ದೇವರು ನಿನ್ನ ಕೊಂಬನ್ನು ಮಹಿಮೆಯೊಡನೆ ಎತ್ತುವನು!

  Posted on   by   2 comments

“ಬಡವರಿಗೆ ಉದಾರವಾಗಿ ಕೊಡುತ್ತಾನೆ; ಅವನ ನೀತಿಯ ಫಲವು ಸದಾಕಾಲವು ಇರುವುದು. ಮಹಿಮೆಯೊಡನೆ ಅವನ ಕೊಂಬು ಎತ್ತಲ್ಪಡುವುದು” (ಕೀರ್ತ. 112:9).

ಆತನ ಮಕ್ಕಳಾದ ನಾವು, ನಮ್ಮ ಜೀವನದಲ್ಲಿ ವೃದ್ಧಿ ಕಾಣಬೇಕೆಂಬುದೇ ದೇವರ ಚಿತ್ತವಾಗಿದೆ. ಆತನನ್ನು ಗೌರವಿಸುವವರನ್ನು ಆತನು ಗೌರವಿಸಿ ಪ್ರೀತಿಸಬೇಕೆಂಬುದೇ ಆತನ ವಿಶೇಷತೆ (1 ಸಮು. 2:30). ಸತ್ಯವೇದದಲ್ಲಿ ಯೊಸೇಫನೆಂಬ ಒಬ್ಬ ಮನುಷ್ಯನ ಬಗ್ಗೆ ಓದುತ್ತೇವೆ. ಆತನು ದೇವರನ್ನು ಪೂರ್ಣ ಹೃದಯದಿಂದಲೂ ಬಲದಿಂದಲೂ ಪ್ರೀತಿಮಾಡುತ್ತಿದ್ದನು. ಆದ್ದರಿಂದ, ಅವನನ್ನು ಕನಸಿನ ಮುಖಾಂತರ ಭವಿಷ್ಯದ ಘಟನೆಗಳ ಬಗ್ಗೆ ಮುನ್ನೆಚ್ಚರಿಕೆ ಕೊಡುವಂತೆ ದೇವರು ಮಾಡಿದ್ದನು. ಆದರೂ, ಕಷ್ಟಗಳನ್ನು ನೋಡಿರಿ, ಶೋಧನೆಗಳು ಮತ್ತು ಬಾಧೆಗಳ ಮೂಲಕ ಅವನು ಹಾದು ಹೋಗಬೇಕಾಯಿತು. ಆದರೆ ದೇವರು ಅವನೊಡನೆ ಇದ್ದನು (ಆದಿ. 39:2,21,23). ಸುಮಾರು 13 ವರ್ಷಗಳ ಕಾಲ ಅವನು ಶೋಧನೆ, ಯಾತನೆ ಮತ್ತು ಭಾದೆಗಳ ಮೂಲಕ ಹಾದು ಹೋಗಬೇಕಾಯಿತು. ಆದರೆ ದೇವರು ಮಧ್ಯೆ ಪ್ರವೇಶಿಸದೆ ಅವನು ಭಾದೆಪಡಲು ಬಿಟ್ಟು ಬಿಟ್ಟನು. ಕೆಲವು ವೇಳೆ ನಾವು ಕೇಳಲು ಪ್ರಚೋದಿಸಲ್ಪಡುತ್ತೇವೆ “ಯಾಕೆ ಈ ಭಾದೆಗಳು? ದೇವರಿಗೆ ಇದೆಲ್ಲಾ ಗೊತ್ತಿಲ್ಲವಾ” ಆದರೆ, ಯೌವನಸ್ಥನಾದ ಯೋಸೇಫ ದೇವರಲ್ಲಿ ತಾಳ್ಮೆಯಿಂದ ಇದ್ದು ಎಲ್ಲಾ ಭಾದೆಗಳನ್ನು ಮೌನವಾಗಿ ಸಹಿಸಿದನು. ಕೊನೆಗೆ ಯೋಸೇಫನು ಗೌರವಿಸಲ್ಪಟ್ಟು ತನ್ನ ದಣಿಯ ಮನೆಯ ಮೇಲ್ವಿಚಾರಕನನ್ನಾಗಿ ಮಾಡಿದನು (ಆದಿ. 39:2-5).

