಾದೆಗಳನ್ನು ಅವಳಿಗೆ ಸಹಿಸಲು ಆಗುವುದಿಲ್ಲ. ಕೆಲವು ಸಾರಿ, ಕೆಲವು ತಾಯಂದಿರು ಹೊಸದಾಗಿ ಮದುವೆ ಆಗಿರುವ ಮಗನು ತಮ್ಮವನು ಎಂಬ ಅಧಿಕಾರದಿಂದ ತಾನು ತಯಾರು ಮಾಡಿರುವ ಆಹಾರವನ್ನು ತಿನ್ನಬೇಕು ಎಂದು ಇಷ್ಟಪಡುವುದರ ಮೂಲಕ ಕುಟುಂಬಗಳಲ್ಲಿ ತೊಂದರೆಯನ್ನು ಉಂಟುಮಾಡುತ್ತಾರೆ. ಈ ಎಲ್ಲಾ ತೊಂದರೆಗಳಿಗೆ ಕಾರಣವೆಂದರೆ, ತಾಯಿಯ ಎಣೆಯಿಲ್ಲದ ಪ್ರೀತಿ. ಆದರೆ ಯೇಸು ಕ್ರಿಸ್ತನ ಪ್ರೀತಿ, ಈ ತಾಯಿ ಪ್ರೀತಿಗಿಂತಲೂ ದೊಡ್ಡದಾಗಿರುತ್ತದೆ (1 ಯೋಹಾ. 4:8-16). ಕೆಲವು ಸಲ, ತಾಯಂದಿರು ಪ್ರೀತಿಯ ಕೊರತೆಯಿಂದ ಮಕ್ಕಳಿಗೆ ಮೋಸ ಮಾಡಬಹುದು. ನಾವು ವಾರ್ತಾಪತ್ರಿಕೆಯಲ್ಲಿ ಓದುತ್ತೇವೆ, ಕೆಲವು ತಾಯಂದಿರು ಆಸ್ತಿ ಲಾಭಕ್ಕಾಗಿ ತಮ್ಮ ಸ್ವಂತ ಮಗನನ್ನೇ ಕೊಂದಿರುವ ವಿಷಯವನ್ನು ಹೌದು! ಈ ದಿನಗಳಲ್ಲಿ ತಾಯಿಯ ಪ್ರೀತಿ ಕಡಿಮೆ ಆಗುತ್ತಿರುವುದನ್ನು ನೋಡುತ್ತೇವೆ. ಆದರೆ, ದೇವರ ಪ್ರೀತಿ ಎಂದಿಗೂ ಬದಲಾಗದು. ನಾವು ಕಷ್ಟದಲ್ಲಿರುವಾಗ ನಮ್ಮ ಪ್ರಿಯ ಕರ್ತನು ನಮ್ಮ ಹತ್ತಿರ ಓಡಿ ಬಂದು ನಮ್ಮನ್ನು ಸಂತೈಸುತ್ತಾನೆ (ಯೆಶಾ. 49:15).

