ದಾಹ ಇರುವವರಿಗೆ ದೈವೀಕ ಆಶೀರ್ವಾದಗಳು !

  Posted on   by   1 comment

untitled-001

“ಬತ್ತಿದ ಭೂಮಿಯಲ್ಲಿ ಮಳೆಗರೆದು ಒಣನೆಲದಲ್ಲಿ ಕಾಲುವೆಗಳನ್ನು ಹರಿಸುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನು ಸುರಿಸುವೆನು” (ಯೆಶಾ. 44:3).

ದೇವರ ಬಗ್ಗೆ ಸಾಕಷ್ಟು ಗೊತ್ತಿಲ್ಲದೆ ಇರುವ ಜನರು, ಇಹಲೋಕದ ಪ್ರಾಪಂಚಿಕ ಲಾಭಗಳನ್ನು ಹೊಂದಿಕೊಳ್ಳಲು ದಾಹವುಳ್ಳವರಾಗಿರುತ್ತಾರೆ. ತಮಗೆ ಬೇಕಾಗಿರುವುದನ್ನು ಅವರು ಪಡೆಯದೇ ಹೋದಾಗ ಅವರು ಬೇಸರಗೊಳ್ಳುವರು ಮತ್ತು ನೆರೆಹೊರೆಯವರು ಅದನ್ನು ಪಡೆದಿದ್ದರೆ ಅದರ ಬಗ್ಗೆ ಹೊಟ್ಟೆಕಿಚ್ಚು ಪಡುತ್ತಾರೆ (ಪ್ರಸ. 4:4). ನಾವು ಕೇವಲ ಪ್ರಾಪಂಚಿಕ ವಸ್ತುಗಳ ಆಶೀರ್ವಾದ ಮಾತ್ರವಲ್ಲದೆ ಆತ್ಮೀಕವಾದದ್ದು ಮತ್ತು ಪರಲೋಕದ ಆಶೀರ್ವಾದಗಳಿಗೂ ದಾಹವುಳ್ಳವರಾದರೆ, ನಮ್ಮ ಕರ್ತನು, ನಾವು ಅಪೇಕ್ಷೆಪಟ್ಟದ್ದಕ್ಕಿಂತ ಹೆಚ್ಚಾಗಿ ಕೊಡುತ್ತಾನೆ (ಕೀರ್ತ. 42:1). ದೇವರ ರಾಜ್ಯಕ್ಕೋಸ್ಕರವಾಗಿಯೂ, ಆತನ ನೀತಿಗಾಗಿಯೂ ಹುಡುಕಿ ಬಾಯಾರಿದರೆ, ದೇವರು ನೀವು ಕೇಳಿದ ಎಲ್ಲಾ ಆಶೀರ್ವಾದಗಳನ್ನು ಆತನು ಕೊಡುತ್ತಾನೆ.