ಒಂದು ಸಲ, ಒಬ್ಬ ಯೌವನಸ್ಥ ಮನುಷ್ಯನು ತನ್ನ ಜೀವನವನ್ನು ದೇವರಿಗೆ ಸಮರ್ಪಿಸಿದನು. ದೇವರು ಅವನಿಗೆ ಅದ್ಬುತವಾಗಿ ನೌಕರಿ ದೊರೆಯುವಂತೆ ಸಹಾಯ ಮಾಡಿದನು. ಅವನ ಸಂಬಳ ಹೆಚ್ಚಾಗಿರಲಿಲ್ಲ. ಆದರೂ, ತಂದೆ ಹೇಳಿಕೊಟ್ಟಂತೆ ಕ್ರಮವಾಗಿ ತನ್ನ ಸಂಬಳದಲ್ಲಿ ದಶಮಾಂಶವನ್ನು ಒಬ್ಬ ನಂಬಿಕೆಯ ಬಲವಾದ ದೇವರ ಸೇವಕನ ಸೇವೆಗಾಗಿ ಕೊಡುತ್ತಿದ್ದನು. ಆ ದೇವ ಸೇವಕನೂ ಸಹ, ಶ್ರದ್ಧೆಯಿಂದ ಇವನಿಗಾಗಿ ಪ್ರಾರ್ಥಿಸುತ್ತಿದ್ದನು. ಯೌವನಸ್ಥನ ಸಂಬಳ ಹೆಚ್ಚು ಹೆಚ್ಚಾದಂತೆ ಅವನು ತನ್ನ ಆದಾಯದಲ್ಲಿ ಹತ್ತನೇ ಒಂದು ಭಾಗವನ್ನು ನಂಬಿಕೆಯ ದೇವರ ಸೇವಕರಿಗೆ ಕೊಡುತ್ತಿದ್ದನು, ಜೊತೆಗೆ ಬಡ ಜನರಿಗೆ ಸಹಾಯ ಮಾಡಲು ಬಹಳ ಉದಾರಿಯಾಗಿದ್ದನು. ಅವನು ಸಂತೋಷವಾಗಿ ಕೊಡುತ್ತಿದ್ದರಿಂದ ದೇವರೂ ಸಹ ಅವನನ್ನು ಪ್ರೀತಿಸಿದರು (2 ಕೊರಿ. 9:7). ಬೇರೆ ಬೇರೆ ದಿಕ್ಕಿನಿಂದ ಅವನಿಗೆ ವಿರೋಧವಿದ್ದರೂ ಅವನು ಉನ್ನತವಾದ ಪದವಿಗೆ ಏರುವಂತೆ ಕೆಲವು ವಿಶೇಷವಾದ ಅವನ ಸಂಸ್ಥೆಯ ಉನ್ನತ ಅಧಿಕಾರಿಗಳ ದೃಷ್ಟಿಯಲ್ಲಿ ಅವನಿಗೆ ಸಹಾಯ ದೊರಕುವಂತೆ ಮಾಡಿದರು. ಹಿಂದೆ ಜನರು ಅವನ ಭಕ್ತಿಯ ಬಗ್ಗೆ ತಮಾಷೆ ಮಾಡುತ್ತಿದ್ದ ಇವನನ್ನು ಕಾಯ್ದು ಉನ್ನತ ಹುದ್ದೆಗೆ ಏರಿದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು. ಅನೇಕರು ಇವನು ಆರಾಧಿಸುತ್ತಿದ್ದ ದೇವರನ್ನು ತಮ್ಮ ದೇವರಂತೆ ಸ್ವೀಕರಿಸಿದರು ಮತ್ತು ದೇವರಿಗೆ ಭಯಪಟ್ಟು ದೇವರನ್ನು ಪ್ರೀತಿಸುವ ಜನರಾದರು.

ಪ್ರಿಯರೇ, ದೇವರು ಸುಲಭವಾಗಿ ನಿಮ್ಮ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿ ನಿಮ್ಮ ಜೀವನ ಪೂರ್ಣಗೊಳಿಸಬಹುದು. ಕಥೆಯಲ್ಲಿನ ಈ ಯೌವನಸ್ಥನಂತೆ ನೀವೂ ಸಹ ದೇವರನ್ನು ಹಿಂಬಾಲಿಸಿ ಆತನ ಹೇರಳವಾದ ಆಶೀರ್ವಾದವನ್ನು ಪಡೆಯಿರಿ (ಜ್ಞಾನೋ. 8:32).

ಪ್ರಾರ್ಥನೆ : ಪ್ರಿಯ ತಂದೆಯೇ, ನಿನ್ನನ್ನು ಪ್ರೀತಿಸಿ ನಿನ್ನನ್ನು ನಂಬುವವರನ್ನು ನೀನು ಗೌರವ ಮತ್ತು ಮಹಿಮೆಯನ್ನು ಕೊಡಲು ಇಷ್ಟಪಡುತ್ತೀಯ. ಈ ದಿನದಿಂದ ನನ್ನ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿ ನನಗೆ ತೃಪ್ತಿಯ ಮತ್ತು ಸಂತೋಷದ ಜೀವನವನ್ನು ಕೊಡು. ನನ್ನ ಜೀವನದಲ್ಲಿ ನನಗೆ ಗೌರವ ಮತ್ತು ಮಹಿಮೆಯನ್ನು ಪಡೆಯುವಂತೆ ಸಹಾಯ ಮಾಡು. ಇದನ್ನು ನೀನು ನನ್ನ ಜೀವನದಲ್ಲಿ ಮಾಡುವಿಯೆಂದು ನಂಬಿದ್ದೇನೆ ಮತ್ತು ಅದಕ್ಕಾಗಿ ವಂದನೆಗಳು. ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ಪ್ರಾರ್ಥಿಸುತ್ತೇನೆ, ಆಮೆನ್.

 

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ  whatsapp ಗೆ join ಆಗಿ  Click here to join :??

http://bit.ly/2qZzHAR

ದೈನದಿನ ದೇವರ ವಚನದ ಧ್ಯಾನಕ್ಕಾಗಿ ನಮ್ಮ Android app ಡೌನ್ಲೋಡ್ ಮಾಡಿಕೊಳ್ಳಿ.?

https://play.google.com/store/apps/details?id=org.anudinadamanna.app

For Daily Devotion Contact: +91 9964247889

 

2 comments

  1. Sunil says:

    Nanu saha E lokake devara magangi jeevisu tene ……!nana. joteyalii carthanu E rutane ….., I love you my Jesus …………..

Comments

Your email address will not be published. Required fields are marked *

× WhatsApp us