ದೇವರು ಕೃತಜ್ಞತೆಯೆಂಬ ಸುಗಂಧ ಪರಿಮಳವನ್ನು ಇಷ್ಟಪಡುತ್ತಾನೆ

  Posted on   by   No comments

god-with-us-9-25-2016

“ದೇವರು ಕೃತಜ್ಞತೆಯೆಂಬ ಸುಗಂಧ ಪರಿಮಳವನ್ನು ಇಷ್ಟಪಡುತ್ತಾನೆ” (ಯೆಹೆ. 20:14). 

ನಾವು ಪರಿಮಳಿಸುವಂತೆ ನಮ್ಮ ದೇಹಕ್ಕಾಗಿ ಅನೇಕ ಸುಗಂಧಗಳು ಮತ್ತು ಸಾಬೂನುಗಳು ಇವೆ. ಆದರೆ ನಮ್ಮ ಜೀವಿತ ಪರಿಮಳಿಸುವಂತೆ ನಾವು ಏನು ಮಾಡಲು ಆಗುತ್ತದೆ? ದೇವರು ಇಷ್ಟಪಡುವ ಪರಿಮಳ ಯಾವುದು? ಓಹೋ! ನಾವು ನಮ್ಮ ದೇಹಕ್ಕೆ ಸುಗಂಧಗಳನ್ನು ಉಪಯೋಗಿಸಿ, ನಮ್ಮ ಆತ್ಮಗಳು ದುರ್ವಾಸನೆ, ಎಂಥಹಾ ಭಯಂಕರ. ದೇವರು ನೋಹನಂತಹ ನೀತಿವಂತನ ಕೃತಜ್ಞತೆಯ ಕಾಣಿಕೆಯನ್ನು ಇಷ್ಟಪಡುತ್ತಾನೆ. ಅವನ ಕಾಣಿಕೆ ದೇವರಿಗೆ ಸಮಾಧಾನದ ಪರಿಮಳವಾಗಿತ್ತು (ಆದಿ. 8:21). ದೇವರ ಭಯವು ಕೂಡ ದೇವರಿಗೆ ಸಮಾಧಾನದ ಪರಿಮಳವಾಗಿದೆ (ಯೆಶಾ. 11:3). ದೇವರು ನಮ್ಮ ಮೂಲಕ ಕ್ರಿಸ್ತನ ಜಯೋತ್ಸವವೆಂಬ ಪರಿಮಳವನ್ನು ಎಲ್ಲಾ ಕಡೆ ಬೀರುವವರಾಗಿದ್ದೇವೆ (2 ಕೊರಿ. 2:14).

ಗಂಡ ಮತ್ತು ಹೆಂಡತಿ ಒಂದು ಕಾಲೋನಿಯಲ್ಲಿ ಒಂದು ಮನೆಯನ್ನು ಕೊಂಡುಕೊಂಡು ಅಲ್ಲಿಗೆ ಹೋದರು. ಬೇಗನೆ, ನೆರೆಹೊರೆಯವರು ಒಬ್ಬರಾದ ಮೇಲೆ ಒಬ್ಬರು ಬಂದು ಅವರನ್ನು ಭಯಪಡಿಸುತ್ತಾ ಹೇಳಿದರು. “ಅಯ್ಯೋ! ನೀವು ನಿಜಕ್ಕೂ ಪಾಪದವರು ಕಾರಣ, ಇದು ಶಾಪದ ಮನೆ! ಇಲ್ಲಿ ವಾಸಿಸಲು ಬಂದ ಎಲ್ಲಾ ಕುಟುಂಬದವರು ಇಲ್ಲಿ ಯಾವ ಆಶೀರ್ವಾದ ಪಡೆಯಲಾಗದ್ದರಿಂದ ಬೇಗನೆ ಬಿಟ್ಟು ಹೋದರು” ಆದರೆ ಈ ಕುಟುಂಬದವರು, ಅವರ ಲಘು ಮಾತನ್ನು ತಮ್ಮ ಕಿವಿಯಲ್ಲಿ ಹಾಕಿಕೊಳ್ಳಲಿಲ್ಲ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ, ದೇವರ ಸ್ತುತಿಯನ್ನು ಗಟ್ಟಿಯಾಗಿ ಹಾಡುವುದು ಬೇರೆಯವರು ಸಹ ಕೇಳಿಸಿಕೊಳ್ಳುವಂತಾಯಿತು. ತಮಗೆ ಅವಕಾಶವಾದಾಗಲೆಲ್ಲಾ ಅವರು ಇದನ್ನು ಮಾಡುತ್ತಿದ್ದರು. ಬೇಗನೆ, ಈ ಮನೆಯಿಂದ ಕೃತಜ್ಞಾತಾಸ್ತುತಿಯ ಸಮಾಧಾನದ ಪರಿಮಳ ದೇವರಿಗೆ ಹೋಗುವಂತಾಯಿತು. ತಿಂಗಳುಗಳು ಕಳೆದವು! ವರ್ಷಗಳು ಕಳೆದವು! ನೆರೆಹೊರೆಯವರು ಆಶ್ಚರ್ಯಪಟ್ಟರು. ಅವರು ಬಂದು ಅವರಿಗೆ ಹೇಳಿದರು, “ಓಹೋ! ಇದು ದೊಡ್ಡದು! ನೀವು ಆಶೀರ್ವದಿಸಲ್ಪಟ್ಟಂತೆ ಹಿಂದೆ ಇದ್ದವರು ಆಶೀರ್ವದಿಸಲ್ಪಡಲಿಲ್ಲ! ಇಲ್ಲಿಗೆ ಬಂದನಂತರ, ನೀವು ಮನೆಯನ್ನು ವಿಸ್ತರಿಸಿದ್ದೀರಿ, ನಿಮ್ಮ ಕೆಲಸದಲ್ಲಿ ಬಡ್ತಿ ಸಹ ಸಿಕ್ಕಿದೆ. ನಿಜಕ್ಕೂ ಇದೆಲ್ಲಾ ಹೇಗೆ ನಡೆಯಿತೆಂದು ನಮಗೆ ಅರ್ಥವಾಗುತ್ತಿಲ್ಲ ಎಂದು”. ಆಗ ಮನೆಯ ಯಜಮಾನ ಹೇಳಿದರು “ನಮಗೆ ದೇವರ ಪ್ರಸನ್ನತೆ ಇದೆ ಮತ್ತು ರಕ್ಷಕನಾದ ಯೇಸು ಕ್ರಿಸ್ತನು ಈ ಮನೆಯಲ್ಲಿ ಇದ್ದಾನೆ. ಈ ಮನೆಯ ಎಲ್ಲಾ ಶಾಪಗಳನ್ನು ಆತನು ಆಶೀರ್ವಾದವಾಗಿ ಪರಿವರ್ತಿಸಿ ನಾವು ಅಭಿವೃದ್ಧಿಹೊಂದುವಂತೆ ಸಹಾಯಮಾಡಿದ್ದಾನೆ. ನಮ್ಮ ಜೀವನ ಸತ್ಯಕ್ಕೆ ಒಂದು ಸಾಕ್ಷಿಯಾಗಿದೆ”.

