ದೇವರು ತಾನು ಆರಿಸಿಕೊಂಡ ಜನರಿಗೆ ಕೃಪೆ ಕೊಡುತ್ತಾನೆ!

  Posted on   by   No comments

children-praying.-jpg-800x430

“ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು; ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು” (ಕೀರ್ತ. 36:10).

ದೇವರು ತಾನು ಆರಿಸಿಕೊಂಡ ಸೇವಕನೂ ಮತ್ತು ದೊಡ್ಡ ಅಪೋಸ್ತಲನಾದ ಪೌಲನಿಗೆ ಹೀಗೆ ಹೇಳುವುದನ್ನು ಸತ್ಯವೇದದಲ್ಲಿ ಓದುತ್ತೇವೆ. “ನನ್ನ ಕೃಪೆಯೇ ನಿನಗೆ ಸಾಕು” (2 ಕೊರಿ. 12:9). ಅವನು ತನ್ನ ಕಾಯಿಲೆಯಲ್ಲಿ ಅವನ ಸಹಾಯ ಅಪೇಕ್ಷಿಸಿದಾಗ, ತನ್ನ ಭಕ್ತರಿಗೂ ಮತ್ತು ತನ್ನನ್ನು ಹುಡುಕುವವರಿಗೂ ಮತ್ತು ಆತನನ್ನು ಅರಿತವರಿಗೂ ದೇವರು ತನ್ನ ಕೃಪೆಯನ್ನು ಹೇರಳವಾದ ಅಳತೆಯಲ್ಲಿ ಕೊಡುತ್ತಾನೆ. ಬಹಳ ದಯವು ಆ ಶಿಷ್ಯರ ಮೇಲೆಲ್ಲಾ ಇತ್ತು (ಅ.ಕೃ. 4:33). ಆದರೆ ಅವರು ಈ ಕೃಪೆಯನ್ನು ಯಾವಾಗ ಪಡೆದರು? ಅವರು ಕರ್ತನನ್ನು ಹೃದಯ ಪೂರ್ತಿಯಾಗಿ ಅಪೇಕ್ಷೆಪಟ್ಟು ತಮ್ಮ ಜೀವನವನ್ನು ಆತನ ಸೇವೆಗಾಗಿ ಸಮರ್ಪಿಸಿದಾಗ ಅರು ಪವಿತ್ರಾತ್ಮನಿಂದ ತುಂಬಲ್ಪಟ್ಟರು. ಮೇಲಿನ ವಾಗ್ದಾನ ವಚನದಂತೆ ಆತನ ಸಾನಿಧ್ಯವನ್ನು ಅಪೇಕ್ಷೆಪಡೋಣ. ಆತನ ತಿಳುವಳಿಕೆಯಿಂದ ತುಂಬಿದವರಾಗಿ ಆತನಿಗೆ ನಮ್ಮ ಜೀವಿತವನ್ನು ಸಮರ್ಪಿಸೋಣ. ಆಗ, ಆತನು ತನ್ನ ಅಮೂಲ್ಯವಾದ ಕೃಪೆಯಿಂದ ನಮ್ಮನ್ನು ಆಶೀರ್ವದಿಸುತ್ತಾನೆ (ಕೀರ್ತ. 103:11).

ಒಬ್ಬ ದೇವರ ಮನುಷ್ಯನು ಆತನ ದೈವೀಕ ಪ್ರೀತಿಯಿಂದ ತುಂಬಿದವನಾಗಿ ದೇವರ ವಾಕ್ಯವನ್ನು ಸಾರುತ್ತಾ ಅದರಲ್ಲಿ ದೇವರ ಮಾರ್ಗಗಳನ್ನು ತೋರಿಸುತ್ತಾ ಮತ್ತು ಜನರ ರಕ್ಷಣೆಗಾಗಿ ಪ್ರಾರ್ಥಿಸುತ್ತಾ ಹೋದನು. ಆದ್ದರಿಂದ ಅವರು ಅವನನ್ನು ಪ್ರೀತಿಸಿ ಅವನನ್ನು ಹಿಂಬಾಲಿಸಿದರು. ಆದರೆ ಒಬ್ಬ ಮನುಷ್ಯ ಇದರಿಂದ ಹೊಟ್ಟೆಕಿಚ್ಚುಪಟ್ಟು ಅವನನ್ನು ಕೊಲ್ಲಲು ತೀರ್ಮಾನಿಸಿದನು. ಆದ್ದರಿಂದ ಒಂದು ದಿನ ಅವನನ್ನು ಕೊಲ್ಲಲು ಬಂದು ಬಾಣವನ್ನು ಎಸೆದನು. ಬಾಣವು ಅವನ ದೇಹವನ್ನು ತಾಗಿತು. ಆದರೆ ಅದು ಗಾಯಮಾಡಲಿಲ್ಲ ನೆಲಕ್ಕೆ ಬಿದ್ದಿತು. ಈ ಮನುಷ್ಯ ಬಾಣ ಹೊಡೆಯುವುದರಲ್ಲಿ ಪ್ರವೀಣನಾಗಿದ್ದವನು ತಾನು ಗುರಿಯಿಟ್ಟಿದ್ದನ್ನು ಹೊಡೆಯಲಾಗದಿದ್ದಕ್ಕಾಗಿ ತನ್ನ ವೈಫಲ್ಯತೆಗೆ ನಾಚಿಕೆಪಟ್ಟನು. ಆದರೆ ಆ ದೇವರ ಮನುಷ್ಯ ಏನು ಮಾಡಿದ ಗೊತ್ತೇ? ಅವನು ಬಾಣವನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಆ ದುಷ್ಟ ಮನುಷ್ಯನಿಗೆ ಕೊಟ್ಟು ಹೇಳಿದನು, “ಪ್ರಿಯ ಸ್ನೇಹಿತನೇ! ನಿನ್ನ ಬಾಣವನ್ನು ತೆಗೆದುಕೊ ದಯಮಾಡಿ ಮತ್ತೊಂದು ಸಲ ಪ್ರಯತ್ನಪಡು. ನೀನು ನಿನ್ನ ಎರಡನೇ ಪ್ರಯತ್ನದಲ್ಲಿ ನನ್ನನ್ನು ಕೊಲ್ಲಬಹುದು!” ಇದು ಅವನ ಹೃದಯವನ್ನು ಚಲಿಸಿತು. ದೇವರು ಅವನ ಕ್ರೂರ ಹೃದಯವನ್ನು ಮುಟ್ಟಿದನು ಮತ್ತು ತನ್ನ ದುಷ್ಟಕಾರ್ಯಕ್ಕಾಗಿ ಪಶ್ಚಾತ್ತಾಪಪಟ್ಟನು. ಈ ದೇವರ ಮನುಷ್ಯನನ್ನು ನಿಜವಾದ ದೇವರ ಸೇವಕನೆಂದು ಗುರುತಿಸಿ ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿದನು ಮತ್ತು ದೇವರ ಪ್ರೀತಿಯ ಬಗ್ಗೆ ಕಲಿತುಕೊಂಡನು.

ನನ್ನ ಪ್ರಿಯರೇ! ಸತ್ಯವೇದವನ್ನು ನಿರಂತರವಾಗಿ ಓದುವುದರಿಂದಲೂ ಆತನ ಸಾನಿಧ್ಯದಲ್ಲಿ ದಿನವೂ ಪ್ರಾರ್ಥಿಸುವುದರಿಂದ ನೀವು ಸಹ ದೇವರನ್ನು ತಿಳಿದುಕೊಳ್ಳುವಿರಿ. ಆತನ ಕೃಪೆ ನಿಮ್ಮನ್ನು ಹೇರಳವಾಗಿ ಸುತ್ತುವರಿದು ಆಶೀರ್ವದಿಸಲ್ಪಡುವದು (ಕೀರ್ತ. 32:10). ನೀವೂ ಸಹ ವಿರುದ್ಧತೆ, ಹೊಟ್ಟೆಕಿಚ್ಚು, ದ್ವೇಷ, ದುಷ್ಟತನವನ್ನು ನಿಮ್ಮ ಜೀವಿತದಲ್ಲಿ ಎದುರಿಸುತ್ತಿರಬಹುದು. ಆದರೆ, ನೀತಿವಂತರು ಸಿಂಹಗಳಂತೆ ಧೈರ್ಯವಾಗಿರುತ್ತಾರೆ (ಜ್ಞಾನೋ. 28:1). ಪ್ರಿಯ ಸ್ನೇಹಿತರೇ! ನೀವು ಸಹ ಕರ್ತನ ಜ್ಞಾನದಲ್ಲಿ ಬೆಳೆಯಿರಿ ಮತ್ತು ಆತನ ಹೇರಳವಾದ ಕೃಪೆಯನ್ನು ಪಡೆದು ಜಯದ ಜೀವಿತ ಜೀವಿಸಿರಿ.

ಪ್ರಾರ್ಥನೆ :- ಅಮೂಲ್ಯ ರಕ್ಷಕನೇ! ಇಂದಿನಿಂದ, ನಿನ್ನ ಹೇರಳವಾದ ಕೃಪೆಯಿಂದ ನನ್ನನ್ನು ಆಶೀರ್ವದಿಸು. ನಿನ್ನ ದೈವೀಕ ಕಾರ್ಯಗಳ ಬಗ್ಗೆ ನನಗಿರುವ ಎಲ್ಲಾ ಅಜ್ಞಾನವನ್ನು ತೆಗೆದು ನಿನ್ನ ದೈವೀಕ ತಿಳುವಳಿಕೆ ಮತ್ತು ಜ್ಞಾನವನ್ನು ಕೊಡು. ನಿನ್ನ ಪ್ರೀತಿಯಿಂದ ನನ್ನನ್ನು ತುಂಬಿಸು ನಮ್ಮ ಕರ್ತನಾದ ಯೇಸುವಿನ ಕೃಪೆಯುಳ್ಳ ಅಮೂಲ್ಯ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

Please fill this form to receive Manna ministry “Daily Devotional‎” in Kannda https://goo.gl/forms/SAa56s26a1vNc2pp1 To (Free)

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.👇

For more install our app from Play Store

Manna Ministry Kannada👇

https://play.google.com/store/apps/details?id=org.mannaministry.app&hl=en

1000 Praises Kannada👇

https://play.google.com/store/apps/details?id=org.mannaministry1000praises.app&hl=en

Mannaministries.in@gmail.com

For Daily Devotion Contact: +91 9964247889

Comments

Your email address will not be published. Required fields are marked *

WhatsApp us