ತೊಲೆ? ನನ್ನ ಕಣ್ಣಿನಲ್ಲಿ? – ಆತ್ಮೀಕ ಕಥೆ 47

  Posted on   by   1 comment

ಮೂಡಿ ಎಂಬ ಭಕ್ತನ ಪ್ರಸಂಗವನ್ನು ಕೇಳುತ್ತಿದ್ದ ಒಬ್ಬ ವಿದ್ಯಾವಂತನಿಗೆ ಹೇಳ ತೀರದ ಕೋಪ ಏಕೆಂದರೆ, ವ್ಯಾಕರಣ ದೋಷಗಳು, ಮೂಡಿ ಭಕ್ತನು ಆಂಗ್ಲಭಾಷೆಯನ್ನು ಕೊಲೆ ಮಾಡುತ್ತಿದ್ದಾನಲ್ಲಾ ಎಂದು ಕೋಪದಿಂದ ಆತನು ಉರಿದೆದ್ದನು. ಅವರ ಪ್ರಸಂಗ ಮುಗಿಯುವುದನ್ನೇ ಕಾಯುತ್ತಿದ್ದ ಆ ಗಣ್ಯವ್ಯಕ್ತಿ “ನೀವು ಪ್ರಸಂಗಮಾಡುತ್ತೀರಾ? ಒಂದು ವಾಕ್ಯವನ್ನಾದರೂ ಸರಿಯಾಗಿ ಮುಗಿಸಲಿಲ್ಲವಲ್ಲಾ? ವಾಕ್ಯವನ್ನು ಸರಿಯಾಗಿ ಸಂಯೋಜಿಸಿ ಮಾತನಾಡಬಾರದೇಕೆ? ಎಂದು ಉರಿದುಬಿದ್ದರು.
ಮೂಡಿ ಭಕ್ತನು ಶಾಂತವಾಗಿ “ಅಯ್ಯಾ ನಾನು ಹೆಚ್ಚು ವಿದ್ಯಾವಂತನಲ್ಲ, ವಾಕ್ಚಾತುರ್ಯವುಳ್ಳವನೂ ಅಲ್ಲ ಜೀವವನ್ನೇ ತೆತ್ತವನಿಗಾಗಿ ಕೆಲವು ಮಾತುಗಳನ್ನಾದರೂ ಹೇಳಬೇಕೆಂದೆಣಿಸಿ ಕಲ್ವಾರಿಯ ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟವನಾಗಿ ಪ್ರಸಂಗಿಸಿದೆನು; ಹೌದು ನೀವು ಹೆಚ್ಚು ಕಲಿತವರಲ್ಲವೇ; ಬುದ್ಧಿವಂತರಾಗಿರುವಿರಲ್ಲ; ನಿಮಗೆ ಜ್ಞಾನವನ್ನೂ ವಾಕ್ಚಾತುರ್ಯವನ್ನೂ ಕೊಟ್ಟ ಕ್ರಿಸ್ತನಿಗಾಗಿ ನೀವು ಯಾವ ವಿಧದಲ್ಲಿ ಸೇವೆ ಸಲ್ಲಿಸುತ್ತಿರುವಿರಿ?” ಎಂದು ಕೇಳಿದರು. ಆಗ ತನ್ನ ಕಣ್ಣಿನಲ್ಲಿರುವ ತೊಲೆಯನ್ನು ಕುರಿತು ಅವಿದ್ಯಾವಂತನು ಅರಿತು ಕೊಂಡನು.
ಒಬ್ಬ ಬೋಧಕರ ಬಳಿ ಒಬ್ಬ ಯೌವನಸ್ಥನು ಓಡೋಡಿ ಬಂದು, ಸಭೆಯಲ್ಲಿ ಸ್ತ್ರೀಯರು ಮಾತಾಡಬಹುದೇ? ಅದು ಸರಿಯೇ? ಸ್ತ್ರೀಯರು ಪುರುಷರನ್ನು ನೋಡಿ ಪ್ರಸಂಗಮಾಡುವುದು ಎಂಥಾ ತಪ್ಪಲ್ಲವೇ? ಸಭೆಯ ವಿಧಿಗಳನ್ನು ಮೀರುತ್ತಾರಲ್ಲಾ? ಎಂದು ಆತುರದಿಂದ ಹೇಳಿದನು, ಶಾಂತವಾಗಿ ಎಲ್ಲವನ್ನೂ ಕೇಳದೆ ಬೋಧಕರು “ತಮ್ಮಾ ನೀನು ಗುಂಡೋ, ಅಥವಾ ಹೆಣ್ಣೇ? ಗಂಡು ಮಗನಾಗಿದ್ದುಕೊಂಡು, ಭಕ್ತಿಯಿಂದ, ಸುವಾರ್ತೆ ಸೇವೆಮಾಡದೆ, ಹೆಣ್ಣುಮಗಳಂತೆ ಮನೆಲ್ಲಿ ಕೂತಿರುವುದರಿಂದಲೇ, ಕರ್ತನು ಸ್ತ್ರೀಯರನ್ನು, ಗಂಡಸರಂತೆ ಉಪಯೋಗಿಸುತ್ತಿದ್ದಾನೆ. ಇದರಲ್ಲಿ ತಪ್ಪು ಯಾರದು?” ಎಂದು ಕೇಳಿದರು. ಆಗ ಆ ಯೌವನಸ್ಥನಿಗೆ ತನ್ನ ಕಣ್ಣಿನಲ್ಲಿರುವ ತೊಲೆಯನ್ನು ಕುರಿತು ತಿಳುವಳಿಕೆ ಬಂದಿತು. “ಆದ್ದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ ಉತ್ತರ ಹೇಳುವುದಕ್ಕೆ ನಿನಗೆ ಮಾರ್ಗವಿಲ್ಲ” (ರೋಮ. 2:1).

Categories: Spiritual Stories

1 comment

  1. Kavitha says:

    Devarigea sthothra, e outta prssangadida nanage thumba prayojanavagide devarigea sthothra Amen.

Comments

Your email address will not be published. Required fields are marked *

× WhatsApp us