ಪ್ರಿಯರೇ, ಜನರು ಬಂದು ನಿಮ್ಮ ಮನೆ ಶಾಪದ ಮನೆ, ಇದರ ಬಾಗಿಲನ್ನು ಈ ಕಡೆಯಿಂದ ಆ ಕಡೆ ಇಡಿರಿ ಅಥವಾ ಮನೆ ಖಾಲಿ ಮಾಡಿ ಎಂದು ಭಯಪಡಿಸುತ್ತಾರೆ? ನೀವು ದೇವರನ್ನು ವಂದಿಸುತ್ತಾ ಸ್ತುತಿಸಿರಿ. ನಿಮ್ಮ ಕೃತಜ್ಞತೆಯೆಂಬ ಸುಗಂಧ ಪರಿಮಳ ದೇವರನ್ನು ತಲುಪಲಿ (ಕೀರ್ತ. 50:23). ಆಗ ನಿಜಕ್ಕು ಆತನು ನಿಮ್ಮ ಎಲ್ಲಾ ಶಾಪಗಳನ್ನು ಆಶೀರ್ವಾದವಾಗಿ ಬದಲಾಯಿಸಿ ಉದ್ಧಾರಮಾಡಲು ಸಹಾಯ ಮಾಡುತ್ತಾನೆ.

ಪ್ರಾರ್ಥನೆ :- ಪ್ರಿಯ ಕರ್ತನೇ, ಜನರ ಬಾಯಿ ಮತ್ತು ಹರಟೆಗಳು ನನ್ನನ್ನು ಕದಲಿಸದಿರುವಂತೆ ಸಹಾಯಮಾಡು. ನಿನ್ನ ಆಶೀರ್ವಾದಗಳನ್ನು ಲೆಕ್ಕಮಾಡುತ್ತ ಹೋಗುವಂಥಹ ಹೃದಯವನ್ನು ಕೊಡು. ದಯಮಾಡಿ ಈ ದಿನವೇ, ಮಾಡು ಕರ್ತನೇ ನನ್ನ ಎಲ್ಲಾ ಶಾಪಗಳನ್ನು ಆಶೀರ್ವಾದವಾಗಿ ಮಾರ್ಪಡಿಸು. ಯೇಸುವಿನ ಅಮೂಲ್ಯ ನಾಮದಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

ಪ್ರಾರ್ಥನೆ ಮತ್ತು ವಂದನೆಗಳೊಂದಿಗೆ,
MANNA MINISTRIES
Mannaministries.in@gmail.com
*For Daily Devotion Contact: +91 9964247889

Comments

Your email address will not be published. Required fields are marked *

WhatsApp us