ಅನೇಕ ವರ್ಷಗಳ ಹಿಂದೆ, ನಮ್ಮ ಮನೆಯಲ್ಲಿ ನಮಗೆ ಸಹಾಯ ಮಾಡಲು 13 ವರ್ಷದ ಒಬ್ಬ ಹುಡುಗನಿದ್ದ ನನ್ನ ಮಾವ ಶಾಲಾ ಮಾಸ್ತರ್ ಆಗಿದ್ದರಿಂದ, ಅವರು ಅವನ ವಿದ್ಯಾಭ್ಯಾಸದಲ್ಲಿ ಸಹಾಯಮಾಡುತ್ತಿದ್ದರು. ಆದ್ದರಿಂದ, ಈ ಹುಡುಗ ನಮ್ಮ ಮನೆಯಲ್ಲಿ ಸರಿ ರಾತ್ರಿಯಾಗುವರೆವಿಗೂ ಇರುತ್ತಿದ್ದ. ಆ ಸಮಯದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಪವಿತ್ರಾತ್ಮನ ಅಭಿಷೇಕಕ್ಖಾಗಿ ಹುಡುಕಿ ಬಾಯಾರಿದ್ದೆವು. ಒಂದು ದಿನ ನಾವೆಲ್ಲಾ ಮುಂದಿನ ಕೊಠಡಿಯಲ್ಲಿ ಒಟ್ಟಾಗಿ ಪ್ರಾರ್ಥಿಸುತ್ತಿದ್ದಾಗ, ಪವಿತ್ರಾತ್ಮನು ನಮ್ಮ ಮೇಲೆ ಅಪಾರವಾಗಿ ಇಳಿದನು. ಈ ಹುಡುಗ ಇದನ್ನು ನೋಡಿ ಮರುದಿನ ಓಡಿ ಬಂದು ಹೇಳಿದನು. “ಸಹೋದರಿ, ನನಗೂ ಈ ಅನುಭವಬೇಕು”. ಮರು ಸಲ, ನಾವು ಪ್ರಾರ್ಥಿಸುತ್ತಿದ್ದಾಗ ಅವನೂ ನಮ್ಮೊಡನೆ ಸೇರಿದನು. ಕರ್ತನು ಅವನೊಡನೆ ಮಾತನಾಡಿದನು. “ನನ್ನ ಮಗನೇ, ನಿನ್ನ ತಾಯಿ ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತಾಳೆ. ಈ ವಿಷಯಗಳು ಅವನಳಿಗೆ ಇಷ್ಟವಾಗುವುದಿಲ್ಲ” ನಿಮಗೆ ಗೊತ್ತಾ ಅವನು ಏನು ಹೇಳಿದನೆಂದು? ಅವನು ಹೇಳಿದನು “ಕರ್ತನೇ, ನನಗೆ ನೀನು ಮಾತ್ರ ಬೇಕು. ನನಗೆ ನನ್ನ ತಾಯಿ ಮತ್ತು ಇತರರು ಮುಖ್ಯ ಅಲ್ಲ. ನನಗೆ ನೀನು ಮಾತ್ರ ಬೇಕು”. ಅವನು ಈ ಪ್ರಾರ್ಥನೆಯನ್ನೇ ಹೇಳುತ್ತಿದ್ದ ಮರು ಕ್ಷಣವೇ ಏನಾಯಿತೆಂದು ನಿಮಗೆ ಗೊತ್ತಾ? ಅದೇ ದಿನ ತುಂಬಿಸಲ್ಪಟ್ಟು ಹೇರಳವಾಗಿ ಆಶೀರ್ವದಿಸಲ್ಪಟ್ಟನು. ಈ ಆಶೀರ್ವಾದಗಳಿಗಾಗಿ ನಿಮಗೆ ದಾಹವಿಲ್ಲವಾ?

ಈ ದಿನ, ನೀವು ಬಾಯಾರಿ ಈ ಆಶೀರ್ವಾದಗಳನ್ನು ಹುಡುಕಿದರೆ, ದೇವರು ನಿಜಕ್ಕೂ ನಿಮ್ಮನ್ನು ಆತನ ಆತ್ಮನಿಂದ ತುಂಬಿ ಆಶೀರ್ವಾದಿಸುತ್ತಾನೆ. ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು ಕಿರಿಯರಾಗಲಿ, ಹಿರಿಯರಾಗಲಿ, ಅವರು ಆತನನ್ನು ಕೂಗಿದಾಗ (ಯೋವೆ. 2:28).

ಪ್ರಾರ್ಥನೆ :- ಪ್ರಿಯ ತಂದೆಯೇ! ಈ ಹುಡುಗನ ದಾಹ ಮತ್ತು ನಂಬಿಕೆಯ ಬಗ್ಗೆ ನಾನು ಆಶ್ಚರ್ಯಗೊಂಡಿದ್ದೇನೆ. ಈ ದಿನವೇ, ನನಗೆ ಅದೇ ದಾಹ ಮತ್ತು ನಂಬಿಕೆಯನ್ನು ಕೊಡು. ನನಗೆ ದೈವೀಕ ಸಂತೋಷ ಮತ್ತು ಪವಿತ್ರಾತ್ಮನ ಅಭಿಷೇಕವನ್ನು ಪೂರ್ಣವಾಗಿ ಕೇಳಿ ಉತ್ತರಿಸಿದ್ದಕ್ಕಾಗಿ ನಿನಗೆ ಕೋಟ್ಯಾಂತರ ವಂದನೆಗಳು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,

MANNA MINISTRIES

Mannaministries.in@gmail.com

*For Daily Devotion Contact: +91 9964247889*

Comments

Your email address will not be published. Required fields are marked *