ಒಬ್ಬ ತಾಯಿ, ತನ್ನ ಮಗನು ತೀವ್ರವಾಗಿ ಕಾಯಿಲೆ ಬಿದ್ದಾಗ ಬಹಳವಾಗಿ ದು:ಖಗೊಂಡಳು. ಆ ಮಗುವಿನ ಚಿಕಿತ್ಸೆಗಾಗಿ ಒಂದೇ ಒಂದು ದಾರಿ ಮಾತ್ರ ಇತ್ತು, ಅದು ಒಂದು ಔಷಧಿಯನ್ನು ಮೊದಲು ಯಾರಾದರೂ ಅಗೆದು ನಂತರ ಅದರ ವಾಸನೆಯನ್ನು ಮಗುವಿನ ಮೂಗಿನ ಹೊಳ್ಳೆಯೊಳಗೆ ಊದಬೇಕಾಗಿತ್ತು. ಆ ನಾಟಿ ವೈದ್ಯರು ಹೇಳಿದರು, ಆ ಔಷಧಿ ಬಹಳ ಶಕ್ತಿಯುಳ್ಳದಾಗಿದ್ದು, ಯಾರು ಅದನ್ನು ಅಗಿಯುತ್ತಾರೋ, ಅವರ ಬಾಯಿ ಸುಟ್ಟುಹೋಗುವುದೆಂದು. ಆದ್ದರಿಂದ ಎಲ್ಲರೂ ಅದನ್ನು ಅಗಿಯಲು ಹಿಂತೆಗೆಯುತ್ತಿದ್ದರು. ಆದರೆ ಮಗುವಿನ ತಾಯಿ ಹೇಳಿದರು ನನಗೆ ಕೊಡಿರಿ, ನಾನು ಅಗೆದು ನನ್ನ ಮಗುವಿನ ಮೂಗಿನ ಹೊಳ್ಳೆಗಳಿಗೆ ನಾನು ಊದುತ್ತೇನೆ ಎಂದಳು. ನನಗೆ ಏನಾಗುವುದರ ಬಗ್ಗೆಯು ಗಮನವಿಲ್ಲ, ನನಗೆ ಬೇಕಾಗಿರುವುದು ನನ್ನ ಮಗು ಕಾಪಾಡಲ್ಪಡಬೇಕೆಂಬುದೇ” ಎಂದು. ಅವಳು ಆ ಔಷಧಿಯನ್ನು ತೆಗೆದುಕೊಂಡು ಅಗಿಯಲು ಆರಂಭಿಸಿದಳು. ನಾಟಿ ವೈದ್ಯರು ಹೇಳಿದಂತೆ, ಅವಳ ಬಾಯಿ ಉರಿಯಲು ಆರಂಭಿಸಿತು. ಅವಳ ಕಣ್ಣುಗಳಲ್ಲಿ ನೀರು ತುಂಬಿತು. ಆದರೆ ಅವಳಿಗೆ ಮಗುವಿನ ಜೀವದ ಬಗ್ಗೆ ಮಾತ್ರವೇ ಆಲೋಚನೆ ಇತ್ತು. ನಿಧಾನವಾಗಿ ಅವಳು ತನ್ನ ಕೆಲಸವನ್ನು ಮುಗಿಸಿದಳು. ಮಗುವಿನ ಜೀವ ಉಳಿಯಿತು. ಆದರೆ ತಾಯಿ ತನ್ನ ಬಾಯಿ ವಾಸಿಯಾಗುವವರೆವಿಗೂ ಭಾದೆಯನ್ನು ಅನೇಕ ದಿನಗಳವರೆಗೆ ಅನುಭವಿಸಬೇಕಾಯ್ತು. ಹೌದು! ಇದು ತಾಯಿಯ ನಿಜವಾದ ಪ್ರೀತಿ!

ಪ್ರಿಯರೇ, ಈ ದಿನಗಳಲ್ಲಿ, ನೀವೂ ನಿರಾಶರಾಗಿರಬಹುದು. ನಿಮ್ಮನ್ನು ಸಮಾಧಾನ ಅಥವಾ ಸಾಂತ್ವನ ಪಡಿಸಲು ಯಾರು ಇಲ್ಲದಿರಬಹುದು. ನಿಮ್ಮನ್ನು ತಾಯಿಗಿಂತ ಹೆಚ್ಚಾಗಿ ಪ್ರೀತಿಸಲು ಒಬ್ಬರಿದ್ದಾರೆ ಎಂದು ಜ್ಞಾಪಿಸಿಕೊಳ್ಳಿ. ಹೌದು! ನಮ್ಮನ್ನು ಪ್ರೀತಿಸಿದ ಕರ್ತನಾದ ಯೇಸು, ನಮ್ಮನ್ನು ರಕ್ಷಿಸಲು ಶಿಲುಬೆಯ ಮೇಲೆ ನಮಗೋಸ್ಕರ ಸಾಯಲು ಸಿದ್ಧನಾದನು. ನೀವು ಆತನನ್ನು ಕರೆದಾಗಲೆಲ್ಲಾ ನಿಮ್ಮನ್ನು ಕಾಪಾಡಲು ಆತನು ನಿಮ್ಮ ಕಡೆ ಬರುತ್ತಾನೆ (2 ಥೆಸ. 2:16).

ಪ್ರಾರ್ಥನೆ : ಪ್ರಿಯ ತಂದೆಯೇ, ನನ್ನ ಬಾಧೆಗಳು ವರ್ಣಿಸಲು ಆಗುತ್ತಿಲ್ಲ. ತಾಯಿಗಿಂತ ದೊಡ್ಡದಾದ ನಿನ್ನ ಪ್ರೀತಿಯನ್ನೇ ನಾನು ಹಿಡಿದುಕೊಂಡಿದ್ದೇನೆ. ಈ ದಿನ, ನನಗೆ ಬೇಕಾಗಿರುವ ಪರಿಹಾರವನ್ನು ಅದ್ಭುತವಾಗಿ ಕೊಟ್ಟಿದ್ದೀಯ. ನನ್ನ ಪ್ರಾರ್ಥನೆ ಕೇಳಿದ್ದಕ್ಕಾಗಿ ವಂದನೆ. ಕ್ರಿಸ್ತನ ಬಲವಾದ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *