ದೇವರು ನಿನ್ನನ್ನು ದೃಷ್ಟಿಸಿ ಹೆಚ್ಚಿಸುವನು!

  Posted on   by   No comments

“ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ಬಹುಸಂತಾನವನ್ನು ಕೊಟ್ಟು ಹೆಚ್ಚಿಸಿ ನಿಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು” (ಯಾಜ. 26:9).

ಸತ್ಯವೇದದಲ್ಲಿ ನಾವು ಹಾಗರಳ ಬಗ್ಗೆ ಓದುತ್ತೇವೆ. ಅವಳು ದೇವರ ಮಕ್ಕಳಾದ ಅಬ್ರಹಾಮ ಮತ್ತು ಸಾರಳ ಮನೆಯಲ್ಲಿ ಜೀತದಾಳಾಗಿದ್ದಳು. ಸಾರಳು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಆದ್ದರಿಂದ, ಸಾರಳು ಅವಳನ್ನು ಅಬ್ರಹಾಮನಿಗೆ ತನಗೆ ಮಗು ಹೆರಲು ಕೊಟ್ಟಳು. ಆದರೆ ಹಾಗರಳು ಗರ್ಭಿಣೀಯಾದಾಗ, ಅವಳು ಸಾರಳನ್ನು ಕೀಳಾಗಿ ನೋಡುತ್ತಿದ್ದಳು. ಇದರಿಂದಾಗಿ, ಅವಳನ್ನು ಮನೆಯಿಂದ ಹೊರಕ್ಕೆ ತಳ್ಳಲಾಯಿತು. ಆದರೆ, ದೇವರು ಆಕೆಯನ್ನು ಕಂಡು, ಅರಣ್ಯದಿಂದ ಪುನ: ಸಾರಳ ಬಳಿಗೆ ಹಿಂದಿರುಗಬೇಕೆಂದು ಹೇಳಿದನು. ಆಕೆ ಸಾರಳ ಮುಂದೆ ತಗ್ಗಿಸಿಕೊಳ್ಳಬೇಕೆಂದು ಆಶೀರ್ವದಿಸಿ ಆಕೆಯ ಸಂತಾನವನ್ನು ಹೆಚ್ಚಿಸಿದನು (ಆದಿ. 16:7, 13:21, 18:20).

ಒಬ್ಬ ಯೌವನಸ್ಥ ಹುಡುಗಿಯು ಮದುವೆಯಾದ ಮೇಲೆ ಸಂತೋಷವಾಗಿ ತನ್ನ ಪತಿಯ ಮನೆಗೆ ಹೋದಳು. ಕುಟುಂಬದವರೆಲ್ಲರು ಆಕೆಯ ಮಗುವಿನ ಆಶೀರ್ವಾದಕ್ಕಾಗಿ ಕಾತುರದಿಂದ ಕಾಯುತ್ತಿದ್ದರು, ಆದರೆ ಬಹಳವಾಗಿ ನಿರಾಶಿತರಾಗಿದ್ದರು. ಯಾಕಂದರೆ ಆಕೆ ಗಭೀಣಿಯಾದಾಗೆಲ್ಲಾ, ಕೆಲವೇ ತಿಂಗಳಿನಲ್ಲಿ ಗರ್ಭಪಾತವಾಗುತ್ತಿತ್ತು. ಇದು ಸತತವಾಗಿ ಆರು ವರ್ಷದವರೆವಿಗೂ ನಡೆಯುತ್ತಿತ್ತು. ಆಕೆ ಭಯಂಕರ ದು:ಖದಲ್ಲಿದ್ದು ನನಗೆ ತನ್ನ ಕಷ್ಟಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಳು. ಆದ್ದರಿಂದ, ನಾನು ಸಹ ಆಕೆಗೋಸ್ಕರ ಮನಭಾರದಿಂದ ಪ್ರಾರ್ಥನೆ ಮಾಡುತ್ತಿದ್ದೆನು. ಹೌದು! ನಾವು ಅರ್ಪಿಸಿದ ಆ ಪ್ರಾರ್ಥನೆಯನ್ನು ದೇವರು ಲಾಲಿಸಿದನು. ಆಕೆ ಮತ್ತೆ ಗರ್ಭಿಣೀಯಾದಾಗ ದೇವರು ಆಕೆಯ ಗರ್ಭಫಲವನ್ನು ಆಶೀರ್ವದಿಸಿದನು. ಸುಖಪ್ರಸವದ ಮೂಲಕ ಆಕೆ ಆರೋಗ್ಯವಾದ ಮಗುವನ್ನು ಹೆರುವಂತೆ ದೇವರು ಸಹಾಯ ಮಾಡಿದನು. ಆಕೆಯ ಮೂಲಕ ಕುಟುಂಬಕ್ಕೆ ವಾರಸುದಾರರು ಇರದಿರುವ ಭಯವನ್ನು ಆತನು ತೆಗೆದು ಹಾಕಿದನು! ವಾಗ್ದಾನದ ವಾಕ್ಯದ ಪ್ರಕಾರವೇ, ದೇವರು ಆಕೆಯನ್ನು ದಯೆಯಿಂದ ಕಂಡು, ತನ್ನ ಒಡಂಬಡಿಕೆಯನ್ನು ಆತನ ಮೂಲಕ ನಿರೂಪಿಸಿದನು. ತನ್ನ ನಾಮ ಮಹಿಮೆಗೋಸ್ಕರ ಆತನು ಆಕೆಯನ್ನು ಜೀವಂತ ಸಾಕ್ಷಿಯನ್ನಾಗಿ ಮಾಡಿದನು!

ಪ್ರಿಯರೇ! ನೀವೂ ಸಹ ಅನೇಕ ಆಶೀರ್ವಾದಗಳ ಕೊರತೆಯನ್ನು ಹೊಂದಿಕೊಂಡು ಕಣ್ಣೀರಿನಲ್ಲಿಯೂ ಹೊರೆಯಲ್ಲಿಯೂ ಇಂದು ಜೀವಿಸುತ್ತಿರಬಹುದು. ಚಿಂತಿಸಬೇಡಿರಿ, ಈ ಮೇಲಿನ ಘಟನೆಯಲ್ಲಿರುವ ಸ್ತ್ರೀಯಂತೆಯೇ, ದೇವರನ್ನು ದೃಷ್ಟಿಸಿ ಆತನಿಗೆ ಮೊರೆಯಿಡಿರಿ. ಆತನ ಮುಂದೆ ತಗ್ಗಿಸಿಕೊಂಡು ನಿಮಗೆ ದಯೆ ತೋರಲು ಕೋರಿಕೊಳ್ಳಿರಿ. “ಪ್ರಾರ್ಥನೆಯನ್ನು ಕೇಳುವ ದೇವರು” (ಕೀರ್ತ. 65:2). ನಿಮ್ಮ ಪ್ರಾರ್ಥನೆಯನ್ನು ಸಹ ಖಂಡಿತವಾಗಿಯೂ ಲಾಲಿಸಿ ನೀವು ಕೇಳುವದಕ್ಕಿಂತಲು ಆಲೋಚಿಸುವದಕ್ಕಿಂತಲೂ ಹೆಚ್ಚಾಗಿ ಆಶೀರ್ವದಿಸುವನು. ನಮ್ಮ ದೇವರು ಪಕ್ಷಪಾತಿಯಲ್ಲಾ ಮತ್ತು ಆತನು ನಿಮ್ಮನ್ನು ಖಂಡಿತವಾಗಿಯು ಆಶೀರ್ವದಿಸಿ ಹೆಚ್ಚಿಸುವನು.

ಪ್ರಾರ್ಥನೆ: ಪ್ರಿಯ ರಕ್ಷಕನೇ, ನನಗೆ ಅನೇಕ ಹೊರೆಗಳಿವೆ ಮತ್ತು ನಾನು ನನ್ನ ಜೀವಿತದಲ್ಲಿ ಅನೇಕ ಆಶೀರ್ವಾದಗಳ ಕೊರತೆ ಇವೆ. ಇಂದು, ಅವುಗಳನ್ನು ಬದಲಾಯಿಸಿ ನನ್ನ ಜೀವಿತವನ್ನು ಅತ್ಯಧಿಕವಾದ ಆಶೀರ್ವಾದಗಳಿಂದ ತುಂಬಿಸುತ್ತೀ ಎಂದು ನಾನು ದೃಢವಾಗಿ ನಂಬಿದ್ದೇನೆ. ನನ್ನ ಪ್ರಾರ್ಥನೆಯನ್ನು ಲಾಲಿಸಿ ನನ್ನನ್ನು ನೋಡಿ ನನ್ನನ್ನು ನಡೆಸಿದ್ದಕ್ಕಾಗಿ ನಿನ್ನನ್ನು ಸ್ತುತಿಸಿ ವಂದಿಸುತ್ತೇನೆ. ನಮ್ಮ ಕರ್ತನಾದ ಯೇಸುವಿನ ಬಲವುಳ್ಳ ನಾಮದಲ್ಲಿ ನಿನ್ನನ್ನು ಸ್ತುತಿಸುತ್ತೇನೆ, ಆಮೆನ್.

MANNA MINISTRIES
Mannaministries.in@gmail.com
*For Daily Devotion Contact: +91 9964247889*

For more install our App: 

https://play.google.com/store/apps/details?id=org.mannaministry.app&hl=en

https://play.google.com/store/apps/details?id=org.mannaministry1000praises.app&hl=en

Comments

Your email address will not be published. Required fields are marked *

× WhatsApp us